ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Exams: ಪರೀಕ್ಷೆಯ ಮುನ್ನ ಹೀಗೆ ಮಾಡಿ...

Last Updated 11 ಮಾರ್ಚ್ 2022, 13:46 IST
ಅಕ್ಷರ ಗಾತ್ರ

ಸಂಕೇಶ್ವರ: ಪರೀಕ್ಷೆ ಎಂದಾಕ್ಷಣ ಭಯ ಸಹಜ. ಇದನ್ನು ಹೋಗಲಾಡಿಸಲು ಹಬ್ಬದಂತೆ ಸಂಭ್ರಮಿಸಬೇಕು. ಒತ್ತಡಕ್ಕೆ ಒಳಗಾದರೆ ಆರೋಗ್ಯ ಸಮಸ್ಯೆಯೂ ಕಾಣಿಸಬಹುದು. ಗೊಂದಲದಿಂದಾಗಿ ತಿಳಿದಿರುವುದೂ ನೆನಪಾಗದಿರಬಹುದು. ಅದಕ್ಕೆ ಅವಕಾಶ ಕೊಡಬಾರದು.

* ಯೋಗ, ಧ್ಯಾನ ಮಾಡಿ.

* ಸರಿಯಾದ ಸಮಯಕ್ಕೆ ಸೂಕ್ತ ಆಹಾರ ಸೇವಿಸಿ.

* ಸಕಾರಾತ್ಮಕ ಆಲೋಚನೆಗಳಿರಲಿ.

* ಅನಗತ್ಯ ವಿಷಯಗಳಿಗೆ ಗಮನ ಕೊಡಬೇಡಿ.

* ಆತ್ಮವಿಶ್ವಾಸವಿರಲಿ, ಸಮಯ ಪಾಲಿಸಿ.

* ಗುರು-ಹಿರಿಯರ ಮಾರ್ಗದರ್ಶನ ಪಡೆಯಿರಿ.

ಪರೀಕ್ಷೆಯ ಮುನ್ನ ಹೀಗೆ ಮಾಡಿ...

* ಓದಿಗೆ ವೇಳಾಪಟ್ಟಿ ಮಾಡಿಕೊಳ್ಳಿ

* ಎಲ್ಲ ವಿಷಯಗಳನ್ನೂ ಸಮಾನ ಆಸಕ್ತಿಯಿಂದ ಓದಿಕೊಳ್ಳಿ.

* ಕಠಿಣ ವಿಷಯಗಳಿಗೆ ಹೆಚ್ಚಿನ ಸಮಯ ನಿಗದಿಪಡಿಸಿಕೊಳ್ಳಿ.

* ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿರಿ.‌

* ಓದಿ, ಮನನ ಮಾಡಿಕೊಳ್ಳಿ. ಬರೆಯುತ್ತಾ ಕಲಿಯಿರಿ.

* ಮೊಬೈಲ್‌ ಫೋನ್‌, ಟಿವಿ, ಆಟ, ಹಬ್ಬ, ಜಾತ್ರೆ, ಮದುವೆ ಕಾರ್ಯಕ್ರಮಗಳಿಂದ ದೂರವಿರಿ.

* ಸಮಸ್ಯಾತ್ಮಕ ಪ್ರಶ್ನೆ/ವಿಷಯದ ಕುರಿತು ಶಿಕ್ಷಕರೊಂದಿಗೆ, ಸಹಪಾಠಿಗಳೊಂದಿಗೆ ಚರ್ಚಿಸಿ.

* ಇಷ್ಟಪಟ್ಟು ಓದಿ.

ಪರೀಕ್ಷೆಯ ಮುನ್ನಾದಿನ....

* ಊಟ, ನಿದ್ರೆ ಬಿಟ್ಟು ರಾತ್ರಿಯಿಡೀ ಓದಬೇಡಿ.

* ನಕಾರಾತ್ಮಕ ಯೋಚನೆ ಬೇಡ.

* ಅರ್ಥವಾಗದ ಸಮಸ್ಯೆಗಳ/ಪ್ರಶ್ನೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದಿರಿ.

* ನಕಲು ಮಾಡಬಹುದೆಂಬ ಯೋಚನೆ ಬಿಡಿ.

ಪರೀಕ್ಷೆಯಂದು

* ಬೇಗ ಎದ್ದು ಸಿದ್ಧವಾಗಿ.

* ಪರೀಕ್ಷಾ ಪರಿಕರ, ಪ್ರವೇಶಪತ್ರ ಮೊದಲಾದವುಗಳನ್ನು ಮರೆಯದಿರಿ.

* ಪರೀಕ್ಷಾ ಕೇಂದ್ರಕ್ಕೆ ಅರ್ಧ ಗಂಟೆ ಮುಂಚಿತವಾಗಿ ತಲುಪಿ.

* ಕೊಠಡಿಗೆ ಹೋಗುವ ಮುನ್ನ ಶೌಚ ಕಾರ್ಯ ಮುಗಿಸಿ.

* ಕೊಠಡಿ ಮೇಲ್ವಿಚಾರಕರ ಸೂಚನೆ ಪಾಲಿಸಿ.

* ಉತ್ತರ ಪತ್ರಿಕೆಯ ಎಲ್ಲ ಪುಟಗಳು ಸರಿಯಾಗಿರುವುದನ್ನು ಗಮನಿಸಿ.

* ನೋಂದಣಿ ಸಂಖ್ಯೆ ಮತ್ತು ಮಾಧ್ಯಮವನ್ನು ಸರಿಯಾಗಿ ನಮೂದಿಸಿ.

* ಪ್ರಶ್ನೆಪತ್ರಿಕೆ ಅವಲೋಕಿಸಿ, ಉತ್ತರ ಗೊತ್ತಿರುವ ಪ್ರಶ್ನೆಗಳ ಸಂಖ್ಯೆ ಹಾಕಿ ಮೊದಲು ಉತ್ತರಿಸಿ.

* ಬರವಣಿಗೆ ಚೆನ್ನಾಗಿರಲಿ. ನಿರೀಕ್ಷಿತ ಉತ್ತರವನ್ನು ಅಂಕಗಳಿಗೆ ಅನುಗುಣವಾಗಿ ಬರೆಯಿರಿ.

* ಕೊನೆಯ 10–15 ನಿಮಿಷ ಉತ್ತರಪತ್ರಿಕೆ ಅವಲೋಕಿಸಿ, ದೋಷಗಳಿದ್ದಲ್ಲಿ ಸರಿಪಡಿಸಿ.

* ಪುರವಣಿಗಳನ್ನು ಸರಿಯಾಗಿ ಜೋಡಿಸಿ ದಾರದಿಂದ ಬಿಗಿಯಾಗಿ ಕಟ್ಟಿ.

* ಪರೀಕ್ಷೆ ಬಳಿಕ ಸರಿ-ತಪ್ಪುಗಳ ಬಗ್ಗೆ ತಲೆಕಡಿಸಿಕೊಳ್ಳದೆ ಮುಂದಿನ ವಿಷಯದ ಪರೀಕ್ಷೆಗೆ ಸಿದ್ಧತೆ ಆರಂಭಿಸಿ.

- ಶಿವಾನಂದ ಗುಂಡಾಳಿ, ಸಂಪನ್ಮೂಲ ವ್ಯಕ್ತಿ, ಸರ್ಕಾರಿ ಪ್ರೌಢಶಾಲೆ, ಕೇಸ್ತಿ, ಹುಕ್ಕೇರಿ ತಾಲ್ಲೂಕು.

(ನಿರೂಪಣೆ: ಸುರೇಶ ಮಂಜರಗಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT