ಸುಂದರವಾಗಿ ಕಾಣಬೇಕೆಂಬ ಆಸೆ ಯಾರಿಗಿಲ್ಲ? ಆಬಾಲವೃದ್ಧರಾದಿಯಾಗಿ ನಾವೆಲ್ಲಾ ಸೌಂದರ್ಯಪ್ರಸಾಧನಗಳನ್ನು ದಿನನಿತ್ಯ ಬಳಸುತ್ತಲೇ ಇರುತ್ತೇವೆ. ಸುಂದರವಾಗಿ ಕಾಣಬೇಕೆಂದು, ವಯಸ್ಸು ಮರೆಮಾಚಲೆಂದು, ಗೌರವರ್ಣದ ತ್ವಚೆಗಾಗಿ - ಹೀಗೆ ಒಂದಿಲ್ಲೊಂದು ಕಾರಣದಿಂದ ಇವುಗಳ ಬಳಕೆ ದಿನೇ ದಿನೇ ಹೆಚ್ಚುತ್ತಿದೆ. ಇವುಗಳ ವಿಪರೀತ ಬಳಕೆಯಿಂದ ಕೆಲವೊಮ್ಮೆ ಆರೋಗ್ಯದ ಏರುಪೇರು, ಅದರಲ್ಲೂ ಕಿಡ್ನಿರೋಗಗಳು ಬರಬಹುದೆಂದು ನಿಮಗೆ ತಿಳಿದಿದೆಯೇ? ನಂಬಲು ಕಷ್ಟವೆಂದು ಅನಿಸಿದರೂ, ಇದು ನಿಜ. ಸೌಂದರ್ಯವರ್ಧಕಗಳಿಂದ ಯಾವ ರೀತಿ ಮೂತ್ರಪಿಂಡಗಳ ಸಮಸ್ಯೆ ಉಂಟಾಗಬಹುದು ಎಂಬ ಮಾಹಿತಿ ಇಲ್ಲಿದೆ.

ಮೂತ್ರಪಿಂಡಗಳ ಕಾರ್ಯವೈಖರಿ

ಆರೋಗ್ಯವಂತ ವ್ಯಕ್ತಿಯಲ್ಲಿ ಎರಡು ಮೂತ್ರಪಿಂಡಗಳಿರುತ್ತವೆಂದು ಬಹುತೇಕ ಎಲ್ಲರಿಗೂ ತಿಳಿದಿರುವ ವಿಷಯವೇ. ಅವುಗಳ ಮುಖ್ಯ ಕೆಲಸವೆಂದರೆ, ದಿನಂಪ್ರತಿ ದೇಹದಲ್ಲಿ ಉತ್ಪಾದನೆಯಾಗುವ ತ್ಯಾಜ್ಯಗಳನ್ನು ಮೂತ್ರದ ರೂಪದಲ್ಲಿ ಹೊರಹಾಕಿ, ದೇಹವನ್ನು ಸಮತೋಲನದಲ್ಲಿ ಇರಿಸುವುದು. ಇದಕ್ಕಾಗಿ ಮೂತ್ರಪಿಂಡಗಳಲ್ಲಿ ರಕ್ತ ನಿರಂತರವಾಗಿ ಶೋಧಿಸಲ್ಪಡುತ್ತದೆ. ದೇಹದಲ್ಲಿ ಉಂಟಾಗುವ ಅಥವಾ ಹೊರಗಿನಿಂದ ಸೇವಿಸಲ್ಪಡುವ ವಿಷಕಾರಿ ವಸ್ತುಗಳನ್ನು ದೇಹದಿಂದ ಹೊರಹಾಕಿ ಅದನ್ನು ಸುಸ್ಥಿತಿಯಲ್ಲಿ ಇಡುವುದರಲ್ಲಿಯೂ ಕಿಡ್ನಿಗಳ ಪಾತ್ರ ದೊಡ್ಡದು. ಆದರೆ ಈ ಕ್ರಿಯೆಯಲ್ಲಿ ವಿಷಕಾರಿ ವಸ್ತುಗಳು ಕಿಡ್ನಿಗಳಿಗೇ ಹಾನಿಯನ್ನು ಉಂಟುಮಾಡುವ ಸಂಭವ ಹೆಚ್ಚು.

ಸೌಂದರ್ಯಪ್ರಸಾಧನಗಳಲ್ಲಿ ಅನೇಕ ತರಹದ ರಾಸಾಯನಿಕ ವಸ್ತುಗಳನ್ನು ಬಳಸುವುದರಿಂದ ಆ ವಸ್ತುಗಳಲ್ಲಿ ಬಳಕೆಯಾಗಿರಬಹುದಾದ ಭಾರಲೋಹಗಳು, ಕೆಲವು ಆಮ್ಲಗಳು ಕಿಡ್ನಿಯ ಮೇಲೆ ಪರಿಣಾಮವನ್ನು ಬೀರಬಲ್ಲವು.

ಗೌರವರ್ಣದ ಆಸೆಯಿಂದ ಬಂತು ಆಪತ್ತು:

ಗೌರವರ್ಣದ ತ್ವಚೆಗಾಗಿ ಬಳಸುವ ಅನೇಕ ಕ್ರೀಮ್ಗಳಲ್ಲಿ ಪಾದರಸವನ್ನು ಬಳಕೆ ಮಾಡುತ್ತಾರೆ. ಅದರಲ್ಲೂ ಜಾಹೀರಾತಿನಲ್ಲಿ ತೋರಿಸಿದೆ – ಎನ್ನುವ ಆಕರ್ಷಣೆಯಿಂದ ಅನೇಕ ಯುವಜನರು ಇಂತಹ ಆಮಿಷಕ್ಕೆ ಒಳಗಾಗಿ ಅನೇಕ ಸೌಂದರ್ಯವರ್ಧಕಗಳನ್ನು ಹಿಂದುಮುಂದು ನೋಡದೆ ಬಳಸುವ ಸಾಧ್ಯತೆ ಹೆಚ್ಚು. ಒಳ್ಳೆಯ ಗುಣಮಟ್ಟದ ಕ್ರೀಮ್ಗಳಲ್ಲಿ ಅವುಗಳಲ್ಲಿ ಬಳಸಿರುವ ವಸ್ತುವಿನ ಬಗ್ಗೆ ಲೇಬಲ್ ಇರಬಹುದಾದರೂ, ಕೆಲವೊಮ್ಮೆ ಜನರು ಯಾವುದೇ ಲೇಬಲ್ ಇಲ್ಲದ ಕ್ರೀಮ್ ಬಳಸುವ ಸಾಧ್ಯತೆ ಇದೆ. ಅದರಲ್ಲೂ ಕೈಯಲ್ಲೇ ಮಾರುಕಟ್ಟೆ ಸುತ್ತಿಸುವ ಇಂದಿನ ಸಾಮಾಜಿಕ ಜಾಲತಾಣಗಳೂ, ಆನ್ಲೈನ್ ವ್ಯಾಪಾರ ತಾಣಗಳೂ ನಮ್ಮನ್ನು ಮನಬಂದಂತೆ ಕುಣಿಸುವ ಇಂದಿನ ದಿನಗಳಲ್ಲಿ, ಜಾಹೀರಾತಿನಲ್ಲಿ ಚಂದ ಕಂಡಿತು ಎಂದು ಯಾವುದೋ ಕ್ರೀಮ್ ಬಳಸಿ ಎಷ್ಟೋ ಜನರು ಕಿಡ್ನಿಸಮಸ್ಯೆಗೆ ತುತ್ತಾಗಿದ್ದಾರೆ.

ಗೌರವರ್ಣಕಾರಕ ಕ್ರೀಮ್ಗಳನ್ನು ಬಳಸಿದ ಸ್ವಲ್ಪ ದಿನಗಳಲ್ಲೇ ಅಂತಹ ವ್ಯಕ್ತಿಗಳಲ್ಲಿ ಮುಖ ಊದುವುದು, ಕೈಕಾಲು ಬಾತುಕೊಳ್ಳುವುದನ್ನು ನೋಡಬಹುದು. ಮೂತ್ರದಲ್ಲಿ ಪ್ರೋಟೀನ್ ಅಂಶ ಹೆಚ್ಚಾಗಿ ವಿಸರ್ಜನೆಯಾಗುತ್ತಿರುವುದನ್ನು ಮೂತ್ರಪರೀಕ್ಷೆಯ ಮುಖಾಂತರ ಪತ್ತೆ ಹಚ್ಚಬಹುದು. ಕೆಲವೊಮ್ಮೆ ಬಿ.ಪಿ. ಕೂಡ ಹೆಚ್ಚಾಗಬಹುದು. ಇಂತಹ ಸ್ಥಿತಿಗೆ ‘ನೆಫ್ರಾಟಿಕ್ ಸಿಂಡ್ರೋಮ್’ ಎಂದು ಕರೆಯುತ್ತೇವೆ. ‘ಕಿಡ್ನಿ ಬಯಾಪ್ಸಿ’, ಎಂದರೆ ಕಿಡ್ನಿಯ ಒಂದು ಸಣ್ಣ ತುಣುಕನ್ನು ಸೂಜಿಯ ಮೂಲಕ ತೆಗೆದು ಪರೀಕ್ಷೆ ಮಾಡಿದಾಗ, ‘ಮೆಂಬ್ರೇನಸ್ ನೆಫ್ರೋಪತಿ’ ಎಂಬ ನಿರ್ದಿಷ್ಟ ತರಹದ ರೋಗವು ಪತ್ತೆಯಾಗುತ್ತದೆ. ನಮ್ಮ ಭಾರತದಲ್ಲೇ ಕಿಡ್ನಿ ತಜ್ಞವೈದ್ಯರು ಇದರ ಬಗ್ಗೆ ಮೊದಲು ಪತ್ತೆ ಹಚ್ಚಿದ್ದು, ವಿಶ್ವದಲ್ಲಿ ಎಲ್ಲರ ಗಮನ ಸೆಳೆದಿದೆ. ಅನೇಕ ತರಹದ ಕ್ರೀಮ್ಗಳ ರಾಸಾಯನಿಕ ಪರೀಕ್ಷೆ ಮಾಡಿದಾಗ ಅವುಗಳಲ್ಲಿ ಗರಿಷ್ಠ ಮಟ್ಟದಲ್ಲಿ ಪಾದರಸದ ಪ್ರಮಾಣ ಹೆಚ್ಚಿರುವುದು ಪತ್ತೆಯಾಗಿದೆ. ಈ ಕ್ರೀಮ್ಗಳ ಬಳಕೆಯನ್ನು ನಿಲ್ಲಿಸಿ ಚಿಕಿತ್ಸೆ ಕೈಗೊಂಡ ನಂತರ ಮೂತ್ರದಲ್ಲಿ ಪ್ರೋಟೀನ್ ಪ್ರಮಾಣ ಕಡಿಮೆಯಾಗಿ, ರೋಗ ತಹಬಂದಿಗೆ ಬರುತ್ತದೆ.

ಕೂದಲು ನೇರಪಡಿಸುವಿಕೆ ತರಬಹುದು ಅಪಾಯ:

ಇತ್ತೀಚೆಗೆ ಗುಂಗುರು ಕೂದಲನ್ನು ನೇರಪಡಿಸಿಕೊಳ್ಳುವುದು ಯುವತಿಯರಲ್ಲಿ ಹೆಚ್ಚಿರುವ ಗೀಳು. ಅಂತಹ ಪ್ರಕ್ರಿಯೆಯಲ್ಲಿ ಬಳಸಲಾಗುವ ರಾಸಾಯನಿಕಗಳಲ್ಲಿ ‘ಗ್ಲೈಆಕ್ಸಾಲಿಕ್ ಆಮ್ಲ’ ಎನ್ನುವ ವಸ್ತುವನ್ನು ಬಳಸುತ್ತಾರೆ. ಅವುಗಳ ಉಪಯೋಗದ ನಂತರ ಕೆಲವರಿಗೆ ಕಿಡ್ನಿ ವೈಫಲ್ಯವಾದ ಬಗ್ಗೆ ವಿಜ್ಞಾನಿಗಳು ವರದಿ ಮಾಡಿದ್ದಾರೆ. ಆಕ್ಸಲೇಟ್ ಹರಳುಗಳು ಕಿಡ್ನಿಯಲ್ಲಿ ಸಾಂದ್ರಗೊಂಡು, ಅವುಗಳ ಜೀವಕೋಶಗಳಿಗೆ ಹಾನಿ ಮಾಡುವುದನ್ನು ಅವರು ಕಂಡು ಹಿಡಿದಿದ್ದಾರೆ . ಇದು ಹೆಚ್ಚಾಗಿ ತಾತ್ಕಾಲಿಕ ವೈಫಲ್ಯವಾಗಿದ್ದರೂ , ಕೆಲವೊಮ್ಮೆ ಕಿಡ್ನಿ ಸಹಜಸ್ಥಿತಿ ಮರಳದೆ ಖಾಯಂ ತೊಂದರೆಯೂ ಆಗಬಹುದು.

ಕೃತಕ ಬಣ್ಣಗಳು:

ಕೂದಲಿಗೆ ಹಚ್ಚುವ ಕೃತಕ ಬಣ್ಣ , ಉಗುರಿಗೆ ಬಣ್ಣ ಹಚ್ಚುವ, ಬಣ್ಣ ತೆಗ್ಗೆಯುವ ದ್ರವಗಳಲ್ಲಿ ಇರುವ ‘ಥಾಲೆಟ್’ (Phthalate), ಫಿನಾಲ್ ಮುಂತಾದ ರಾಸಾಯನಿಕ ವಸ್ತುಗಳು ಕಿಡ್ನಿಗೆ ಮಾರಕವಾಗಬಲ್ಲುದು. ಅದರಲ್ಲೂ ಮೊದಲೇ ಅಲ್ಪ ಪ್ರಮಾಣದ ಕಿಡ್ನಿ ತೊಂದರೆ ಇದ್ದಲ್ಲಿ ಅಂತಹವರಿಗೆ ಈ ತರಹದ ವೈಪರೀತ್ಯಗಳು ಬೇಗನೇ ಆಗಬಹುದು.

ಸೌಂದರ್ಯವರ್ಧಕಗಳನ್ನು ಬಳಸುವುದನ್ನು ಪ್ರಾಯಶಃ ಯಾರೂ ಬಿಡಲಾರರು. ಆದರೂ ನಾವು ಅವುಗಳನ್ನು ಮಿತವಾಗಿ ಬಳಸುವುದು ನಮ್ಮ ಕೈಯಲ್ಲಿದೆ. ಅದರಲ್ಲಿರುವ ಸಾಮಗ್ರಿಗಳನ್ನು ಪಟ್ಟಿ ಮಾಡಿದ್ದಾರೆಯೇ ಎಂದು ಯಾವುದೇ ಸೌಂದರ್ಯ ಪ್ರಸಾಧನಗಳನ್ನು ಕೊಳ್ಳುವ ಮೊದಲು ಲೇಬಲ್ ಪರೀಕ್ಷಿಸುವುದನ್ನು ನಾವು ಅಭ್ಯಾಸ ಮಾಡಿಕೊಳ್ಳಬೇಕು. ಯಾವ ಸಾಮಗ್ರಿಯಿಂದ ಏನಾಗುತ್ತದೆ ಎಂದು ಸಾಮಾನ್ಯರಿಗೆ ಹೇಗೆ ತಿಳಿಯಬಹುದು ಎಂಬ ಅನುಮಾನ ಸಾಧುವೇ. ಆದರೂ ಹಾಗೆ ಲೇಬಲ್ ಪರೀಕ್ಷಿಸುವ ಅಭ್ಯಾಸ ಇದ್ದರೆ ಒಳಿತು. ಸಾಮಾನ್ಯವಾಗಿ ಹಾನಿಕಾರಕ ಕೆಮಿಕಲ್ ಬಳಸಿರುವ ಅಗ್ಗದ ಪ್ರಸಾಧನಗಳ ಮೇಲೆ ಲೇಬಲ್ಗಳೇ ಇರುವುದಿಲ್ಲ. ಇಂತಹ ಸಾಮಗ್ರಿಗಳನ್ನು ಕೊಳ್ಳುವುದು ಬೇಡ. ನಮ್ಮ ಸೌಂದರ್ಯದ ಬಗ್ಗೆ ನಮಗಿರುವ ಕೀಳರಿಮೆ, ಸಮಾಜಕ್ಕೆ ಗೌರವರ್ಣದ ಬಗ್ಗೆ ಇರುವ ಮೋಹ, ನಮ್ಮ ಸಹವರ್ತಿಗಳ ಮಧ್ಯೆ ನಾವು ಎದ್ದು ಕಾಣಬೇಕೆಂಬ ಹಂಬಲ ಇವೇ ಮುಂತಾದ ವ್ಯಾಮೋಹಕ್ಕೆ ನಾವೇ ತಡೆ ಒಡ್ಡಬೇಕಾಗಿದೆ. ದೈವದತ್ತ ಸೌಂದರ್ಯವನ್ನು ಪ್ರಕಾಶಿಸುವಂತೆ ಮಾಡಲು ರಾಸಾಯನಿಕಗಳ ಮೊರೆ ಹೋಗಬೇಕಿಲ್ಲ; ತಮ್ಮ ರೂಪದ ಬಗ್ಗೆ ಕೀಳರಿಮೆ ಇರಿಸಿಕೊಳ್ಳದೆ, ಅನಗತ್ಯ ಸೌಂದರ್ಯವರ್ಧನೆಯ ಬಗ್ಗೆ ಮಾರುಹೋಗದೆ, ಆದಷ್ಟು ತಮ್ಮ ಸಾಧನೆಯ ಮೂಲಕ ಪ್ರಕಾಶಿಸುವುದು ಒಳಿತೆಂದು ಯುವಜನತೆಗೆ ಅರಿವಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.