ಎಲೆಕೋಸು ಫ್ರೈಡ್ ರೈಸ್

ಬೇಕಾಗುವ ಸಾಮಗ್ರಿಗಳು

ಹೆಚ್ಚಿದ ಎಲೆಕೋಸು – 2 ಬಟ್ಟಲು, ದೊಣ್ಣೆಮೆಣಸು – 1, ಬಟಾಣಿ – 1/2 ಬಟ್ಟಲು, ಹಸಿಮೆಣಸಿನಕಾಯಿ – 2, ಬೆಳ್ಳುಳ್ಳಿ – 8 ಎಸಳು, ಶುಂಠಿತುರಿ –1 ಚಮಚ, ಅಕ್ಕಿ – 2 ಬಟ್ಟಲು, ಮೆಣಸಿನಹುಡಿ – 1 ಚಮಚ, ಎಣ್ಣೆ – ಕಾಲು ಬಟ್ಟಲು, ಉಪ್ಪು – ರುಚಿಗೆ, ಕೊತ್ತುಂಬರಿ ಸ್ವಲ್ಪ

ತಯಾರಿಸುವ ವಿಧಾನ

ಅಕ್ಕಿಯಿಂದ ಮೃದುವಾಗಿ ಅನ್ನ ಮಾಡಿಡಿ. ಕೋಸು, ದೊಣ್ಣೆ ಮೆಣಸಿನಕಾಯಿಯನ್ನು ಹೆಚ್ಚಿಡಿ. (ಎಲೆಕೋಸಿನ ಜೊತೆಗೆ ಕ್ಯಾರೆಟ್, ಹುರುಳಿಕಾಯನ್ನು ಉಪಯೋಗಿಸಬಹುದು) ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ. ಅದಕ್ಕೆ ಬಿಡಿಸಿದ ಬೆಳ್ಳುಳ್ಳಿ ಎಸಳು, ಉದ್ದಕ್ಕೆ ಹೆಚ್ಚಿದ ಹಸಿಮೆಣಸು ಮತ್ತು ತರಕಾರಿಗಳನ್ನು ಹಾಕಿ ಚೆನ್ನಾಗಿ ಬಾಡಿಸಿ.

ನಂತರ ಕತ್ತರಿಸಿದ ಶುಂಠಿ ಚೂರು ಮತ್ತು ಉಪ್ಪು ಹಾಕಿ ಹುರಿಯುವುದನ್ನು ಮುಂದುವರಿಸಿ. ನೀರು ಬೇಡ ಹಾಗೆ ಎಣ್ಣೆಯಲ್ಲೇ ತರಕಾರಿಯನ್ನು ಬೇಯಿಸಿ. ಮೆಣಸಿನಹುಡಿಯನ್ನು ಹಾಕಿ ಕಲಸಿ ಮಾಡಿಟ್ಟ ಅನ್ನವನ್ನು ಸುರಿದು ಚೆನ್ನಾಗಿ ಕಲಸಿ ಕೆಳಗಿಳಿಸಿ. ಬಿಸಿ, ಬಿಸಿಯಾಗಿರುವ ಎಲೆಕೋಸಿನ ಫ್ರೈಡ್ ರೈಸ್ ರುಚಿಕಟ್ಟಾಗಿರುತ್ತದೆ.

ಚಪ್ಪರದವರೆ ಮೆಣಸುಹುಳಿ

ಬೇಕಾಗುವ ಸಾಮಗ್ರಿಗಳು

ಚಪ್ಪರದವರೆಕಾಯಿ – 1/4 ಕೆ.ಜಿ, ತೊಗರಿಬೇಳೆ – 1/2 ಕಪ್, ಕಡಲೆಬೀಜ – 1/4 ಕಪ್, ಹುಣಸೆಹಣ್ಣು – ನಿಂಬೆಗಾತ್ರ, ಕಡಲೆಬೇಳೆ – 2 ಚಮಚ, ಉದ್ದಿನಬೇಳೆ –1 ಚಮಚ, ಮೆಣಸು – 1 ಚಮಚ, ಹುಳಿಪುಡಿ –1 ಚಮಚ, ಜೀರಿಗೆ, ಕೊತ್ತಂಬರಿಕಾಳು – ತಲಾ ಅರ್ಧ ಚಮಚ, ತೆಂಗಿನತುರಿ – ಅರ್ಧ ಬಟ್ಟಲು, ಒಗ್ಗರಣೆಗೆ – ತುಪ್ಪ, ಸಾಸಿವೆ,ಇಂಗು, ರುಚಿಗೆ – ಉಪ್ಪು, ಬೆಲ್ಲ

ತಯಾರಿಸುವ ವಿಧಾನ

ಚಪ್ಪರದವರೆಯನ್ನು ಎರಡಾಗಿ ಮುರಿದು ನಾರು ತೆಗೆದು ಬೇಳೆಯೊಂದಿಗೆ ಕುಕ್ಕರ್‌ಗೆ ಹಾಕಿ ಬೇಯಿಸಿ. ಕಡಲೆಬೇಳೆ, ಉದ್ದಿನಬೇಳೆ, ಮೆಣಸು, ಕೊತ್ತಂಬರಿಕಾಳನ್ನು ಕೆಂಪಗೆ ಹುರಿದು ಹುಣಸೆಹಣ್ಣು ಮತ್ತು ತೆಂಗಿನತುರಿ ಸೇರಿಸಿ ನುಣ್ಣಗೆ ರುಬ್ಬಿ, ಬೇಯಿಸಿದ ಮಿಶ್ರಣಕ್ಕೆ ಸೇರಿಸಿ.

ಹುಳಿಪುಡಿ, ಉಪ್ಪು, ಬೆಲ್ಲ ಹಾಕಿ ತಕ್ಕಷ್ಟು ನೀರು ಸೇರಿಸಿ ಕುದಿಯಲು ಇಡಿ. ಒಗ್ಗರಣೆ ಬಾಣಲೆಗೆ ತುಪ್ಪ ಹಾಕಿ ಸಾಸಿವೆ ಸಿಡಿಸಿ ಕಡಲೆಬೀಜ ಮತ್ತು ಕರಿಬೇವು ಹಾಕಿ ಘಂ ಎನ್ನುವ ಒಗ್ಗರಣೆಯನ್ನು ಬೇಯುತ್ತಿರುವ ಹುಳಿಗೆ ಹಾಕಿ ಕೆಳಗಿಳಿಸಿ . ಈ ಚಪ್ಪರದವರೆ ಕಾಯಿ ಮೆಣಸುಹುಳಿ ಬಿಸಿ ಅನ್ನದೊಂದಿಗೆ ಗಮ್ಮತ್ತಾಗಿರುತ್ತದೆ.

ದೊಡ್ಡ ಮೆಣಸಿನಕಾಯಿ ತುಂಬುಗಾಯಿ

ಬೇಕಾಗುವ ಸಾಮಗ್ರಿಗಳು

ದೊಡ್ಡ ಮೆಣಸಿನಕಾಯಿ – 6( ಚಿಕ್ಕದು), ಆಲೂಗಡ್ಡೆ – 4, ಈರುಳ್ಳಿ – 2 ಬಟಾಣಿ – 1/2 ಕಪ್, ಚಿಲ್ಲೀ ಪೌಡರ್ – 1 ಚಮಚ, ಗರಂ ಮಸಾಲ –1 ಚಮಚ, ಅರಿಶಿನ –1/2 ಚಮಚ, ಎಣ್ಣೆ – 1/2 ಕಪ್, ಸೋಂಪು, ಜೀರಿಗೆ, ದನಿಯ – ತಲಾ 1 ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ

ತಯಾರಿಸುವ ವಿಧಾನ

ಆಲೂ ಮತ್ತು ಬಟಾಣಿಯನ್ನು ಕುಕ್ಕರಿನಲ್ಲಿಟ್ಟು ಬೇಯಿಸಿ. ಸೋಂಪು, ಜೀರಿಗೆ, ಕೊತ್ತಂಬರಿಕಾಳನ್ನು ಸ್ವಲ್ಪ ದಪ್ಪಕ್ಕೆ ಪುಡಿ ಮಾಡಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಹೆಚ್ಚಿದ ಈರುಳ್ಳಿಯನ್ನು ಹಾಕಿ ಬಾಡಿಸಿ. ಆಲೂಗಡ್ಡೆಯ ಸಿಪ್ಪೆ ತೆಗೆದು ಪುಡಿಮಾಡಿ ಹಾಕಿ. ಬಟಾಣಿಯನ್ನೂ ಸೇರಿಸಿ ಸಿದ್ದಗೊಳಿಸಿದ ಪುಡಿ, ಚಿಲ್ಲಿ ಪೌಡರ್ ಮತ್ತು ಗರಂಮಸಾಲೆ, ಉಪ್ಪು, ಅರಿಶಿನ, ಹೆಚ್ಚಿದ ಕೊತ್ತಂಬರಿ ಎಲ್ಲವನ್ನೂ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಹೊಂದಿಕೊಳ್ಳುವಂತೆ ಕಲಸಿ ಕೆಳಗಿಳಿಸಿ.

ಈಗ ದೊಡ್ಡ ಮೆಣಸಿನಕಾಯಿಗಳನ್ನು ತೊಳೆದು ಒರೆಸಿ ಅರ್ಧ ಭಾಗಕ್ಕೆ ಕತ್ತರಿಸಿ ಒಳಗಿನ ಬೀಜಗಳನೆಲ್ಲಾ ತೆಗೆಯಿರಿ. ಈ ಸಿದ್ಧಗೊಳಿಸಿದ ಬಟ್ಟಲುಗಳಿಗೆ ಮಸಾಲೆ ಪಲ್ಯವನ್ನು ತುಂಬಿಡಿ.

ಒಂದು ಕುಕ್ಕರ್ ಪ್ಯಾನ್‌ಗೆ ಎಣ್ಣೆ ಸುರಿದು ಎಲ್ಲಾ ದೊಡ್ಡ ಮೆಣಸಿನಕಾಯಿ ಬಟ್ಟಲುಗಳನ್ನು ಜೋಡಿಸಿ. ವಿಶಲ್ ಹಾಕದೆ ಹಾಗೆ 5 ನಿಮಿಷ ಬೇಯಿಸಿ. ಮತ್ತೆ ಮುಚ್ಚಳ ತೆಗೆದು ಚಮಚದ ಸಹಾಯದಿಂದ ಬಟ್ಟಲುಗಳ ಸುತ್ತಲೂ ತಿರುವಿ ಹಾಕಿ ಮತ್ತೆ ಬೇಯಿಸಿ. ಹೀಗೆ ಎಲ್ಲಾ ಕಡೆಯೂ ಎಣ್ಣೆಯಲ್ಲಿ ಬೆಂದ ಎಣ್ಣೆಗಾಯಿಗಳನ್ನು ತೆಗೆದು ತಟ್ಟೆಯಲ್ಲಿ ಜೋಡಿಸಿ.
ಈ ರುಚಿಯಾದ ಎಣ್ಣೆಗಾಯಿಯನ್ನು ಪೂರಿ ಅನ್ನ ಚಪಾತಿಗಳೊಂದಿಗೆ ಅಥವಾ ಹಾಗೇ ಸಂಜೆಯ ಸ್ನ್ಯಾಕ್‌ನಂತೆ ಸವಿಯಬಹುದು.

ಈರುಳ್ಳಿ ಝುಣಕ

ಬೇಕಾಗುವ ಸಾಮಗ್ರಿಗಳು

ಈರುಳ್ಳಿ – 6, ಹಸಿಮೆಣಸು – 5, ಟೊಮೆಟೊ – 1, ಓಂಕಾಳು – ಅರ್ಧ ಚಮಚ, ಕಡಲೆಹಿಟ್ಟು – ಅರ್ಧ ಬಟ್ಟಲು, ಎಣ್ಣೆ – 4 ಚಮಚ, ಒಗ್ಗರಣೆಗೆ ಸಾಸಿವೆ, ಅರಿಶಿನ ಉಪ್ಪು ಮತ್ತು ಸಕ್ಕರೆ – ರುಚಿಗೆ

ತಯಾರಿಸುವ ವಿಧಾನ

ಈರುಳ್ಳಿ ಮತ್ತು ಮೆಣಸಿನಕಾಯಿಯನ್ನು ಹೆಚ್ಚಿ. ಒಗ್ಗರಣೆಗೆ ಬಾಣಲೆಯಿಟ್ಟು ಎಣ್ಣೆ ಹಾಕಿ. ಸಾಸಿವೆ ಸಿಡಿಸಿ ಹೆಚ್ಚಿದ ಪದಾರ್ಥಗಳನ್ನು ಹಾಕಿ, ತುಸು ಕೆಂಪಗೆ ಬಾಡಿಸಿ. ಅದಕ್ಕೆ ಹೆಚ್ಚಿದ ಟೊಮೆಟೊ, ಕೊತ್ತಂಬರಿ, ಕರಿಬೇವನ್ನು ಹಾಕಿ ಅರಿಶಿನ ಸೇರಿಸಿ.

ಒಂದು ಪಾತ್ರೆಗೆ ಕಡಲೆಹಿಟ್ಟು, ನೀರು ಸೇರಿಸಿ ಗಂಟಿಲ್ಲದಂತೆ ನೀರಾಗಿ ಕಲಸಿಕೊಳ್ಳಿ. ನಂತರ ಈರುಳ್ಳಿಯನ್ನು ಆ ಮಿಶ್ರಣಕ್ಕೆ ಹಾಕಿ, ಸ್ವಲ್ಪ ಉಪ್ಪು ಹಾಕಿ ಉರಿ ಸಣ್ಣ ಮಾಡಿ ತಳ ಹತ್ತದಂತೆ ಕೆದಕುತ್ತ ಚೆನ್ನಾಗಿ ಕುದಿಸಿ ಸಾಗುವಿನ ಹದಕ್ಕೆ ಬಂದಾಗ ಕೆಳಗಿಳಿಸಿ.

ಈ ಝುಣಕವನ್ನು ಬೇಗ ತಯಾರಿಸಬಹುದು. ಚಪಾತಿ, ಪರೋಟಗಳಿಗೆ ಒಳ್ಳೆ ಕಾಂಬಿನೇಶನ್.

ಕಾಳುಗಳ ಪರೋಟ

ಬೇಕಾಗುವ ಸಾಮಗ್ರಿಗಳು

ಗೋಧಿಹಿಟ್ಟು – 2 ಕಪ್, ಬಟಾಣಿಕಾಳು – 1/2 ಕಪ್, ಜೋಳದಕಾಳು – 1/2 ಕಪ್, ಹಸಿಮೆಣಸು – 3, ಜೀರಿಗೆ ಪುಡಿ – 1/2 ಚಮಚ, ಗರಂ ಮಸಾಲೆ ಪುಡಿ – 1/2 ಚಮಚ, ಕೊತ್ತಂಬರಿ, ಕರಿಬೇವು – ಸ್ವಲ್ಪ, ಉಪ್ಪು – ರುಚಿಗೆ, ಎಣ್ಣೆ – ಸ್ವಲ್ಪ

ತಯಾರಿಸುವ ವಿಧಾನ

ಬಟಾಣಿ ಮತ್ತು ಜೋಳದಕಾಳುಗಳನ್ನು ಕುಕ್ಕರ್‌ಗೆ ಹಾಕಿ ಮೆತ್ತಗೆ ಬೇಯಿಸಿಡಿ. ಬಿಸಿ ಆರಿದ ಮೇಲೆ ಹಸಿಮೆಣಸು, ಕರಿಬೇವು ಕೊತ್ತಂಬರಿಸೊಪ್ಪನ್ನು ಸಣ್ಣಗೆ ಹೆಚ್ಚಿ ಬೇಯಿಸಿದ ಕಾಳುಗಳಿಗೆ ಸೇರಿಸಿ ಚೆನ್ನಾಗಿ ಸ್ಮ್ಯಾಶ್ ಮಾಡಿ. ಅದಕ್ಕೆ ಗೋಧಿಹಿಟ್ಟು, ಗರಂಮಸಾಲೆಪುಡಿ ಮತ್ತು ಜೀರಿಗೆ ಪುಡಿ, ಉಪ್ಪು ಹಾಕಿ ಹಿಟ್ಟನ್ನು ಚೆನ್ನಾಗಿ ಕಲಸಿ.

ಹತ್ತು ನಿಮಿಷದ ನಂತರ ಪರೋಟಗಳನ್ನು ಮಾಡಿ ಕಾದ ಹೆಂಚಿನ ಮೇಲೆ ತುಪ್ಪ ಅಥವಾ ಬೆಣ್ಣೆ ಹಚ್ಚಿ ಎರಡೂ ಬದಿ ಬೇಯಿಸಿ ರುಚಿಯಾದ ಪೌಷ್ಟಿಕವಾದ ಪರೋಟಗಳನ್ನು ಮೊಸರು ಅಥವಾ ಝಣಕದೊಂದಿಗೆ ಸೇವಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.