ಶನಿವಾರ, ಸೆಪ್ಟೆಂಬರ್ 25, 2021
30 °C
ಪಾಕತಜ್ಞ ಶ್ರೀಕೃಷ್ಣ ಶಾಸ್ತ್ರಿ ಅವರಿಂದ ಮತ್ತೊಂದು ಪ್ರಯೋಗ

ಪಾಕ ಪ್ರಯೋಗ: ಅಡಿಕೆ, ಕೋಕೊ ಬೀಜದಿಂದ ಆಯ್ತು, ಇದೀಗ ವೀಳ್ಯದೆಲೆಯ ಹೋಳಿಗೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಅಡಿಕೆ ಮತ್ತು ಕೋಕೊ ಬೀಜದಿಂದ ಹೋಳಿಗೆ ತಯಾರಿಸಿ ಗ್ರಾಹಕರ ಮನಗೆದ್ದಿರುವ ಪುತ್ತೂರು ತಾಲ್ಲೂಕು ಗುರಿಮೂಲೆಯ ಪಾಕತಜ್ಞ ಶ್ರೀಕೃಷ್ಣ ಶಾಸ್ತ್ರಿ ಅವರು ಹೊಸ ಪ್ರಯೋಗವಾಗಿ ವೀಳ್ಯದೆಲೆಯಿಂದ ಹೋಳಿಗೆ ತಯಾರಿಸಿದ್ದಾರೆ.

‘ವೀಳ್ಯದೆಲೆಯಿಂದ ಹೋಳಿಗೆ ತಯಾರಿಸಿದ ಮೊದಲ ಪ್ರಯೋಗ ಇದಾಗಿದೆ. ಅಡಿಕೆ ಮತ್ತು ಕೋಕೊದಿಂದ ತಯಾರಿಸಿದ ಹೋಳಿಗೆಗೆ ತುಂಬಾ ಬೇಡಿಕೆ ಬಂದಿದೆ. ಬೇರೆ ಬೇರೆ ಭಾಗಗಳಿಂದ ಗ್ರಾಹಕರು ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಈ ಪ್ರೇರಣೆಯಿಂದ ವೀಳ್ಯದೆಲೆಯಿಂದ ಹೋಳಿಗೆ ತಯಾರಿಸುವ ಉತ್ಸಾಹ ಬಂತು’ ಎಂದು ಶ್ರೀಕೃಷ್ಣ ಶಾಸ್ತ್ರಿ ಪ್ರತಿಕ್ರಿಯಿಸಿದರು.

‘ಕಾಲು ಕೆ.ಜಿ ವೀಳ್ಯದೆಲೆಯಿಂದ 40 ಹೋಳಿಗೆ ತಯಾರಿಸಬಹುದು. ಈ ಹೋಳಿಗೆ ತಿಂದವರು ರುಚಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಿನ್ನುವಾಗ ವೀಳ್ಯದೆಲೆಯ ರುಚಿ ಮತ್ತು ಪರಿಮಳ ಅನುಭವಕ್ಕೆ ಬರುವುದರಿಂದ ಈ ಹೋಳಿಗೆ ಸವಿದವರೆಲ್ಲರೂ ಇಷ್ಟಪಟ್ಟಿದ್ದಾರೆ. ಶಾಸ್ತ್ರಿ ಹೋಂ ಪ್ರಾಡಕ್ಟ್ ಹೆಸರಿನಲ್ಲಿ ಕೃಷಿ ಬೆಳೆ ಮೂಲವಸ್ತು ಒಳಗೊಂಡ ಹೋಳಿಗೆ ಮಾರುಕಟ್ಟೆಗೆ ಪರಿಚಯಿಸುವ ಉದ್ದೇಶವಿದೆ’ ಎಂದು ಕೃಷಿಕರೂ ಆಗಿರುವ ಶಾಸ್ತ್ರಿ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು