ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಸ್‌ ಲೋಡ್‌ ಕಡಿಮೆ ಮಾಡಲು ತುರ್ತು ಚಿಕಿತ್ಸೆ ಅಗತ್ಯ: ವೈದ್ಯರ ಅಭಿಮತ

Last Updated 5 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಲಕ್ಷಣಗಳಿರಲಿ, ಬಿಡಲಿ ತಕ್ಷಣ ತಪಾಸಣೆ ಮಾಡಿಸುವುದು ಮುಖ್ಯ. ನಿರ್ಲಕ್ಷ್ಯ ಮಾಡುವುದು ಸಲ್ಲ. ಲಕ್ಷಣಗಳಿದ್ದರಂತೂ ಅಂದರೆ ಕೆಮ್ಮು, ಸೀನು, ಜ್ವರ ಏನೇ ಇದ್ದರೂ ಕೆಮ್ಮುವುದರಿಂದ, ಸೀನುವುದರಿಂದ ಮಾತನಾಡುವುದರಿಂದ, ನಗುವುದರಿಂದ ಪಕ್ಕದವರಿಗೆ ಹರಡುತ್ತದೆ.

ಲಕ್ಷಣರಹಿತ ಕೋವಿಡ್‌ನಲ್ಲಿ ಬೇರೆಯವರಿಗೆ ಹರಡುವುದು ಕಡಿಮೆ. ಈ ಬಗ್ಗೆ ಅಧ್ಯಯನ ನಡೆದಿದ್ದು, ಅಧ್ಯಯನ ವರದಿಯಲ್ಲೂ ಕೂಡ ಲಕ್ಷಣರಹಿತರಿಂದ ಸೋಂಕು ಹರಡುವಿಕೆ ತೀರಾ ಕಮ್ಮಿ ಎಂಬುದು ಗೊತ್ತಾಗಿದೆ. ಆದರೆ ಸೋಂಕು ಹರಡುವಿಕೆ ತಡೆಯಲು ತಪಾಸಣೆ ಮುಖ್ಯ ಎನ್ನುತ್ತಾರೆ ಬೆಂಗಳೂರಿನ ಇಸಿಐಸಿ ವೈದ್ಯಕೀಯ ಕಾಲೇಜಿನ ಡಾ. ವೇದಶ್ರೀ ಕೆ.ಜೆ.

ಶುರುವಿನಲ್ಲಿ ವೋಕಲ್‌ ಕಾರ್ಡ್ಸ್‌ಗಿಂತ ಮೇಲ್ಗಡೆ ಅಂದರೆ ಗಂಟಲಿನವರಿಗೆ (ಅಪ್ಪರ್‌ ರೆಸ್ಪರೇಟರಿ ಟ್ರ್ಯಾಕ್‌) ಸೋಂಕು ಇರುತ್ತದೆ. ಅಂದರೆ ನೆಗಡಿ, ಕೆಮ್ಮು ಈ ತರಹ ಇರುತ್ತದೆ. ತಕ್ಷಣ ತಪಾಸಣೆ ಮಾಡಿ ಚಿಕಿತ್ಸೆ ನೀಡದಿದ್ದರೆ ಸೋಂಕು ಶ್ವಾಸಕೋಶಕ್ಕೆ ಹರಡುತ್ತದೆ. ಅಂದರೆ ಲೋವರ್‌ ರೆಸ್ಪರೇಟರಿ ಟ್ರ್ಯಾಕ್‌ಗೆ ಸೋಂಕಾಗುತ್ತದೆ. ಇದಕ್ಕೆ ಎಆರ್‌ಡಿಎಸ್‌ (ಎಕ್ಯೂಟ್‌ ರೆಸ್ಪರೆಟರಿ ಡಿಸ್ಟ್ರೆಸ್‌ ಸಿಂಡ್ರೋಮ್‌) ಎನ್ನುತ್ತೇವೆ. ನ್ಯುಮೋನಿಯ ಲಕ್ಷಣ ಕಾಣಸಿಕೊಳ್ಲುತ್ತದೆ. ಹಾಗಾದಾಗ ಉಸಿರಾಟದ ತೊಂದರೆಯಾಗಿ ವೆಂಟಿಲೇಟರ್‌ ಸಹಾಯ ಬೇಕಾಗಬಹುದು. ರೋಗಿಯ ಸ್ಥಿತಿ ಇನ್ನಷ್ಟು ಹದಗೆಡಲು ಶುರುವಾಗುತ್ತದೆ. ಹೀಗಾಗಿ ಬೇಗ ತಪಾಸಣೆಯನ್ನು ಮಾಡಬೇಕಾಗುತ್ತದೆ.

ಕರ್ನಾಟಕದಲ್ಲಿ ಮುಖ್ಯವಾಗಿ ಎರಡು ಬಗೆಯ ಕೋವಿಡ್‌ ಪರೀಕ್ಷೆಗಳಿವೆ. ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ಮತ್ತು ಆರ್‌ಟಿಪಿಸಿಆರ್‌ ಪರೀಕ್ಷೆ.

ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ 15–20 ನಿಮಿಷದಲ್ಲಿ ಫಲಿತಾಂಶ ಬರುತ್ತದೆ. ಇದು ಹೆಚ್ಚು ನಂಬಲರ್ಹವಲ್ಲ. ಈ ಪರೀಕ್ಷೆ ಮಾಡಿದಾಗ ಹೆಚ್ಚಿನವರಿಗೆ ನೆಗೆಟಿವ್‌ ಬರುತ್ತದೆ. ಆದರೆ ಆರ್‌ಟಿಪಿಸಿಆರ್‌ (ರಿಯಲ್‌ ಟೈಮ್‌ ಪಾಲಿಮರಿಕ್‌ ಚೈನ್ ರಿಯಾಕ್ಷನ್‌) ಮಾಡಿದಾಗ ಪಾಸಿಟಿವ್‌ ಬರುವ ಸಂಭವ ಜಾಸ್ತಿ. ಅಂದರೆ ಶೇ 80–85 ಸೆನ್ಸಿಟಿವಿಟಿ ಇರುತ್ತದೆ. ಅಂದರೆ ಶೇ 85 ಜನರಲ್ಲಿ ಪಾಸಿಟಿವ್‌ ಬಂದರೆ ಅಷ್ಟೂ ಮಂದಿಗೆ ಪಾಸಿಟಿವ್‌ ಎಂದೇ ಅರ್ಥ. ಅಂದರೆ ಅವರ ದೇಹದಲ್ಲಿ ವೈರಸ್‌ ಇರುತ್ತದೆ. ಅದು ಆರ್‌ಎನ್‌ಎ ಯನ್ನು ಪತ್ತೆ ಮಾಡುತ್ತದೆ. ಈ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದರೆ ನೆಗೆಟಿವ್‌ ಎಂದುಕೊಳ್ಳಬಹುದು.

ಕೆಲವು ಪ್ರಕರಣಗಳಲ್ಲಿ ಆರ್‌ಟಿಪಿಸಿಆರ್‌ನಲ್ಲಿ ನೆಗೆಟಿವ್‌ ಬಂದು ಬೇರೆ ಎಲ್ಲಾ ಪ್ಯಾರಾಮೀಟರ್‌ ಅಂದರೆ ರಕ್ತದಲ್ಲಿ ವೈರಲ್‌ ಮಾರ್ಕರ್‌, ಸಿಬಿಸಿ (ಕಂಪ್ಲೀಟ್‌ ಬ್ಲಡ್‌ ಕೌಂಟ್‌) ಪರೀಕ್ಷಯಲ್ಲಿ ಸೋಂಕು ಅಂದರೆ ಲಿಂಪೋಸೈಟ್‌ ಜಾಸ್ತಿ ಇರಬಹುದು. ವೈರಲ್‌ ಮಾರ್ಕರ್‌– ಸಿಆರ್‌ಪಿ, ಸೀರಮ್‌ ಸೆರೆಟಿನ್‌, ಎಲ್‌ಡಿಎಚ್‌, ಡಿಡೈಮರ್‌ ಜಾಸ್ತಿ ಇದ್ದರೆ ಚಿಕಿತ್ಸೆ ಶುರು ಮಾಡಬೇಕು.

ಜೊತೆಗೆ ಎದೆಯ ಎಕ್ಸ್‌ರೇ ಮಾಡಿದಾಗ ಶ್ವಾಸಕೋಶದಲ್ಲಿ ಪ್ಯಾಚಸ್‌ ಇರುತ್ತೆ. ಸಿಟಿ ಸ್ಕ್ಯಾನ್‌ ಮಾಡಿದಾಗಲೂ ಫೈಂಡಿಂಗ್ಸ್‌ ಇರುತ್ತದೆ.

ಇದಲ್ಲದೇ ಆ್ಯಂಟಿ ಬಾಡಿ ಟೆಸ್ಟ್‌ ಮಾಡ್ತಾರೆ. ರೋಗ ಲಕ್ಷಣ ಇರುತ್ತದೆ. ಆದರೆ ಪರೀಕ್ಷೆ ಮಾಡಿದಾಗ ನೆಗೆಟಿವ್‌ ಬಂದಿರುತ್ತದೆ. ಯಾವುದೇ ಸೋಂಕು ಇದ್ದರೆ ದೇಹದಲ್ಲಿ ಆ್ಯಂಟಿ ಬಾಡಿ ಹುಟ್ಟಿಕೊಂಡಿರುತ್ತದೆ. ಹಾಗೆಯೇ ಕೋವಿಡ್‌ ಇದ್ದಾಗಲೂ ಈ ಆ್ಯಂಟಿ ಬಾಡಿ ಹುಟ್ಟಿಕೊಂಡಿರುತ್ತದೆ. ಆದರೆ ಈ ಪರೀಕ್ಷೆ ಮಾಡುವುದು ತುಂಬಾ ಅಪರೂಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT