ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮೆ ಸೌತೆಕಾಯಿ ವಿಶೇಷ

Last Updated 11 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಸೀಮೆಸೌತೆ ಸಿಹಿ ಕಡಬು
ಸಾಮಗ್ರಿ:
ಸೀಮೆ ಸೌತೆಕಾಯಿ 2, ಅಕ್ಕಿ 2 ಲೋಟ, ಬೆಲ್ಲ, ಚಿಟಿಕೆ ಉಪ್ಪು, ಎಲಕ್ಕಿ 8-10, ಕಾಯಿತುರಿ.

ವಿಧಾನ: ಅಕ್ಕಿಯನ್ನು ನೆನೆ ಹಾಕಿ ರುಬ್ಬುವಾಗ ಅದಕ್ಕೆ ಸ್ವಲ್ಪ ಕಾಯಿತುರಿ ಹಾಗೂ ಏಲಕ್ಕಿ ಹಾಕಿ. ಅದಕ್ಕೆ ಸೀಮೆ ಸೌತೆಕಾಯಿಯನ್ನು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ಬೆಲ್ಲ, ಉಪ್ಪು ಹಾಕಿ ಬೇಯಿಸಿ ಅಕ್ಕಿ ಹಿಟ್ಟಿಗೆ ಹಾಕಿ ಬೇಯಿಸಿ. ಅದು ಬೆಂದು ಗಟ್ಟಿಯಾದ ನಂತರ ಬಾಳೆಲೆಯಲ್ಲಿ ಹಚ್ಚಿ ಮತ್ತೆ ಇಡ್ಲಿ ಪಾತ್ರೆಯಲ್ಲಿ ಬೇಯಿಸಿ.

ಖಾರದ ಕಡಬು ಬಾಕಿ ಎಲ್ಲ ಸಿಹಿ ಕಡುಬಿನಂತೆಯೇ ಮಾಡಿ ಬೆಲ್ಲದ ಬದಲು ಹಸಿಮೆಣಸು ಹಾಕಿ ಮಾಡುವುದು. ಉಪ್ಪು ರುಚಿಗೆ ತಕ್ಕಷ್ಟು ಹಾಕುವುದು.

ಸೀಮೆಸೌತೆ ಸಾಂಬಾರು
ಸಾಮಗ್ರಿ
: 2 ಸೀಮೆ ಸೌತೆ ಕಾಯಿ, ಅರ್ಧ ಕಾಯಿ ತುರಿ, ಕಾಲು ಲೋಟ ತೊಗರಿಬೇಳೆ,  8-10 ಒಣ ಮೆಣಸಿನಕಾಯಿ, 1ಚಮಚ ಕೊತ್ತಂಬರಿ, 1ಚಮಚ ಜೀರಿಗೆ, ಅರ್ಧ ಚಮಚ ಮೆಂತೆ ಕಾಳು. ಸ್ವಲ್ಪ ಅರಿಸಿನಪುಡಿ, 2 ಚಮಚ ಎಣ್ಣೆ, ಸ್ವಲ್ಪ ಹುಣಸೆ ಹಣ್ಣು. ಬೆಲ್ಲ,  ಉಪ್ಪು.

ವಿಧಾನ: ಸೀಮೆ ಸೌತೆಕಾಯಿಯನ್ನು ಸಿಪ್ಪೆ ತೆಗೆದು ಕಟ್ ಮಾಡಿ ಬೇಳೆ ಜೊತೆಗೆ ಉಪ್ಪು ಸೇರಿಸಿ ಬೇಯಿಸಿಟ್ಟುಕೊಳ್ಳಿ. ಸಾಂಬಾರಿಗೆ ಒಣ ಮೆಣಸಿನ ಕಾಯಿ ಎಣ್ಣೆ, ಇಂಗು, ಕೊತ್ತಂಬರಿ, ಮೆಂತೆ, ಜೀರಿಗೆ, ಅರಿಸಿನಪುಡಿ ಹಾಕಿ ಹುರಿದು ಕಾಯಿತುರಿ ಜೊತೆಗೆ ಹುಣಸೆ ಹಣ್ಣು ಹಾಕಿ ರುಬ್ಬಿ ಬೇಯಿಸಿದ ಹೋಳಿಗೆ ಹಾಕಿ, ಬೆಲ್ಲ ಸೇರಿಸಿ  ಕುದಿಸಿ. ಸಾಸಿವೆ ಕಾಳಿನ ಒಗ್ಗರಣೆ ಕೊಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT