ಬೀಜಿಂಗ್: ಚೀನಾದಲ್ಲಿ ಕೋವಿಡ್ ಸೋಂಕನ್ನೇ ಹೋಲುವ ಹೊಸ ಮಾದರಿಯ ವೈರಾಣು ಹ್ಯೂಮನ್ ಮೆಟಾನ್ಯೂಮೊವೈರಸ್ (HMPV) ವ್ಯಾಪಕವಾಗಿ ಹರಡುತ್ತಿದ್ದು, ರೋಗಿಗಳಿಂದ ಆಸ್ಪತ್ರೆಗಳಲ್ಲಿ ತುಂಬಿ ತುಳುಕುತ್ತಿವೆ. ಜತೆಗೆ ಸಾವಿನ ಸಂಖ್ಯೆ ಏರಿಕೆಯಾಗಿರುವುದರಿಂದ ಸ್ಮಶಾನಗಳೂ ಭರ್ತಿಯಾಗಿವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿದೆ.

ಜ್ವರ ಹಾಗೂ ಕೋವಿಡ್–19 ಸೋಂಕಿನ ಗುಣಲಕ್ಷಣದಂತೆಯೇ ಇರುವ ಈ ಹೊಸ ಮಾದರಿಯ ವೈರಾಣು ಎಲ್ಲಾ ವಯೋಮಾನದವರನ್ನೂ ಭಾದಿಸುವ ಲಕ್ಷಣ ಹೊಂದಿದೆ. ಆದಾಗ್ಯೂ, ಇದು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬಂದಿದೆ. ಸದ್ಯಕ್ಕೆ HMPVಗೆ ಯಾವುದೇ ಲಸಿಕೆ ಇಲ್ಲ.

ಈ ವೈರಾಣು 2001ರಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಆದರೂ, ಇದು ಇದ್ದು ಸುಮಾರು 60 ವರ್ಷಗಳಾಗಿವೆ ಎಂದು ವೈರಾಣು ತಜ್ಞರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಚೀನಾದಲ್ಲಿನ ಈ ಕಳವಳಕಾರಿ ಬೆಳವಣಿಗೆಯನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. ಮುಂಜಾಗ್ರತೆ ವಹಿಸುವಂತೆ ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ. ನ್ಯುಮೋನಿಯಾ ನಿರ್ವಹಣೆಗೆ ಪೈಲೆಟ್ ನಿರ್ವಹಣಾ ವ್ಯವಸ್ಥೆಯನ್ನು ಚೀನಾ ಜಾರಿಗೆ ತಂದಿದೆ.

ಚಳಿಗಾಲದಲ್ಲಿ ಉಸಿರಾಟ ಸಂಬಂಧಿತ ಕಾಯಿಲೆಗಳು ಹೆಚ್ಚಾಗಿ ಕಂಡುಬರುವುದರಿಂದ ಹಾಗೂ ಇದೇ ಸಂದರ್ಭದಲ್ಲಿ ಸೋಂಕು ಹರಡುವ ವೈರಾಣು ಪತ್ತೆಯಾಗಿರುವುದು ಇನ್ನಷ್ಟು ಆತಂಕ ಮೂಡಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
.ಚೀನಾದಲ್ಲಿ Covid ಮಾದರಿಯ ವೈರಸ್ ಪತ್ತೆ; ಮಾಸ್ಕ್ ಧರಿಸಿ ಜನರ ಓಡಾಟ: ರವಿ ಗಣಿಗ .
ಆದರೆ ಈವರೆಗೂ ಚೀನಾದ ಅಧಿಕಾರಿಗಳಾಗಲೀ ಅಥವಾ ವಿಶ್ವ ಆರೋಗ್ಯ ಸಂಸ್ಥೆಯಾಗಲೀ ತುರ್ತು ಪರಿಸ್ಥಿತಿ ಘೋಷಿಸಿಲ್ಲ. ಆದರೆ ಚೀನಾದ ರೋಗ ನಿಯಂತ್ರಣ ಕೇಂದ್ರವು ಸೋಂಕು ಇರುವುದನ್ನು ಖಚಿತಪಡಿಸಿದ್ದು, ಇದು ಉತ್ತರ ಚೀನಾದಲ್ಲಿ ವ್ಯಾಪಿಸಿದೆ. ಪರಿಸ್ಥಿತಿ ಹದಗೆಟ್ಟಿದೆ ಎಂದಿದೆ. 14 ವರ್ಷದೊಳಗಿನ ಮಕ್ಕಳಲ್ಲಿ ಇದು ಹೆಚ್ಚಾಗಿ ಭಾದಿಸಿದೆ ಎಂದೂ ಅದು ಹೇಳಿದೆ.

ಪ್ರಾಥಮಿಕವಾಗಿ ಮಕ್ಕಳು, ವಯಸ್ಸಾದವರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರನ್ನು ಈ ವೈರಾಣು ಭಾದಿಸಲಿದೆ. ಶೀತ, ಕೆಮ್ಮು ಹಾಗೂ ಜ್ವರದ ಲಕ್ಷಣ ಇದರದ್ದು. ಜತೆಗೆ ಮೂಗು ಕಟ್ಟುವುದು, ಉಸಿರಾಟದ ಸಮಸ್ಯೆ ಎದುರಾಗುವುದು ಪ್ರಮುಖ ಗುಣಲಕ್ಷಣಗಳು ಎಂದೆನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.