ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಬಿ ಸಿಟಿಯಲ್ಲಿ ಫಿಟ್‌ನೆಸ್ ಉತ್ಸವ

Last Updated 14 ಫೆಬ್ರುವರಿ 2020, 15:58 IST
ಅಕ್ಷರ ಗಾತ್ರ

ಫಿಟ್ ಬೆಂಗಳೂರು ತನ್ನ 3ನೇ ಆವೃತ್ತಿಯ ಫಿಟ್‌ನೆಸ್‌ ಉತ್ಸವವನ್ನು ಫೆ.15 ಮತ್ತು 16ರಂದು (ಶನಿವಾರ ಮತ್ತು ಭಾನುವಾರ)ಯುಬಿ ಸಿಟಿ ಮತ್ತು ಕಬ್ಬನ್‌ ಪಾರ್ಕ್‌ನಲ್ಲಿ ಆಯೋಜಿಸಿದೆ.

ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಸಹಕಾರಿಯಾಗುವ ಅತಿದೊಡ್ಡ ವೇದಿಕೆ ಇದಾಗಿದೆ.ಫಿಟ್ ಬೆಂಗಳೂರು, 2019ರಲ್ಲಿ ಪ್ರಾರಂಭವಾಗಿದೆ.

ಫಿಟ್ ಬೆಂಗಳೂರಿನ ಈ ಆವೃತ್ತಿಯು ಸ್ವಾಸ್ಥ್ಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಭಾಗವಹಿಸುವವರ ಮಾನಸಿಕ ಸ್ವಾಸ್ಥ್ಯವನ್ನು ಉತ್ತಮಗೊಳಿಸಲು ನೆರವಾಗಬಲ್ಲ ವಿಶೇಷ ಸೆಷನ್‌ಗಳನ್ನು ಒಳಗೊಂಡಿದೆ.

ಉತ್ಸವದ ಎರಡು ದಿನಗಳಲ್ಲಿ ಪ್ರೇಕ್ಷಕರ ರಂಜನೆಗಾಗಿ ಸಂಗೀತ ಮತ್ತು ನೃತ್ಯ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.

ಫಿಟ್ ಬೆಂಗಳೂರಿನ ಆಕರ್ಷಣೆ

ಅಂತರರಾಷ್ಟ್ರೀಯ ಸೆಲೆಬ್ರಿಟಿ ತರಬೇತುದಾರರು ಮತ್ತು ದೇಶದ ಪ್ರಮುಖ ಫಿಟ್‌ನೆಸ್ ಬೋಧಕರು ಮತ್ತು ತಜ್ಞರ ಕಾರ್ಯಾಗಾರಗಳು ಮತ್ತು ಅವರೊಂದಿಗೆ ಮಾತುಕತೆಯ ಅವಕಾಶವಿದೆ.

ಜೆಡಬ್ಲ್ಯೂ ಮ್ಯಾರಿಯಟ್ ಪೂಲ್‌ನಲ್ಲಿ (ಯುಬಿ ಸಿಟಿಯ ಪಕ್ಕದಲ್ಲಿ), ಕಬ್ಬನ್ ಪಾರ್ಕ್‌ನಲ್ಲಿ 5ಕೆ ಓಟ ಮತ್ತು ಆಕ್ವಾ ಚಟುವಟಿಕೆಗಳು ನಡೆಯಲಿವೆ.

ಆರೋಗ್ಯಕರ ತಿನಿಸುಗಳು, ಕುಶಲಕರ್ಮಿಗಳ ಕಲಾಕೃತಿಗಳು, ಪಿಂಗಾಣಿ ಮತ್ತು ಕುಂಬಾರಿಕೆ ಮತ್ತಿತರ ವಸ್ತುಗಳ ಮಾರಾಟ ಮಾಡುವ 50ಕ್ಕೂ ಹೆಚ್ಚು ಸ್ಟಾಲ್‌ಗಳನ್ನು ಹೊಂದಿರುವ ಫಿಟ್ ಮಾರುಕಟ್ಟೆ ಇಲ್ಲಿದೆ.

ಸೌಂಡ್ ಬಾತ್ ಧ್ಯಾನ, ಆರ್ಟ್‌ ಥೆರಪಿ ಮತ್ತು ಡ್ರಾಮಾ ಥೆರಪಿಯಂತಹ ಸೆಷನ್‌ಗಳೊಂದಿಗೆ ಮಾನಸಿಕ ಸ್ವಾಸ್ಥ್ಯದ ಮೇಲೆ ಹೆಚ್ಚಿನ ಗಮನ ನೀಡಲಾಗುತ್ತಿದೆ.

ಪಿಲಾಕ್ಸಿಂಗ್, ಲಿರಿಕಲ್ ಯೋಗ, ಪೊಯಿ, ಕಾಪೊಯೈರಾ ಮತ್ತು ಹುಲಾ ಹೂಪ್ ಸೇರಿದಂತೆ ಫಿಟ್‌ನೆಸ್ ಉದ್ಯಮದಲ್ಲಿ ಪ್ರಸ್ತುತ ಪ್ರವೃತ್ತಿಯಲ್ಲಿರುವ ವಿಷಯಗಳ ಬಗ್ಗೆ ಸೆಷನ್‌ಗಳು ನಡೆಯಲಿವೆ.

ಉತ್ಸವದ ಎರಡೂ ದಿನಗಳಲ್ಲಿ ಎರಡು ಗಂಟೆಗಳ ಮಧ್ಯಂತರದಲ್ಲಿ ಅಕ್ರೋಬ್ಯಾಟ್‌ಗಳು, ಫ್ರೀಸ್ಟೈಲರ್‌ಗಳು, ಬಿ-ಬೋಯಿಸ್ ಮತ್ತು ನೃತ್ಯ ಪ್ರದರ್ಶನಗಳಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT