ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮಗಿದು ತಿಳಿದಿರಲಿ: ಕೋವಿಡ್-19 ಸಾಮಾನ್ಯ ಶೀತ, ಜ್ವರಕ್ಕಿಂತ ಹೇಗೆ ಭಿನ್ನ?

ಕೊರೊನಾ ವೈರಸ್
Last Updated 14 ಮಾರ್ಚ್ 2020, 13:20 IST
ಅಕ್ಷರ ಗಾತ್ರ

ಕೊರೊನಾ ವೈರಸ್‌ನಿಂದ ಹರಡುವ ಕೋವಿಡ್-19 ಕಾಯಿಲೆಗೆ ತುತ್ತಾಗದಂತೆ ನಾವು ಹೇಗೆ ಸುರಕ್ಷಿತರಾಗಿರಬಹುದು? ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬಹುದು? ಎಂಬ ಕುರಿತಾದ ಸಂಪೂರ್ಣ ಅಧಿಕೃತ ಮಾಹಿತಿ ಇಲ್ಲಿದೆ. ಇವನ್ನು ಅನುಸರಿಸಿ, ಆರೋಗ್ಯದಿಂದಿರಿ.

ಕೊರೊನಾ ವೈರಸ್‌ನಿಂದ ಬರುವ ಕೋವಿಡ್-19 ಕಾಯಿಲೆಯ ಲಕ್ಷಣಗಳನ್ನು ಮೇಲ್ನೋಟದಿಂದ ಕಂಡುಹಿಡಿಯುವುದು ತುಸು ಕಷ್ಟ. ಯಾಕೆಂದರೆ, ಸಾಮಾನ್ಯವಾದ ಶೀತ, ಜ್ವರದ ಸಂದರ್ಭದಲ್ಲಿಯೂ ಬಹುತೇಕ ಇದೇ ಲಕ್ಷಣಗಳಿರುತ್ತವೆ. ಇದಕ್ಕಾಗಿಯೇ ಯಾವುದೇ ಶೀತ, ಜ್ವರ, ಕೆಮ್ಮು ಬಂದ ತಕ್ಷಣ ವೈದ್ಯರನ್ನು ಕಾಣಲೇಬೇಕೆಂಬ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ.

ಸಾಧ್ಯವಿದ್ದಷ್ಟೂ ಮನೆಯ ಹೊರಗೆ, ಜನಜಂಗುಳಿಯಿರುವ ಪ್ರದೇಶಗಳಿಗೆ ಮತ್ತು ಜನರ, ವಿಶೇಷವಾಗಿ ಸೋಂಕುಪೀಡಿತರ ಓಡಾಟವಿರಬಹುದಾದ ಸ್ಥಳಗಳಿಂದ ದೂರವಿರುವುದು ಲೇಸು. ಈ ಕಾರಣಕ್ಕಾಗಿಯೇ ಈಗಾಗಲೇ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳು ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿ, ಜನತೆಗೆ ಎಚ್ಚರಿಕೆಯಿಂದಿರುವಂತೆ ನಿರ್ದೇಶಿಸಿವೆ.

ನೆನಪಿಡಲೇಬೇಕಾದ ವಿಷಯವೆಂದರೆ, ಯಾವುದೇ ಲಕ್ಷಣಗಳು ಕೂಡ ಸೋಂಕು ತಗುಲಿದ 2ರಿಂದ 14 ದಿನಗಳೊಳಗಷ್ಟೇ ಕಾಣಿಸಿಕೊಳ್ಳಬಲ್ಲವು. ಕೋವಿಡ್-19 ಬಾಧಿತ ವ್ಯಕ್ತಿಯ ಸಂಪರ್ಕವಾಗಿದೆ ಎಂಬುದು ದೃಢಪಟ್ಟರೆ ಅಥವಾ ಕೋವಿಡ್-19 ಈಗಾಗಲೇ ಕಾಣಿಸಿಕೊಂಡಿರುವ ಪ್ರದೇಶಗಳಲ್ಲಿ ನೀವು ಇದ್ದೀರೆಂದಾದರೆ, ತಕ್ಷಣವೇ ವೈದ್ಯರನ್ನು ಕಾಣಿರಿ.

ಉಸಿರಾಡಲು ತ್ರಾಸ ಅಥವಾ ಉಸಿರೆಳೆದುಕೊಳ್ಳಲು ಕಷ್ಟವಾಗುವುದು, ಎದೆಭಾಗದಲ್ಲಿ ನಿರಂತರ ನೋವು ಅಥವಾ ಒತ್ತಡದ ಅನುಭವ ಆದರೆ, ತಕ್ಷಣವೇ ವೈದ್ಯರನ್ನು ಕಾಣಬೇಕು.

ಕೋವಿಡ್-19 ಕಾಯಿಲೆಯ ಸಾಮಾನ್ಯ ಲಕ್ಷಣಗಳೇನು? ಇದು ಸಾಮಾನ್ಯ ಶೀತ, ಜ್ವರಕ್ಕಿಂತ ಹೇಗೆ ಭಿನ್ನ? ಎಂಬ ಮಾಹಿತಿ ಇದೋ ಇಲ್ಲಿದೆ ನೋಡಿ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ಪ್ರಚುರಪಡಿಸಿರುವ ಕಾಯಿಲೆಯ ಲಕ್ಷಣಗಳ ಸಾರಾಂಶ ಇಲ್ಲಿದೆ.

ಲಕ್ಷಣಗಳು ಕೋವಿಡ್-19 ಜ್ವರ (ಫ್ಲೂ) ಶೀತ
ಒಣಕೆಮ್ಮು ಪದೇಪದೇ ಪದೇಪದೇ ಅಪರೂಪ
ಜ್ವರ ಪದೇಪದೇ ಪದೇಪದೇ ಅಪರೂಪ
ಕಟ್ಟಿದ ಮೂಗು ಅಪರೂಪ ಕೆಲವೊಮ್ಮೆ ಪದೇಪದೇ
ಗಂಟಲು ಕೆರೆತ ಕೆಲವೊಮ್ಮೆ ಕೆಲವೊಮ್ಮೆ ಪದೇಪದೇ
ಉಸಿರಾಡಲು ತೊಂದರೆ ಕೆಲವೊಮ್ಮೆ ಕಂಡುಬಂದಿಲ್ಲ ಕಂಡುಬಂದಿಲ್ಲ
ತಲೆನೋವು ಕೆಲವೊಮ್ಮೆ ಪದೇಪದೇ ಅಪರೂಪ
ಶಾರೀರಿಕ ನೋವು ಕೆಲವೊಮ್ಮೆ ಪದೇಪದೇ ಪದೇಪದೇ
ಸೀನುವಿಕೆ ಕಂಡುಬಂದಿಲ್ಲ ಕಂಡುಬಂದಿಲ್ಲ ಪದೇಪದೇ
ಸುಸ್ತು ಕೆಲವೊಮ್ಮೆ ಪದೇಪದೇ ಕೆಲವೊಮ್ಮೆ
ಬೇಧಿ ಅಪರೂಪ ಕೆಲವೊಮ್ಮೆ ಕಂಡುಬಂದಿಲ್ಲ

ಇವನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT