ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಚ್ಚುಗಾಯಿ ವಿಶೇಷ

Last Updated 1 ಜೂನ್ 2012, 19:30 IST
ಅಕ್ಷರ ಗಾತ್ರ

ಖಾರದ ಗೊಜ್ಜು
ಸಾಮಗ್ರಿ: 5-6 ಕೊಚ್ಚುಗಾಯಿ, ಸಣ್ಣ ಮೆಣಸಿನಕಾಯಿ, 6-7 ಬೆಳ್ಳುಳ್ಳಿ , 2 ಚಮಚ ಉದ್ದಿನಬೇಳೆ , 2 ಚಮಚ ಸಾಸಿವೆ, ಚಿಟಿಕೆ ಅರಿಸಿನ, ಉಪ್ಪು, ಎಣ್ಣೆ.

ವಿಧಾನ: ಕೊಚ್ಚಗಾಯಿಯನ್ನು ಉಪ್ಪು ನೀರಿನಿಂದ ತೆಗೆದು ತೊಳೆದು ಚೆನ್ನಾಗಿ ಕಿವುಚಿಟ್ಟುಕೊಳ್ಳಿ. ಒಗ್ಗರಣೆಗೆ ಸಣ್ಣ ಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿಯನ್ನು ಜಜ್ಜಿ ಇಟ್ಟುಕೊಳ್ಳಿ. ನಂತರ ಒಗ್ಗರಣೆಗೆ ಎಣ್ಣೆ, ಉದ್ದಿನಬೇಳೆ ಹಾಕಿ, ಜಜ್ಜಿ ಮೆಣಸು, ಬೆಳ್ಳುಳ್ಳಿ, ಅರಿಸಿನ ಸಾಸಿವೆ ಹಾಕಿದ ನಂತರ ಕಿವುಚಿಟ್ಟ ಕೊಚ್ಚಗಾಯಿ ರಸವನ್ನು ಹಾಕಿ ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ. ಇದು ಬಿಸಿ ಅನ್ನಕ್ಕೆ ಎಣ್ಣೆಹಾಕಿ ಕಲಸಿಕೊಂಡರೆ ಬಹಳ ರುಚಿ.

ಸಿಹಿಗೊಜ್ಜು
ಸಾಮಗ್ರಿ: 5-6 ಕೊಚ್ಚುಗಾಯಿ, ಬೆಲ್ಲ, ಮೆಣಸಿನಪುಡಿ, ಉಪ್ಪು, ಉದ್ದಿನಬೇಳೆ ಹಾಗೂ ಕಡ್ಲೆಬೇಳೆ  ಹುರಿದು ಪುಡಿ ಮಾಡಿದ 2 ಚಮಚ , ಉದ್ದಿನಬೇಳೆ 1 ಚಮಚ, ಚಿಟಿಕೆ ಅರಿಸಿನ, ಸಾಸಿವೆ, ಎಣ್ಣೆ ಹಾಗೂ ಇಂಗು

ವಿಧಾನ: ಕೊಚ್ಚುಗಾಯಿಯನ್ನು ಉಪ್ಪು ನೀರಿನಿಂದ ತೆಗೆದು ತೊಳೆದು ಸಿಪ್ಪೆ ತೆಗೆದು ಕಿವುಚಿಟ್ಟುಕೊಳ್ಳಿ. ನಂತರ ಒಗ್ಗರಣೆಗೆ ಉದ್ದಿನಬೇಳೆ ಸಾಸಿವೆ ಎಣ್ಣೆ, ಅರಿಸಿನ, ಇಂಗು ಹಾಕಿ ನಂತರ ಅದಕ್ಕೆ ಕೊಚ್ಚಗಾಯಿ ರಸ, ಬೆಲ್ಲ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಕುದಿಯಬೇಕಾದರೆ ಮೆಣಸಿನ ಪುಡಿ, ಉದ್ದಿನಬೇಳೆ ಹಾಗೂ ಕಡ್ಲೆ ಬೇಳೆ ಪುಡಿ ಹಾಕಿ.

ಸಾಸುವೆ 
ಸಾಮಗ್ರಿ: ಕೊಚ್ಚುಗಾಯಿ 2, ಕಾಯಿ ತುರಿ ಸ್ವಲ್ಪ,  ಹಸಿಮೆಣಸು 1, ಚಿಟಿಕೆ  ಸಾಸಿವೆ, ಅರಿಸಿನ, ಉಪ್ಪು,

ವಿಧಾನ: ಕೊಚ್ಚಗಾಯಿಯನ್ನು ಕಿವುಚಿಟ್ಟುಕೊಂಡು, ಕಾಯಿತುರಿಗೆ ಹಸಿಮೆಣಸು, ಸಾಸಿವೆ, ಅರಿಸಿನ ಹಾಕಿ ರುಬ್ಬಿ ಕಿವುಚಿಟ್ಟ ರಸಕ್ಕೆ ಹಾಕಬೇಕು. ಉಪ್ಪು ಹಾಕಿ ನಂತರ  ಸಾಸಿವೆ ಒಗ್ಗರಣೆ ಕೊಡಬೇಕು.

ನೀರುಗೊಜ್ಜು
ಸಾಮಗ್ರಿ: 2 ಕೊಚ್ಚಗಾಯಿ, ನೀರು, ಉಪ್ಪು, ಹಸಿಮೆಣಸು, ಇಂಗು, ಒಣಮೆಣಸು, ಎಣ್ಣೆ, ಸಾಸಿವೆ. 

ವಿಧಾನ:  ಕೊಚ್ಚಗಾಯಿಯನ್ನು ಕಿವುಚಿ ನೀರು, ಉಪ್ಪು ನಂತರ ಹಸಿಮೆಣಸು ಕಿವುಚಿ ಹಾಕಿ. ಒಗ್ಗರಣೆಗೆ ಎಣ್ಣೆ, ಒಣಮೆಣಸು,  ಸಾಸಿವೆ, ಇಂಗು ಹಾಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT