ಬೆಂಗಳೂರು: ‘ನಾವು ಒಕ್ಕಲಿಗರು. ಮಣ್ಣಿನ ಮಕ್ಕಳು. ಒಕ್ಕಲಿಗರ ಪ್ರಾಬಲ್ಯ ಇರೋ ಸ್ಥಳದಲ್ಲಿ ನಮಗೇ ಸೀಟು ಕೊಡಬೇಕು ಅಂದ್ರು. ಏಳು ಕೊಟ್ರೆ ಅದರಲ್ಲಿ ಇವರೇ ಮೂರನ್ನು ಮನೆಗೆ ತಗೊಂಡು ಹೋದ್ರು. ಏನಿದೆಲ್ಲಾ...?’

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೊರಹಾಕಿದ ಆಕ್ರೋಶದ ನುಡಿಗಳಿವು.

ನಗರದ ‘ದಿ ಗ್ರೀನ್ ಪಾಥ್’ ಹೋಟೆಲ್ನಲ್ಲಿ ಬುಧವಾರ ನಡೆದ ಉಪನ್ಯಾಸಕ ಕೆ.ಎಲ್.ಮಂಜು ನಾರಾಯಣ ಮತ್ತು ಕವಯತ್ರಿ ಎಸ್.ಪುಷ್ಪಲತಾ ಅವರ ಮಂತ್ರ ಮಾಂಗಲ್ಯ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ದೇವೇಗೌಡರ ಕುಟುಂಬದವರು ದೇವರನ್ನು ನೋಡೋಕೆ ಅಂತಾ ಎಲ್ಲೆಲ್ಲೋ ಹೋಗ್ತಾರೆ. ಯಜ್ಞ, ಯಾಗಗಳನ್ನೆಲ್ಲಾ ಮಾಡಿಸ್ತಾರೆ. ಅದಕ್ಕೆಲ್ಲಾ ಹಣ ಸುರೀತಾರೆ. ದೇವರನ್ನೇ ನಂಬಿದ್ದೇವೆ ಅಂತಾರೆ. ಇವರೇನು ದೇವರನ್ನು ಕೊಂಡುಕೊಂಡುಬಿಟ್ಟಿದ್ದಾರಾ, ಅಲ್ಲಾರೀ... ಆ ದೇವರು ಅನ್ಯಾಯ ಮಾಡೋರಿಗೆ ನ್ಯಾಯ ಮಾಡ್ತಿದ್ದಾನಲ್ರೀ, ಅದೆಂತಹ ದೇವರು ಅವನು’ ಎಂದು ಪ್ರಶ್ನಿಸಿದರು.

‘ದೇವೇಗೌಡರ ಕುಟುಂಬದವರು ತಮ್ಮದೇ ಚಕ್ರಾಧಿಪತ್ಯ ಮಾಡಿಕೊಂಡು ದೇಶವನ್ನು ಹಂಚಿಕೊಂಡು ಬಿಟ್ಟಿದ್ದಾರೆ. ಇವೆಲ್ಲಾ ತಪ್ಪು ದಾರಿಗಳು. ಆ ದೇವರಿಗಾದ್ರೋ ಒಂದ್ ಸ್ವಲ್ಪ ವಿಚಾರ ಬೇಡವಾ, ಇವರಿಗೆ ಏನೂ ಮಾಡ್ತಾ ಇಲ್ಲ. ಇವರು ಮಾಡಿದ್ದನ್ನು ಒಪ್ಪಿಕೊಂಡು ಹೋಗ್ತಾ ಇದ್ದಾನೆ. ಪ್ರಜ್ಞಾವಂತರಾದ ನಾವೆಲ್ಲಾ ಈ ಸಂಗತಿ ಬಗ್ಗೆ ವಿಚಾರ ಮಾಡಬೇಕಿದೆ’ ಎಂದು ಹೇಳಿದರು.

‘ಜಾತೀಯತೆ ಬೆಳೆಸತಕ್ಕಂತಹ ಕೆಲಸವನ್ನು ಯಾರೇ ಮಾಡುತ್ತಿರಲಿ ಅದನ್ನು ಖಂಡಿಸಬೇಕು. ರಾಜಕೀಯ ಮಾಡು
ವವರಿಗೆ ವೋಟಿಗಾಗಿ ಜಾತಿ ಬೇಕಾಗಿದೆ. ಇದು ಅಪಾಯಕಾರಿ. ನಾವು ಜಾತಿ ಮೀರಿ ನಡೆಯಬೇಕು. ಪ್ರೀತಿಯೇ ಯೋಗ್ಯತೆ ಆಗಬೇಕು. ಜಾತಿ ಎಂಬುದು ರಾಜಕೀಯದಲ್ಲಿ ಸೇರಿ ಕುಲಗೆಟ್ಟು ಹೋಗಿದೆ’ ಎಂದು ಹೇಳಿದರು.

ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಸಾಹಿತಿ ಬಂಜಗೆರೆ ಜಯಪ್ರಕಾಶ್, ವಕೀಲ ಕೆ.ಬಿ.ಕೆ.ಸ್ವಾಮಿ, ಚಿತ್ರ ನಿರ್ದೇಶಕ ಬಿ.ಸುರೇಶ್ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.