ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ತನ್ಯಪಾನ ಸಪ್ತಾಹ: ಅವಳಿ, ತ್ರಿವಳಿಗೆ ಸ್ತನ್ಯಪಾನ

ಡಾ. ವಿದ್ಯಾ ವಿ. ಭಟ್
Published : 2 ಆಗಸ್ಟ್ 2024, 23:21 IST
Last Updated : 2 ಆಗಸ್ಟ್ 2024, 23:21 IST
ಫಾಲೋ ಮಾಡಿ
Comments

ಸ್ತನ್ಯಪಾನವನ್ನು ನವಜಾತ ಶಿಶುಗಳಿಗೆ ಪೌಷ್ಟಿಕಾಂಶ ಪೂರೈಸುವ ಅತ್ಯುತ್ತಮ ಮಾರ್ಗವೆಂದು ಪರಿಗಣಿಸಲಾಗಿದ. ಇದು ಒಂದಕ್ಕಿಂತ ಹೆಚ್ಚು ಶಿಶುಗಳಿಗೂ ಅನ್ವಯವಾಗುತ್ತದೆ.

ಆದಾಗ್ಯೂ, ಅವಳಿಗಳು ಅಥವಾ ತ್ರಿವಳಿಗಳು ಆದ ಸಂದರ್ಭದಲ್ಲಿ ಹಲವು ಸವಾಲುಗಳು ಎದುರಾಗುತ್ತವೆ. ಇವುಗಳಿಗೆ ಹಾಲುಣಿಸುವ ಪ್ರಕ್ರಿಯೆಯನ್ನು ಬಹು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಇದಕ್ಕೆ ತಾಳ್ಮೆ ಮತ್ತು ಬೆಂಬಲ ಇರಬೇಕಾಗುತ್ತದೆ.

ಅವಳಿಗಳು ಮತ್ತು ತ್ರಿವಳಿಗಳಿಗೆ ಸ್ತನ್ಯಪಾನದಿಂದ ಆಗುವ ಪ್ರಯೋಜನಗಳು, ಸವಾಲುಗಳು ಮತ್ತು ಕಾರ್ಯತಂತ್ರಗಳ ಬಗ್ಗೆ ಈ ಲೇಖನದಲ್ಲಿ ವಿಸ್ತೃತವಾಗಿ ಉಲ್ಲೇಖಿಸಲಾಗಿದೆ.

ಶಿಶುಗಳಿಗೆ ಸ್ತನ್ಯಪಾನದಿಂದ ಆಗುವ ಪ್ರಯೋಜನಗಳು

ಪೌಷ್ಟಿಕಾಂಶದ ಪ್ರಯೋಜನಗಳು: ಶಿಶುಗಳಿಗೆ ಪೌಷ್ಟಿಕಾಂಶದ ಅಗತ್ಯತೆಗಳನ್ನು ಪೂರೈಸಲು ಎದೆ ಹಾಲು ಒಂದು ಪರಿಪೂರ್ಣವಾದ ಆಹಾರವಾಗಿದೆ. ಇದು ಅಗತ್ಯವಿರುವ ಪೌಷ್ಟಿಕಾಂಶಗಳು, ಆ್ಯಂಟಿಬಾಡೀಸ್ ಒದಗಿಸಲಿದ್ದು, ಮಗುವಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇದರರ್ಥ ಪ್ರತಿ ಮಗುವು ಬೆಳವಣಿಗೆ ಹೊಂದಲು ಬೇಕಾದ ಪೋಷಣೆಯನ್ನು ಪಡೆಯುತ್ತದೆ.

ಬಂಧ ಮತ್ತು ಭಾವನಾತ್ಮಕ ಸಂಪರ್ಕ: ಸ್ತನ್ಯಪಾನವು ತಾಯಿ ಮತ್ತು ಶಿಶುಗಳ ನಡುವೆ ನಿಕಟ ಬಂಧವನ್ನು ಬೆಳೆಸುತ್ತದೆ. ಆಹಾರದ ಸಂದರ್ಭದಲ್ಲಿ ಚರ್ಮದಿಂದ ಚರ್ಮಕ್ಕೆ ಸಂಪರ್ಕ ಕಲ್ಪಿಸುತ್ತದೆ ಮತ್ತು ಕಣ್ಣಿನ ಸಂಪರ್ಕವು ಇವರಿಬ್ಬರ ನಡುವಿನ ಭಾವನಾತ್ಮಕ ಸಂಪರ್ಕವನ್ನು ಬಲಪಡಿಸುತ್ತದೆ. ಇದು ಶಿಶುಗಳ ಭಾವನಾತ್ಮಕ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ನಿರ್ಣಾಯಕವಾಗಿರುತ್ತದೆ.

ವೆಚ್ಚ ಮತ್ತು ಅನುಕೂಲತೆ: ಫಾರ್ಮುಲಾ ಫೀಡಿಂಗ್‌ಗೆ ಹೋಲಿಸಿದರೆ ಸ್ತನ್ಯಪಾನವು ಹೆಚ್ಚು ಆರ್ಥಿಕ ಮತ್ತು ಅನುಕೂಲಕರವಾಗಿರುತ್ತದೆ. ಇದರಿಂದಾಗಿ ಫಾರ್ಮುಲಾ, ಬಾಟಲಿಗಳು ಅಥವಾ ಸ್ಟೆರಿಲೈಸ್ ಮಾಡಿದ ಉಪಕರಣಗಳನ್ನು ಖರೀದಿಸುವ ಅಗತ್ಯವಿರುವುದಿಲ್ಲ ಮತ್ತು ಎದೆ ಹಾಲು ಯಾವಾಗಲೂ ಸರಿಯಾದ ತಾಪಮಾನದಲ್ಲಿ ಲಭ್ಯವಿರುತ್ತದೆ. ಬಹುಶಿಶುಗಳಿಗೆ ಸ್ತನ್ಯಪಾನ ಮಾಡುವ ಸವಾಲುಗಳು

ಸಮಯ ನಿರ್ವಹಣೆ: ಎರಡು ಅಥವಾ ಹೆಚ್ಚು ಶಿಶುಗಳಿಗೆ ಸ್ತನ್ಯಪಾನ ಮಾಡಿಸುವುದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ನವಜಾತ ಶಿಶುಗಳಿಗೆ ಪ್ರತಿ 2-3 ಗಂಟೆಗೊಮ್ಮೆ ಹಾಲುಣಿಸಬೇಕು ಮತ್ತು ಹೀಗೆ ಬಹು ಶಿಶುಗಳಿಗೆ ಹಾಲುಣಿಸಲು ಹೆಚ್ಚಿನ ಸಯಮ ಬೇಕಾಗಿರುವುದರಿಂದ ತಾಯಿಗೆ ವಿಶ್ರಾಂತಿ ಪಡೆಯಲು ಸ್ವಲ್ಪವೇ ಸಮಯ ಸಿಗುತ್ತದೆ.
ಹಾಲು ಪೂರೈಕೆಯ ಕಾಳಜಿ: ಒಂದಕ್ಕಿಂತ ಹೆಚ್ಚು ಶಿಶುಗಳಿಗೆ ಸಾಕಷ್ಟು ಹಾಲು ಪೂರೈಕೆಯಾಗುತ್ತಿದೆಯೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು. ದೇಹವು ಒಂದಕ್ಕಿಂತ ಹೆಚ್ಚು ಮಕ್ಕಳಿಗೆ ಹಾಲನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದರೂ, ಇದು ಆಗಾಗ್ಗೆ ಸಮಯದ ನಿರ್ವಹಣೆ ಮತ್ತು ಆಹಾರ ಅಥವಾ ಪಂಪ್ ಮಾಡುವ ಅಗತ್ಯವಿರುತ್ತದೆ.

ದೈಹಿಕ ಮತ್ತು ಭಾವನಾತ್ಮಕ ಆಯಾಸ: ಸ್ತನ್ಯಪಾನದ ದೈಹಿಕ ಬೇಡಿಕೆಗಳು, ನಿದ್ರೆಯ ಕೊರತೆ ಮತ್ತು ಬಹು ಶಿಶುಗಳನ್ನು ನೋಡಿಕೊಳ್ಳುವ ಭಾವನಾತ್ಮಕ ಒತ್ತಡದೊಂದಿಗೆ ಸೇರಿಕೊಂಡು ತಾಯಂದಿರಿಗೆ ನಿರ್ವಹಣೆ ಕಷ್ಟಸಾಧ್ಯವಾಗಬಹುದು.

ನೈಜ -ಜೀವನದ ಅನುಭವಗಳು

ಸ್ಪಷ್ಟವಾದ ಕಾರ್ಯತಂತ್ರ ಅಳವಡಿಸಿಕೊಂಡು, ಸಲಹೆಗಾರರ ಸಮರ್ಪಕ ಸಹಾಯದಿಂದ ಸ್ತನ್ಯಪಾನ ಪ್ರಕ್ರಿಯೆಯನ್ನು ಸರಳೀಕರಿಸಿದವರಿದ್ದಾರೆ. ಉದಾಹರಣೆಗೆ, ಜೇನ್, ಅವಳಿ ಮಕ್ಕಳ ತಾಯಿ. ಇವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು ಹೀಗೆ:- ‘ಆರಂಭದಲ್ಲಿ ಇದು ಸವಾಲಿನಿಂದ ಕೂಡಿತ್ತು. ಆದರೆ, ಹಾಲುಣಿಸುವ ಸಲಹೆಗಾರರ ನೆರವಿನಿಂದ ಮತ್ತು ನನ್ನ ಸಂಗಾತಿಯ ಬೆಂಬಲದಿಂದ ಸರಿಯಾದ ದಿನಚರಿಯನ್ನು ರೂಪಿಸಿಕೊಂಡೆವು. ಟಂಡೆಂ ಫೀಡಿಂಗ್ ಬಹಳಷ್ಟು ಸಮಯವನ್ನು ಉಳಿಸಿತು ಮತ್ತು ಪಂಪ್ ಮಾಡುವಿಕೆಯು ವಿಶ್ರಾಂತಿ ಪಡೆದುಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿತು’.

ಅವಳಿ ಅಥವಾ ತ್ರಿವಳಿ ಮಕ್ಕಳಿಗೆ ಸ್ತನ್ಯಪಾನ ಮಾಡಿಸುವುದು ಸವಾಲಿನ ಕೆಲಸವಾಗಿರುತ್ತದೆ. ಆದರೆ, ಸರಿಯಾದ ತಂತ್ರಗಳೂ ಮತ್ತು ಬೆಂಬಲದೊಂದಿಗೆ ಇದನ್ನು ಸುಲಭಗೊಳಿಸಬಹುದಾಗಿದೆ.

ಸ್ತನ್ಯಪಾನ ತಾಯಿ ಮತ್ತು ಮಗುವಿಗೆ ಬಹುಪ್ರಯೋಜನಗಳನ್ನು ನೀಡುತ್ತದೆ. ಕಳ್ಳುಬಳ್ಳಿಯ ಸಂಬಂಧವನ್ನು ಮತ್ತಷ್ಟು ಆರ್ದ್ರಗೊಳಿಸಲು ಸಹಕಾರಿಯಾಗುತ್ತದೆ. ಈ ಪ್ರಕ್ರಿಯೆಯನ್ನು ಸರಳೀಕರಿಸಿದಷ್ಟು ತಾಯ್ತತನದ ಪ್ರಯಾಣವನ್ನು ಹೆಚ್ಚು ಆನಂದಿಸಬಹುದಾಗಿದೆ.

ಲೇಖಕರು: ವೈದ್ಯಕೀಯ ನಿರ್ದೇಶಕರು, ರಾಧಾಕೃಷ್ಣ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT