ಸರಿಯಾದ ಕ್ರಮದಲ್ಲಿನ ನಿದ್ರೆ ಚರ್ಮದ ಸೌಂದರ್ಯವನ್ನು ಹೆಚ್ಚಿಸಿ, ಕೋಮಲವಾಗಿ ಕಾಣುವಂತೆ ಮಾಡುತ್ತದೆ. ಆದರೆ ಚರ್ಮದ ಬಗ್ಗೆ ನೀವು ಪ್ರತಿದಿನ ಕಾಳಜಿ ವಹಿಸಬೇಕಾಗುತ್ತದೆ. ಚರ್ಮದ ಹೊಳಪನ್ನು ಹೆಚ್ಚಿಸಿಕೊಳ್ಳಲು ಸುಲಭ ಮಾರ್ಗಗಳು ಇಲ್ಲಿವೆ.
ಪ್ರತಿದಿನ ಓಡಾಟದ ನಡುವೆ ನಮ್ಮ ಚರ್ಮದಲ್ಲಿ ಒಂದಲ್ಲಾ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅದು ಪರಿಸರ, ಸೂರ್ಯನ ಕಿರಣ ಅಥವಾ ನೀವು ಬಳಸುವ ಮೇಕಪ್ ಕ್ರೀಮ್‌ಗಳಿಂದಲೂ ಆಗಿರಬಹುದು. ಕಲೆಯಾಗುವುದು ಹಾಗೂ ಮೊಡವೆಗಳು ಕಾಣಿಸಿಕೊಳ್ಳುವುದರ ಜೊತೆಗೆ ಚರ್ಮವು ಒರಟು ಒರಟಾಗಿ ಕಾಣುವಂತೆ ಮಾಡುತ್ತವೆ. ಹೀಗಾಗಿ ಚರ್ಮದ ರಕ್ಷಣೆಯ ಮೇಲೆ ಹೆಚ್ಚು ಗಮನಹರಿಸಬೇಕಾಗಿದೆ.
ಸರಿಯಾದ ಕ್ರಮದಲ್ಲಿನ ನಿದ್ರೆ ಚರ್ಮದ ಸೌಂದರ್ಯವನ್ನು ಹೆಚ್ಚಿಸಿ, ಕೋಮಲವಾಗಿ ಕಾಣುವಂತೆ ಮಾಡುತ್ತದೆ. ಆದರೆ ಚರ್ಮದ ಬಗ್ಗೆ ನೀವು ಪ್ರತಿದಿನ ಕಾಳಜಿ ವಹಿಸಬೇಕಾಗುತ್ತದೆ. ಚರ್ಮದ ಹೊಳಪನ್ನು ಹೆಚ್ಚಿಸಿಕೊಳ್ಳಲು ಸುಲಭ ಮಾರ್ಗಗಳು ಇಲ್ಲಿವೆ.
ಆರೋಗ್ಯಕರ ನಿದ್ದೆ
ಆರೋಗ್ಯಕರ ನಿದ್ದೆಯಿಂದ ಚರ್ಮವು ಸುಂದರವಾಗಿ ಕಾಣುವುದಲ್ಲದೇ ಹೊಳಪನ್ನು ಪಡೆದುಕೊಳ್ಳುತ್ತದೆ. ರಾತ್ರಿ ಮಲಗುವ ಮುನ್ನ ಮುಖವನ್ನು ತೊಳೆದು ಮಲಗಿದರೆ ಚರ್ಮದ ಕಾಂತಿ ಹೆಚ್ಚುತ್ತದೆ. ಇದನ್ನು ಪ್ರತಿದಿನ ಪಾಲಿಸುವುದರಿಂದ ಚರ್ಮಕ್ಕೆ ಹಾನಿಯಾಗದಂತೆ ಕಾಪಾಡಿಕೊಳ್ಳಬಹುದು.
ಮುಖ ತೊಳೆಯಿರಿ
ಹೊರಗಡೆ ಹೋಗಿ ಮನೆಗೆ ಬಂದಾಗ ಮುಖ ತೊಳೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಜೊತೆಗೆ ನೀವು ಬಳಸುವ ಸೋಪ್ ಮೂಲಕ ಉಗುರು ಬೆಚ್ಚಗಿನ ನೀರಿನೊಂದಿಗೆ ಮುಖ ತೊಳೆಯಿರಿ. ಇದರಿಂದ ಮುಖಕ್ಕೆ ಅಂಟಿರುವ ಧೂಳು ಹಾಗೂ ಕಲೆಗಳು ಕಡಿಮೆಯಾಗುತ್ತವೆ. ಪ್ರತಿದಿನ ಹೀಗೆ ಮಾಡುವುದರಿಂದ ನಿಮ್ಮ ಚರ್ಮವು ಆರೋಗ್ಯಕರವಾಗಿ ಇರುವುದರ ಜೊತೆಗೆ ಕಾಂತಿಯಿಂದಿರುತ್ತದೆ.
ರೆಟಿನಾಲ್ ಬಳಸಿ
ನೀವು 30 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ಮಲಗುವ ಮುನ್ನ ರೆಟಿನಾಲ್ ಲೇಪಿಸಿಕೊಂಡು ಮಲಗುವ ಅಭ್ಯಾಸ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಚರ್ಮದ ನೆರಿಗೆಗಳು ಹಾಗೂ ಸೂಕ್ಷ್ಮ ಕಲೆಗಳನ್ನು ದೂರ ಮಾಡುವುದರೊಂದಿಗೆ ಚರ್ಮವು ತಾಜಾತನದಿಂದ ಕೂಡಿರುತ್ತದೆ. ಇದನ್ನು ಬಳಸುವ ಮುನ್ನ ನಿಮ್ಮ ಚರ್ಮದ ಬಗ್ಗೆ ತಿಳಿದುಕೊಳ್ಳಿ. ಚರ್ಮಕ್ಕೆ ಕ್ರೀಮ್‌ನಿಂದ ಹಾನಿ ಉಂಟಾಗಬಹುದೇ ಎಂದು ವೈದ್ಯರನ್ನು ಸಂಪರ್ಕಿಸಿ ಖಚಿತಪಡಿಸಿಕೊಳ್ಳಿ, ಕೆಲವರ ಚರ್ಮಕ್ಕೆ ರೆಟಿನಾಲ್ ಕೆಂಪು ಮೊಡವೆಗಳು ಹಾಗೂ ಚರ್ಮಕ್ಕೆ ಒಡಕು ಉಂಟು ಮಾಡುತ್ತದೆ. ಹೀಗಾಗಿ ಒಮ್ಮೆ ಪರೀಕ್ಷಿಸಿಕೊಂಡು ಬಳಸುವುದು ಆರೋಗ್ಯಕರ.
ಕ್ರೀಮ್ ಆಯ್ಕೆ
ಕ್ರೀಮ್ ಆಯ್ಕೆ ಮಾಡುವಾಗ ನಿಮ್ಮ ಚರ್ಮಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಿ. ಉತ್ತಮ ಕ್ರೀಮ್‌ಗಳು ನಿಮ್ಮ ಚರ್ಮಕ್ಕೆ ಸಹಕಾರಿಯಾಗುತ್ತವೆ. ರಾತ್ರಿ ಮಲಗುವ ಮುನ್ನ ಮುಖಕ್ಕೆ ಉತ್ತಮ ನಿರೋಧಕ ಕ್ರೀಮ್‌ಗಳನ್ನು ಲೇಪಿಸಿಕೊಂಡು ಮಲಗುವುದರಿಂದ ಬೆಳಿಗ್ಗೆ ಮುಖವು ಅರಳಿದ ಹೊಳಪಿನಿಂದ ಕಂಗೊಳಿಸುವಂತೆ ಕಾಣುತ್ತದೆ. ಚರ್ಮಕ್ಕೆ ಉಂಟಾದ ಸಮಸ್ಯೆಗಳು ದಿನಕಳೆದಂತೆ ದೂರವಾಗುತ್ತವೆ.
ಮುಖ ಉಜ್ಜಬೇಡಿ
ಕೆಲವರು ಮುಖದ ಕಲೆಗಳು ಹಾಗೂ ಧೂಳು ಬೇಗ ಶಮನವಾಗಲಿ ಎಂದು ಮುಖ ತೊಳೆಯುವಾಗ ಚರ್ಮವನ್ನು ಜೋರಾಗಿ ಉಜ್ಜುವುದು ಹಾಗೂ ಉಗುರುಗಳಿಂದ ಕೆರೆಯುವುದು ಮಾಡುತ್ತಾರೆ. ಹೀಗೆ ಮಾಡುವುದರಿಂದ ಚರ್ಮವು ಬೇಗ ಹಾನಿಗೊಳಗಾಗುತ್ತದೆ. ಕೆಲವು ಸಂದರ್ಭದಲ್ಲಿ ಮಾಡುವುದು ಒಳಿತಾದರೂ ಈ ಅಭ್ಯಾಸ ಅತಿಯಾದರೆ ಚರ್ಮದ ಕೋಮಲತೆ ಕಳೆದುಕೊಳ್ಳಬೇಕಾಗುತ್ತದೆ. ಮುಖ ತೊಳೆಯುವಾಗ ಈ ಎಚ್ಚರಿಕೆ ವಹಿಸುವುದು ಅಗತ್ಯ.
ಇದನ್ನೂ ಓದಿ:ಚಳಿಗಾಲಕ್ಕೆ ಜಾಕೆಟ್, ಸ್ಕರ್ಟ್!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.