ಸಾಮಾನ್ಯವಾಗಿ ಆಮ್ಲ ಅಥವಾ ಭಾರತೀಯ ಭಾಷೆಯಲ್ಲಿ ನೆಲ್ಲಿಕಾಯಿ ಎಂದು ಕರೆಯಲ್ಪಡುವ ಅಮಲಕಿ, ಭಾರತೀಯ ಸಾಂಪ್ರದಾಯಿಕ ಆರೋಗ್ಯ ಪದ್ಧತಿಗಳಲ್ಲಿ ಅತ್ಯಂತ ಮೌಲ್ಯಯುತ ಉತ್ಪನ್ನಗಳಲ್ಲಿ ಒಂದಾಗಿದೆ. ಸುಲಭವಾಗಿ ಲಭ್ಯವಿರುವ, ಕೈಗೆಟುಕುವ ದರದಲ್ಲಿ ದೊರಕುವ ಈ ನೆಲ್ಲಿಕಾಯಿ ಅಗಾಧವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆಯುರ್ವೇದದಲ್ಲಿ ತ್ರಿಫಲ ಎಂದು, ಅಮಲಕಿ ಎಂದು ಜನಪ್ರಿಯವಾಗಿದೆ.

ಆಯುರ್ವೇದದಲ್ಲಿ ಅಮಲಕಿಯ ಹಲವು ಪ್ರಯೋಜನಗಳನ್ನು ವಿವರಿಸಿದ್ದಾರೆ. ಇದು ಮುಖ್ಯವಾಗಿ ರಸಾಯನ ಗುಣ ಹೊಂದಿದೆ ಹಾಗೂ ಇದನ್ನು ಅಮೃತಕ್ಕೆ ಹೋಲಿಸಿದ್ದಾರೆ. ಅಮಲಕಿಯು ಆಯುರ್ವೇದದಲ್ಲಿ ಒಂದು ಮುಖ್ಯ ಔಷಧವಾಗಿದ್ದು, ನಿತ್ಯ ಸೇವಿಸಬಹುದಾದ ಆಹಾರವಾಗಿದೆ. ದಿನನಿತ್ಯದ ಬಳಕೆಯಲ್ಲಿ ಅಮಲಕಿಯನ್ನು ಹಲವು ವಿಧವಾಗಿ ಸೇವಿಸಬಹುದು.

ನೆಲ್ಲಿಕಾಯಿ ಬಳಕೆ ವಿಧಾನಗಳು

ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ 1 ಅಥವಾ 2 ನೆಲ್ಲಿಕಾಯಿಯನ್ನು ಸೇವಿಸಬಹುದು.

ಒಂದೂವರೆ ಚಮಚ ನೆಲ್ಲಿಕಾಯಿ ಪುಡಿಯನ್ನು ಬಿಸಿ ನೀರು ಅಥವಾ ಜೇನುತುಪ್ಪದ ಜೊತೆ ಸೇವಿಸಬಹುದು.

ನೆಲ್ಲಿಕಾಯಿ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 10 ರಿಂದ 20 ಮಿ.ಲೀ. ನೀರಿನಲ್ಲಿ ಮಿಶ್ರಣ ಮಾಡಿ ಕುಡಿಯಬಹುದು.

ಒಣಗಿಸಿದ ನೆಲ್ಲಿಕಾಯಿಯನ್ನು ನೀರಿನಲ್ಲಿ ಕುದಿಸಿ ಕಷಾಯದ ರೂಪದಲ್ಲಿ ಕುಡಿಯಬಹುದು.

ನೆಲ್ಲಿಕಾಯಿ ಸೇವನೆಯ ಪ್ರಮುಖ ಆರೋಗ್ಯ ಲಾಭಗಳು

ಅಮಲಕಿ (ನೆಲ್ಲಿಕಾಯಿ) ಆಯುರ್ವೇದದಲ್ಲಿ ರಸಾಯನವೆಂದು ಪರಿಗಣಿಸಲ್ಪಟ್ಟಿದ್ದು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ. ಖಾಲಿ ಹೊಟ್ಟೆಯಲ್ಲಿ ಅಮಲಕಿಯನ್ನು ಸೇವನೆ ಮಾಡುವುದರಿಂದ ಹೆಚ್ಚಿನ ಪೋಷಕಾಂಶಗಳನ್ನು ದೇಹವು ಹೀರಿಕೊಳ್ಳುತ್ತದೆ. ಇದು ದೇಹದ ಸಮಗ್ರ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ.

ರೋಗನಿರೋಧಕ ಶಕ್ತಿ ವೃದ್ಧಿ

ಅಮಲಕಿ ವಿಟಮಿನ್ ಸಿ ಮತ್ತು ಹಲವು ಆ್ಯಂಟಿ ಆ್ಯಕ್ಸಿಡೆಂಟ್ಗಳನ್ನು ಹೊಂದಿದೆ. ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಈ ಅಂಶಗಳು ದೇಹದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿ ದೇಹದ ವ್ಯಾಧಿಕ್ಷಮತ್ವ/ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಯಮಿತವಾಗಿ ಅಮಲಕಿಯನ್ನು ಸೇವಿಸುವುದರಿಂದ ಸಾಮಾನ್ಯ ಜ್ವರ, ಕೆಮ್ಮು ಮತ್ತು ಶೀತದ ಸಮಸ್ಯೆಗಳು ಕಡಿಮೆಯಾಗುತ್ತವೆ. ಅಷ್ಟೇ ಅಲ್ಲದೆ ಜ್ವರ ಮುಂತಾದ ರೋಗಗಳಿಂದ ದೇಹ ಜರ್ಜರಿತವಾಗಿದ್ದಾಗ ಅಮಲಕಿಯು ಶಕ್ತಿ ನೀಡುತ್ತದೆ.

ಜೀರ್ಣಕ್ರಿಯೆ ಸುಧಾರಣೆ

ಬೆಳಿಗ್ಗೆ ಅಮಲಕಿ ಸೇವನೆಯಿಂದ ಜೀರ್ಣಾಗ್ನಿ ಪ್ರಚೋದಿತವಾಗುತ್ತದೆ. ಇದರಿಂದ ಆಹಾರ ಸರಿಯಾಗಿ ಜೀರ್ಣಗೊಳ್ಳುತ್ತದೆ. ಮಲಬದ್ಧತೆ ಕಡಿಮೆಯಾಗುತ್ತದೆ ಮತ್ತು ಅತಿಯಾದ ಅಮ್ಲಪಿತ್ತ ನಿಯಂತ್ರಣಕ್ಕೆ ಬರುತ್ತದೆ.

ದೇಹದ ಶುದ್ಧೀಕರಣ ಮತ್ತು ದೋಷಗಳ ಸಮತೋಲನ

ನಮ್ಮ ಇಂದಿನ ಆಹಾರ ಪದ್ಧತಿ ಮತ್ತು ಜೀವನ ಶೈಲಿಯಿಂದ ದೇಹದಲ್ಲಿ ಹಲವು ವಿಷಗಳು ಸೇರ್ಪಡೆಯಾಗುತ್ತವೆ. ಅಷ್ಟೇ ಅಲ್ಲದೆ ದೇಹದಲ್ಲಿನ ತ್ರಿದೋಷಗಳು ವಿಕೃತವಾಗಿ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಅಮಲಕಿ ದೇಹದಲ್ಲಿನ ವಿಷಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಯಕೃತ್ ಕಾರ್ಯಕ್ಷಮತೆ ಹೆಚ್ಚಾಗಿ ರಕ್ತ ಶುದ್ಧೀಕರಣಕ್ಕೆ ನೆರವಾಗುತ್ತದೆ. ಮತ್ತು ದೋಷಗಳನ್ನು ಸಮ ಸ್ಥಿತಿಯಲ್ಲಿಟ್ಟು ಆರೋಗ್ಯವನ್ನು ಕಾಪಾಡುತ್ತದೆ.

ಚರ್ಮದ ಕಾಂತಿ ಮತ್ತು ಕೂದಲಿನ ಆರೋಗ್ಯ

ಅಮಲಕಿಯು ಚರ್ಮದಕೋಶಗಳನ್ನು ಪೋಷಿಸಿ ಕಾಂತಿಯನ್ನು ಹೆಚ್ಚಿಸುತ್ತವೆ. ನಿಯಮಿತ ಸೇವನೆಯಿಂದ ಮುಪ್ಪಿನ ಲಕ್ಷಣಗಳಾದ ಚರ್ಮ ಸುಕ್ಕುಗಟ್ಟುವುದನ್ನು ತಡಯುತ್ತದೆ. ಖಾಲಿ ಹೊಟ್ಟೆಯಲ್ಲಿ ಅಮಲಕಿ ಸೇವನೆಯಿಂದ ಪೋಷಕಾಂಶಗಳು ಉತ್ತಮವಾಗಿ ದೊರೆಯುತ್ತವೆ. ಇದರಿಂದ ಕೂದಲಿನ ಬೇರುಗಳು ಬಲಗೊಳ್ಳುತ್ತವೆ. ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಕೂದಲಿನ ಮತ್ತು ಚರ್ಮದ ಸ್ವಾಭಾವಿಕ ಹೊಳಪನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.

ಸಂಪೂರ್ಣ ಆರೋಗ್ಯ

ಅಮಲಕಿಯು ರಸಾಯನ ಗುಣ ಹೊಂದಿದ್ದು, ದೇಹವನ್ನು ಪೋಷಿಸುತ್ತದೆ. ಇದು ಕೇವಲ ಚರ್ಮದ ಮೇಲಷ್ಟೇ ಅಲ್ಲದೆ ವಯೋ ಸಹಜವಾಗಿ ಬರುವ ಹಲವು ಸಮಸ್ಯೆಗಳನ್ನು ತಡೆಹಿಡಿಯಲಿದೆ. ಇದು ವಯಸ್ಸಾಗುವ ಪ್ರಕ್ರಿಯನ್ನು ನಿಧಾನಗೊಳಿಸುತ್ತದೆ. ಅಮಲಕಿಯ ಹಲವು ಗುಣಗಳು ಮನುಷ್ಯನ ಸಂಪೂರ್ಣ ಆರೋಗ್ಯಕ್ಕೆ ಸಹಕಾರಿಯಾಗಿದೆ.

ಹಲವು ವೈಜ್ಞಾನಿಕ ಪ್ರಯೋಗಗಳು ಹೃದಯ, ಯಕೃತ್, ಕರಳು, ಚರ್ಮ ಮತ್ತು ಕೂದಲುಗಳ ಸಂರಕ್ಷಣೆಯಲ್ಲಿ ಅಮಲಕಿಯು ಸಹಕಾರಿ ಎಂದು ತಿಳಿಸಿವೆ.

(ಲೇಖಕರು: ಡಾ. ಮಹೇಶ ಹೀರುಲಾಲ, ಸಹಾಯಕ ಪ್ರಾಧ್ಯಾಪಕರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಸನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.