ಗುರುವಾರ , ಡಿಸೆಂಬರ್ 3, 2020
20 °C

ಬರಿಗಾಲು ವ್ಯಾಯಾಮ ಎಷ್ಟು ಪ್ರಯೋಜನ?

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

Prajavani

ಲಾಕ್‌ಡೌನ್‌ ನಂತರ ಜಿಮ್‌ಗಳನ್ನು ನಿಧಾನವಾಗಿ ತೆರೆದಿದ್ದರೂ ಕೂಡ ಸುರಕ್ಷತೆಯ ದೃಷ್ಟಿಯಿಂದ ಬಹಳಷ್ಟು ಮಂದಿ ಅಲ್ಲಿಗೆ ತೆರಳಲು ಇನ್ನೂ ಹಿಂದೆಮುಂದೆ ನೋಡುತ್ತಿದ್ದಾರೆ. ಮನೆಯಲ್ಲೇ ಕೆಲ ಸಮಯ ವ್ಯಾಯಾಮ ಮಾಡುತ್ತಿದ್ದಾರೆ ಕೆಲವು ಫಿಟ್‌ನೆಸ್‌ ಪ್ರಿಯರು. ಆದರೆ ಅಂಥವರಲ್ಲಿ ಸಣ್ಣಪುಟ್ಟ ಗೊಂದಲಗಳು ಇನ್ನೂ ಇವೆ. ಅದರಲ್ಲೊಂದು ಮನೆಯಲ್ಲೇ ವ್ಯಾಯಾಮ ಮಾಡುವಾಗ ಶೂ ಧರಿಸುವ ಅವಶ್ಯಕತೆ ಏನಿದೆ ಎಂಬುದು.

ಹೌದು, ಮನೆಯಿಂದ ಆಚೆ ಹೋಗಿ ಜಿಮ್‌ನಲ್ಲೋ ಅಥವಾ ಪಾರ್ಕ್‌ನಲ್ಲಿ ಸಾರ್ವಜನಿಕ ಜಿಮ್‌ ಸವಲತ್ತಿರುವ ಕಡೆಯೋ ವ್ಯಾಯಾಮ ಮಾಡುವ ಕುರಿತು ಭಯ ಇದೆ ಎಂದಾದರೆ ಶೂ ಧರಿಸುವುದು ಯಾಕೆ ಅಲ್ಲವೇ? ಮನೆಯಲ್ಲೇ ಬರಿಗಾಲಲ್ಲಿ ವ್ಯಾಯಾಮ ಮಾಡಿದರೆ ಬೇರೆ ಏನಾದರೂ ಪ್ರಯೋಜನಗಳಿವೆಯೇ?

‘ಹೌದು’ ಎನ್ನುತ್ತಾರೆ ಟೈನಿ ಫಿಟ್‌ನೆಸ್‌ನ ತರಬೇತುದಾರ ರೂಪೇಶ್‌ ಯಾದವ್‌. ಬರಿಗಾಲಲ್ಲಿ ವ್ಯಾಯಾಮ ಮಾಡಿದರೆ ಪಾದಗಳಿಗೆ ಹೆಚ್ಚು ಪ್ರಯೋಜನವಾಗುತ್ತದೆ. ಮಣ್ಣು, ಮರಳು, ಹುಲ್ಲು ಅಥವಾ ಕುಶನ್‌ ಇರುವ ಯೋಗಾ ಮ್ಯಾಟ್‌ ಮೇಲೆ ವ್ಯಾಯಾಮ ಮಾಡುವುದರಿಂದ ಪಾದದ ಸ್ನಾಯುಗಳು ಬಲಗೊಳ್ಳುತ್ತವೆ. ಕಣಕಾಲಿನ ಸಂಧಿ ಹೆಚ್ಚು ಗಟ್ಟಿಮುಟ್ಟಾಗುತ್ತದೆ. ಅದನ್ನು ತಿರುಗಿಸುವಾಗ ಯಾವುದೇ ನೋವಿನ ಅನುಭವ ನಿಮಗಾಗುವುದಿಲ್ಲ ಎಂಬುದು ಅವರ ಅಭಿಮತ. ಆದರೆ ಲಘು ವ್ಯಾಯಾಮವನ್ನು ಮಾತ್ರ ಬರಿಗಾಲಲ್ಲಿ ಮಾಡಬಹುದು.

ಶೂ ಧರಿಸುವುದರಿಂದ ಆಗುವ ಪ್ರಯೋಜನವೆಂದರೆ ನಮ್ಮ ಪಾದಗಳಿಗೆ ಚೂಪಾದ ವಸ್ತುಗಳು ಚುಚ್ಚುವುದರಿಂದ ರಕ್ಷಣೆ ಪಡೆಯಬಹುದು. ಹಾಗೆಯೇ ಹೆಚ್ಚು ಬಾರಿ ಜಿಗಿಯುವಂತಹ ಕಠಿಣ ವ್ಯಾಯಾಮಕ್ಕೂ ಮೆತ್ತನೆಯ ಕುಷನ್‌ ಇರುವ ಶೂ ಅಥವಾ ಸ್ನೀಕರ್‌ ಧರಿಸುವುದು ಒಳ್ಳೆಯದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.