ಮಧುಮೇಹ ಇರುವವರು ಯಾವ ಹಣ್ಣುಗಳನ್ನು ಸೇವಿಸಬೇಕು, ಯಾವುದನ್ನು ಸೇವಿಸಬಾರದು ಎಂಬ ಗೊಂದಲಗಳಿರುತ್ತವೆ. ಕೆಲವು ಹಣ್ಣುಗಳು ಫೈಬರ್, ವಿಟಮಿನ್ಗಳಿಂದ ಸಮೃದ್ದವಾಗಿರುತ್ತವೆ. ಮಧುಮೇಹ ಇರುವವರು ಯಾವ ಹಣ್ಣುಗಳನ್ನು ಸೇವಿಸಬಾರದು ಎಂಬುದನ್ನು ಆಹಾರ ಮತ್ತು ಪೌಷ್ಟಿಕಾಂಶ ತಜ್ಷೆ ಡಾ. ಭಾರತಿ ಕುಮಾರ್ ತಿಳಿಸಿದ್ದಾರೆ.

ಮಧುಮೇಹ ರೋಗಿಗಳು ತಿನ್ನಬಾರದ ಹಣ್ಣುಗಳಿವು.

ಹೆಚ್ಚಿನ ಹಣ್ಣುಗಳು ನೈಸರ್ಗಿಕ ಸಕ್ಕರೆಯನ್ನು ಹೊಂದಿದ್ದು, ಇವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತೀವ್ರವಾಗಿ ಹೆಚ್ಚಿಸಬಹುದು. ಆದ್ದರಿಂದ ಕೆಲವು ಹಣ್ಣುಗಳನ್ನು ಸೇವಿಸಬಾರದು ಎಂದು ವೈದ್ಯರು ಹೇಳುತ್ತಾರೆ.

ಮಾಗಿದ ಬಾಳೆಹಣ್ಣು: ಬಾಳೆಹಣ್ಣು ಹೆಚ್ಚು ಹಣ್ಣಾಗುತ್ತಿದ್ದಂತೆ ಸಕ್ಕರೆ ಪ್ರಮಾಣ ಕೂಡ ಹೆಚ್ಚಾಗುತ್ತದೆ.

ಮಾವಿನ ಹಣ್ಣು: ಪೌಷ್ಟಿಕಾಂಶಗಳಿಗೆ ಉತ್ತಮವಾದ ಹಣ್ಣಾದರೂ, ನೈಸರ್ಗಿಕ ಸಕ್ಕರೆಯ ಪ್ರಮಾಣ ಹೆಚ್ಚಿರುತ್ತದೆ. ಆದ್ದರಿಂದ ಈ ಹಣ್ಣನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.

ಸೀತಾಫಲ ಮತ್ತು ಸಪೋಟ: ಈ ಹಣ್ಣು ಹೆಚ್ಚು ಸಿಹಿಯಾದ ಕಾರಣ ಮಧುಮೇಹ ಇರುವವರು ಸೇವಿಸದಿರುವುದು ಉತ್ತಮ.

ದ್ರಾಕ್ಷಿ: ದ್ರಾಕ್ಷಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ತ್ವರಿತವಾಗಿ ಹೆಚ್ಚಾಗುತ್ತದೆ.

ಅನಾನಸ್ ಮತ್ತು ಹಲಸಿನ ಹಣ್ಣು: ಈ ಎರಡರಲ್ಲೂ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ಗಳು ಹೆಚ್ಚಾಗಿರುತ್ತವೆ. ಆದ್ದರಿಂದ ಮಧುಮೇಹಿಗಳು ಈ ಹಣ್ಣುಗಳನ್ನು ಸೇವಿಸಬಾರದು.

ಡ್ರೈ ಫ್ರೂಟ್ಸ್ (ಖರ್ಜೂರ, ಒಣದ್ರಾಕ್ಷಿ, ಅಂಜೂರ): ಡ್ರೈ ಫ್ರೂಟ್ಸ್ನಲ್ಲಿ ಸಕ್ಕರೆ ಸಾಂದ್ರೀಕೃತವಾಗಿರುವುದರಿಂದ ಗ್ಲೂಕೋಸ್ ಮಟ್ಟವನ್ನು ತ್ವರಿತವಾಗಿ ಏರಿಸುತ್ತದೆ.

ಹಣ್ಣುಗಳ ಸೇವನೆಗೆ ಕೆಲವು ಸಲಹೆಗಳು:

ಹಣ್ಣುಗಳನ್ನು ಸೇವಿಸುವಾಗ ಪ್ರೋಟೀನ್ ಅಥವಾ ಆರೋಗ್ಯಕರ ಕೊಬ್ಬಿನ ಮೂಲದೊಂದಿಗೆ (ಉದಾ: ಹುರಿದ ಬೀಜಗಳು ಅಥವಾ ಮೊಸರು) ಮಿಶ್ರಣ ಮಾಡಿ ಸೇವಿಸಿ.

ಹಣ್ಣುಗಳನ್ನು ಸ್ನ್ಯಾಕ್ಸ್ ರೀತಿ ಸೇವಿಸಿ. ಭೋಜನ ಮಾಡಿದ ತಕ್ಷಣ ತಿನ್ನಬೇಡಿ.

ವೈದ್ಯರು ಅಥವಾ ಆಹಾರ ತಜ್ಞರ ಸಲಹೆಯ ಪ್ರಕಾರ ಹಣ್ಣುಗಳನ್ನು ಪ್ರತಿದಿನ ಒಂದು ಅಥವಾ ಎರಡು ಮಾತ್ರ ಸೇವಿಸಬೇಕು.

ಬೇರೆ ಬೇರೆ ಹಣ್ಣುಗಳು ನಿಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿಯಲು ರಕ್ತದ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.