ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಕವನದಲ್ಲಿ ಇಕೊಥೆರಪಿ

Last Updated 4 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಚುಕ್‌ ಬುಕ್‌, ಚುಕ್‌ ಬುಕ್‌ ರೈಲು, ಅಮ್ಮ ಅವನು ಹೊಡೆದ, ನನಗೆ ತಿಂಡಿ ಬೇಕು. ಬಾರೋ ಆಟ ಆಡೋಣ ಎಂಬ ಮಾತುಗಳು ಕಿವಿಗೆ ಬೀಳುತ್ತಿದ್ದವು. 100 ರಿಂದ 150 ಮಂದಿ ಮಕ್ಕಳ ಗುಂಪು ಆವರಿಗೆ ತಮ್ಮ ಬಗ್ಗೆ ತಮಗೆ ಅರಿವಿಲ್ಲದೆ ತಮ್ಮದೇ ಲೋಕದಲ್ಲಿ ಮಗ್ನರಾಗಿದ್ದರು.
– ಇದು ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ಇಕೊಥೆರಪಿ ಕಾರ್ಯಾಗಾರದ ಚಿತ್ರಣ.

ಇಕೊಥೆರಪಿ ಎಂದರೆ: ಪ್ರಕೃತಿ ಮಡಿಲಿನಲ್ಲಿ ವಿಶೇಷ ಮಕ್ಕಳಿಗೆ ಎಲೆಗಳ ಬಗ್ಗೆ, ಸಸ್ಯಗಳ ಬಗ್ಗೆ, ಅವುಗಳ ಉಪಯೋಗವೇನು, ಯಾವ ರೀತಿಯ ಔಷಧೀಯ ಗುಣವಿದೆ. ಯಾವೆಲ್ಲಾ ಕಾಯಿಲೆಗಳಿಗೆ ಇದನ್ನು ಬಳಸುತ್ತಾರೆ ಎಂದೆಲ್ಲಾ ಪರಿಚಯ ಮಾಡಿಕೊಡುವುದಾಗಿದೆ. ಜೊತೆಗೆ ಸಂಗೀತ, ಯೋಗ, ನೃತ್ಯ, ಆಟ, ಕಥೆ ಹೇಳಿಸುವುದು ಹೀಗೆ ಚಟುವಟಿಕೆಗಳನ್ನು ಮಾಡಿಸುವುದೇ ಇಕೊಥೆರಪಿ ಕಾರ್ಯಾಗಾರ. ಮಕ್ಕಳಲ್ಲಿ ಮಾನಸಿಕ ಮತ್ತು ದೈಹಿಕವಾಗಿ ಸಬಲೀಕರಣ ಮಾಡುವುದೇ ಇದರ ಉದ್ದೇಶವಾಗಿದ್ದು ಬೆಂಗಳೂರು ಎನ್ವಿರಾನ್‌ಮೆಂಟ್‌ ಟ್ರಸ್ಟ್‌ ಸಹಯೋಗದಲ್ಲಿ ಜ್ಞಾನಭಾರತಿ ಆವರಣದ ಚರಕ ವನದಲ್ಲಿ ತಿಂಗಳ ಪ್ರತಿ ಮೂರನೇ ಶನಿವಾರ ಕಾರ್ಯಕ್ರಮ ಆಯೋಜಿಸಲಾಗುತ್ತದೆ.

ಕಾರ್ಯಾಗಾರದಲ್ಲಿ ಮಕ್ಕಳಿಗೆ ಕಥೆ ಹೇಳಲಾಗುತ್ತದೆ. ಅದೇ ಕಥೆಯನ್ನೇ ಅವರು ಮತ್ತೆ ಹೇಳಲು ಸ್ಪರ್ಧೆ ಆಯೋಜಿಸಲಾಗುತ್ತದೆ. ಮಕ್ಕಳಿಗೆ ಬಹುಮಾನವನ್ನೂ ನೀಡಲಾಗುತ್ತದೆ. ಮಕ್ಕಳು, ಭಾಷೆ ಹಾವಭಾವಗಳ ಮೂಲಕ ಕಥೆಯನ್ನು ಹೇಳಲು ಯತ್ನಿಸುತ್ತಾರೆ.

ಚರಕ ವನ: ಐದು ಸಾವಿರ ವರ್ಷಗಳ ಹಿಂದೆ ಚರಕಮುನಿಗಳು ಚರಕ ಸಂಹಿತೆಯ ಬಗ್ಗೆ ಹೇಳಿರುವಂತೆ ಆರ್ಯುವೇದಿಕ್‌ ಔಷಧೀಯ ಗುಣವನ್ನು ಹೊಂದಿರುವ 50 ಗಣಗಳ ಸಸ್ಯರಾಶಿಯ ವನವೇ ‘ಚರಕ ವನ’. ಒಂದೊಂದು ಗಣದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ 10 ಗಿಡಗಳನ್ನು ನೆಡಲಾಗಿದೆ. ಜೈವಿಕ ಉದ್ಯಾನವನ ರೂವಾರಿ, ಪರಿಸರತಜ್ಞ ಎ.ಎನ್‌. ಯಲ್ಲಪ್ಪರೆಡ್ಡಿಯವರು 15 ವರ್ಷಗಳ ಹಿಂದೆ ನಿರ್ಮಿಸಿದರು. ಅವರೇ ವಿಶೇಷ ಮಕ್ಕಳಿಗೆ ಕಾರ್ಯಾಗಾರವನ್ನೂ ಆಯೋಜಿಸಿತ್ತಿದ್ದಾರೆ.

ವಿಶೇಷ ಮಕ್ಕಳಿಗೆ ಪ್ರಕೃತಿಯನ್ನು ಪರಿಚಯಿಸ ಬೇಕೆಂದುಬೆಂಗಳೂರು ಎನ್ವಿರಾನ್‌ಮೆಂಟ್‌ ಟ್ರಸ್ಟ್‌ ಸಹಯೋಗದಲ್ಲಿ ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ 5 ಶಾಲೆಯ ಮಕ್ಕಳಿಗೆ ಈ ಕಾರ್ಯಾಗಾರವನ್ನು ಮಾಡಲಾಗುತ್ತದೆ.

ವರ್ಷಕ್ಕೆ ಒಂದು ಬಾರಿ ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌ಗಳಿಗೂ ಕರೆದುಕೊಂಡು ಹೋಗಿ ಅಲ್ಲಿನ ಹೂ, ಗಿಡಗಳನ್ನು ಪರಿಚಯಿಸುತ್ತಾರೆ. ನೂರು ದೇವಸ್ಥಾನಗಳಿಗೆ ಹೋದರೆ ಸಿಗದ ನೆಮ್ಮದಿ ಈ ಮಕ್ಕಳ ನಗು, ಮಾತುಗಳಿಂದ ಸಿಗುತ್ತದೆ ಎಂದು ತಿಳಿಸಿದರು.

ಶಾಲೆಗಳು: ಚೆನ್ನೇನಹಳ್ಳಿ ಸೃಷ್ಟಿ ಆಕಾಡೆಮಿ, ಪ್ರಕೃತಿ ವಿಶೇಷ ಮಕ್ಕಳ ಶಾಲೆ, ಅರುಣ್‌ ವಿಶೇಷ ಶಾಲೆ, ವಿಜಯನಗರ, ನಚಿಕೇತ ಮನೋವಿಕಾಸ ಕೇಂದ್ರ ವಿಜಯನಗರ, ನವೋದಯ ವಿಶೇಷ ಮಕ್ಕಳ ಶಾಲೆ ಈ ಐದು ಶಾಲಾ ಮಕ್ಕಳು ಬಾರಿ ಕಾರ್ಯಗಾರದಲ್ಲಿ ಪಾಲ್ಗೊಳ್ಳುತ್ತಿವೆ.

ಕಾರ್ಯಾಗಾರದಲ್ಲಿನ ವ್ಯವಸ್ಥೆ: ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಕಾರ್ಯಕ್ರಮವು ನಡೆಯು ತ್ತಿದ್ದು. ಬೆಳಗ್ಗೆ ತಿಂಡಿ, ಬಾದಾಮಿ ಹಾಲು, ಮಕ್ಕಳಿಗೆ ಊಟ ನೀಡಲಾಗುತ್ತದೆ. ಮಕ್ಕಳು ನಡೆದು ಬರಲು ರಸ್ತೆ ನಿರ್ಮಾಣ ಮಾಡಲಾಗಿದೆ. ಶೌಚಾಲಯ ವ್ಯವಸ್ಥೆ ಇದೆ. ಮಕ್ಕಳು ನೃತ್ಯ ಅಥವಾ ಕಾರ್ಯಕ್ರಮವನ್ನು ಮಾಡಲು ಮಣ್ಣಿನಲ್ಲಿಯೇ ದಿಬ್ಬದ ರೀತಿಯಲ್ಲಿ ವೇದಿಕೆಯನ್ನು ನಿರ್ಮಿಸಲಾಗಿದೆ.

ಪ್ರಕೃತಿಯ ವಾತಾವರಣದಲ್ಲಿ ಮಕ್ಕಳು ತುಂಬಾ ಖುಷಿಯಿಂದ ಪಾಲ್ಗೊಳ್ಳುತ್ತಾರೆ. ಇಲ್ಲಿ ಕಲಿತ ಆಟ ಪಾಠಗಳನ್ನು ತಮ್ಮ ಮನೆಯಲ್ಲಿ ಮಾಡುತ್ತಾರೆ. ಇತರ ಮಕ್ಕಳೊಂದಿಗೆ ಬೆರೆಯುತ್ತಾರೆ, ತುಂಬಾ ಬದಲಾವಣೆಗಳು ಕಾಣುತ್ತಿವೆ ಎಂಬುದು ಅನೇಕ ಪೋಷಕರ ಮಾತಾಗಿದೆ.

ಕಾರ್ಯಚಟುವಟಿಕೆಗಳಲ್ಲಿ ಮಗ್ನರಾಗಿರುವ ಮಕ್ಕಳು
ಕಾರ್ಯಚಟುವಟಿಕೆಗಳಲ್ಲಿ ಮಗ್ನರಾಗಿರುವ ಮಕ್ಕಳು

***

ಎಕೋಥೆರಪಿ ಕಾರ್ಯಕ್ರಮದಿಂದ ಮಕ್ಕಳಲ್ಲಿ ಬದಲಾವಣೆಯಾಗಿದೆ. ನಮ್ಮ ಶಾಲೆಯ ಉದ್ಯಾನದಲ್ಲಿನ ಹಣ್ಣಿನ ಗಿಡಗಳನ್ನು ಗುರುತಿಸಲಾರಂಭಿಸಿದ್ದಾರೆ. ಮಕ್ಕಳ ಹಾವಭಾವದಲ್ಲಿ ಬದಲಾವಣೆಯಾಗಿದೆ. ಮಾತಿನ ಮೂಲಕ ಹೇಳದಿದ್ದರೂ ಅವರ ಭಾಷೆಯಲ್ಲಿ ಸನ್ನೆಗಳ ಮೂಲಕ ತಿಳಿಸುತ್ತಾರೆ.
– ನರಸಿಂಹ ಶಣೈ, ನಚಿಕೇತ ಮನೋ ವಿಕಾಸ ಶಾಲೆಯ ಶಿಕ್ಷಕ

ಮಗಳು ಏನೂ ತಿಳಿಯದೆ ಇರುವಳು ಎಕೋಥೆರಪಿ ಕಾರ್ಯಗಾರದಲ್ಲಿ ಭಾಗವಹಿಸಿದ ಮೇಲೆ ಅಲ್ಲಿ ಮಾಡಿಸುವ ಚಟುವಟಿಕೆಗಳ ಬಗ್ಗೆ ಮನೆಯಲ್ಲಿಯೂ ಮಾತನಾಡುತ್ತಾಳೆ ಇದು ಅವಳಲ್ಲಿನ ಮಹತ್ವದ ಬದಲಾವಣೆ
– ಜಯರಾಮ್‌ ಪೂರ್ಣ, ಪೋಷಕರು

ನಮ್ಮ ಮಗುವನ್ನು ಎಂದೂ ಹೊರಗಡೆ ಕರೆದುಕೊಂಡು ಹೋಗುತ್ತಿರಲಿಲ್ಲ. ಎಕೋಥೆರಪಿ ಕಾರ್ಯಕ್ರಮಕ್ಕೆ ಹೋದಾಗಿನಿಂದ ಹೊರಗಿನ ಪ್ರಪಂಚ ತಿಳಿದಿದೆ. ಈಗ ಬೇಗ ಎದ್ದೇಳುತ್ತಾನೆ, ಭಾಷಣ ಮಾಡುತ್ತಾನೆ,ಆತ ಹತ್ತು ನಿಮಿಷ ಎಲ್ಲೂ ನಿಲ್ಲುತಿರಲಿಲ್ಲ, ಈಗ ಅರ್ಧ ಗಂಟೆಯಾದರೂ ಕೂತಿರುತ್ತಾನೆ, ಗಿಡ ಮರ ಹತ್ತುತ್ತಾನೆ ಇದೆಲ್ಲಾ ಇವನಲ್ಲಿ ಕಂಡ ಬದಲಾವಣೆಯಾಗಿದ್ದು ತುಂಬಾ ಸಂತಸವಾಗಿದೆ.
– ಲಲಿತ, ಪೋಷಕರು

ವಿಶೇಷ ಮಕ್ಕಳ ಶಾಲೆಗಳನ್ನು ಗುರುತಿಸಿ ಮಕ್ಕಳಿಗೆ ಕಾರ್ಯಗಾರವನ್ನು ನಡೆಸುತ್ತಿದ್ದೇವೆ. ಇದರಿಂದ ತುಂಬಾ ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ ಇದೇ ಸಂತಸ.
– ಸದಾನಂದ ಹೆಗಡೆ, ಬೆಂಗಳೂರು ಎನ್ವಿರಾನ್‌ಮೆಂಟ್‌ ಟ್ರಸ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT