ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಬುಟಾನ್ ಹಣ್ಣಿನ ರುಚಿಕರ ಅಡುಗೆಗಳು

Last Updated 6 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಮಲೇಷಿಯಾ ಮೂಲದ ರುಚಿಯಾದ ರಂಬುಟಾನ್ ಹಣ್ಣುಗಳು ಈಗೀಗ ಭಾರತದಲ್ಲೂ ಬೆಳೆಯುತ್ತಿವೆ. ಈ ಹಣ್ಣುಗಳಿಂದ ರುಚಿಯಾದ ಗೊಜ್ಜು, ಸಾಸಿವೆ, ಜ್ಯೂಸ್ ಮುಂತಾದ ಅಡುಗೆ ಮಾಡಿ ಸವಿಯಬಹುದು.

ರಂಬುಟಾನ್ ಹಣ್ಣಿನ ಜ್ಯೂಸ್
ಬೇಕಾಗುವ ವಸ್ತುಗಳು: 7-8 ರಂಬುಟಾನ್ ಹಣ್ಣು, ಉಪ್ಪು ಚಿಟಿಕಿ, 5-6 ಚಮಚ ಸಕ್ಕರೆ, ಚಿಟಿಕಿ ಏಲಕ್ಕಿ ಪುಡಿ, 1 ಚಮಚ ನಿಂಬೆರಸ.
ಮಾಡುವ ವಿಧಾನ: ರಂಬುಟಾನ್ ಹಣ್ಣುಗಳ ಸಿಪ್ಪೆ, ಬೀಜ ತೆಗೆಯಿರಿ. ನಂತರ ಉಪ್ಪು, ಸಕ್ಕರೆ, ಏಲಕ್ಕಿ, ನಿಂಬೆರಸ, ಹಣ್ಣು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಐಸ್ ಚೂರು, ಸ್ವಲ್ಪ ನೀರು ಸೇರಿಸಿ ಗ್ಲಾಸಿಗೆ ಹಾಕಿ ಕುಡಿಯಿರಿ. ಈ ಪೌಷ್ಟಿಕ ಜ್ಯೂಸ್ ಸವಿಯಲು ಬಲು ರುಚಿ.

ರಂಬುಟಾನ್ ಗೊಜ್ಜು
ಬೇಕಾಗುವ ವಸ್ತುಗಳು: 7-8 ರಂಬುಟಾನ್, ½ ಚಮಚ ಸಾಸಿವೆ, 2 ಚಮಚ ರಸಂ, 1 ಕೆಂಪುಮೆಣಸು, 1 ಎಸಳು ಕರಿಬೇವು, 3 ಚಮಚ ಬೆಲ್ಲದ ಪುಡಿ, ರುಚಿಗೆ ಬೇಕಾದಷ್ಟು ಉಪ್ಪು, 1 ಚಮಚ ಹುಳಿ ರಸ.
ಮಾಡುವ ವಿಧಾನ: ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ, ಕೆಂಪು ಮೆಣಸು, ಕರಿಬೇವು ಹಾಕಿ ಸ್ವಲ್ಪ ಹುರಿದು, ಸಿಪ್ಪೆ ತೆಗೆದ ರಂಬುಟಾನ್ ಹಣ್ಣು, ಉಪ್ಪು, ರಸಂಪುಡಿ, ಹುಳಿನೀರು, ಬೆಲ್ಲ, ಬೇಕಿರುವಷ್ಟು ನೀರು ಸೇರಿಸಿ ಸಣ್ಣ ಉರಿಯಲ್ಲಿ 5-10 ನಿಮಿಷ ಕುದಿಸಿ. ಈಗ ರುಚಿಯಾದ ಗೊಜ್ಜು ಅನ್ನದೊಂದಿಗೆ ಸವಿಯಲು ಸಿದ್ಧ.

ರಂಬುಟಾನ್ ಸಾಸಿವೆ
ಬೇಕಾಗುವ ವಸ್ತುಗಳು: 5-6 ರಂಬುಟಾನ್ ಹಣ್ಣು, 1 ಕಪ್ ತೆಂಗಿನ ತುರಿ, ½ ಚಮಚ ಸಾಸಿವೆ, 1 ಒಣಮೆಣಸು, ರುಚಿಗೆ ತಕ್ಕಷ್ಟು ಉಪ್ಪು, 3-4 ಚಮಚ ಬೆಲ್ಲ.
ಮಾಡುವ ವಿಧಾನ: ತೆಂಗಿನ ತುರಿ, ಸಾಸಿವೆ, ಒಣಮೆಣಸು, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಬೆಲ್ಲ ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ರಂಬುಟಾನ್ ಹಣ್ಣು ಸೇರಿಸಿ 1 ಗಂಟೆ ಫ್ರಿಡ್ಜ್‌ನಲ್ಲಿಟ್ಟು ನಂತರ ಊಟದೊಂದಿಗೆ ಸವಿದರೆ ಬಲು ರುಚಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT