ಹೊರಗೆ ಹಿತವಾಗಿ ಮಳೆ ಬೀಳುವಾಗ, ಸಂಜೆ ಹೊತ್ತು ಕಾಫಿಯನ್ನೋ ಟೀಯನ್ನೋ ಹೀರುತ್ತಾ ಮಳೆಯ ಸೊಗಸು ಸವಿಯುವುದರ ಮುಂದೆ ಬೇರೆ ಯಾವ ಖುಷಿ ಇದೆ? ಆದರೆ, ಇಷ್ಟೆಲ್ಲಾ ಸಂತೋಷ ತಂದುಕೊಡುವ ಮಳೆಗಾಲವು ಮಧುಮೇಹಿಗಳಿಗೆ ಕೆಲವು ಸವಾಲುಗಳನ್ನೂ ಒಡ್ಡುತ್ತದೆ. ಹೀಗಾಗಿ, ಮಧುಮೇಹಿಗಳು ಈ ಸಂದರ್ಭದಲ್ಲಿ ಜಾಗ್ರತೆಯಿಂದ ಇರಬೇಕಾಗುತ್ತದೆ.

ಮಧುಮೇಹ ನಿರ್ವಹಣೆಗೆ ಕೆಲವು ಕ್ರಮಗಳನ್ನು ಅನುಸರಿಸಬೇಕಾದುದು ಅತ್ಯಗತ್ಯ. ಹೊರಗೆ ವ್ಯಾಯಾಮ ಮಾಡಲು ಮಳೆ, ಗಾಳಿಯಿಂದ ತೊಂದರೆಯಾದಾಗ ಒಳಾಂಗಣದಲ್ಲಿಯೇ ಕೆಲವು ದೈಹಿಕ ಚಟುವಟಿಕೆಗಳನ್ನು ನಡೆಸಬಹುದು. ಗ್ಲೂಕೋಸ್ ರೀಡಿಂಗ್ ತಪಾಸಣೆ ಅಗತ್ಯವಾಗಿ ಆಗಬೇಕು. ಕಂಟಿನ್ಯೂಯಸ್ ಗ್ಲೂಕೋಸ್ ಮಾನಿಟರಿಂಗ್ → (ಸಿಜಿಎಂ) ಸಾಧನಗಳು ಯಾವುದೇ ರೀತಿಯ ಹವಾಮಾನದಲ್ಲಿಯೂ ಗ್ಲೂಕೋಸ್ ಮಟ್ಟದ ಮೇಲೆ ನಿಗಾ ಇಡಲು ನೆರವಾಗುತ್ತವೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ: ನೀರಿನಿಂದ ಹರಡುವ ರೋಗಗಳ ಕಡೆಗೆ ಮಧುಮೇಹಿಗಳು ಹೆಚ್ಚು ಗಮನ ಕೊಡಬೇಕು. ಬೀದಿ ಬದಿ ಆಹಾರವು ಮಳೆಗಾಲದಲ್ಲಿ ಹೆಚ್ಚು ಕಲುಷಿತಗೊಂಡಿರುವ ಅಪಾಯ ಇರುತ್ತದೆ. ಹಾಗಾಗಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಆ್ಯಂಟಿ ಆಕ್ಸಿಡೆಂಟ್ಗಳು ಸಮೃದ್ಧವಾಗಿರುವ ಆಹಾರವನ್ನು ಹೆಚ್ಚು ಸೇವಿಸಿ. ತರಕಾರಿಗಳನ್ನು ಸಂಪೂರ್ಣವಾಗಿ ತೊಳೆದು, ಸರಿಯಾಗಿ ಬೇಯಿಸಿ ತಿನ್ನಿ. ಬೇಯಿಸಿದ ಆಹಾರವನ್ನು ನಿಗದಿತ ಸಮಯಕ್ಕೆ ಸೇವಿಸಿ.

ಪಾದಗಳ ಕುರಿತು ಕಾಳಜಿ ಇರಲಿ: ಮಧುಮೇಹಿಗಳು ಮಳೆಗಾಲದಲ್ಲಿ ಪಾದಗಳ ಬಗ್ಗೆ ವಿಶೇಷವಾದ ಕಾಳಜಿ ವಹಿಸಬೇಕಾಗುತ್ತದೆ. ತೇವವಿದ್ದರೆ ಶಿಲೀಂಧ್ರ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಇದರಿಂದ ಪಾದದಲ್ಲಿ ಗಾಯಗಳು ಉಂಟಾಗಬಹುದು. ಪಾದಗಳನ್ನು ಒರೆಸಿ, ಕಾಲುಚೀಲ ಧರಿಸಿ. ಬರಿಗಾಲಿನಲ್ಲಿ ಕಲ್ಲು, ಗುಂಡಿಗಳಲ್ಲಿ ನಡೆಯುವುದನ್ನು ತಪ್ಪಿಸಿ. ಆರಾಮದಾಯಕ ಎನಿಸುವ ಪಾದರಕ್ಷೆಗಳನ್ನು ಆಯ್ಕೆ ಮಾಡಿಕೊಳ್ಳಿ.

ವರ್ಕ್ಔಟ್, ನಡಿಗೆ ಅಗತ್ಯ: ದಿನಚರಿಯಲ್ಲಿ ಆಗುವ ಬದಲಾವಣೆಗಳಿಂದ ವ್ಯಾಯಾಮ, ಆಹಾರ ಸೇವನೆ ಹಾಗೂ ಒತ್ತಡದ ಮಟ್ಟದಲ್ಲಿ ಏರುಪೇರಾಗಬಹುದು. ಹಾಗಾಗಿ, ರಕ್ತದಲ್ಲಿನ ಸಕ್ಕರೆಯ ಮಟ್ಟ ಸರಿಯಾಗಿರುವಂತೆ ನೋಡಿಕೊಳ್ಳಿ. 30 ನಿಮಿಷಗಳ ಸಣ್ಣ ಪ್ರಮಾಣದ ವರ್ಕ್ಔಟ್ ಮಾಡಿ. ನಡಿಗೆಯೂ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ದ್ರವಾಹಾರವೂ ಬೇಕು: ವಾತಾವರಣದಲ್ಲಿ ತೇವಾಂಶ ಇದ್ದಾಗ, ನಿರ್ಜಲೀಕರಣದ ಲಕ್ಷಣಗಳು ಗೊತ್ತಾಗದೇ ಇರಬಹುದು. ಇದು ಕೂಡ ಗ್ಲೂಕೋಸ್ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಬಾಯಾರಿಕೆ ಆಗದೇ ಇದ್ದರೂ ಸಾಕಷ್ಟು ನೀರು ಕುಡಿಯಿರಿ. ಜತೆಗೆ ಹರ್ಬಲ್ ಟೀ, ಆರೋಗ್ಯಕರವಾದ ಪೇಯಗಳನ್ನು ಸೇವಿಸಿ. ಇದು ನಿರ್ಜಲೀಕರಣ ಆಗದಂತೆ ತಡೆಯಬಲ್ಲದು.

–ಲೇಖಕರು: ಎಂಡೋಕ್ರೈನಾಲಜಿಸ್ಟ್, ಅಪೋಲೊ ಕ್ಲಿನಿಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.