ಶನಿವಾರ, ಮೇ 15, 2021
24 °C

ಕೋವಿಡ್: ಮನೆಯಲ್ಲೇ ಚಿಕಿತ್ಸೆ, ದೇಹದ ಆಮ್ಲಜನಕ ಹೆಚ್ಚಿಸಿಕೊಳ್ಳಲು ಇಲ್ಲಿವೆ ಟಿಪ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿದ್ದು, ವೈದ್ಯಕೀಯ ಆಮ್ಲಜನಕದ ಅಗತ್ಯತೆಯೂ ಹೆಚ್ಚಾಗಿದೆ. ಇಂಥ ಸಂದರ್ಭದಲ್ಲಿ, ಮನೆಯಲ್ಲೇ ಪ್ರತ್ಯೇಕ ವಾಸದಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿರುವ ಕೋವಿಡ್–19 ಸೋಂಕಿತರ ದೇಹದಲ್ಲಿ ಸಹಜವಾಗಿ ಆಮ್ಲಜನಕ ಹೆಚ್ಚಿಸಿಕೊಳ್ಳಲು ಕೇಂದ್ರ ಆರೋಗ್ಯ ಸಚಿವಾಲಯ ಕೆಲವು ಸಲಹೆಗಳನ್ನು ನೀಡಿದೆ.

‘ಕೋವಿಡ್–19, ಪ್ರೋನಿಂಗ್ ಫಾರ್ ಸೆಲ್ಫ್‌ ಕೇರ್’ ಎಂಬ ಶೀರ್ಷಿಕೆಯೊಂದಿಗೆ ‘ಪ್ರೋನಿಂಗ್ (ಬೋರಲಾಗಿ ಮಲಗುವ ವಿಧಾನ)’ ಮೂಲಕ ಸೋಂಕಿತರಲ್ಲಿ ಆಮ್ಲಜನಕವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬ ಬಗ್ಗೆ ಮಾಹಿತಿ ನೀಡಿದೆ.

ತಜ್ಞರ ಸಲಹೆ ಆಧರಿಸಿ ಸಿದ್ಧಪಡಿಸಲಾಗಿರುವ ಸಲಹೆಗಳನ್ನು ಸಚಿವಾಲಯ ಟ್ವೀಟ್ ಮಾಡಿದ್ದು, ಅವುಗಳನ್ನು ಇಲ್ಲಿ ನೀಡಲಾಗಿದೆ.

ದೇಹದಲ್ಲಿ ಆಮ್ಲಜನಕ ಹೆಚ್ಚಿಸಲು ‘ಪ್ರೋನಿಂಗ್’

* ಪ್ರೋನಿಂಗ್ ಎಂದರೆ ರೋಗಿಯನ್ನು ಬೋರಲಾಗಿ ಮಲಗಿಸುವ ಪ್ರಕ್ರಿಯೆ. ಈ ವಿಧಾನದಲ್ಲಿ ಸೋಂಕಿತರನ್ನು ನಿಖರವಾಗಿ, ಸುರಕ್ಷಿತವಾಗಿ ಹಾಗೂ ನಿಧಾನವಾಗಿ ಮುಖ ಕೆಳಗೆ ಮಾಡಿ ಹೊಟ್ಟೆಯ ಮೇಲೆ ಮಲಗುವಂತೆ ಮಾಡಲಾಗುತ್ತದೆ.

* ಉಸಿರಾಟ ಸುಧಾರಿಸಲು ಮತ್ತು ಆಮ್ಲಜನಕ ಹೆಚ್ಚಿಸಿಕೊಳ್ಳಲು ವೈದ್ಯಕೀಯ ಕ್ಷೇತ್ರದಲ್ಲಿ ಅನುಮೋದಿತ ವಿಧಾನವಿದು.

ಓದಿ: 

* ಇದು ಕೋವಿಡ್–19 ಸೋಂಕಿತರಿಗೆ ಉಸಿರಾಟ ಸುಧಾರಿಸಲು ಬಹಳಷ್ಟು ಪ್ರಯೋಜನಕಾರಿಯಾಗಿದೆ. ವಿಶೇಷವಾಗಿ ಮನೆಯಲ್ಲೇ ಪ್ರತ್ಯೇಕವಾಸದಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ ಹೆಚ್ಚಿನ ನೆರವಾಗಲಿದೆ.

ಮಹತ್ವವೇನು?

* ಬೋರಲಾಗಿ ಮಲಗುವ ವಿಧಾನ ಅನುಸರಿಸುವುದರಿಂದ ಉಸಿರಾಟ ಸುಗಮವಾಗಲು, ಶ್ವಾಸಕೋಶಕ್ಕೆ ಗಾಳಿಯ ಸಂಚಾರ ಸಲೀಸಾಗಲು ನೆರವಾಗುತ್ತದೆ.

* ಸೋಂಕಿತರು ಉಸಿರಾಡಲು ಕಷ್ಟಪಡುತ್ತಿದ್ದರೆ ಮತ್ತು ಅವರ ದೇಹದ ಆಮ್ಲಜನಕದ ಪ್ರಮಾಣ 94ಕ್ಕಿಂತ ಕಡಿಮೆ ಇದ್ದರೆ ಈ ವಿಧಾನ ಅನುಸರಿಸಬೇಕು.

ಓದಿ: 

* ಈ ವಿಧಾನ ಅನುಸರಿಸುವುದು ಮಾತ್ರವಲ್ಲದೆ, ಮನೆಯಲ್ಲೇ ಇದ್ದುಕೊಂಡು ಚಿಕಿತ್ಸೆ ಪಡೆಯುವ ವೇಳೆ ಆಮ್ಲಜನಕದ ಮಟ್ಟ, ರಕ್ತದಲ್ಲಿನ ಸಕ್ಕರೆ ಅಂಶ, ರಕ್ತದೊತ್ತಡವನ್ನು ನಿಯಮಿತವಾಗಿ ತಪಾಸಣೆ ನಡೆಸುತ್ತಿರುವುದು ಅತೀ ಅಗತ್ಯ

* ಸಮಯೋಚಿತವಾಗಿ ಬೋರಲು ಮಲಗುವ ವಿಧಾನ ಅನುಸರಿಸುವುದರಿಂದ ಅನೇಕ ಜೀವಗಳನ್ನು ಉಳಿಸುವುದು ಸಾಧ್ಯವಿದೆ.

ದಿಂಬಿನ ಸಹಾಯದಿಂದ ‘ಪ್ರೋನಿಂಗ್’

* ಒಂದು ದಿಂಬನ್ನು ಕತ್ತಿನ ಕೆಳಭಾಗದಲ್ಲಿ ಇರಿಸಬೇಕು.

* ಒಂದು ಅಥವಾ ಎರಡು ದಿಂಬುಗಳನ್ನು ಎದೆಯಿಂದ ಕೆಳಭಾಗದಲ್ಲಿ, ತೊಡೆಯಿಂದ ಮೇಲ್ಭಾಗದಲ್ಲಿ ಇರಿಸಬೇಕು (ಚಿತ್ರ ನೋಡಿ).

‘ಸ್ವಯಂ ಪ್ರೋನಿಂಗ್’

* ನಾಲ್ಕರಿಂದ ಐದು ದಿಂಬುಗಳನ್ನು ಬಳಸಿಕೊಳ್ಳಿ.

* ಮಲಗುವ ವಿಧಾನವನ್ನು ಆಗಾಗ ಬದಲಾಯಿಸುತ್ತಾ ಇರಿ (ಚಿತ್ರದಲ್ಲಿ ನೋಡಿ).

* 30 ನಿಮಿಷಗಳಿಗಿಂತ ಹೆಚ್ಚು ಕಾಲ ಒಂದೇ ಭಂಗಿಯಲ್ಲಿ ಮಲಗಬೇಡಿ.

ವಹಿಸಬೇಕಾದ ಮುನ್ನೆಚ್ಚರಿಕೆಗಳು

* ಊಟವಾದ ಒಂದು ಗಂಟೆವರೆಗೆ ಈ ವಿಧಾನ ಅನುಸರಿಸಬೇಡಿ.

* ಸಹಜವಾಗಿ ನಿಮಗೆ ಎಷ್ಟುಹೊತ್ತು ಹಾಗೆ ಮಲಗಲು ಸಾಧ್ಯವಿದೆಯೋ ಅಷ್ಟೇ ಹೊತ್ತು ಮಾಡಿ. ಬಲವಂತವಾಗಿ ಹೆಚ್ಚು ಹೊತ್ತು ಮಾಡಬಾರದು.

ಓದಿ: 

* ಹಲವು ತಾಸುಗಳ ವರೆಗೆ ಈ ವಿಧಾನ ಅನುಸರಿಸಬಹುದು. ಆದರೆ ಭಂಗಿಯನ್ನು ತುಸು ಬದಲಾಯಿಸುತ್ತಾ, ಸಹಜವಾಗಿ ಇರುವುದು ಮುಖ್ಯ.

* ಅನುಕೂಲಕ್ಕೆ ತಕ್ಕಂತೆ ದಿಂಬುಗಳ ಜಾಗವನ್ನು ತುಸು ಬದಲಾಯಿಸಿಕೊಳ್ಳಬಹುದು.

* ಗಾಯಗಳ ಮೇಲೆ, ವಿಶೇಷವಾಗಿ ಎಲುಬುಗಳ ಮೇಲೆ ಒತ್ತಡ ಬೀಳದಂತೆ ಗಮನಹರಿಸಿ.

ಯಾರೆಲ್ಲ ಮಾಡಬಾರದು?

* ಗರ್ಭಿಣಿಯರು.

* ರಕ್ತಹೆಪ್ಪುಗಟ್ಟುವಿಕೆಯಂತ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದವರು ಮಾಡಬಾರದು.

* ಹೃದಯದ ಸಮಸ್ಯೆ ಇರುವವರು.

* ಬೆನ್ನು ಮೂಳೆಯ ಸಮಸ್ಯೆ ಇರುವವರು, ಮೂಳೆ ಮುರಿತ, ಬಿರುಕು ಸಮಸ್ಯೆಗೆ ಒಳಗಾಗಿರುವವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು