ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಗಮ್ ಜೀವನ ಶೈಲಿ: ಏನಿದು? ಇಂದಿನ ಪರಿಸ್ಥಿತಿಗೆ ಹೇಗೆ ಸೂಕ್ತ?

Last Updated 5 ಅಕ್ಟೋಬರ್ 2020, 14:34 IST
ಅಕ್ಷರ ಗಾತ್ರ

ಬದಲಾಗುತ್ತಿರುವ ಜೀವನ ಶೈಲಿ, ಅನಿಶ್ಚಿತತೆ, ಜನರ ಧೋರಣೆ, ಜೀವನದ ದೃಷ್ಠಿಕೋನ, ಜೀವನದ ಸಾರ್ಥಕತೆ, ಮಹಾತ್ವಾಕಾಂಕ್ಷೆಗಳು ಜನರನ್ನು ಮಾನಸಿಕ ಖಿನ್ನತೆ, ಆತಂಕಗಳಿಗೆ ತಳ್ಳಿದೆ. ಇದರಿಂದ ಅನೇಕ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾನೆ. ಅನೇಕ ದುಷ್ಚಟಗಳಿಗೆ ಬಲಿಯಾಗುತ್ತಿದ್ದಾನೆ. ಇದೆಲ್ಲದರಿಂದ ಹೊರಬರಲು ಯುವಜನತೆ ಮುಂದಾಗುತ್ತಿರುವುದೇ ಲಾಗಮ್ ಲೈಫ್ ಸ್ಟೈಲ್. ಇದು ಸ್ವೀಡನ್ ದೇಶದಲ್ಲಿ ಪ್ರಚಲಿತ ಜೀವನಶೈಲಿ.

ಏನಿದು ಲಾಗಮ್ ಲೈಫ್ ಸ್ಟೈಲ್ ?

'Not too Little, and not too much, but just right' ಎಂಬುದು ಈ ಜೀವನಶೈಲಿಯ ಮುಖ್ಯ ಉದ್ದೇಶ. ಇದು ಸ್ವೀಡನ್ ದೇಶದಲ್ಲಿ ಪ್ರಚಲಿತವಿರುವ ಜೀವನದ ಕಲೆ, ಸಂತೋಷದಾಯಕವಾದ, ಆಹ್ಲಾದಕರವಾದ, ಸಹಜ, ನೈಜ ಸಮತೋಲನ ಜೀವನಶೈಲಿ ಎನ್ನಬಹುದಾಗಿದೆ. ಈ ಪರಿಕಲ್ಪನೆ ಪ್ರಸ್ತುತ ಪ್ರಪಂಚಕ್ಕೆ ಅತ್ಯಂತ ಅವಶ್ಯಕ.

ಮನೆ ಹಾಗೂ ಕೆಲಸಮಾಡುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು. ಅತ್ಯಂತ ಕಡಿಮೆ ವೆಚ್ಚದಲ್ಲಿ ಅವಶ್ಯಕವಿರುವ ವಸ್ತುಗಳನ್ನು ಬಳಸಿ ಆಡಂಬರ ರಹಿತವಾಗಿ ಇಟ್ಟುಕೊಳ್ಳುವುದರಿಂದ ದುಂದು ವೆಚ್ಚದಿಂದ ದೂರವಿರಬಹುದು, ಆರ್ಥಿಕ ಸಂಕಷ್ಟದಿಂದ ದೂರ ಉಳಿಯಬಹುದು. ಹಳೆಯ ವಸ್ತುಗಳನ್ನು ಮರುಬಳಕೆ ಮಾಡುವ ಕಲೆಗಳಿಂದ ವಸ್ತುಗಳನ್ನು ಸಂಪೂರ್ಣವಾಗಿ ಉಪಯೋಗಿಸುವುದಲ್ಲದೆ ವೆಚ್ಚವನ್ನು ಸಹ ಕಡಿಮೆ ಮಾಡಬಹುದಾಗಿದೆ.

ಸ್ವೀಡನ್‌ನ ಜನರು ಕಾಫಿ ಬ್ರೇಕ್‌ನ್ನು ಒಂದು ಸಂತೋಷದಾಯಕವಾದ, ಮನಸ್ಸಿಗೆ ಆಹ್ಲಾದವನ್ನು ನೀಡುವ ಸಮಯವನ್ನಾಗಿ ಪರಿವರ್ತಿಸಿಕೊಳ್ಳುತ್ತಾರೆ. ಕೆಲಸದ ಸಮಯದಲ್ಲಿ ಕಾಫಿ ಬ್ರೇಕ್ ತೆಗೆದುಕೊಳ್ಳುವುದರಿಂದ ಇನ್ನಷ್ಟು ಚೈತನ್ಯದಾಯಕವಾಗಿ ಕೆಲಸಮಾಡಬಹುದು ಎಂಬುದು ಅವರ ಪರಿಕಲ್ಪನೆ.

ಸತತವಾಗಿ ಬಿಡುವಿಲ್ಲದೆ ದುಡಿಯುವುದರಿಂದ ನಾವು ಮಾಡುವ ಕೆಲಸದ ದಕ್ಷತೆ ಕಡಿಮೆಯಾಗುವುದಲ್ಲದೆ, ಮಾನಸಿಕವಾಗಿಯೂ ಬಳಲುವಂತಾಗುತ್ತದೆ. ಆದುದರಿಂದ ಆಹ್ಲಾದಕರ ನೆಮ್ಮದಿಯ ಜೀವನ ಮಹಾತ್ವಾಕಾಂಕ್ಷೆಗಿಂತಲೂ ದೊಡ್ಡದು ಎಂಬುದು ಇದರ ಪರಿಕಲ್ಪನೆ.

ಆಹಾರವನ್ನು ಹಿತ ಮಿತವಾಗಿ ಬಳಸುವುದು. ಮಿತವಾದ ಆಹಾರ ಸೇವನೆ, ಆಹಾರ ತ್ಯಾಜ್ಯಗಳನ್ನು ಕಡಿಮೆ ಮಾಡುವುದು. ಉಪಯೋಗಿಸಿ ಉಳಿದ ಆಹಾರವನ್ನು ಸದುಪಯೋಗಪಡಿಸಿಕೊಳ್ಳುವುದನ್ನು 'Life giving powers of left overs' ಎಂದು ಕರೆಯುತ್ತಾರೆ. ವಾರದ ಕೊನೆಯ ದಿನಗಳನ್ನು ಸಂತೋಷದಾಯಕವಾಗಿ, ಆಹ್ಲಾದಕರವಾಗಿ ಕಳೆಯುವುದು, ಒಳ್ಳೆಯ ಆಹಾರ , ಸಿನಿಮಾ ವೀಕ್ಷಣೆ, ಕುಟುಂಬ ಸದಸ್ಯರೊಂದಿಗೆ ಕಾಲಕಳೆಯುವುದು, ಮಕ್ಕಳೊಂದಿಗೆ ಆಟವಾಡುವುದು ಇತ್ಯಾದಿ.

ಅನಾವಶ್ಯಕ ವಸ್ತುಗಳ ಖರೀದಿ, ಬಟ್ಟೆಬರೆಗಳ ಖರೀದಿಯಿಂದ ದೂರ ಉಳಿಯುವುದು, ನ್ಯೂಟ್ರಲ್ ಬಣ್ಣಗಳ ಬಳಕೆ, ವಿವಿಧ ರೀತಿಯಲ್ಲಿ ಬಳಸಬಹುದಾದ ಬಟ್ಟೆಗಳನ್ನು ಖರೀದಿಸುವುದು, ಅವಶ್ಯಕತೆ ಇಲ್ಲದ ಬಟ್ಟೆಬರೆಗಳನ್ನು ಉಪಯೋಗಿಸುವವರಿಗೆ ಕೊಡುವುದು ಸಹ ಈ ಜೀವನ ಶೈಲಿಯ ಪರಿಕಲ್ಪನೆ.

ಒಟ್ಟಾರೆ ಹೇಳುವುದಾದರೆ ಲಾಗಮ್ ಜೀವನಶೈಲಿ ಒಂದು ಸುಂದರವಾದ, ಆಹ್ಲಾದಕರವಾದ, ಕಡಿಮೆ ವೆಚ್ಚದ, ನೆಮ್ಮದಿಯುತ, ಸಹಬಾಳ್ವೆಯನ್ನು ಒಳಗೂಡಿಸುವಂತಹ, ಹಿತಮಿತ ಜೀವನದ ಮಂತ್ರವನ್ನು ಬೋಧಿಸುವ ಜೀವನ ಶೈಲಿ. ಯುವಜನತೆ ಹೆಚ್ಚು ಹೆಚ್ಚು ಇಂತಹ ಜೀವನಶೈಲಿಯನ್ನು ಅಳವಡಿಸಿಕೊಂಡಲ್ಲಿ ಆರೋಗ್ಯಕರ ಸಮಾಜವನ್ನು ಹೊಂದಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT