ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾನಸ್‌ ಹಣ್ಣಿನ ಪಾಯಸ, ಕಾಯಿರಸ

Last Updated 29 ಜನವರಿ 2021, 19:30 IST
ಅಕ್ಷರ ಗಾತ್ರ

ಅನಾನಸ್‌ ಪಾಯಸ
ಬೇಕಾಗುವ ಸಾಮಗ್ರಿಗಳು:
ಅನಾನಸ್‌ ಹಣ್ಣು – 1 ಮಧ್ಯಮ ಗಾತ್ರದ್ದು, ಕಡಲೇಬೇಳೆ –1 ಕಪ್, ತೆಂಗಿನಕಾಯಿ – 1, ಏಲಕ್ಕಿ – 4-5, ತುಪ್ಪ –2 ಚಮಚ, ಸಕ್ಕರೆ – ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ತೆಂಗಿನಕಾಯಿಯನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಹಾಲು ತಯಾರಿಸಿ ಇಟ್ಟುಕೊಳ್ಳಿ. ಕಡಲೆಬೇಳೆಯನ್ನು ಬೇಯಿಸಿ ಇಟ್ಟುಕೊಳ್ಳಿ. ಬೆಂದ ಕಡಲೆಬೇಳೆಗೆ ಚಿಕ್ಕದಾಗಿ ಕತ್ತರಿಸಿದ ಅನಾನಸ್‌ ತುಂಡುಗಳು, ಸಕ್ಕರೆ, ಏಲಕ್ಕಿಪುಡಿಯನ್ನು ಹಾಕಿ ಪುನಃ 5 ನಿಮಿಷಗಳವರೆಗೆ ಬೇಯಿಸಿ. ಇದಕ್ಕೆ ತೆಂಗಿನಹಾಲನ್ನು ಬೆರೆಸಿ ಚೆನ್ನಾಗಿ ಕದಡಿ. ಕೆಳಗಿಳಿಸಿ ತುಪ್ಪ ಹಾಕಿ.

ಅನಾನಸ್ ಶರಬತ್ತು
ಬೇಕಾಗುವ ಸಾಮಗ್ರಿಗಳು:
ಅನಾನಸ್ ಹೋಳು – 4 ಕಪ್, ನೀರು – 6 ಕಪ್, ಸಕ್ಕರೆ – 15 ಚಮಚ.

ತಯಾರಿಸುವ ವಿಧಾನ: ಅನಾನಸ್ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ 2 ಕಪ್ ನೀರು ಹಾಕಿ ರುಬ್ಬಿ. ಅನಂತರ ಸೋಸಿ ಚರಟಕ್ಕೆ ಮತ್ತೆ 4 ಕಪ್ ನೀರು ಹಾಕಿ ರಸ ಸೋಸಿ. ಸಕ್ಕರೆ ಹಾಕಿ ಕದಡಿ. ಈ ಶರಬತ್ತು ಕುಡಿಯಲು ತುಂಬ ರುಚಿಯಾಗಿರುತ್ತದೆ.

ಅನಾನಸ್‌ ಸಾಂಬಾರು
ಬೇಕಾಗುವ ಸಾಮಗ್ರಿಗಳು:
ಅನಾನಸ್‌ ಹೋಳು – 1 ಕಪ್, ತೆಂಗಿನತುರಿ – 1 ಕಪ್, ಬೆಲ್ಲ – ಸಣ್ಣ ಅಚ್ಚು, ಖಾರದಪುಡಿ – 1/4 ಚಮಚ, ಕೊತ್ತಂಬರಿ – 1 ಚಮಚ, ಉದ್ದಿನಬೇಳೆ – 1 ಚಮಚ, ಮೆಂತ್ಯೆ – 1/4 ಚಮಚ, ಜೀರಿಗೆ – 1/4 ಚಮಚ, ಎಳ್ಳು – 1/4 ಚಮಚ, ಒಣಮೆಣಸು – 5, ಎಣ್ಣೆ – 2 ಚಮಚ, ಸಾಸಿವೆ – 1/2 ಚಮಚ, ಅರಿಸಿನ – ಚಿಟಿಕೆ, ಕರಿಬೇವಿನ ಎಲೆ – ಒಂದು ಎಸಳು, ಉಪ್ಪು – ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಹಣ್ಣಾದ ಅನಾನ್‌ ಅನ್ನು ಸಿಪ್ಪೆ ತೆಗೆದು ಕತ್ತರಿಸಿ ಉಪ್ಪು, ಬೆಲ್ಲ, ನೀರು ಹಾಕಿ ಬೇಯಿಸಿ. ಕೊತ್ತಂಬರಿ, ಉದ್ದಿನಬೇಳೆ, ಜೀರಿಗೆ, ಮೆಂತ್ಯೆ, ಎಳ್ಳು, ಎಣ್ಣೆ ಹಾಕಿ ಹುರಿದು ಚಿಟಿಕೆ ಅರಿಸಿನ ಸೇರಿಸಿ ಕಾಯಿತುರಿ ಹಾಕಿ ರುಬ್ಬಿ. ನಂತರ ಬೆಂದ ಅನಾನಸ್‌ಗೆ ಸೇರಿಸಿ ಸಾಕಷ್ಟು ನೀರು ಹಾಕಿ ಕುದಿಸಿ. ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಇದು ಅನ್ನದ ಜೊತೆ ಬಲು ರುಚಿ.

ಅನಾನಸ್‌ ಕಾಯಿರಸ
ಬೇಕಾಗುವ ಸಾಮಗ್ರಿಗಳು:
ಅನಾನಸ್‌ ಹೋಳು – 1 ಕಪ್, ಕಾಯಿತುರಿ – 1 ಕಪ್, ಕೊತ್ತಂಬರಿ – 1 ಚಮಚ, ಉದ್ದಿನಬೇಳೆ – 2 ಚಮಚ, ಕಡಲೆಬೇಳೆ – 1 ಚಮಚ, ಕೆಂಪುಮೆಣಸು – 4-5, ಬೆಲ್ಲ – ಸಣ್ಣ ಅಚ್ಚು, ಖಾರದಪುಡಿ – 1/4 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಸಾಸಿವೆ – 1/2 ಚಮಚ, ಎಣ್ಣೆ – 1/2 ಚಮಚ, ಕರಿಬೇವು – 2 ಎಸಳು.

ತಯಾರಿಸುವ ವಿಧಾನ: ಅನಾನಸ್‌ ಹೋಳುಗಳನ್ನು ಉಪ್ಪು, ಬೆಲ್ಲ, ಖಾರದ ಪುಡಿ, ಸೇರಿಸಿ ಪಾತ್ರೆಯಲ್ಲಿ ಹಾಕಿ, ಸ್ವಲ್ಪ ನೀರು ಹಾಕಿ ಬೇಯಿಸಿ. ನಂತರ ಬಾಣಲೆಗೆ ಎಣ್ಣೆ ಹಾಕಿ, ಬಿಸಿಯಾದಾಗ ಕೊತ್ತಂಬರಿ, ಉದ್ದಿನಬೇಳೆ, ಕಡಲೆಬೇಳೆ, ಕೆಂಪುಮೆಣಸು ಹಾಕಿ ಹುರಿದು ತೆಂಗಿನತುರಿ ಸೇರಿಸಿ ರುಬ್ಬಿ. ನಂತರ ಬೆಂದ ಅನಾನಸ್‌ಗೆ ಸೇರಿಸಿ. ಸಾಕಷ್ಟು ನೀರು ಸೇರಿಸಿ ಕುದಿಸಿ, ಕರಿಬೇವಿನ ಒಗ್ಗರಣೆ ಕೊಡಿ. ಅನ್ನ, ಉದ್ದಿನ ದೋಸೆ, ಇಡ್ಲಿಯೊಂದಿಗೆ ತಿನ್ನಲು ರುಚಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT