ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಳಪಾಕ: ಹರಿಯಾಲಿ ಪನೀರ್ ಟಿಕ್ಕಾ, ದಹಿ ಬ್ರೆಡ್ ಮತ್ತು 4 ಬಗೆ ಸ್ವೀಟ್‌ ಕಾರ್ನ್ಸ್‌

Last Updated 9 ಜುಲೈ 2021, 19:30 IST
ಅಕ್ಷರ ಗಾತ್ರ

ಹರಿಯಾಲಿ ಪನೀರ್ ಟಿಕ್ಕಾ

ಬೇಕಾಗುವ ಸಾಮಗ್ರಿಗಳು: ಪನೀರ್ – 200 ಗ್ರಾಂ, ಹಸಿಮೆಣಸಿನಕಾಯಿ – 4, ಬೆಳ್ಳುಳ್ಳಿ – 10 ಎಸಳು, ಶುಂಠಿ – 1 ಇಂಚು, ಕೊತ್ತಂಬರಿ – ಸ್ವಲ್ಪ, ಪುದಿನ – ಸ್ವಲ್ಪ, ಹುರಿದ ಕಡಲೆಹಿಟ್ಟು – ಕಾಲು ಚಮಚ, ಚಾಟ್ ಮಸಾಲ – 1 ಚಮಚ, ಜೀರಿಗೆ ಪುಡಿ – ಅರ್ಧ ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಅರ್ಧ ನಿಂಬೆಹಣ್ಣಿನ ರಸ, ಕಸೂರಿ ಮೇಥಿ – 1 ಚಮಚ, ಗಟ್ಟಿಮೊಸರು – ಅರ್ಧ ಕಪ್‌, ಅರಿಸಿನ – ಕಾಲು ಚಮಚ, ಕ್ಯಾಪ್ಸಿಕಂ – 1, ಟೊಮೆಟೊ – 1, ಈರುಳ್ಳಿ – 1

ತಯಾರಿಸುವ ವಿಧಾನ: ಪುದಿನ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಹಾಕಿ ರುಬ್ಬಿಕೊಂಡು, ಮಿಶ್ರಣವನ್ನು ಒಂದು ಬಟ್ಟಲಿಗೆ ಹಾಕಿ, ಅದಕ್ಕೆ ಗಟ್ಟಿಮೊಸರು, ಚಾಟ್ ಮಸಾಲ, ಜೀರಿಗೆ ಪುಡಿ, ಹುರಿದ ಕಡಲೆಹಿಟ್ಟು, ಉಪ್ಪು, ಅರಿಸಿನ ಹಾಕಿ ಚೆನ್ನಾಗಿ ಕಲೆಸಿಕೊಳ್ಳಿ. ಇದಕ್ಕೆ ಚೌಕಾಕಾರದಲ್ಲಿ ಕತ್ತರಿಸಿಕೊಂಡ ಪನೀರ್‌, ಈರುಳ್ಳಿ, ಕ್ಯಾಪ್ಸಿಕಂ, ಟೊಮೆಟೊ ಹಾಕಿ ಕಲೆಸಿ ಅರ್ಧಗಂಟೆ ನೆನೆಯಲು ಬಿಡಿ. ನೆನೆದ ಪನೀರ್‌ ಅನ್ನು ಒಂದು ಕಡ್ಡಿ ಅಥವಾ ಕಂಬಿಗೆ ಚುಚ್ಚಿಕೊಳ್ಳಿ, ಕ್ಯಾಪ್ಸಿಕಂ ನಂತರ ಈರುಳ್ಳಿ, ಆಮೇಲೆ ಟೊಮೆಟೊ, ಪನೀರ್.. ಹೀಗೆ ಒಂದರ ನಂತರ ಒಂದನ್ನು ಕಡ್ಡಿಗೆ ಚುಚ್ಚಿ. ನಂತರ ಕಾದ ಹೆಂಚಿನ ಮೇಲೆ ಜೋಡಿಸಿಕೊಂಡು ಎಲ್ಲಾ ಬದಿ ಬೆಣ್ಣೆ ಹಾಕಿ ಹುರಿದುಕೊಂಡರೆ ಪನೀರ್ ಟಿಕ್ಕಾ ತಯಾರಾಗುವುದು.

ದಹಿ ಬ್ರೆಡ್

ಬೇಕಾಗುವ ಸಾಮಗ್ರಿಗಳು: ಬ್ರೆಡ್ – 4 ತುಂಡುಗಳು, ಮೊಸರು – ಅರ್ಧ ಲೀಟರ್, ಈರುಳ್ಳಿ – 1, ಕ್ಯಾರೆಟ್ – 1, ಕೊತ್ತಂಬರಿ ಸೊಪ್ಪು – ಸ್ವಲ್ಪ, ಖಾರದ ಪುಡಿ – ಅರ್ಧ ಚಮಚ, ಚಾಟ್ ಮಸಾಲೆ – 1 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಖಾರಬೂಂದಿ – 100 ಗ್ರಾಂ, ಸಕ್ಕರೆ – 1 ಚಮಚ

ತಯಾರಿಸುವ ವಿಧಾನ: ಮೊದಲು ಬ್ರೆಡ್ ಅಂಚುಗಳನ್ನು ಕತ್ತರಿಸಿಕೊಳ್ಳಿ. ನಂತರ ಹೆಂಚಿನ ಮೇಲೆ ಹಾಕಿ ಎರಡೂ ಬದಿ ಸುಟ್ಟುಕೊಳ್ಳಬೇಕು. ಬ್ರೆಡ್ ತಣ್ಣಗಾದ ನಂತರ ಒಂದು ಪ್ಲೇಟ್‌ನಲ್ಲಿ ಬ್ರೆಡ್‌ ಅನ್ನು ಇಟ್ಟು ಅದಕ್ಕೆ ಸಕ್ಕರೆ ಬೆರೆಸಿದ ಮೊಸರನ್ನು ಹಾಕಿ. ನಂತರ ಹೆಚ್ಚಿದ ಈರುಳ್ಳಿ, ತುರಿದ ಕ್ಯಾರೆಟ್, ಕೊತ್ತಂಬರಿ ಸೊಪ್ಪು ಮೇಲೆ ಉದುರಿಸಿ. ಅದಕ್ಕೆ ಚಾಟ್ ಮಸಾಲೆ, ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಉದುರಿಸಿ ಕೊನೆಯದಾಗಿ ಖಾರಬೂಂದಿ ಹಾಕಿದರೆ ರುಚಿಯಾದ ದಹಿ ಬ್ರೆಡ್ ಸಿದ್ಧ.

ನಾಲ್ಕು ಬಗೆಯ ಸ್ವೀಟ್ ಕಾರ್ನ್ ಚಾಟ್

ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಸ್ವೀಟ್ ಕಾರ್ನ್, ಉಪ್ಪು, ಕಾಳುಮೆಣಸಿನ ಪುಡಿ, ಬೆಣ್ಣೆ, ಚೀಸ್‌, ಇಟಾಲಿಯನ್ ಹರ್ಬ್ಸ್‌, ಚಿಲ್ಲಿ ಫ್ಲೇಕ್ಸ್‌, ನಿಂಬೆರಸ, ಹಸಿಮೆಣಸು, ಕೊತ್ತಂಬರಿ ಸೊಪ್ಪು.

1. ಬಟರ್ ಅಂಡ್ ಸಾಲ್ಟ್ ಚಾಟ್: ಬೇಯಿಸಿಕೊಂಡ ಸ್ವೀಟ್ ಕಾರ್ನ್ ಅನ್ನು ಒಂದು ಬಟ್ಟಲಿಗೆ ಹಾಕಿ ಬಿಸಿಯಾಗಿರುವಾಗಲೇ ಅದಕ್ಕೆ ಸ್ವಲ್ಪ ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಿಟಿಕೆ ಕಾಳುಮೆಣಸಿನ ಪುಡಿ ಹಾಕಿ ಕಲೆಸಿದರೆ ಬಟರ್ ಅಂಡ್ ಸಾಲ್ಟ್ ಸ್ವೀಟ್ ಕಾರ್ನ್ ರೆಡಿ.

2.ಚೀಸಿ ಸ್ವೀಟ್ ಕಾರ್ನ್: ಬೇಯಿಸಿದ ಸ್ವೀಟ್ ಕಾರ್ನ್ ಅನ್ನು ಬಾಣಲೆಗೆ ಹಾಕಿಕೊಂಡು ಅದಕ್ಕೆ ಉಪ್ಪು, ಚೀಸ್ ಸ್ಲೈಸ್, ಇಟಾಲಿಯನ್ ಹರ್ಬ್ಸ್, ಚಿಲ್ಲಿ ಫ್ಲೇಕ್ಸ್ ಹಾಕಿ ಚೀಸ್ ಕರಗುವಷ್ಟು ಬಿಸಿ ಮಾಡಿ ತಿನ್ನಿ.

3. ಮಸಾಲ ಸ್ವೀಟ್ ಕಾರ್ನ್: ಒಂದು ಬಾಣಲೆಯನ್ನು ಬಿಸಿಗಿಟ್ಟು ಅದಕ್ಕೆ ಬೇಯಿಸಿದ ಸ್ವೀಟ್ ಕಾರ್ನ್ ಹಾಕಿ ಕೆಂಪುಮೆಣಸಿನಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಹೋಳು ನಿಂಬೆರಸ, ಬೆಣ್ಣೆ ಹಾಕಿ ಕಲೆಸಿದರೆ ಮಸಾಲ ಸ್ವೀಟ್ ಕಾರ್ನ್ ತಿನ್ನಲು ರುಚಿಯಾಗಿರುತ್ತದೆ.

4. ಸ್ಪೈಸಿ ಸ್ವೀಟ್ ಕಾರ್ನ್: ಒಂದು ಬಟ್ಟಲಿಗೆ ಬೇಯಿಸಿದ ಸ್ವೀಟ್ ಕಾರ್ನ್ ಹಾಕಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ತುರಿದ ಕ್ಯಾರೆಟ್, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲೆಸಿ. ಕೊನೆಯದಾಗಿ ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ, ಕಾಳುಮೆಣಸಿನಪುಡಿ ಹಾಕಿ ಮತ್ತೊಮ್ಮೆ ಕಲೆಸಿ.

(ಲೇಖಕಿ: ಹೇಮಾಸ್‌ ಕುಕ್ಕಿಂಗ್ ಯೂಟ್ಯೂಬ್ ಚಾನೆಲ್ ನಿರ್ವಾಹಕಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT