ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟೆಮ್‌ಸೆಲ್‌ ದಾನಿಯಾಗುವುದು ಹೀಗೆ...

Published 17 ಫೆಬ್ರುವರಿ 2024, 0:30 IST
Last Updated 17 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ದೇಶದಲ್ಲಿ ರಕ್ತ ಕ್ಯಾನ್ಸರ್‌, ಥಲಸ್ಸೇಮಿಯಾದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗೆ ಬಳಲುತ್ತಿರುವವರಲ್ಲಿ ಬಹುತೇಕರು ಯುವಜನರೇ ಆಗಿದ್ದಾರೆ. ಸ್ಟೆಮ್‌ಸೆಲ್‌ ಟ್ರಾನ್ಸ್‌ಪ್ಲಾಂಟ್‌ಗೆ ಅಗತ್ಯವಿರುವ ಶೇ 30ರಷ್ಟು ರೋಗಿಗಳಿಗೆ ಮಾತ್ರ ಒಡಹುಟ್ಟಿದವರಿಂದ ಹ್ಯೂಮನ್ ಲ್ಯುಕೋಸೈಟ್ ಪ್ರತಿಜನಕಗಳು (ಎಚ್‌ಎಲ್‌ಎ) ಪಡೆಯಲು ಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ರಕ್ತದ ಕಾಂಡಕೋಶ(ಸ್ಟೆಮ್‌ ಸೆಲ್‌) ದಾನಿಗಳ ನೋಂದಣಿಗೆ ಹೆಚ್ಚಿನ ಪ್ರೋತ್ಸಾಹಿಸಬೇಕಿದೆ.

ಕ್ಯಾನ್ಸರ್‌ ರೋಗಿ ಬದುಕುಳಿಯಲು ರಕ್ತದ ಕಾಂಡಕೋಶ ( ಸ್ಟೆಮ್‌ ಸೆಲ್‌) ಕಸಿಯು ಕೊನೆಯ ಅವಕಾಶವಾಗಿದೆ.

ನೋಂದಣಿ ಪ್ರಕ್ರಿಯೆ ಹೀಗಿದೆ..

  • ಸ್ಟೆಮ್ ಸೆಲ್ ದಾನಿಯಾಗುವುದು ಸುಲಭ. 18-55 ವಯಸ್ಸಿನ ಆಸಕ್ತರು dkms-bmst.org ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಅಲ್ಲಿ ಸ್ವ್ಯಾಬ್‌ ಕಿಟ್‌ ನೀಡಲಾಗುತ್ತದೆ.

  • ನೋಂದಣಿಯ ಅರ್ಜಿ ವಿವರ ತುಂಬಿದ ನಂತರ, ನಿಮ್ಮ ಕೆನ್ನೆಯ ಒಳಭಾಗವನ್ನು ಸ್ವ್ಯಾಬ್ ಮಾಡಿ ಅಂಗಾಂಶ ಕೋಶಗಳನ್ನು ಸಂಗ್ರಹಿಸಿ ಆ ಮಾದರಿಯನ್ನು DKMS-BMST ಕಳುಹಿಸಿಕೊಡಬಹುದು.

  • DKMS ಪ್ರಯೋಗಾಲಯವು ನಿಮ್ಮ ಅಂಗಾಂಶದ ಪ್ರಕಾರವನ್ನು (ಎಚ್‌ಎಲ್‌ಎ) ವಿಶ್ಲೇಷಿಸುತ್ತದೆ. ಸೂಕ್ತ ದಾನಿಯಾಗಿದ್ದರೆ, ನೇರವಾಗಿಸಂಪರ್ಕ ಮಾಡಲಾಗುತ್ತದೆ.

  • ಪೆರಿಫೆರಲ್ ಬ್ಲಡ್ ಸ್ಟೆಮ್ ಸೆಲ್ ದಾನ ಎಂಬ ವಿಧಾನವನ್ನು ಬಳಸಿಕೊಂಡು ರಕ್ತದ ಹರಿವಿನಿಂದ ಕಾಂಡಕೋಶಗಳನ್ನು ಪಡೆಯಲಾಗುತ್ತದೆ, ಇದು ರಕ್ತದಾನದಂತೆಯೇ ಇರುತ್ತದೆ. ಇದು ಅತ್ಯಂತ ಸುರಕ್ಷಿತ ವಿಧಾನವಾಗಿದೆ.

 ಹೆಚ್ಚಿನ ವಿವರಗಳಿಗೆ: dkms-bmst.org v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT