ಸೋಮವಾರ, ಜನವರಿ 25, 2021
15 °C

ಕೋವಿಡ್ ಸಮಯದಲ್ಲಿ ಹೆಚ್ಚು ಪ್ರಚಲಿತವಾಗುತ್ತಿರುವ ಆ್ಯಂಟಿ ವೈರಲ್ ಮಾಸ್ಕ್

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

mask

ಕೋವಿಡ್-19 ಮಹಾಮಾರಿಯನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಸಾಧನವೆಂದರೆ ಮೌತ್ ಮಾಸ್ಕ್ (ಮುಖಗವಸುಗಳು). ಅನೇಕ ತರಹದ ಮೌತ್ ಮಾಸ್ಕ್ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯ. ಸಾಮಾನ್ಯ ಜನರಿಗಾಗಿ ಹಾಗೂ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರನ್ನು ಸುರಕ್ಷಿತವಾಗಿ ಕಾಪಾಡಲು ಮೌತ್ ಮಾಸ್ಕ್ ಬಳಕೆ ಅತಿಮುಖ್ಯ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತವಾಗುತ್ತಿರುವ ಮುಖಗವಸುಗಳೆಂದರೆ ಅದು ಆ್ಯಂಟಿವೈರಲ್ ಮಾಸ್ಕ್.

ಏನಿದು ಆ್ಯಂಟಿವೈರಲ್ ಮಾಸ್ಕ್?

       ಸಾಮಾನ್ಯವಾಗಿ ಮುಖಗವಸುಗಳನ್ನು ನೇಯ್ಗಿಯಿಂದ ಮಾಡಿಲ್ಲದ ಅಂದರೆ ನಾನ್ ಓವನ್ ಮೆಟೀರಿಯಲ್ ನಿಂದ ಮಾಡಲ್ಪಡುತ್ತದೆ. ಇದು ವೈರಸ್ ಅನ್ನು ಶೋಧಿಸುವ ಮೂಲಕ ತಡೆಯುತ್ತದೆ. ಆದರೆ ವೈರಾಣುವು ಕ್ರೌನ್ ಇನ್ ಫೆಕ್ಷನ್ ನಿಂದ ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಆದುದರಿಂದ ಮುಖಗವಸುಗಳನ್ನು ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡದಿದ್ದಲ್ಲಿ ಹೆಚ್ಚು ಹಾನಿಯುಂಟು ಮಾಡಬಹುದಾಗಿರುತ್ತದೆ. ಆದುದರಿಂದ ಮುಖಗವಸುಗಳನ್ನು ನ್ಯಾನೋ ಪಾರ್ಟಿಕಲ್ಸ್ ನಿಂದ ಲೇಪನ ಮಾಡಿದರೆ ಅವುಗಳು ವೈರಾಣು, ಏರಸಾಲ್ ಹಾಗೂ ಇತರೆ ಸೂಕ್ಷ್ಮಜೀವಿಗಳನ್ನು ಶೋಧಿಸುವಲ್ಲಿ ಯಶಸ್ವಿಯಾಗುತ್ತವೆ. ಸಾಮಾನ್ಯವಾಗಿ ಬಳಸುವ ಮುಖಗವಸುಗಳು 85% ಶೋಧಿಸುವ ದಕ್ಷತೆಯನ್ನು ಹೊಂದಿದ್ದರೆ ಆ್ಯಂಟಿವೈರಲ್ ಮುಖಗವಸುಗಳು 95% ದಕ್ಷತೆಯನ್ನು ಹೊಂದಿರುತ್ತವೆ ಎಂದು ಅಧ್ಯಯನಗಳು ತಿಳಿಸುತ್ತವೆ.

  • ಲೋಹದಿಂದ ಕೂಡಿದ ನ್ಯಾನೋ ಪಾರ್ಟಿಕಲ್ಸ್ ಚಿಕ್ಕ ಗಾತ್ರದಾಗಿದ್ದು ವೈರಾಣುವಿನ ಜೊತೆ ಸಂವಹನ ಹೊಂದಿ ವೈರಾಣು ಹಾಗೂ ಇತರೆ ಸೂಕ್ಷ್ಮ ಜೀವಿಗಳನ್ನು ನಾಶಮಾಡಲು ಸಹಕಾರಿಯಾಗುತ್ತದೆ.
  • ಸಾಮಾನ್ಯವಾಗಿ ಲೋಹಗಳಾದ ಬೆಳ್ಳಿ, ತಾಮ್ರ, ಟೈಟಾನಿಯಂ, ಚಿನ್ನ ಹಾಗೂ ಜಿ಼ಂಕ್ ನ ನ್ಯಾನೋಪಾರ್ಟಿಕಲ್ಸ್ ಅನ್ನು ಮುಖಗವಸಿನ ಮೇಲೆ ಲೇಪನ ಮಾಡಲಾಗುತ್ತದೆ.
  • ಈ ಲೋಹದ ಅಣುಗಳು ವೈರಾಣುವಿನೊಂದಿಗೆ ಸಂವಹನ ಹೊಂದಿ ಅದು ಜೀವಕೋಶಗಳ ಒಳಗೆ ಹೋಗುವುದನ್ನು ತಡೆಯುವುದಲ್ಲದೆ ವೈರಾಣುವನ್ನು ನಾಶಮಾಡುತ್ತವೆ.
  • ಇದಲ್ಲದೆ ಮುಖಗವಸಿನ ದಕ್ಷತೆಯನ್ನು ಹೆಚ್ಚಿಸಲು ಇದರೊಂದಿಗೆ ಚಿಕಿತ್ಸಾ ಏಜೆಂಟ್ ಗಳಾದ ಒಸೆಲ್ಟಾಮಾವಿರ್ ಅಂತಹ ಔಷಧಿಗಳನ್ನು ಬಳಸಲಾಗುತ್ತದೆ.
  • ಇಂತಹ ಮುಖಗವಸುಗಳನ್ನು ಧರಿಸುವುದರಿಂದ ಪದೇ ಪದೇ ಮುಖಗವಸುಗಳನ್ನು ಮುಟ್ಟುವ ಅಭ್ಯಾಸವಿರುವವರಿಗೆ ಕೈಗಳು ಸೋಂಕಿತವಾಗುವುದನ್ನು ಹಾಗೂ ಕಾಯಿಲೆ ಹರಡುವುದನ್ನು ತಡೆಯಬಹುದಾಗಿದೆ.
  • ಈ ತಂತ್ರಜ್ಞಾನದಿಂದ ಅಡ್ಡಸೋಂಕು ಅಥವಾ ದ್ವಿತೀಯ ಸೋಂಕನ್ನು ತಡೆಗಟ್ಟಬಹುದಾಗಿದೆ.
  • ಮಾರುಕಟ್ಟೆಯಲ್ಲಿ ಇಂತಹ ಆ್ಯಂಟಿವೈರಲ್ ಮಾಸ್ಕ್ ಲಭ್ಯವಿದ್ದು ಜನರು ಅದರ ಉಪಯೋಗವನ್ನು ಪಡೆಯಬಹುದಾಗಿದೆ.

ಲೇಖಕರು: ಡಾ. ಸ್ಮಿತಾ ಜೆ.ಡಿ., ಹಿರಿಯ ದಂತ ವೈದ್ಯಾಧಿಕಾರಿ, ಗುಂಡ್ಲುಪೇಟೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು