ಚಳಿಗಾಲದ ಅತಿಥಿ
ಚಳಿಗಾಲದ ಅಪರೂಪದ ಅತಿಥಿಗಳಾದ ಮಂಗೋಲಿಯಾದ ಪಟ್ಟೆತಲೆ ಹೆಬ್ಬಾತುಗಳು ದಾವಣಗೆರೆಯ ಕುಂದುವಾಡ ಕೆರೆಯಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಹೀಗೆ. - ಚಿತ್ರ: ಅನೂಪ್ ಆರ್.ತಿಪ್ಪೇಸ್ವಾಮಿ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಗಳಲ್ಲಿ... ಕವಿ ಲಕ್ಷ್ಮೀನಾರಾಯಣ ಭಟ್ಟ
ಬೆಂಗಳೂರು: ಕನ್ನಡದ ಜನಪ್ರಿಯ ಕವಿಗಳಲ್ಲಿ ಒಬ್ಬರಾದ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ (84) ಅವರು ಶನಿವಾರ ಬೆಳಗ್ಗೆ ನಿಧನರಾದರು. ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ವೇಳೆ ಸೆರೆಸಿಕ್ಕ ಚಿತ್ರಗಳು ಇಲ್ಲಿವೆ.
Poet | Death News | Kannada | literature |ಲೇಖಕ ಡಾ.ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ, ಸಾಹಿತಿ ಎಚ್.ಎಸ್.ವೆಂಕಟೇಶ ಮೂರ್ತಿ, ಲೇಖಕ ಡಾ.ನಾ ದಾಮೋದರ ಶೆಟ್ಟಿ ಮತ್ತು ವಿಮರ್ಶಕ ಎಚ್.ಎಸ್ ಸತ್ಯನಾರಾಯಣ ಮಾತುಕತೆಯಲ್ಲಿ ತೊಡಗಿದ್ದರು-ಪ್ರಜಾವಾಣಿ ಚಿತ್ರ
ಸಾಹಿತಿ ಎಚ್.ಎಸ್.ವೆಂಕಟೇಶ ಮೂರ್ತಿ (ಎಡದಿಂದ ಮೂರನೇಯವರು), ಪತ್ರಕರ್ತ ಶ್ರೀಧರ್ ಮೂರ್ತಿ ಮತ್ತು ಲೇಖಕ ಡಾ.ನಾ ದಾಮೋದರ ಶೆಟ್ಟಿ ಅವರೊಂದಿಗೆ ಲೇಖಕ ಡಾ.ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ (ಎಡದಿಂದ ಎರಡನೇಯವರು).
ಕಾರ್ಯಕ್ರಮವೊಂದರಲ್ಲಿ (ಎಡದಿಂದ) ಗಾಯಕ ವೈ.ಕೆ ಮುದ್ದುಕೃಷ್ಣ, ಗೋಪಾಲಕೃಷ್ಣ ಅಡಿಗರ ಮಗ ಪ್ರದ್ಯುಮ್ನ ಅಡಿಗ, ಕವಿ ಡಾ. ಸುಮತೀಂದ್ರ ನಾಡಿಗ್, ಕವಿ ಡಾ.ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ ಮತ್ತು ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಮಣ್ಯ -ಪ್ರಜಾವಾಣಿ ಚಿತ್ರ
ಕರ್ನಾಟಕ ಸಾಹಿತ್ಯ ಅಕಾಡೆಮಿಯು ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ. ಸೋಮಶೇಖರ ಇಮ್ರಾಪುರ, ಬನ್ನಂಜೆ ಗೋವಿಂದಾಚಾರ್ಯ, ಕಸ್ತೂರಿ ಬಾಯರಿ, ಲಕ್ಷ್ಮೀನಾರಾಯಣ ಭಟ್ಟ ಹಾಗೂ ಪ್ರೊ. ಎಚ್. ಜೆ. ಲಕ್ಕಪ್ಪಗೌಡ ಅವರಿಗೆ 2017ನೇ ವರ್ಷದ ಗೌರವ ಪ್ರಶಸ್ತಿ ನೀಡಿ ಗೌರವಿಲಾಯಿತು. ಡಾ. ಅರವಿಂದ ಮಾಲಗತ್ತಿ, ಸಚಿವೆ ಉಮಾಶ್ರೀ, ಮನು ಬಳಿಗಾರ್ ಹಾಗೂ ಎನ್.ಆರ್. ವಿಶುಕುಮಾರ್ ಇದ್ದಾರೆ –ಪ್ರಜಾವಾಣಿ ಚಿತ್ರ
ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಗಮ ಸಂಗೀತ ಕಲಾವಿದ ವೈ.ಕೆ.ಮುದ್ದುಕೃಷ್ಣ ಅವರಿಗೆ ಕೆ.ಎಸ್.ನ ಕಾವ್ಯ ಗಾಯನ ಪ್ರಶಸ್ತಿ ಮತ್ತು ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಅವರಿಗೆ ಕೆ.ಎಸ್.ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಮಂಗಳ ಗ್ರಹದಿಂದ ಹೈ-ರೆಸಲ್ಯೂಷನ್ ಚಿತ್ರ ಸೆರೆ ಹಿಡಿದ ನಾಸಾ ಪರ್ಸಿವಿಯರೆನ್ಸ್ ರೋವರ್
ಮಂಗಳ ಗ್ರಹಕ್ಕೆ ಕಾಲಿಟ್ಟ ಬೆನ್ನಲ್ಲೇ ನಾಸಾದ ಪರ್ಸಿವಿಯರೆನ್ಸ್ ರೋವರ್ ನೌಕೆ ತನ್ನ ಕೆಲಸವನ್ನು ಪ್ರಾರಂಭಿಸಿದ್ದು, ಹೈ-ರೆಸಲ್ಯೂಷನ್ ಚಿತ್ರಗಳನ್ನು ರವಾನಿಸಲು ಪ್ರಾರಂಭಿಸಿದೆ. ಎರಡು ವರ್ಷಗಳ ಕಾಲ ಮಂಗಳ ಗ್ರಹದಲ್ಲಿ ಜೀವದ ಕುರುಹುಗಳನ್ನು ಪತ್ತೆ ಹಚ್ಚಲಿರುವ ಪರ್ಸಿವಿಯರೆನ್ಸ್ ರೋವರ್, ಅಲ್ಲಿನ ಕಲ್ಲಿನ ಮಾದರಿಯನ್ನು ತರುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹೊಂದಿದೆ. ಜಝೇರೋ ಕುಳಿಯಲ್ಲಿ ಬಂದಿಳಿದಿರುವ ನಾಸಾ ಪರ್ಸಿವಿಯರೆನ್ಸ್ ರೋವರ್ ಹೈ-ರೆಸಲ್ಯೂಷನ್ ಚಿತ್ರಗಳನ್ನು ರವಾನಿಸಿದೆ. (ಚಿತ್ರ ಕೃಪೆ: ನಾಸಾ/ರಾಯಿಟರ್ಸ್/ಎಎಫ್ಪಿ)
NASA | Mars | Mars mission |ನಾಸಾದ ಪರ್ಸಿವಿಯರೆನ್ಸ್ ರೋವರ್ ಮಂಗಳ ಗ್ರಹಕ್ಕೆ ಇಳಿದ ಕ್ಷಣ
ನಾಸಾ ಪರ್ಸಿವಿಯರೆನ್ಸ್ ರೋವರ್ ಕೆಳಭಾಗದಲ್ಲಿ ಲಗತ್ತಿಸಲಾಗಿರುವ ಹಜಾರ್ಡ್ ಕ್ಯಾಮರಾದಿಂದ ಕಳುಹಿಸಿದ ಹೈ-ರೆಸಲ್ಯೂಷನ್ ಚಿತ್ರ
ಆರು ಗಾಲಿಗಳಿರುವ ನಾಸಾದ ಪರ್ಸಿವಿಯರೆನ್ಸ್ ರೋವರ್ನ ಗಾಲಿಯೊಂದು ಲ್ಯಾಂಡಿಂಗ್ ಮಾಡುತ್ತಿರುವ ದೃಶ್ಯ
ಮಂಗಳ ಗ್ರಹದ ಮೇಲ್ಮೆಯ ಚಿತ್ರ ರವಾನೆ
ರೋಮಾಂಚನ ಮೂಡಿಸುವ ಮಂಗಳ ಗ್ರಹದ ಮಗದೊಂದು ಅದ್ಭುತ ಚಿತ್ರ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ಮಂಗಳ ಗ್ರಹದಲ್ಲಿ ಜೀವದ ಕುರುಹು ಹುಡುಕಿ ನಾಸಾ ರೋವರ್ ಐತಿಹಾಸಿಕ ಲ್ಯಾಂಡಿಂಗ್
ಮಂಗಳ ಗ್ರಹದಲ್ಲಿ ಜೀವದ ಕುರುಹುಗಳನ್ನು ಹುಡುಕಿ ನಾಸಾದ ಪರ್ಸೆವೆರೆನ್ಸ್ ರೋವರ್ ಐತಿಹಾಸಿಕ ಲ್ಯಾಂಡಿಂಗ್ ನಡೆಸಿದೆ. ಇದು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ನಾಸಾ ಪಾಲಿಗೆ ಮಹತ್ತರ ಮೈಲುಗಲ್ಲಾಗಿದೆ. ಈ ಸಂಬಂಧ ರೋಚಕ ಕ್ಷಣಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಲಾಗಿದೆ. (ಚಿತ್ರ ಕೃಪೆ: ರಾಯಿಟರ್ಸ್)
NASA | NASA study | Rover on Mars | Mars mission | Mars |ನಾಸಾದ ಪರ್ಸೆವೆರೆನ್ಸ್ ರೋವರ್ ಮಂಗಳಗ್ರಹ ತಲುಪಿದ ಐತಿಹಾಸಿಕ ಕ್ಷಣದ ಮೊದಲ ಚಿತ್ರ ಬಿಡುಗಡೆ
ಮುಗಿಲು ಮುಟ್ಟಿದ ನಾಸಾ ವಿಜ್ಞಾನಿಗಳ ಸಂಭ್ರಮ
ಪ್ಯಾರಿಸ್ನ ಸಿಎನ್ಇಎಸ್ ಕೇಂದ್ರದಲ್ಲಿ ನಾಸಾ ಮಂಗಳ ಗ್ರಹ ಯೋಜನೆ ವೀಕ್ಷಿಸಿದ ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರನ್ ಹಾಗೂ ಪತ್ನಿ ಬ್ರಿಗೆಟ್ ಮ್ಯಾಕ್ರನ್
ಕ್ಯಾಲಿಫೋರ್ನಿಯಾದ ನಾಸಾ ಕೇಂದ್ರಕ್ಕೆ ಮಂಗಳ ಗ್ರಹದಿಂದ ತಲುಪಿದ ಪರ್ಸೆವೆರೆನ್ಸ್ ರೋವರ್ ಲ್ಯಾಂಡಿಂಗ್ನ ಮೊದಲ ಚಿತ್ರ
ಏಳು ತಿಂಗಳುಗಳ ಪ್ರಯಾಣದ ಬಳಿಕ ಮಂಗಳ ಗ್ರಹ ತಲುಪಿದ ನಾಸಾ ರೋವರ್ನ ಮಾದರಿ
2020 ಜುಲೈ 30ರಂದು ಕೇಪ್ ಕ್ಯಾನವರೆಲ್ ಬಾಹ್ಯಾಕಾಶ ಕೇಂದ್ರದಿಂದ ಪರ್ಸೆವೆರೆನ್ಸ್ ರೋವರ್ ಹೊತ್ತ ರಾಕೆಟ್ ಉಡಾವಣೆಗೊಂಡಿತ್ತು
ಮಂಗಳ ಗ್ರಹದಲ್ಲಿ ಪ್ರಾಚೀನ ಜೀವ ಜಗತ್ತಿನ ಕುರುಹುಗಳ ಬಗ್ಗೆ ಅಧ್ಯಯನ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | Mauni Amavasya 2021: ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ
ಮಾಘ ಮಾಸದ ಅಮಾವಾಸ್ಯೆಯನ್ನು 'ಮೌನಿ ಅಮಾವಾಸ್ಯೆ' ಎಂದು ಕರೆಯುತ್ತಾರೆ. ಇದು ಯೋಗ ಆಧಾರಿತ ಮಹಾವ್ರತವಾಗಿದ್ದು, ನಂಬಿಕೆಗಳ ಪ್ರಕಾರ, ಈ ದಿನದಂದು ದೇವತೆಗಳು ಪವಿತ್ರ ತ್ರಿವೇಣಿ ಸಂಗಮದಲ್ಲಿ ನೆಲೆಸಿರುತ್ತಾರೆ. ಆದ್ದರಿಂದ ಈ ದಿನ ಪವಿತ್ರ ಸ್ನಾನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ಚಿಕ್ಕ ಕುಂಭ ಮೇಳ ಎಂದು ಕರೆಯಲ್ಪಡುವ ಮಾಘ ಮೇಳ ವರ್ಷಂಪ್ರತಿ ಪ್ರಯಾಗರಾಜ್ನಲ್ಲಿ ನಡೆಯುತ್ತದೆ. (ಚಿತ್ರ ಕೃಪೆ: ಎಎಫ್ಪಿ)
Amavasya | Festivals | devotional | Prayagraj | Triveni sanghama | Holydip |ತ್ರಿವೇಣಿ ಸಂಗಮದಲ್ಲಿ (ಗಂಗಾ, ಯುಮುನಾ, ಸರಸ್ವತಿ) ಭಕ್ತರ ಪವಿತ್ರ ಸ್ನಾನ
ಯೋಗದೊಂದಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುತ್ತಿರುವ ಸಾಧು ಸಂತರು
ಮಾಘ ಮೇಳ ವಾರ್ಷಿಕ ಉತ್ಸವದ ಅಂಗವಾಗಿ ನಡೆಯುವ ಪವಿತ್ರ ಸ್ನಾನ
ಹಿಂದೂ ಪೌರಾಣಿಕದಲ್ಲೂ ಅತಿ ಹೆಚ್ಚಿನ ಪ್ರಾಮುಖ್ಯತೆ ಗಿಟ್ಟಿಸಿಕೊಂಡಿದೆ.
ತ್ರಿವೇಣಿಯಲ್ಲಿ ಪವಿತ್ರ ಸ್ನಾನ ಮಾಡಿ ಪ್ರಾರ್ಥನೆ ಸಲ್ಲಿಸುತ್ತಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಗರಿಷ್ಠ ಭದ್ರತೆಯನ್ನು ಒದಗಿಸಲಾಗಿದೆ.
ಪವಿತ್ರ ಸ್ನಾನಗೈದು ಪ್ರಾರ್ಥನೆ ಸಲ್ಲಿಸುತ್ತಿರುವ ಭಕ್ತರು
ಆರತಿ ಬೆಳಗುತ್ತಿರುವ ದೃಶ್ಯ
ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ವಾರ್ಷಿಕ ಮೇಳ
ಭಕ್ತರಿಂದ ತುಂಬಿ ತುಳುಕುತ್ತಿರುವ ದೃಶ್ಯ