ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳು ಎಷ್ಟು ಹೊತ್ತು ವ್ಯಾಯಾಮ ಮಾಡಬೇಕು?

Last Updated 6 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳು ವಯಸ್ಕರಿಗೆ ಮತ್ತು ಹಿರಿಯರಷ್ಟೇ ಮಾಡುವುದಲ್ಲ. ಮಕ್ಕಳಿಗೂ ದೈಹಿಕ ಚಟುವಟಿಕೆಗಳು ಅವಶ್ಯಕ ಎಂಬುದು ಹಲವು ತಜ್ಞರ ಅಭಿಪ್ರಾಯ. ಬೆಳೆಯುವ ವಯಸ್ಸಿನಲ್ಲಿ ಮಾಂಸಖಂಡಗಳು, ಮೂಳೆಗಳು ದೃಢವಾಗುವುದಕ್ಕೆ ವ್ಯಾಯಾಮಗಳು ನೆರವಾಗುತ್ತವೆ.

ಆರು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ನಿತ್ಯ ಒಂದು ಗಂಟೆಯಾದರೂ ದೈಹಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದರೆ ಚಿಕ್ಕಂದಿನಿಂದಲೇ ಫಿಟ್‌ನೆಸ್ ಕಾಯ್ದುಕೊಳ್ಳಬಹುದು ಎಂದು ಹೇಳುತ್ತಾರೆ ತಜ್ಞರು.

ವ್ಯಾಯಾಮಗಳೆಂದರೆ ಜಿಮ್‌ಗಳಲ್ಲಿ ಬೆವರು ಹರಿಸುವ ಅಗತ್ಯವಿಲ್ಲ. ಮಕ್ಕಳಿಗೆ ಆಟಗಳೆಂದರೆ ಹೆಚ್ಚು ಇಷ್ಟ. ದೈಹಿಕ ಶ್ರಮ ಬೇಡುವ ಆಟಗಳಲ್ಲಿ ಮಗ್ನರಾದರೂ ಸಾಕು.

ರಕ್ತದಲ್ಲಿ ಆಮ್ಲಜನಕ ಹೆಚ್ಚಿಸುವ ನಡಿಗೆ, ಓಟ, ಈಜು, ಫುಟ್‌ಬಾಲ್‌, ಬ್ಯಾಸ್ಕೆಟ್‌ಬಾಲ್, ಟೆನಿಸ್, ನೃತ್ಯದಂತಹ ಹಲವು ಆಟಗಳು ವ್ಯಾಯಾಮದಂತೆಯೇ ನೆರವಾಗುತ್ತವೆ.

ಹೆಚ್ಚು ಶ್ರಮಬೇಡುವ ವ್ಯಾಯಾಮಗಳನ್ನು ವಾರದಲ್ಲಿ ಮೂರು ದಿನ ಮಾಡಿದರೂ ಸಾಕು ಎಂದು ಮಕ್ಕಳು ತಜ್ಞರು ಹೇಳುತ್ತಾರೆ. 3ರಿಂದ 5 ವರ್ಷದೊಳಗಿನ ಮಕ್ಕಳಾಗಿದ್ದರೆ, ಚಟುವಟಿಕೆಯ ಜೀವನ, ಆಟಗಳಲ್ಲಿ ಮಗ್ನರಾಗುವುದನ್ನು ರೂಢಿಸಬೇಕು.

ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಇಂತಹ ಅಭ್ಯಾಸಗಳನ್ನು ರೂಢಿಸುವುದರಿಂದ ದೊಡ್ಡವರಾದ ಮೇಲೂ ನಿತ್ಯ ಅಭ್ಯಾಸ ಮಾಡುವುದನ್ನು ಕಲಿಯುತ್ತಾರೆ. ಇದರಿಂದ ಜೀವನವಿಡೀ ಫಿಟ್‌ನೆಸ್‌ ಕಾಯ್ದುಕೊಳ್ಳಲು ನೆರವಾಗುತ್ತದೆ.

ಇದಕ್ಕೆ ತಕ್ಕಂತೆ ತಜ್ಞರ ಸಲಹೆ ಪಡೆದು ಮಕ್ಕಳಿಗೆ ಪೌಷ್ಟಿಕ ಆಹಾರವನ್ನೂ ಒದಗಿಸಬೇಕು. ಉತ್ತಮ ಆಹಾರ ಹವ್ಯಾಸಗಳು ಮಕ್ಕಳ ಆರೋಗ್ಯಕ್ಕೆ ನೆರವಾಗುತ್ತವೆ.

ವ್ಯಾಯಾಮದ ಲಾಭಗಳು

* ವಯಸ್ಸಿಗೆ ತಕ್ಕಂತೆ ಬೆಳವಣಿಗೆಯಾಗಲು ನೆರವಾಗುತ್ತದೆ.

* ಸ್ಥೂಲಕಾಯದ ಸಮಸ್ಯೆ ಕಾಡುವುದಿಲ್ಲ.

* ಸಪೂರ ದೇಹ ಮತ್ತು ಆರೋಗ್ಯಕರ ಜೀವನಶೈಲಿ.

* ವಯಸ್ಸಾದ ಮೇಲೂ ಮಧುಮೇಹ, ರಕ್ತದೊತ್ತಡದಂತಹ ಸಮಸ್ಯೆಗಳು ಕಾಡುವುದಿಲ್ಲ.

* ದೇಹದಲ್ಲಿ ಕೊಬ್ಬು ಶೇಖರಣೆಯಾಗುವುದಿಲ್ಲ.

* ಉಲ್ಲಾಸ ಹಾಗೂ ಚುರುಕಿನ ಜೀವನ ನಿಮ್ಮದಾಗುತ್ತದೆ.

* ಮಾನಸಿಕ ಸ್ಥಿರತೆ ಮತ್ತು ಆತ್ಮಸ್ಥೈರ್ಯ ಹೆಚ್ಚಳಕ್ಕೂ ವ್ಯಾಯಾಮಗಳು ನೆರವಾಗುತ್ತವೆ.

* ಮುಖ್ಯವಾಗಿ ಮಕ್ಕಳಲ್ಲಿ ಏಕಾಗ್ರತೆ ಬೆಳೆಯುವುದಕ್ಕೆ ನೆರವಾಗುತ್ತದೆ.

* ಉಸಿರಾಟದ ಸಮಸ್ಯೆಗಳಿಂದ ದೂರವಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT