ನನಗೆ ಕತ್ತಲೆಂದರೆ ವಿಪರೀತ ಭಯ. ಸದಾ ಬೆಳಕಿನಲ್ಲಿಯೇ ಇರಬೇಕು ಎನಿಸುತ್ತದೆ. ಕತ್ತಲು ನೋಡಿದ ತಕ್ಷಣ ಉಸಿರಾಟದ ಸಮಸ್ಯೆ ಎದುರಾಗುತ್ತದೆ. ರಾತ್ರಿ ಹೊತ್ತು ಲೈಟ್ ಹಾಕಿಕೊಂಡೇ ನಿದ್ರೆ ಮಾಡುವಂತಾಗಿದೆ.ಈ ಕಾರಣಕ್ಕೆ ನನಗೂ ನನ್ನ ಹೆಂಡತಿಗೂ ಜಗಳ, ಮನಸ್ತಾಪ. ‘ಕತ್ತಲು ನೋಡಿ ಹೆದರಿಕೊಳ್ಳುವ ಹೆದರುಪುಕ್ಕಲ. ನೀನು ಗಂಡಸೇ ಅಲ್ಲ’ ಎಂದು ಛೇಡಿಸುತ್ತಾಳೆ. ಈ ಕಾರಣಕ್ಕಾಗಿಯೇ ಮನೆಯಲ್ಲಿ ನಿತ್ಯವೂ ಗಲಾಟೆ ಆಗುತ್ತಿತ್ತು. ಇದು ವಿಪರೀತಗೊಂಡು ಮದುವೆ ಮುರಿದುಬಿದ್ದಿದೆ. ಕತ್ತಲಿನ ಈ ಭಯಕ್ಕೆ ಪರಿಹಾರವೇನು ತಿಳಿಸಿಕೊಡಿ ಸರ್.