ದಕ್ಷಿಣ ಭಾರತದ ಜನಪ್ರಿಯ ತಿಂಡಿ ಇಡ್ಲಿ ! ಮಾಮೂಲಿ ಅಕ್ಕಿ ಇಡ್ಲಿಗಿಂತ ಸ್ವಲ್ಪ ಭಿನ್ನವಾಗಿರುವ ರವೆ ಇಡ್ಲಿ ಮಾಡುವುದು ತುಂಬಾ ಸರಳ. ರವೆ ಇಡ್ಲಿ ಮಾಡುವ ವಿಧಾನಕ್ಕೆ ಈ ಕೆಳಗಿನ ವಿಡಿಯೊ ಮತ್ತು ಮಾಹಿತಿ ನೋಡಿ.

ಸಾಮಗ್ರಿಗಳು
ಲೋಕಲ್ ರವೆ -  1 ಕಪ್
ಮೊಸರು - 1 ಕಪ್
ಈರುಳ್ಳಿ - ಸ್ವಲ್ಪ
ಶುಂಠಿ - ಒಂದು ಇಂಚು
ಗೋಡಂಬಿ - 6
ಕ್ಯಾರೇಟ್ ತುರಿದದ್ದು - ಸ್ವಲ್ಪ
ತೆಂಗಿನ ತುರಿ - ಸ್ವಲ್ಪ
ಕರಿಬೇವು - ಸ್ವಲ್ಪ
ಕೊತ್ತಂಬರಿ ಸೊಪ್ಪು -  ಸ್ವಲ್ಪ
ಟೊಮ್ಯಾಟೊ – 1
ಕಡಲೆ ಬೇಳೆ - ಸ್ವಲ್ಪ
ಉದ್ದಿನ ಬೇಳೆ - ಸ್ವಲ್ಪ
ಉಪ್ಪು - ಸ್ವಲ್ಪ
ಎಣ್ಣೆ - 2 ಸ್ಪೂನ್
ಮಾಡುವ ವಿಧಾನ:ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಕಡಲೆ ಬೇಳೆ, ಉದ್ದಿನ ಬೇಳೆ, ಶುಂಠಿ, ಕರಿಬೇವು, ಕತ್ತರಿಸಿದ ಈರುಳ್ಳಿ, ಸೇರಿಸಿ ಸ್ವಲ್ಪ ಬಾಡಿಸಿ. ಇದಕ್ಕೆ ರವೆ ಸೇರಿಸಿ 2 ನಿಮಿಷ ಹುರಿಯಿರಿ. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಚಿಟಿಕೆ ಸೋಡಾ ಹಾಕಿ ಮಿಕ್ಸ್ ಮಾಡಿ. ಇದು ತಣ್ಣಗಾದ ಮೇಲೆ ಮೊಸರು ಸೇರಿಸಿ ಚೆನ್ನಾಗಿ ಕಲಸಿ ಮುಚ್ಚಿಡಿ. ಈ ಹಿಟ್ಟು ಇಡ್ಲಿ ಹಿಟ್ಟಿನ ಹದವಿರಬೇಕು. ಇಪ್ಪತ್ತು ನಿಮಿಷಗಳ ನಂತರ ಇಡ್ಲಿ ತಟ್ಟೆಯಲ್ಲಿ ಟೋಮ್ಯಾಟೋ ಸ್ಲೈಸ್ ಕೊತ್ತಂಬರಿ ಸೊಪ್ಪು, ತೆಂಗಿನ ತುರಿಯನ್ನು ಹಾಕಿ, ಅದರ ಮೇಲೆ ಇಡ್ಲಿ ಹಿಟ್ಟನ್ನೂ ಸುರಿದು ಹಬೆಯಲ್ಲಿ ಬೇಯಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.