2020ನೇ ವರ್ಷ ಇನ್ನೇನು ಮುಗಿದು ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಇದರ ನಡುವೆ ಕ್ರಿಸ್ಮಸ್ ಸಂಭ್ರಮವೂ ಜೊತೆಗೂಡಿದೆ. ಕ್ರಿಸ್ಮಸ್ ಎಂದಾಕ್ಷಣ ನೆನಪಿಗೆ ಬರುವುದು ಬಗೆ ಬಗೆಯ ಕೇಕ್ಗಳು. ಇನ್ನೇನು ಈ ಆಚರಣೆಗೆ ಒಂದು ವಾರವಿದೆ. ಈಗಿನಿಂದಲೇ ಮನೆಯಲ್ಲೇ ಕೇಕ್ ತಯಾರಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿ ಎನ್ನುತ್ತಾರೆ ಬೆಂಗಳೂರಿನ ಲೈಟ್ಬೈಟ್ಸ್ನ ಫ್ಲೋರಿಯನ್ ಫ್ರಾನ್ಸಿಸ್.

ಸಾಂಪ್ರದಾಯಿಕ ಪ್ಲಮ್ ಕೇಕ್

ಬೇಕಾಗುವ ಸಾಮಗ್ರಿಗಳು: ಬೆಣ್ಣೆ – 250 ಗ್ರಾಂ, ಸಕ್ಕರೆಪುಡಿ – 190 ಗ್ರಾಂ, ಬ್ರೌನ್ ಶುಗರ್ – 60 ಗ್ರಾಂ, ಮೊಟ್ಟೆ – 5, ಮಿಕ್ಸ್ಡ್ ಜಾಮ್ – 15 ಗ್ರಾಂ, ಕ್ಯಾರಾಮೆಲ್ ಸಿರಪ್ – 6 ಮಿ.ಲೀ., ವೆನಿಲ್ಲಾ ಎಸೆನ್ಸ್ – 12 ಮಿ.ಲೀ., ಮೈದಾ – 250 ಗ್ರಾಂ, ಕೇಕ್ ಮಸಾಲ – 6 ಗ್ರಾಂ, ಕೊಕೊವಾ ಪುಡಿ – 20 ಗ್ರಾಂ, ಬೇಕಿಂಗ್ ಪೌಡರ್ – 3 ಗ್ರಾಂ, ಅಡುಗೆಸೋಡಾ – 1.5 ಗ್ರಾಂ, ಉಪ್ಪು – 2 ಗ್ರಾಂ

ಒಣಗಿದ ಹಣ್ಣುಗಳ ಮಿಶ್ರಣ: ಕಪ್ಪು ಒಣದ್ರಾಕ್ಷಿ – 50 ಗ್ರಾಂ, ಸಾದಾ ಒಣದ್ರಾಕ್ಷಿ – 50 ಗ್ರಾಂ, ಗೋಡಂಬಿ – 20 ಗ್ರಾಂ, ಬಾದಾಮಿ ತುಂಡು – 20 ಗ್ರಾಂ, ವಾಲ್ನಟ್ – 20 ಗ್ರಾಂ, ಟುಟಿ ಫ್ರೂಟಿ – 20 ಗ್ರಾಂ, ಕರ್ಜೂರ – 15 ಗ್ರಾಂ, ಏಪ್ರಿಕಾಟ್ – 10 ಗ್ರಾಂ, ಕಿತ್ತಳೆ ಸಿಪ್ಪೆ – 15 ಗ್ರಾಂ, ನಿಂಬೆಹಣ್ಣಿನ ಸಿಪ್ಪೆ – 10 ಗ್ರಾಂ, ಕಿತ್ತಳೆ ಅಥವಾ ದ್ರಾಕ್ಷಿ ರಸ ಅಥವಾ ವೈನ್/ ರಮ್/ ಬೀರ್ (ನಿಮ್ಮ ಆಯ್ಕೆ).

ಕೇಕ್ ಮಸಾಲೆಗೆ: ದಾಲ್ಚಿನ್ನಿ – 1 ಇಂಚು, ಲವಂಗ – 3, ಸೋಂಪು – 2, ಏಲಕ್ಕಿ – 2.

ತಯಾರಿಸುವ ವಿಧಾನ: ಒಣಗಿದ ಹಣ್ಣುಗಳನ್ನು ನೆನೆಸಿಡುವುದು: ಎಲ್ಲಾ ಹಣ್ಣುಗಳ ಬೀಜ ತೆಗೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಅದನ್ನು ಒಂದು ಪಾತ್ರೆಗೆ ಹಾಕಿ. ಅದಕ್ಕೆ ಕಿತ್ತಳೆ ಅಥವಾ ದ್ರಾಕ್ಷಿ ರಸ ಸೇರಿಸಿ. (ವೈನ್, ರಮ್ ಅಥವಾ ಬೀರ್ ಬಳಸುವವರು ಅದನ್ನು ಸೇರಿಸಿ). ಅದನ್ನು ವಾರಗಳ ಕಾಲ ನೆನೆಸಿಡಿ. ಕೇಕ್ ಮಸಾಲೆಗೆ ತಿಳಿಸಿದ ಪದಾರ್ಥಗಳನ್ನು ಪ್ಯಾನ್ನಲ್ಲಿ ಹುರಿದುಕೊಂಡು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಮೇಲೆ ಹೇಳಿದ ಹಿಟ್ಟಿನ ಪದಾರ್ಥಗಳನ್ನು 3 ಬಾರಿ ಜರಡಿ ಹಿಡಿಯಿರಿ. ಅದಕ್ಕೆ ಯಾವುದೇ ನೀರು ತಾಕದಂತೆ ದೂರ ಇರಿಸಿ. ಒಣಹಣ್ಣುಗಳನ್ನು ಮೈದಾಹಿಟ್ಟಿನೊಂದಿಗೆ ಸೇರಿಸಿ ಕಲೆಸಿ. ಮೇಲೆ ಹೇಳಿದ ಕ್ರೀಮ್ ಪದಾರ್ಥಗಳನ್ನು ಸೇರಿಸಿ ಬ್ಲೆಂಡರ್ ಸಹಾಯದಿಂದ ಚೆನ್ನಾಗಿ ಕಲೆಸಿ ಕ್ರೀಮ್ ತಯಾರಿಸಿ. ಅದಕ್ಕೆ ಸಕ್ಕರೆ ಪುಡಿ ಸೇರಿಸಿ ಕರಗುವವರೆಗೂ ಕಲೆಸಿ. ಬ್ರೌನ್ ಶುಗರ್ ಹಾಕಿ ಮತ್ತೆ ಕಲೆಸಿ. ಒಂದೊಂದೇ ಮೊಟ್ಟೆಯನ್ನು ಒಡೆದು ಹಾಕಿ ಕಲೆಸಿ. ನಂತರ ಜಾಮ್, ಎಸೆನ್ಸ್ ಹಾಗೂ ಕ್ಯಾರಾಮೆಲ್ ಸಿರಪ್ ಹಾಕಿ ಮಿಶ್ರಣ ಮಾಡಿ. ನಂತರ ಉಳಿದ ಸಾಮಗ್ರಿಗಳನ್ನು ಹಿಟ್ಟಿಗೆ ಸೇರಿಸಿ. ಗಂಟಿಲ್ಲದಂತೆ ಈ ಮಿಶ್ರಣವನ್ನು ಕಲೆಸಿ ನಂತರ ಮೊದಲೇ ಕಲೆಸಿಟ್ಟುಕೊಂಡ ಮೈದಾಹಿಟ್ಟಿನ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಒಂದೆಡೆ ಇಡಿ.

ಬೇಯಿಸುವ ವಿಧಾನ: 180 ಡಿಗ್ರಿ ಸೆಲಿಯಸ್ನಲ್ಲಿ ಓವನ್ ಅನ್ನು ಬಿಸಿ ಮಾಡಿಕೊಳ್ಳಿ. 1 ಕೆ.ಜಿ. ಬೇಕಿಂಗ್ ಪ್ಯಾನ್ ತೆಗೆದುಕೊಂಡು ಅದರ ಸುತ್ತಲು ಎಣ್ಣೆ ಅಥವಾ ಬೆಣ್ಣೆ ಹಚ್ಚಿ. ತಯಾರಿಸಿಕೊಂಡ ಹಿಟ್ಟನ್ನು ಅದಕ್ಕೆ ಸುರಿಯಿರಿ ಎಲ್ಲಾ ಬದಿಗೂ ಬರುವಂತೆ ಹರಡಿ. ಗಾಳಿ ಗುಳ್ಳೆಗಳು ಹರಡುವಂತೆ ಪ್ಯಾನ್ ಅನ್ನು ಮುಚ್ಚಿ. 180 ಡಿಗ್ರಿ ಸೆಲ್ಸಿಯಸ್ನಲ್ಲಿ 45 ರಿಂದ 50 ನಿಮಿಷ ಬೇಯಿಸಿ. ಬೇಯಿಸುವಾಗ ಮಧ್ಯದಲ್ಲಿ ಒಂದು ಕಡ್ಡಿ ಇರಿಸಿ. ಇದರಿಂದ ಕೇಕ್ ಚೆನ್ನಾಗಿ ಬೆಂದಿದೆಯೇ ಇಲ್ಲವೇ ನೋಡಲು ಸಾಧ್ಯವಾಗುತ್ತದೆ.

ಮೊಟ್ಟೆರಹಿತ ಹಣ್ಣಿನ ಕೇಕ್

ಬೇಕಾಗುವ ಸಾಮಗ್ರಿಗಳು: ರಿಫೈನ್ಡ್ ಆಯಿಲ್ – 100 ಮಿ.ಲೀ, ಸಕ್ಕರೆ ಪುಡಿ – 190 ಗ್ರಾಂ, ಸೋಯಾಮಿಲ್ಕ್ – 200 ಮಿ.ಲೀ., ಮಿಕ್ಸ್ಡ್ ಜಾಮ್ – 15 ಗ್ರಾಂ, ವೆನಿಲ್ಲಾ ಎಸೆನ್ಸ್ – 12 ಮಿ.ಲೀ., ಮೈದಾ– 250 ಗ್ರಾಂ, ಕೊಕಾ ಪೌಡರ್ – 20 ಗ್ರಾಂ, ಬೇಕಿಂಗ್ ಪೌಡರ್ – 3 ಗ್ರಾಂ, ಅಡುಗೆ ಸೋಡಾ – 1.5 ಗ್ರಾಂ, ಆ್ಯಪಲ್ ಸೈಡರ್ ವಿನೆಗರ್ – 2 ಟೇಬಲ್ ಚಮಚ, ಉಪ್ಪು – ರುಚಿಗೆ, ಬೆಣ್ಣೆ – 150 ಗ್ರಾಂ, ಬ್ರೌನ್ ಶುಗರ್ – 60 ಗ್ರಾಂ, ಕಪ್ಪು ಒಣದ್ರಾಕ್ಷಿ – 50 ಗ್ರಾಂ, ಸಾದಾ ಒಣದ್ರಾಕ್ಷಿ – 50 ಗ್ರಾಂ, ಗೋಡಂಬಿ – 20 ಗ್ರಾಂ, ಬಾದಾಮಿ – 20 ಗ್ರಾಂ, ವಾಲ್ನಟ್ – 20 ಗ್ರಾಂ, ಟುಟಿ ಫ್ರೂಟಿ – 20 ಗ್ರಾಂ, ಕಿತ್ತಳೆ ಸಿಪ್ಪೆ – 15 ಗ್ರಾಂ, ನಿಂಬೆಸಿಪ್ಪೆ – 10 ಗ್ರಾಂ, ಕಿತ್ತಳೆ ಅಥವಾ ದ್ರಾಕ್ಷಿ ರಸ

ತಯಾರಿಸುವ ವಿಧಾನ: ಬೀಜ ತೆಗೆದಿರಿಸಿಕೊಂಡ ಒಣಹಣ್ಣುಗಳನ್ನು ಚಿಕ್ಕದಾಗಿ ಕತ್ತರಿಸಿ. ಬೆಣ್ಣೆ ಬಿಸಿ ಮಾಡಿ ಅದಕ್ಕೆ ಬ್ರೌನ್ ಶುಗರ್, ಒಣಹಣ್ಣುಗಳನ್ನು ಹಾಕಿ. ಅದಕ್ಕೆ ಕಿತ್ತಳೆ ಅಥವಾ ದ್ರಾಕ್ಷಿರಸ ಸೇರಿಸಿ ಕಡಿಮೆ ಉರಿಯಲ್ಲಿ 10 ನಿಮಿಷ ಕುದಿಸಿ. ಈ ಮಿಶ್ರಣ ತಣ್ಣದಾಗ ಮೇಲೆ ಅದಕ್ಕೆ ಗೋಡಂಬಿ, ಬಾದಾಮಿ, ವಾಲ್ನಟ್ ಹಾಗೂ ಟುಟಿ ಫ್ರೂಟಿ ಸೇರಿಸಿ ಮರದ ಚಮಚದಲ್ಲಿ ಕಲೆಸಿ. ಮೈದಾ, ಕೊಕೊವಾ ಪುಡಿ, ಬೇಕಿಂಗ್ ಪುಡಿ, ಅಡುಗೆ ಸೋಡಾ ಹಾಗೂ ಉಪ್ಪನ್ನು ಜರಡಿ ಹಿಡಿಯಿರಿ. ಅದಕ್ಕೆ ಒಣಹಣ್ಣುಗಳನ್ನು ಸೇರಿಸಿ ಮಿಶ್ರಣ ಮಾಡಿ. ಅದರ ಮೇಲೆ ಎಣ್ಣೆ ಸೇರಿಸಿ ಒಂದೆಡೆ ಇಡಿ. ಪಾತ್ರೆಗೆ ಸೋಯಾಹಾಲು ಸೇರಿಸಿ ಅದಕ್ಕೆ ವಿನೆಗರ್ ಸೇರಿಸಿ. ಆಗ ಹಾಲು ಕೆನೆ ಬಿಡುತ್ತದೆ. ಅದಕ್ಕೆ ಬೇಕಿಂಗ್ ಸೋಡ ಚಿಮುಕಿಸಿ, ಕುದಿಸಿ ಅದನ್ನು ಮೊದಲು ತಯಾರಿಸಿಕೊಂಡ ಮಿಶ್ರಣಕ್ಕೆ ಸೇರಿಸಿ, ಬಿಡದಂತೆ ಕಲೆಸಿ. ಈ ಮಿಶ್ರಣಕ್ಕೆ ಜಾಮ್ ಹಾಗೂ ಎಸೆನ್ಸ್ ಸೇರಿಸಿ. ಒವೆನ್ ಅನ್ನು 180 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಬಿಸಿ ಮಾಡಿಕೊಳ್ಳಿ. ಬೆಣ್ಣೆ ಅಥವಾ ಎಣ್ಣೆ ಹಚ್ಚಿದ ಪ್ಯಾನ್ಗೆ ತಯಾರಿಸಿಕೊಂಡ ಹಿಟ್ಟನ್ನು ಸುರಿದು 180 ಡಿಗ್ರಿ ಉಷ್ಣತೆಯಲ್ಲಿ ಬೇಯಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.