ಭಾನುವಾರ, ಜೂನ್ 26, 2022
27 °C

ಅಂತರರಾಷ್ಟ್ರೀಯ ಚಹಾ ದಿನ: ಟೀ ಪ್ರಿಯರಿಗೆ ಗಣ್ಯರ ಶುಭಾಶಯಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಂದು (ಮೇ 21) ಅಂತರರಾಷ್ಟ್ರೀಯ ಚಹಾ ದಿನ. ಜಾಗತಿಕವಾಗಿ ಚಹಾ ಉತ್ಪಾದನೆ ಹೆಚ್ಚಳ ಹಾಗೂ ಚಹಾ ಸೇವನೆಗೆ ಪ್ರೋತ್ಸಾಹ ನೀಡುವುದಕ್ಕೆ ಈ ದಿನವನ್ನು ಆಚರಣೆ ಮಾಡಲಾಗುತ್ತಿದೆ.

ಭಾರತದಲ್ಲಿ ಚಹಾ ಪ್ರಿಯರಿಗಾಗಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಚಹಾ ದಿನದ ವಿಶೇಷತೆಯ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಹಲವಾರು ಗಣ್ಯರು ಚಹಾ ಪ್ರಿಯರಿಗೆ ಶುಭಾಶಯಗಳನ್ನು ಹೇಳಿದ್ದಾರೆ.

2005ರಲ್ಲಿ ಅಂತರರಾಷ್ಟ್ರೀಯ ಚಹಾ ದಿನವನ್ನು ದೆಹಲಿಯಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ನಂತರ 2015ರಲ್ಲಿ  ಜಾಗತಿಕವಾಗಿ ಈ ದಿನವನ್ನು ಆಚರಿಸುವಂತೆ ವಿಶ್ವದ ಮುಂದೆ ಭಾರತ ವಿಷಯ ಪ್ರಸ್ತಾಪಿಸಿತು. ಇದಕ್ಕೆ ಬಹುತೇಕ ರಾಷ್ಟ್ರಗಳು ಒಪ್ಪಿಗೆ ಸೂಚಿಸಿ ಆಚರಣೆ ಮಾಡುತ್ತಿವೆ. ಪ್ರತಿ ವರ್ಷ ಮೇ 21ರಂದು ಅಂತರರಾಷ್ಟ್ರೀಯ ಚಹಾ ದಿನ ಆಚರಣೆ ಮಾಡಲಾಗುತ್ತಿದೆ. 

ಜಾಗತಿಕವಾಗಿ ಮೇ ಮತ್ತು ಜೂನ್‌ ತಿಂಗಳಲ್ಲಿ ಹೆಚ್ಚಿನ ದೇಶಗಳು ಚಹಾ ಉತ್ಪಾದಿಸಲು ಪ್ರಾರಂಭ ಮಾಡುತ್ತವೆ. ಚಹಾ ಉತ್ಪಾದನೆಗೆ ಈ ಸಮಯ ಸಕಾಲವಾಗಿದೆ ಎಂದು ಚಹಾ ಉತ್ಪಾದಕರು ಹೇಳುತ್ತಾರೆ. 

ಭಾರತದಲ್ಲಿ ಕಾಶ್ಮೀರದ ‘ನೂನ್‘ ಗಜರಾತ್‌ನ ‘ಉಕಾಡೋ‘ ಅಸ್ಸಾಂನ ‘ಬ್ಲಾಕ್‌ ಟೀ‘ ಬಂಗಾಳದ ‘ಲಾಬೂ‘, ಕರ್ನಾಟಕದ ಮಂಗಳೂರಿನ ‘ಕಸಾಯ್‌‘ ಚಹಾ ಹೆಚ್ಚು ಜನಪ್ರಿಯವಾಗಿವೆ. 

ಜಪಾನ್ ದೇಶದಲ್ಲಿ ಅಂತರರಾಷ್ಟ್ರೀಯ ಚಹಾ ದಿನ ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ದಿನ ಸ್ನೇಹಿತರು ಮತ್ತು ಕುಟುಂಬದವರು ‘ಚಹಾ‘ ಪಾರ್ಟಿಗಳನ್ನು ಆಯೋಜಿಸುವ ಮೂಲಕ ವಿಶೇಷವಾಗಿ ಆಚರಣೆ ಮಾಡುತ್ತಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು