ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಮಾಸ್ಕ್‌ಗೆ ಫ್ಯಾಷನ್ ಸ್ಪರ್ಶ

Last Updated 2 ಏಪ್ರಿಲ್ 2020, 20:15 IST
ಅಕ್ಷರ ಗಾತ್ರ

ಕೊರೊನಾಸೋಂಕು ಹರಡದಂತೆ ತಡೆಯಲು ಸುರಕ್ಷತಾ ಕ್ರಮವಾಗಿ ಮುಖಕ್ಕೆ ಮಾಸ್ಕ್ ಹಾಕುವುದು, ಕೈಗಳ ಸ್ವಚ್ಛತೆಗೆ ಸ್ಯಾನಿಟೈಸರ್‌ ಬಳಸುವುದು ಅವಶ್ಯಕ. ಮಾಸ್ಕ್‌ ಹಾಕುವ ಬಗ್ಗೆ ಜನರಿಗೆ ತಕರಾರೇನಿಲ್ಲ, ಏಕೆಂದರೆ ಅವರಿಗೆ ಪರಿಸ್ಥಿತಿಯ ಗಂಭೀರತೆಯ ಅರಿವಾಗಿದೆ. ಆದರೆ ಫೇಸ್‌ ಮಾಸ್ಕ್ ಹಾಕಿದಾಗಲೂ ಚಂದ ಕಾಣಿಸಬೇಕಲ್ಲ? ಅದಕ್ಕೆಂದೇ ಈಗ ಜನರು ತಾವು ಧರಿಸಿದ ಬಟ್ಟೆಗೆ ಹೊಂದುವಂಥ, ವಿವಿಧ ವಿನ್ಯಾಸದ ಫೇಸ್ ಮಾಸ್ಕ್‌ಗಳನ್ನು ಹುಡುಕುತ್ತಿದ್ದಾರೆ. ಅದಾಗಲೇ ಇಂತಹ ಫೇಸ್‌ ಮಾಸ್ಕ್ ಗಳು ಮಾರುಕಟ್ಟೆಗೂ ಬಂದಿವೆ. ಕೆಲವರು ಮನೆಯಲ್ಲೇ ಕುಳಿತು ಇಂಥ ಪ್ರಯೋಗಶೀಲ ಮುಖಗವಸುಗಳನ್ನು ತಯಾರಿಸುತ್ತಿದ್ದಾರೆ. ಜನರು ನಿತ್ಯ ಮಾಸ್ಕ್ ಧರಿಸಲು ಬೇಸರ ಪಡಬಾರದು ಹಾಗೂ ಮಾಸ್ಕ್ ಧರಿಸುವ ಅಭ್ಯಾಸವನ್ನು ಉತ್ತೇಜಿಸಬೇಕು ಎನ್ನುವ ದೃಷ್ಟಿಯಿಂದ ಈಗ ಫೇಸ್ ಮಾಸ್ಕ್‌ಗಳಿಗೆಫ್ಯಾಷನ್ಸ್ಪರ್ಶಸಿಗುತ್ತಿದೆ.

ಜೋಡಿ ಮಾಸ್ಕ್

ಇವು ಒಂದೇ ರೀತಿಯ ಮಾಸ್ಕ್‌ಗಳು. ಅಣ್ಣ–ತಮ್ಮ, ಅಮ್ಮ–ಮಗಳು, ಅಕ್ಕ–ತಂಗಿ, ಪ್ರೇಮಿಗಳು, ಕುಟುಂಬದ ಸದಸ್ಯರು, ಗೆಳೆಯ ಗೆಳತಿಯರು ಒಂದೇ ತರಹ ಕಾಣಿಸುವ ಇಂತಹ ಮುಖಕವಚಗಳನ್ನು ತೊಡುತ್ತಾರೆ. ಒಂದೇ ವಿನ್ಯಾಸ, ಹಲವು ಬಣ್ಣಗಳಿಂದ ಕೂಡಿದ ಮಾಸ್ಕ್ ಗಳನ್ನು ಕಸ್ಟಮೈಸ್ ಮಾಡಿ ತಯಾರಿಸಿಕೊಡುವ ಬೊಟಿಕ್‍ಗಳೂ ಇನ್‍ಸ್ಟಾಗ್ರಾಂನಲ್ಲಿ ಇವೆ.

ಬ್ರೈಡಲ್ ಮಾಸ್ಕ್

ಇವು ಮದುವಣಗಿತ್ತಿ ಗಾಗಿಯೇ ವಿನ್ಯಾಸ ಮಾಡಿದ ವಿಶೇಷ ರೀತಿಯ ಮಾಸ್ಕ್‌ಗಳು. ವಧುವಿನ ಗೌನ್ ವಿನ್ಯಾಸಕ್ಕೆ ಹೊಂದುವಂತೆ ಈ ಮಾಸ್ಕ್‌ಗಳನ್ನು ತಯಾರಿಸುತ್ತಾರೆ. ಇದರಲ್ಲಿ ಮುತ್ತು, ಹೂ, ಹರಳಿನ ವಿನ್ಯಾಸವೂ ಇರುತ್ತದೆ. ಈ ಮಾಸ್ಕ್‌ಗಳು ಸೀಕ್ವೆನ್ಸ್ ವರ್ಕ್, ಕಟ್ ವರ್ಕ್ ಹಾಗೂ ಪ್ಯಾಚ್ ವರ್ಕ್‌ನಲ್ಲೂ ಲಭ್ಯ. ಕೆಲವುಫ್ಯಾಷನ್ಹೌಸ್‍ಗಳು ಈ ಮಾಸ್ಕ್‌ಗಳನ್ನು ಬ್ರೈಡಲ್ ಗೌನ್‍ನೊಂದಿಗೆ ಉಚಿತವಾಗಿ ನೀಡುತ್ತಿದ್ದು, ಮಾಸ್ಕ್ ಧರಿಸುವುದರ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುತ್ತಿವೆ.

ಸಿಗ್ನೇಚರ್ ಮಾಸ್ಕ್

ಫ್ಯಾಷನ್ಹೌಸ್, ಪ್ರಮುಖ ಬ್ರ್ಯಾಂಡ್‍ಗಳ ಸಿಗ್ನೇಚರ್ ಇರುವ ಐಷಾರಾಮಿ ಮಾಸ್ಕ್‌ಗಳೂ ಸದ್ದು ಮಾಡುತ್ತಿವೆ. ಒಂದು ಬ್ಯಾಗ್‍ಗೆ ಕೋಟಿ ರೂಪಾಯಿ ಬೆಲೆ ನಿಗದಿ ಮಾಡುವ ಗೂಚಿ, ಲೂಯಿ ವಿಟಾನ್‍ನ ಸಿಗ್ನೇಚರ್ ಮಾಸ್ಕ್‌ಗಳು ಮಾರುಕಟ್ಟೆಗೆ ಬಂದಿವೆ. ಇವುಗಳ ಬೆಲೆಯೂ ದುಬಾರಿ. ಒಳಭಾಗದಲ್ಲಿ ಮೃದುವಾದ ಹತ್ತಿಯ ಬಟ್ಟೆ ಇದ್ದು, ಮೇಲೆ ಲೆದರ್ ಹೊದಿಕೆ ಇದೆ.

ಅನಿಮಲ್ ಪ್ರಿಂಟ್ ಮಾಸ್ಕ್

ಪ್ರಾಣಿಪ್ರಿಯರಿಗೆ ವಿಶೇಷ ಮಾಸ್ಕ್‌ಗಳು ಇವೆ. ಹುಲಿ, ಚಿರತೆ, ಆನೆ, ಕೋತಿ, ಪಾಂಡ, ಸಿಂಹದ ಮುಖ ಚಿತ್ರವಿರುವ ಮಾಸ್ಕ್‌ಗಳು ಎಳೆಯರು ಮತ್ತು ಹಿರಿಯರನ್ನೂ ಧರಿಸಲು ಉತ್ತೇಜಿಸುತ್ತವೆ. ಪಕ್ಷಿ ಪ್ರೇಮಿಗಳಿಗಾಗಿ ಹಕ್ಕಿಯ ಕೊಕ್ಕು, ಮೂತಿ ಇರುವ ಪ್ರಿಂಟ್ ಮಾಸ್ಕ್‌ಗಳು ಲಭ್ಯ.

ಪಾರ್ಟಿ ಮಾಸ್ಕ್

ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಹೌಸ್ ಲಾಕ್‍ಡೌನ್ ಎನ್ನುವ ನಿಯಮದಿಂದ ಬೇಸರಗೊಳ್ಳದೇ, ಮನೆ ಮಂದಿಯೇ ಸೇರಿ ಪಾರ್ಟಿ ಮಾಡುತ್ತಿದ್ದಾರೆ– ಹಾಲಿವುಡ್ ಮಂದಿ. ಇದಕ್ಕೆ ಪಾರ್ಟಿ ಥೀಮ್‍ನ ಫೇಸ್‍ ಮಾಸ್ಕ್‌ಗಳು ಲಭ್ಯ. ಕೆಲವರು ಮನೆಯಲ್ಲೇ ಸ್ವಯಂ ತಯಾರಿಸಿ ಕೊಳ್ಳುತ್ತಿದ್ದಾರೆ. ಹಾಲೋವಿನ್ ಪಾರ್ಟಿ, ಪೂಲ್ ಪಾರ್ಟಿ ಸೇರಿ ವಿಭಿನ್ನ ಪಾರ್ಟಿ ಮಾಸ್ಕ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಾ ಕುತೂಹಲ ಹೆಚ್ಚಿಸುತ್ತಿವೆ.

ಸ್ಪೈಡರ್ ಮ್ಯಾನ್, ಐರನ್ ಮ್ಯಾನ್, ಬ್ಯಾಟ್ ಮ್ಯಾನ್‍ನಂಥ ಸೂಪರ್ ಹೀರೊಗಳ ಚಿತ್ರವಿರುವ ಮಾಸ್ಕ್‌ಗಳು ಮಕ್ಕಳಲ್ಲಿ ಜನಪ್ರಿಯಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT