ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿತ್ತಳೆ ಹಣ್ಣಿನ ಲಸ್ಸಿ, ದಹಿ ತಡ್ಕಾ

Last Updated 17 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ದಹಿ ತಡ್ಕಾ

ಬೇಕಾಗುವ ಸಾಮಗ್ರಿಗಳು: ಮೊಸರು – 2 ಬಟ್ಟಲು, ಈರುಳ್ಳಿ – 1, ಒಣ ಮೆಣಸಿನಕಾಯಿ–3, ಹಸಿ ಶುಂಠಿ – 1/4 ಇಂಚು, ಬೆಳ್ಳುಳ್ಳಿ – 4 ಎಸಳು, ಕೊತ್ತಂಬರಿ ಕಾಳು – 1/4 ಚಮಚ, ಸೋಂಪು – 1/4 ಚಮಚ, ಗರಂ ಮಸಾಲೆಪುಡಿ – 1/4 ಚಮಚ, ಸಾಸಿವೆ – 1/4 ಚಮಚ, ಜೀರಿಗೆ – 1/4 ಚಮಚ, ಇಂಗು – ಚಿಟಿಕೆ, ತುಪ್ಪ – 4 ಚಮಚ, ಸಕ್ಕರೆ – 1 ಚಮಚ, ಕರಿಬೇವು – 5 ರಿಂದ 6, ಹೆಚ್ಚಿದ ಕೊತ್ತಂಬರಿ ಸೊಪ್ಪು – 1/2 ಬಟ್ಟಲು, ಉಪ್ಪು – ರುಚಿಗೆ ತಕ್ಕಷ್ಟು, ಅರಿಸಿನ ಪುಡಿ – 1/4 ಚಮಚ

ತಯಾರಿಸುವ ವಿಧಾನ: ಮೊಸರು, ಸಕ್ಕರೆ ಸೇರಿಸಿ ಮಿಕ್ಸರ್‌ನಲ್ಲಿ ಒಂದು ಸುತ್ತು ತಿರುಗಿಸಿ ಇಟ್ಟುಕೊಳ್ಳಿ. ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಸಣ್ಣಗೆ ಕತ್ತರಿಸಿಕೊಳ್ಳಿ. ತುಪ್ಪ ಬಿಸಿ ಮಾಡಿ ಒಗ್ಗರಣೆಗೆ ಸಾಸಿವೆ, ಜೀರಿಗೆ, ಇಂಗು, ಕರಿಬೇವು ಹಾಕಿ ಹುರಿಯಿರಿ. ಅದಕ್ಕೆ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಒಣ ಮೆಣಸಿನಕಾಯಿ ಮುರಿದು ಹಾಕಿ ಹುರಿಯಿರಿ. ಕೊತ್ತಂಬರಿ, ಸೋಂಪು ಪುಡಿ ಹಾಕಿ. ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಹುರಿಯಿರಿ. ಗರಂ ಮಸಾಲೆ ಪುಡಿ ಸೇರಿಸಿ. ಉಪ್ಪು, ಅರಿಸಿನ ಪುಡಿ ಸ್ವಲ್ಪ ಸೇರಿಸಿ ಚೆನ್ನಾಗಿ ತಿರುಗಿಸಿ ಒಲೆ ಆರಿಸಿ. ಆರಿದ ನಂತರ ಮೊಸರು ಕೆನೆ ಸೇರಿಸಿ ಸ್ವಲ್ಪ ಬಿಸಿ ಮಾಡಿ ಇಳಿಸಿ. ಈಗ ದಹಿ ತಡ್ಕಾ ಸವಿಯಲು ಸಿದ್ಧ. ಬಡಿಸುವಾಗ ಸಣ್ಣ ಉರಿಯಲ್ಲಿ ಇಟ್ಟು ಬಿಸಿ ಮಾಡಿ
ಅನ್ನದ ಜೊತೆ ಸವಿಯಿರಿ.

ಕಿತ್ತಳೆ ಹಣ್ಣಿನ ಲಸ್ಸಿ

ಬೇಕಾಗುವ ಸಾಮಗ್ರಿಗಳು: ಕಿತ್ತಳೆ ಹಣ್ಣು – 2, ಮೊಸರು – 2 ಕಪ್, ನೀರು – ಅರ್ಧ ಕಪ್, ಉಪ್ಪು – 1/4 ಚಮಚ, ಸಕ್ಕರೆ – 4 ಚಮಚ, ಏಲಕ್ಕಿ – 1

ತಯಾರಿಸುವ ವಿಧಾನ: ಏಲಕ್ಕಿಪುಡಿ ಮಾಡಿ ಇಟ್ಟುಕೊಳ್ಳಿ. ಮೊಸರು, ಸಕ್ಕರೆ, ಉಪ್ಪು ಸೇರಿಸಿ ಚೆನ್ನಾಗಿ ತಿರುಗಿಸಿ ಇಟ್ಟುಕೊಳ್ಳಿ. ಕಿತ್ತಳೆ ಹಣ್ಣಿನ ರಸ ತೆಗೆದು ಮೊಸರು ಮಿಶ್ರಣಕ್ಕೆ ಸೇರಿಸಿ ತಿರುಗಿಸಿ. ಈಗ ತಣ್ಣನೆಯ ಕಿತ್ತಳೆ ಹಣ್ಣಿನ ಲಸ್ಸಿ ಸವಿಯಲು ಸಿದ್ಧ. ಬೇಕಾದರೆ ಐಸ್ ಕ್ಯೂಬ್ ಹಾಕಿ ಸವಿಯಿರಿ.

ಆಲೂ ಬ್ರೆಡ್ ದಹಿವಡಾ

ಬೇಕಾಗುವ ಸಾಮಗ್ರಿಗಳು: ಆಲೂ ಬ್ರೆಡ್ ವಡಾ ಮಾಡಲು: ಬ್ರೆಡ್ – 8, ಆಲೂಗೆಡ್ಡೆ – 4, ಕಡಲೆಹಿಟ್ಟು – ಒಂದು ಬಟ್ಟಲು, ಎಣ್ಣೆ – 3 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಹಸಿ ಮೆಣಸಿನಕಾಯಿ – 2, ಹಸಿಶುಂಠಿ – 1/4 ಇಂಚು, ಖಾರದಪುಡಿ – 1 ಚಮಚ, ಜೀರಿಗೆ – 1/4 ಚಮಚ, ಕೊತ್ತಂಬರಿ ಕಾಳು – 1/4 ಚಮಚ, ಜೀರಿಗೆ ಪುಡಿ – 1/2 ಚಮಚ, ಗರಂ ಮಸಾಲೆ ಪುಡಿ – 1 ಚಮಚ, ಅರಿಸಿನ ಪುಡಿ– ಚಿಟಿಕೆ, ನಿಂಬೆರಸ – 1/2 ಚಮಚ, ಕರಿಯಲು ಎಣ್ಣೆ

ಮಸಾಲಾ ದಹಿ ಮಾಡಲು: ಮೊಸರು – 1 ಲೀಟರ್, ಕೊತ್ತಂಬರಿ ಪುಡಿ – 1/2 ಚಮಚ, ಗರಂ ಮಸಾಲೆ ಪುಡಿ – 1/2 ಚಮಚ, ಜೀರಿಗೆ ಪುಡಿ – 1/4 ಚಮಚ, ಸಕ್ಕರೆ – 1 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ

ತಯಾರಿಸುವ ವಿಧಾನ: ಬ್ರೆಡ್‌ ಅನ್ನು ನೀರಿನಲ್ಲಿ ಅದ್ದಿ ತೆಗೆದಿಡಿ. ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಸ್ಮ್ಯಾಷ್ ಮಾಡಿ. ಹಸಿ ಮೆಣಸಿನಕಾಯಿ, ಹಸಿಶುಂಠಿ ಪೇಸ್ಟ್ ತಯಾರಿಸಿಕೊಳ್ಳಿ. ಜೀರಿಗೆ, ಕೊತ್ತಂಬರಿ ಪುಡಿ ಮಾಡಿ. ಎಣ್ಣೆ ಬಿಸಿ ಮಾಡಿ ಹಸಿ ಮೆಣಸಿನಕಾಯಿ, ಹಸಿಶುಂಠಿ ಪೇಸ್ಟ್ ಹಾಕಿ, ನಂತರ ಸ್ವಲ್ಪ ಜೀರಿಗೆ, ಕೊತ್ತಂಬರಿ ಪುಡಿ ಹಾಕಿ ಹುರಿಯಿರಿ. ಉಪ್ಪು, ಅರಿಸಿನ, ಗರಂ ಮಸಾಲೆಪುಡಿ ಸೇರಿಸಿ. ಸ್ಮ್ಯಾಷ್‌ ಮಾಡಿದ ಆಲೂಗೆಡ್ಡೆ ಹಾಕಿ ಮಿಶ್ರಣ ಮಾಡಿ. ಕಡಲೆಹಿಟ್ಟು ಮತ್ತು ಸ್ವಲ್ಪ ನೀರು ಹಾಕಿ. ಅಜುವಾನ ಅಥವಾ ಓಂಕಾಳು ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲೆಸಿ ಇಟ್ಟುಕೊಳ್ಳಿ. ಬ್ರೆಡ್‌ನಲ್ಲಿ ಆಲೂಗಡ್ಡೆ ಮಸಾಲೆ ತುಂಬಿ ಉಂಡೆ ಮಾಡಿಕೊಂಡು ಕಡಲೆಹಿಟ್ಟಿನಲ್ಲಿ ಅದ್ದಿ ತೆಗೆದು ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಮಸಾಲಾ ದಹಿ ಮಾಡಲು ಮೊಸರು ಸ್ವಲ್ಪ ಕಡೆದು ಉಪ್ಪು, ಸಕ್ಕರೆ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲೆ ಪುಡಿ ಸ್ವಲ್ಪ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಸೇರಿಸಿ ಚೆನ್ನಾಗಿ ಕಲೆಸಿ ಇಟ್ಟುಕೊಳ್ಳಿ. ಕರಿದ ಬ್ರೆಡ್ ವಡಾವನ್ನು ಮೊಸರಿನಲ್ಲಿ ಅದ್ದಿ ತೆಗೆದು ಸರ್ವ್ ಮಾಡಿ. ನಿಮಗೆ ಬೇಕಾದಷ್ಟು ಮಸಾಲೆ ಮೊಸರು ಮೇಲೆ ಹಾಕಿಕೊಂಡು ಸವಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT