ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕ್‌: ಕನ್ನಡಕ ಮಬ್ಬಾದರೆ ಏನು ಮಾಡಬೇಕು?

Last Updated 2 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಕೊರೊನಾ ಸೋಂಕಿನಿಂದ ಪಾರಾಗಲು ಮಾಸ್ಕ್‌ ಧರಿಸುವವರು ಕನ್ನಡಕ ಹಾಕಿದರೆ ಏನೇನು ಕಿರಿಕಿರಿ ಉಂಟಾಗುತ್ತದೆ ಎಂದು ಮತ್ತೆ ವಿವರಿಸುವ ಅಗತ್ಯವಿಲ್ಲ ಎನಿಸುತ್ತದೆ. ಮಾಸ್ಕ್‌ ಎಡೆಯಿಂದ ಮೂಗಿನ ಮೂಲಕ ಗಾಳಿ ಹೊರಹಾಕುವಾಗ ಬಿಸಿಯುಸಿರು ಕಣ್ಣಿನೆಡೆಗೆ ಸಾಗುತ್ತದೆ. ಇದರಿಂದ ಕನ್ನಡಕದ ಗಾಜಿನ ಮೇಲೆ ಮಬ್ಬು ಆವರಿಸಿ ಮುಂದಿರುವ ವಸ್ತುಗಳ ಕಾಣದೆ ಸಮಸ್ಯೆ ಉಂಟಾಗುವುದು ಸಹಜ. ಉಸಿರಿನ ಮೂಲಕ ಹೊರಹಾಕುವ ಗಾಳಿ ಹಾಗೂ ವಾತಾವರಣದ ಗಾಳಿಯ ಉಷ್ಣಾಂಶದಲ್ಲಿರುವ ವ್ಯತ್ಯಾಸ ಈ ಮಬ್ಬು ಆವರಿಸಲು ಕಾರಣ.

ಈ ಸಮಸ್ಯೆ ಪರಿಹಾರಕ್ಕೆ ಕೆಲವು ಸಲಹೆಗಳು ಇಲ್ಲಿವೆ.

* ಮೊದಲು ಸರಿಯಾದ ಅಳತೆಯ ಮಾಸ್ಕ್‌ ಧರಿಸುವುದು ಸೂಕ್ತ. ಹೊಂದಾಣಿಕೆ ಮಾಡುವಂತಹ ದಾರವಿರುವ ಮಾಸ್ಕ್‌ ಧರಿಸಿದರೆ ಕನ್ನಡಕದ ಗಾಜಿನತ್ತ ಹೋಗುವ ಗಾಳಿಯ ಪ್ರಮಾಣ ಕಡಿಮೆಯಾಗುತ್ತದೆ.

* ಮಾಸ್ಕ್‌ ಮೇಲ್ಭಾಗವನ್ನು ಸರ್ಜಿಕಲ್‌ ಟೇಪ್‌ ಬಳಸಿ ಮುಖಕ್ಕೆ ಅಂಟಿಸಿಕೊಳ್ಳುವುದರಿಂದಲೂ ಈ ಸಮಸ್ಯೆಯಿಂದ ಪಾರಾಗಬಹುದು. ಸಾಮಾನ್ಯವಾಗಿ ವೈದ್ಯರು ಸರ್ಜಿಕಲ್‌ ಮಾಸ್ಕ್‌ ಧರಿಸಿದಾಗ ಅದನ್ನು ಈ ರೀತಿ ಅಂಟಿಸಿಕೊಳ್ಳುವ ರೂಢಿ ಇಟ್ಟುಕೊಂಡಿರುತ್ತಾರೆ.

* ಕನ್ನಡಕದ ಗಾಜಿಗೆ ಬೇಬಿ ಶ್ಯಾಂಪೂ ಅಥವಾ ಕೈ ತೊಳೆಯುವ ಸೋಪ್‌ ದ್ರಾವಣವನ್ನು ಲೇಪಿಸಿದರೆ ಉಸಿರಿನಲ್ಲಿರುವ ತೇವಾಂಶ ಮಂಜಿಗೆ ತಿರುಗುವುದನ್ನು ತಪ್ಪಿಸಬಹುದು. ಒಂದು ಮೆತ್ತನೆಯ ಬಟ್ಟೆಗೆ ಈ ದ್ರಾವಣವನ್ನು ಹಾಕಿಕೊಂಡು ಗಾಜಿಗೆ ಸವರಬೇಕು.

* ಮಾರುಕಟ್ಟೆಯಲ್ಲಿ ಆ್ಯಂಟಿ– ಫಾಗ್‌ ಸ್ಪ್ರೇ ಕೂಡ ಲಭ್ಯ. ಆದರೆ ಆಲ್ಕೋಹಾಲ್ ಇರುವಂತಹ ಸ್ಪ್ರೇ ಬಳಸಬೇಡಿ. ಏಕೆಂದರೆ ಇದು ಗಾಜುಗಳ ಮೇಲಿನ ಕೋಟಿಂಗ್‌ ಅನ್ನು ಹಾಳುಗೆಡವುತ್ತದೆ. ಇಂತಹ ಮಾಸ್ಕ್‌ಗಳನ್ನು ಅಲರ್ಜಿ ತಡೆಗೂ ಬಳಸಬಹುದು.

* ಕೇವಲ ಕೋವಿಡ್‌ ವಿರುದ್ಧ ಮಾತ್ರವಲ್ಲ ಮಾಲಿನ್ಯವಿರುವ ಪ್ರದೇಶಗಳಲ್ಲಿ ವಾಹನದ ಹೊಗೆ, ದೂಳಿನಿಂದ ರಕ್ಷಣೆ ಪಡೆಯಲು ಇಂತಹ ಮಾಸ್ಕ್‌ಗಳನ್ನು ಧರಿಸುವವರು ಕನ್ನಡಕ ಮಬ್ಬಾಗದಿರದಂತೆ ನೋಡಿಕೊಳ್ಳಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT