ತೆರೇಸಾ ಡಾನ್ಸ್ ಮಾಡಿದ್ರು..!

ಅಚ್ಚರಿಯ ನಿರ್ಧಾರ ಕೈಗೊಂಡು ಸದಾ ಸುದ್ದಿಯಾಗುತ್ತಿದ್ದ ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರು ವೇದಿಕೆ ಮೇಲೆ ಹೆಜ್ಜೆ ಹಾಕುವುದರ ಮೂಲಕ ಟ್ವಿಟರ್ನಲ್ಲಿ ಸದ್ದು ಮಾಡುತ್ತಿದ್ದಾರೆ.
ಬರ್ಮಿಂಗ್ ಹ್ಯಾಮ್ನಲ್ಲಿ ಈಚೆಗೆ ಕನ್ಸರ್ವೇಟಿವ್ ಪಕ್ಷದ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯ ಮುಖ್ಯ ಅತಿಥಿಯಾಗಿ, ತೆರೇಸಾ ಪಾಲ್ಗೊಂಡಿದ್ದರು. ಡಿಸ್ಕೊ ಡಾನ್ಸ್ ಮಾಡಿಕೊಂಡು ವೇದಿಕೆ ಪ್ರವೇಶಿಸಿದ ಅವರು ಸೊಗಸಾಗಿ ಹೆಜ್ಜೆ ಹಾಕಿದರು. ಪ್ರಧಾನಿಯ ಅನೀರಿಕ್ಷಿತ ಡಾನ್ಸ್ ಕಂಡ ಸಭಿಕರು ಎದ್ದು ನಿಂತು ಜೋರಾಗಿ ಚಪ್ಪಾಳೆ ತಟ್ಟಿದ್ದರು.
My speech at the Conservative Party Conference - #CPC18 https://t.co/0t70Rqq7fi
— Theresa May (@theresa_may) October 3, 2018
ತೆರೇಸಾ ಅವರ ನೃತ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಪರ ವಿರೋಧವಾಗಿಯೂ ಕಾಮೆಂಟ್ಗಳು ವ್ಯಕ್ತವಾಗುತ್ತಿವೆ. ಕೆಲವರು ವ್ಯಂಗ್ಯವಾಡಿದರೆ ಇನ್ನೂ ಕೆಲವರು ಅವರ ನೃತ್ಯವನ್ನು ಹಾಸ್ಯಾತ್ಮಕವಾಗಿ ವರ್ಣಿಸಿದ್ದಾರೆ. ಯುರೋಪಿಯನ್ ಕಮಿಷನ್ ಅಧ್ಯಕ್ಷ ಜೀನ್ ಕ್ಲೌಡೆ ಜಂಕರ್ ಸಹ ಸಭೆಯೊಂದರಲ್ಲಿ ಭಾಷಣ ಮಾಡುವ ಮುನ್ನ ತೆರೇಸಾ ಮೇ ರೀತಿಯೇ ಡಾನ್ಸ್ ಮಾಡಿ ಅಪಹಾಸ್ಯ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.