ಕೆಲವರು ಇದ್ದಕ್ಕಿಂದಂತೆಯೇ ವಿಚಿತ್ರ ಧ್ವನಿಯನ್ನು ಮಾಡುತ್ತಾ, ಕೆಳಕ್ಕೆ ಬಿದ್ದು, ಕೈ ಕಾಲುಗಳನ್ನು ಬಡಿಯುತ್ತಾ ಎಚ್ಚರ ತಪ್ಪಿ ಬೀದ್ದು, ಸ್ವಲ್ಪ ಹೊತ್ತಿನ ಬಳಿಕ ಸಹಜ ಸ್ಥಿತಿಗೆ ಮರಳುವುದನ್ನೂ ನೀವು ನೋಡಿರಬಹುದು. ಗಟ್ಟಿಯಾಗಿ ಮುಷ್ಟಿಯನ್ನು ಬಿಗಿ ಹಿಡಿದಿರುವ ಅಂಥ ವ್ಯಕ್ತಿಯ ಕೈಬೆರಳುಗಳನ್ನು ಆಗ ಯಾರೋ ಒಬ್ಬರು ಬಿಡಿಸಿ, ಅವರ ಕೈಯಲ್ಲಿ ಚೂರಿಯನ್ನೋ, ಬೀಗದ ಕೈಗಳ ಗೊಂಚಲನ್ನೋ ಇಡುವುದನ್ನೂ ನೋಡಿರಬಹುದು. ಹೀಗೆ ಎಚ್ಚರ ತಪ್ಪಿ ಬೀಳುವ ಪರಿಸ್ಥಿತಿಯನ್ನೇ ಅಪಸ್ಮಾರ, ಫಿಟ್ಸ್ , ಮೂರ್ಛೆರೋಗವೆಂದು ಕರೆಯುವುದು.

ನಮ್ಮ ದೇಹದ ಸಮತೋಲನ, ಕೈಕಾಲುಗಳ ಚಲನೆಯ ನಿಯಂತ್ರಣದ ಜೊತೆಗೆ ಮನಸ್ಸು ಎಚ್ಚರವಾಗಿರುವಂತೆ ನೋಡಿಕೊಳ್ಳುವುದು ಮಿದುಳು, ಮಿದುಳಿನಲ್ಲಿರುವ ನರಗಳು. ನರಕೋಶಗಳಲ್ಲಿ ಉತ್ಪತ್ತಿಯಾಗುವ ವಿದ್ಯುತ್ ಮತ್ತು ರಾಸಾಯನಿಕ ಸಂಕೇತಗಳು, ಇತರ ನರಕೋಶಗಳಿಗೆ, ಅಂಗಗಳಿಗೆ ಮತ್ತು ಸ್ನಾಯುಗಳನ್ನು ತಲುಪಿ ನಿರೀಕ್ಷಿತ ಪರಿಣಾಮವನ್ನು ಉಂಟುಮಾಡುತ್ತವೆ. ಹಾಗಾಗಿ ನಮ್ಮ ಪ್ರಜ್ಞೆ, ಮಾತು, ಚಲನೆ ಇವೆಲ್ಲವೂ ಸರಿಯಾಗಿ ಕೆಲಸ ನಿರ್ವಹಿಸಲು ಕಾರಣವಾಗುತ್ತದೆ. ನರಕೋಶಗಳಲ್ಲಿ ಯಾವುದೇ ಕಾರಣಕ್ಕೆ ವಿದ್ಯುತ್ ಅಥವಾ ರಾಸಾಯನಿಕ ಸಂಕೇತಗಳು, ಅಸಹಜವಾಗಿ, ಅನಿಯಂತ್ರಿತವಾಗಿ ಉತ್ಪತ್ತಿಯಾದರೆ ಆಗ ಎಚ್ಚರ ತಪ್ಪುತ್ತೇವೆ; ನಮ್ಮಲ್ಲಿ ಅನೈಚ್ಛಿಕ ಚಲನೆಗಳು, ಸಂವೇದನೆಗಳು ಉಂಟಾಗುತ್ತವೆ; ನಡವಳಿಕೆಗಳಲ್ಲಿ ವ್ಯತ್ಯಾಸಗಳೂ ಉಂಟಾಗುತ್ತವೆ. ಈ ವ್ಯತ್ಯಾಸಗಳು ಕೇವಲ ಕಣ್ಣುಗಳನ್ನು ಮಿಟಿಕಿಸುವುದರಿಂದ ಹಿಡಿದು ದೇಹದ ಭಾಗಗಳಲ್ಲಿನ ಅನಿಯಂತ್ರಿತ ಸಳೆತಗಳು ಮತ್ತು ಪ್ರಜ್ಞೆ ಕಳೆದುಕೊಂಡು ಬೀಳುವವರೆಗೂ ಆಗಿರಬಹುದು. ಹೀಗೆ ಆದಾಗ ವ್ಯಕ್ತಿ ತಕ್ಷಣವೇ ಸಹಜ ಸ್ಥಿತಿಗೆ ಮರಳಬಹುದು; ಕೆಲವೊಮ್ಮೆ ಕೆಲವು ನಿಮಿಷಗಳು, ಗಂಟೆಗಳು ಹಿಡಿಯಬಹುದು.

ಕಾರಣಗಳು:
ಆನುವಂಶಿಯತೆ, ಮಿದುಳಿನ ನರಗಳ ಅಸಹಜ ಬೆಳವಣಿಗೆ, ಮಿದುಳಿನ ಗಡ್ಡೆಗಳು, ಮಿದುಳಿನ ಸೋಂಕುಗಳು, ಗರ್ಭಾವಸ್ಥೆಯಲ್ಲಿ, ಹೆರಿಗೆಯ ಸಮಯದಲ್ಲಿ, ಶಿಶುವಿಗೆ ಆಮ್ಲಜನಕದ ಕೊರತೆಯಿಂದ ಮಿದುಳಿಗೆ ಉಂಟಾದ ತೊಂದರೆಗಳು; ತಲೆಗೆ ಏಟು ಬಿದ್ದು ಉಂಟಾದ ರಕ್ತಸ್ರಾವ, ರಕ್ತ ಹೆಪ್ಪುಗಟ್ಟುವುದು, ಅದರ ಪರಿಣಾಮವಾಗಿ ಮಿದುಳಿನ ಮೇಲೆ ಒತ್ತಡ ಬೀಳುವುದು; ಮಿದುಳಿನ ಅಸಹಜ ರಕ್ತನಾಳಗಳು.

ವಿಧಗಳು:

ಮಿದುಳಿನ ನರಗಳಲ್ಲಿನ ಅನಿಯಂತ್ರಿತ ವಿದ್ಯುತ್ತು ತರಂಗಗಳು ಎಷ್ಟು ಭಾಗವನ್ನು ವ್ಯಾಪಿಸುತ್ತದೆಯೋ ಅದನ್ನು ಹೊಂದಿಕೊಂಡು ಅಪಸ್ಮಾರದ ವಿಧಗಳನ್ನು ಪರಿಗಣಿಸಬಹುದು.
* ಫೋಕಲ್ (ಸಣ್ಣ ಸೆಳೆವು): ಮಿದುಳಿನ ಒಂದು ಸಣ್ಣ ಭಾಗದಲ್ಲಿ ಮಾತ್ರ ಅಸಹಜ ವಿದ್ಯುತ್ ತರಂಗಗಳು ಕೇಂದ್ರೀಕೃತವಾಗಿದ್ದಾಗ, ಆ ಭಾಗದ ಮೆದುಳಿನ ಕಾರ್ಯದಲ್ಲಿ ಅಸಹಜತೆಗಳು ಪ್ರಕಟವಾಗುತ್ತವೆ.
ಉದಾಹರಣೆಗೆ: ಕಣ್ಣುರೆಪ್ಪೆಗಳು ಒಂದೇ ಸವನೆ ಪಟಪಟನೆ ಮುಚ್ಚುವುದು, ಮುಖವನ್ನು ಕೈಗಳಿಂದ ಒಂದೇ ಸಮನೆ ತಿಕ್ಕುವುದು, ಇತ್ಯಾದಿ. ಈ ವಿಧದಲ್ಲಿ ಎಚ್ಚರವನ್ನು ತಪ್ಪಿರುವುದಿಲ್ಲ.

* ಪೆಟಿಟ್ ಮಾಲ್ (ಅಬ್ಸೆನ್ಸ್ ಸಿಜರ್ ): ಈ ವಿಧದಲ್ಲಿ ಎಲ್ಲಾ ರೀತಿಯ ದೈಹಿಕ ಚಟುವಟಿಕೆಗಳು ಸ್ಥಗಿತವಾಗುತ್ತವೆ. ದೇಹದಲ್ಲಿ ಯಾವ ಚಲನೆಯೂ ಇರುವುದಿಲ್ಲ, ಜೊತೆಯಲ್ಲಿ ಎಚ್ಚರವೂ ಇರುವುದಿಲ್ಲ.

* ಜನರಲೈಜ್ಡ್: (ದೊಡ್ಡ ಸೆಳೆವು): (ಗ್ರಾಂಡ್ ಮಾಲ್ ಎಪಿಲೆಪ್ಸಿ): ಮಿದುಳಿನ ಒಂದು ಭಾಗದಲ್ಲಿ ಪ್ರಾರಂಭವಾದ ಅಸಹಜ ವಿದ್ಯುತ್ ತರಂಗಗಳು ಮಿದುಳಿನ ಎಲ್ಲಾ ಭಾಗಗಳಿಗೆ ಏಕಕಾಲದಲ್ಲಿ ವ್ಯಾಪಿಸುತ್ತದೆ. ಪರಿಣಾಮವಾಗಿ ದೇಹದ ಎಲ್ಲಾ ಸ್ನಾಯುಗಳು ಸೆಳೆತಕ್ಕೆ ಒಳಗಾಗುತ್ತವೆ.

ಸಾಮಾನ್ಯವಾಗಿ ಅಪಸ್ಮಾರವು ಈ ನಾಲ್ಕು ಹಂತಗಳಲ್ಲಿ ಪ್ರಕಟವಾಗಬಹುದು.
* ಮನಸ್ಸಿನಲ್ಲಿ ಕಿರಿಕಿರಿ, ವಿನಾ ಕಾರಣ ಭಯ, ಗೊಂದಲ, ತಲೆಭಾರ, ವಾಂತಿ ಬಂದಂತೆ ಅನಿಸಬಹುದು.

* ಕಣ್ಣುಗುಡ್ಡೆಗಳು ಮೇಲಕ್ಕೆ ಹೊರಳುವುದು, ದೃಷ್ಟಿ ಒಂದೇಕಡೆಗೆ ಕೇಂದ್ರೀಕೃತವಾದಂತೆ ಕಾಣುವುದು. ದೇಹದ ಸ್ನಾಯುಗಳೆಲ್ಲವೂ ಸೆಟೆದುಕೊಳ್ಳುವುದು, ವಿಚಿತ್ರ ಧ್ವನಿಯೊಂದಿಗೆ ದೇಹ ಸಮತೋಲನವನ್ನು ಕಳೆದುಕೊಂಡು ಕೆಳಗೆ ಬೀಳುವುದು ಈ ಹಂತದಲ್ಲಿ.

* ಹಲ್ಲುಗಳನ್ನು ಕಚ್ಚಿಕೊಳ್ಳುವುದು ಕೈಕಾಲುಗಳು ಬಡಿದುಕೊಳ್ಳುವುದು, ಮೂತ್ರವಿಸರ್ಜನೆ; ಕೆಲವೊಮ್ಮೆ ಮಲವಿಸರ್ಜನೆಯೂ ಆಗಬಹುದು.

* ದೇಹದ ಚಲನೆಗಳು ನಿಂತು, ದೀರ್ಘವಾದ ನಿದ್ದೆಗೆ ಜಾರಬಹುದು. ಈ ಹಂತ 10ರಿಂದ 20 ನಿಮಿಷಗಳ ಕಾಲ ಮುಂದುವರೆಯಬಹುದು.

ಇದು ಈ ಸಮಸ್ಯೆಯು ಪ್ರಕಟವಾಗುವ ರೀತಿ. ನೀವು ಕಬ್ಬಿಣದ ಚೂರಿ, ಕೀಲಿಕೈಯನ್ನು ಆ ವ್ಯಕ್ತಿಗಳಿಗೆ ಕೊಡಬೇಕಾಗಿಲ್ಲ. ಕೈಕಾಲುಗಳ ಚಲನೆ ತನ್ನಷ್ಟಕ್ಕೆ ತಾನೇ ನಿಲ್ಲುತ್ತದೆ.

ಏನು ಮಾಡಬೇಕು?
ಆ ಸಂದರ್ಭದಲ್ಲಿ ಆ ವ್ಯಕ್ತಿಗೆ ಪ್ರಜ್ಞೆ ಇಲ್ಲದಿರುವುದರಿಂದ ಹೆಚ್ಚಿನ ತೊಂದರೆ ಆಗದಂತೆ ಮಾತ್ರ ನಾವು ಸಹಾಯ ಮಾಡಬಹುದು.
ಅವರು ನೆಲಕ್ಕೆ ಬಿದ್ದ ತಕ್ಷಣ ಪರಿಸರ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು; ಎಡಭಾಗಕ್ಕೆ ತಿರುಗಿ ಮಲಗಿಸುವುದು; ನಾಲಗೆ ಕಚ್ಚಿಕೊಳ್ಳದಂತೆ ಬಾಯಿಗೆ ಮೃದುವಾದ ಬಟ್ಟೆಯನ್ನು ಇಡಬಹುದು.ಪರಿಸರದಲ್ಲಿ ಹೆಚ್ಚಿನ ಸದ್ದು ಗದ್ದಲ–ಗಲಾಟೆಯಾಗದಂತೆ ಗಡಿಬಿಡಿಯಾಗದಂತೆ ನೋಡಿಕೊಳ್ಳಬೇಕು.

ಆ ವ್ಯಕ್ತಿಗೆ ಘಟನೆ ನಡೆದಿದ್ದರ ಬಗ್ಗೆ ಯಾವ ನೆನಪು ಇರುವುದಿಲ್ಲ. ಆದರೆ ಎಚ್ಚರವಾದಾಗ ತಾನು ಬಿದ್ದಿರುವ ಸ್ಥಿತಿ ನೋಡಿ, ತನಗೇನು ಆಗಿದೆ ಎಂದು ಅರಿವಿಗೆ ಬರಬಹುದು.

ಮೂರ್ಛೆರೋಗ ಯಾವ ವಯಸ್ಸಿನಲ್ಲಿ ಪ್ರಥಮ ಬಾರಿಗೆ ಕಾಣಿಸಿಕೊಂಡಿತೋ, ಅದನ್ನು ಆಧರಿಸಿ ಚಿಕಿತ್ಸೆಯನ್ನು ನಿರ್ಧರಿಸಬೇಕಾಗುತ್ತದೆ.ಕಾಯಿಲೆ ಇದೆ ಎಂದು ತಿಳಿದು ಬಂದಾಗ ಧೃತಿಗೆಡಬೇಡಿ. ಇಂದು ಉತ್ತಮ ಔಷಧಗಳು ಲಭ್ಯವಿವೆ. ನಿಯಮಿತವಾಗಿ ಔಷಧವನ್ನು ಸೇವಿಸುತ್ತ, ಮುಂಜಾಗ್ರತಾ ಕ್ರಮಗಳನ್ನು ನಿತ್ಯವೂ ಪಾಲಿಸಿದರೆ ಸಮಸ್ಯೆಯನ್ನು ತಡೆಗಟ್ಟಬಹುದು.

ಮುಂಜಾಗ್ರತ ಕ್ರಮಗಳು
* ವೈದ್ಯರ ಸಲಹೆಯಂತೆ ಔಷಧವನ್ನು ನಿಯಮಿತವಾಗಿ ತೆಗೆದುಕೊಳ್ಳಿ.
* ನಿದ್ರೆ ಕೆಡದಂತೆ ಜಾಗ್ರತೆ ವಹಿಸಿ.
* ಮಿನುಗುವ ಬೆಳಕನ್ನು ನೋಡಬೇಡಿ.
* ಸಮಸ್ಯೆ ಇರುವವರು ಒಬ್ಬಂಟಿಯಾಗಿ ನೀರು, ಬೆಂಕಿಯ ಬಳಿ ಕಾರ್ಯಗಳನ್ನು ನಿರ್ವಹಿಸಬೇಡಿ.
* ವಾಹನವನ್ನು ಚಾಲನೆ ಮಾಡದಿರುವುದು ಒಳಿತು.

* ದಕ್ಷಿಣ ಭಾರತದಲ್ಲಿ ಕಂಡುಬರುವ ಇನ್ನೊಂದು ವಿಶೇಷ ಆಪಸ್ಮಾರ, ‘ಬಿಸಿನೀರಿನ ಅಪಸ್ಮಾರ’ (ಹಾಟ್ ವಾಟರ್ ಎಪಿಲೆಪ್ಸಿ); ಬಿಸಿನೀರು ತಲೆಗೆ ಬಿದ್ದಾಗ ಮೂರ್ಛೆ ತಪ್ಪುವುದು.

ಅಪಸ್ಮಾರವನ್ನು ತಡೆಯುವ ಮಾತ್ರೆಗಳನ್ನು ನಿರಂತರವಾಗಿ ಸೇವಿಸುತ್ತಿದ್ದರೆ ಖಂಡಿತವಾಗಿಯೂ ಸಹಜವಾದ ಬದುಕನ್ನು ಬಾಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.