ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬದ ಸನಿಹದಲ್ಲಿ ಸಿಹಿ ಉಂಡೆಗಳ ಸವಿ

Published 16 ಸೆಪ್ಟೆಂಬರ್ 2023, 4:15 IST
Last Updated 16 ಸೆಪ್ಟೆಂಬರ್ 2023, 4:15 IST
ಅಕ್ಷರ ಗಾತ್ರ

ಕೆ. ವಿ. ರಾಜಲಕ್ಷ್ಮಿ

–––––––––––

ಸಿಹಿ ಉಂಡೆಗಳಲ್ಲಿ ಹಲವು ಬಗೆಗಳಿವೆ. ಪ್ರದೇಶವಾರು ಉಂಡೆಗಳು ವಿಭಿನ್ನವಾಗಿಯೂ ಇರುತ್ತವೆ. ಅಂಥ ವಿಭಿನ್ನವಾಗಿರುವ ಉಂಡೆಗಳ ರೆಸಿಪಿಗಳನ್ನು ಕೆ.ವಿ.ರಾಜಲಕ್ಷ್ಮಿಯವರು ಇಲ್ಲಿ ಪರಿಚಯಿಸಿದ್ದಾರೆ.

–––––––––– 

1. ಕೆಂಪಕ್ಕಿ ಉಂಡೆ

ಬೇಕಾಗುವ ಸಾಮಗ್ರಿ: ಕೆಂಪಕ್ಕಿ ಒಂದು ಕಪ್, ಹೆಸರು ಬೇಳೆ ಎರಡು  ಚಮಚ, ಒಣಕೊಬ್ಬರಿ ತುರಿ 1 ಚಮಚ, ಬೆಲ್ಲದಪುಡಿ ಮುಕ್ಕಾಲು ಕಪ್, ಚಿಟಕಿ ಏಲಕ್ಕಿ ಪುಡಿ, ತುಪ್ಪ ಎರಡು ಚಮಚ. 

ಮಾಡುವ ವಿಧಾನ: ಕೆಂಪಕ್ಕಿಯನ್ನು ತೊಳೆದು, ತೇವ ಇಂಗುವವರೆಗೆ ನೆರಳಲ್ಲಿ  ಆರಿಸಿ ಹುರಿದುಕೊಳ್ಳಿ. ಜಿಡ್ಡು ಸೋಕಿಸದೆ ಹೆಸರುಬೇಳೆಯನ್ನು ಪರಿಮಳ ಬರುವವರೆಗೆ ಹುರಿಯಿರಿ. ಹುರಿದ ಕೆಂಪಕ್ಕಿ ಮತ್ತು ಹೆಸರುಬೇಳೆಯನ್ನು ಚಿರೋಟಿರವೆಯ ಹದಕ್ಕೆ ಅರೆದುಕೊಳ್ಳಿ. ಬಾಣಲೆಯಲ್ಲಿ ಬೆಲ್ಲದಪುಡಿ ಹಾಕಿ ಸ್ವಲ್ಪ ನೀರು ಹಾಕಿ ಕರಗಿಸಿ, ಅರೆದ ಹಿಟ್ಟು ಸೇರಿಸಿ ಸಣ್ಣ ಉರಿಯಲ್ಲಿ ಐದು ನಿಮಿಷ  ಗೊಟಾಯಿಸಿ, ಉರಿ ಆರಿಸಿ. ನಂತರ ಏಲಕ್ಕಿ ಪುಡಿ, ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಬಿಸಿಯಿರುವಾಗಲೇ ಸಣ್ಣ ಸಣ್ಣ  ಉಂಡೆಗಳಾಗಿ ಕಟ್ಟಿ.   

2. ಬೆಲ್ಲದ ಪುರಿ 

ಬೇಕಾಗುವ ಸಾಮಗ್ರಿ: ಸಾದಾ ಪುರಿ ಎರಡು ಕಪ್, ಬೆಲ್ಲ ಒಂದು ಕಪ್.  

ಮಾಡುವ ವಿಧಾನ: ಬಾಣಲೆಯಲ್ಲಿ, ಬೆಲ್ಲ ಹಾಕಿ  ಅರ್ಧ ಕಪ್ ನೀರು ಸೇರಿಸಿ, ಸಣ್ಣ ಉರಿಯಲ್ಲಿಡಿ. ಅಂಟಿನ ನೊರೆ ಬರುವಾಗ ಪುರಿ  ಹಾಕಿ ಒಂದೆರಡು ಬಾರಿ ತಿರುವಿ ಮಿಶ್ರಣ ಮಾಡಿ ಅಗಲವಾದ ಪಾತ್ರೆಗೆ ವರ್ಗಾಯಿಸಿ ಹರಡಿ ತಣಿಸಿ. ನಂತರ ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಡಿ. ಸಂಜೆಯ ವೇಳೆ ಸ್ನ್ಯಾಕ್ಸ್‌ಗಾಗಿ ಬೆಲ್ಲದ ಪುರಿ ಹೇಳಿ ಮಾಡಿಸಿದ ತಿನಿಸು. 

3. ಗೋಡಂಬಿ-ಶೇಂಗಾ ಉಂಡೆ 

ಬೇಕಾಗುವ ಸಾಮಗ್ರಿ: ಗೋಡಂಬಿ ತುಂಡು ಕಾಲು ಕಪ್, ಹುರಿದು ಸಿಪ್ಪೆ ಬಿಡಿಸಿ ಶೇಂಗಾ ಬೀಜ ಅರ್ಧ ಕಪ್, ಹುರಿಗಡಲೆ ಪುಡಿ ಎರಡು ಚಮಚ, ಬೆಲ್ಲ ಅರ್ಧ ಕಪ್.  

ಮಾಡುವ ವಿಧಾನ: ಬಾಣಲೆಯಲ್ಲಿ ಬೆಲ್ಲ ಹಾಕಿ ಸ್ವಲ್ಪ ನೀರು ಹಾಕಿ ಸಣ್ಣ ಉರಿಯಲ್ಲಿಡಿ. ಬೆಲ್ಲ ಅಂಟು ಪಾಕದ ಹದಕ್ಕೆ ಬಂದ ಕೂಡಲೇ ಉರಿ ಆರಿಸಿ. ಮೇಲೆ ತಿಳಿಸಿರುವ ಎಲ್ಲಾ ಪದಾರ್ಥಗಳನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅಗಲವಾದ ತಟ್ಟೆಗೆ ವರ್ಗಾಯಿಸಿ. ನಂತರ ಅಂಗೈಯಲ್ಲಿ ತುಪ್ಪ ಸವರಿಕೊಂಡು ಸಣ್ಣ ಸಣ್ಣ ಉಂಡೆಗಳನ್ನು ಕಟ್ಟಿ. ಈಗ ಗೋಡಂಬಿ–ಶೇಂಗಾ ಉಂಡೆ ಸವಿಯಲು ಸಿದ್ದ.   

ಗೋಡಂಬಿ ಶೇಂಗಾ ಉಂಡೆ
ಗೋಡಂಬಿ ಶೇಂಗಾ ಉಂಡೆ
ಬೆಲ್ಲದ ಪುರಿ
ಬೆಲ್ಲದ ಪುರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT