ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಕ್ ಪಂದಿಕರಿ ಕ್ಯಾರೆಟ್‌ ಕೋಳಿಗೊಜ್ಜು

Last Updated 29 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಪಾಲಕ್ ಪಂದಿಕರಿ

ಬೇಕಾಗುವ ಸಾಮಗ್ರಿಗಳು :
ಹಂದಿ ಮಾಂಸ –1/2 ಕೆಜಿ
ಬಿಡಿಸಿದ ಪಾಲಕ್ ಸೊಪ್ಪು – ಒಂದು ಕಂತೆ(ಕಟ್ಟು)
ಈರುಳ್ಳಿ – 1-2 ದಪ್ಪಗೆ ಹೆಚ್ಚಿದ್ದು
ಹಸಿಮೆಣಸಿನಕಾಯಿ – 3 ರಿಂದ 4 ಉದ್ದಕ್ಕೆ ಸೀಳಿದ್ದು
ಬೆಳ್ಳುಳ್ಳಿ – 2 ಬಿಡಿಸಿಕೊಂಡಿದ್ದು
ಕಾಳುಮೆಣಸು– ಒಂದು ಚಮಚದಷ್ಟು
ನಿಂಬೆ ರಸ – ಒಂದು ಹಣ್ಣಿನದ್ದು
ಎಣ್ಣೆ – ನಾಲ್ಕು ಟೇಬಲ್ ಚಮಚದಷ್ಟು
ಉಪ್ಪು–ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ: ಚೆನ್ನಾಗಿ ಬಿಸಿನೀರಲ್ಲಿ ತೊಳೆದುಕೊಂಡ ಹಂದಿಮಾಂಸವನ್ನು ನೀರು ಸೋರಲು ಬಿಡಿ. ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಹುರಿದು ನಂತರ ಮಾಂಸವನ್ನು ಬೆರೆಸಿ ಬಾಡಿಸಿ. ಅದಕ್ಕೆ ಪಾಲಕ್ ಸೊಪ್ಪು ಮತ್ತು ಅಗತ್ಯವಿರುವಷ್ಟು ಉಪ್ಪು, ಚಿಟಿಕಿ ಅರಿಸಿನ ಪುಡಿ ಸೇರಿಸಿ. ಮಾಂಸ ನೀರು ಬಿಡಲು ಶುರುವಾಗುತ್ತದೆ. ಆ ನೀರು ಇಂಗುವವರೆಗೂ ಬಾಡಿಸುತ್ತಲೇ ಇರಿ.

ಬಹುತೇಕ ನೀರು ಇಂಗಿ ಮಾಂಸದ ಕೊಬ್ಬು ಕರಗಲು ಶುರುವಾದಾಗ ಅರೆದ ಶುಂಠಿ ಬೆಳ್ಳುಳ್ಳಿ ಮತ್ತು ಕಾಳುಮೆಣಸಿನ ಪುಡಿ ಬೆರೆಸಿ, ನಿಂಬೆ ರಸ ಸೇರಿಸಿ ಬಾಡಿಸಿ. ಒಂದು ಲೋಟದಷ್ಟು ನೀರು ಸೇರಿಸಿ, ಹದವಾಗಿ ಬೇಯಿಸಿರಿ. ನೀರು ಪೂರ್ತಿ ಇಂಗಲು (Dry) ಬಿಡಬೇಡಿ. ನಂತರ ಹಸಿರು ಹಸಿರಾಗಿ ಕಾಣುವ ಪಾಲಕ್ ಪಂದಿಕರಿಯನ್ನು ಅಕ್ಕಿರೊಟ್ಟಿ, ಚಪಾತಿ ಅಥವಾ ಮುದ್ದೆಯೊಡನೆ ತಿನ್ನಬಹುದು.

ಕ್ಯಾರೆಟ್‌ ಕೋಳಿಗೊಜ್ಜು

ಬೇಕಾಗುವ ಸಾಮಗ್ರಿಗಳು :
ಕೋಳಿಮಾಂಸ – 1/2 ಕೆಜಿ, ಕ್ಯಾರೆಟ್‌ – ಸಣ್ಣಗಾತ್ರದ 2 ಎಳೆಯ ಕಾಯಿ, ತೆಳುವಾಗಿ ದುಂಡಗೆ ಕತ್ತರಿಸಿ ಕೊಂಡಿದ್ದು
ಈರುಳ್ಳಿ –1ರಿಂದ 2 ದಪ್ಪಗೆ ಹೆಚ್ಚಿದ್ದು
ಹಸಿಮೆಣಸಿನಕಾಯಿ – 3 ರಿಂದ 4 ಉದ್ದಕ್ಕೆ ಸೀಳಿದ್ದು
ಟೊಮೆಟೊ – 2 ಮಧ್ಯಮ ಗಾತ್ರದ ಹಣ್ಣು (ಸಣ್ಣಗೆ ಹೆಚ್ಚಿದ್ದು)
ಖಾರದ ಪುಡಿ – 4 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 3 ಟೇಬಲ್ ಚಮಚ
ಗರಂ ಮಸಾಲ – 1 ಚಮಚ
ಎಣ್ಣೆ – ನಾಲ್ಕು ಟೇಬಲ್ ಚಮಚ

ತಯಾರಿಸುವ ವಿಧಾನ: ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕ್ಯಾರೆಟ್‌ ಅನ್ನು ಎಣ್ಣೆಯಲ್ಲಿ ಹುರಿದುಕೊಳ್ಳಿ. ಕೆಂಪಗಾಗುವ ಮುನ್ನ ಅದಕ್ಕೆ ತೊಳೆದಿಟ್ಟುಕೊಂಡ ಕೋಳಿ ಮಾಂಸ ಬೆರೆಸಿ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಚಮಚ ಅರಿಸಿನ ಹಾಕಿ ಕದಡುತ್ತಾ ಬನ್ನಿ. ಮಾಂಸದ ನೀರು ಬಿಟ್ಟು, ನಂತರ ಇಂಗಲು ಶುರುವಾದಾಗ ಅದಕ್ಕೆ ಟೊಮೆಟೊ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಗರಂಮಸಾಲೆ ಬೆರೆಸಿ ಬಾಡಿಸಿ (ಅಗತ್ಯವೆನಿಸಿದರೆ ಇಲ್ಲಿ ತೆಂಗಿನಕಾಯಿ ಮಸಾಲೆ ಬಳಸಬಹುದು) ಒಂದು ಲೋಟ ನೀರು ಸೇರಿಸಿ. 15 ನಿಮಿಷ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ನಂತರ ರೊಟ್ಟಿ, ಚಪಾತಿ, ಅನ್ನ, ಮುದ್ದೆ ಯಾವುದಕ್ಕಾದರೂ ಇದು ಹೊಂದಿಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT