ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ಮುಖ, ಕೈಗಳನ್ನು ಪಡೆದ ವ್ಯಕ್ತಿ

Last Updated 4 ಫೆಬ್ರುವರಿ 2021, 4:02 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಅಪಘಾತದಲ್ಲಿ ತೀವ್ರ ಸುಟ್ಟುಹೋಗಿದ್ದ ಮುಖ ಮತ್ತು ಕೈಗಳನ್ನು ವ್ಯಕ್ತಿಯೊಬ್ಬ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಮೂಲಕ ಮರಳಿ ಪಡೆದಿರುವ ಘಟನೆ ನ್ಯೂ ಜೆರ್ಸಿಯಲ್ಲಿ ನಡೆದಿದೆ.

22 ವರ್ಷದ ಜೋ ಡಿಮಿಯೊ ಎಂಬ ಯುವಕನಿಗೆ 2 ವರ್ಷಗಳ ಹಿಂದೆ ಕಾರು ಅಪಘಾತದಲ್ಲಿ ಮುಖ ಮತ್ತು ಕೈಗಳು ತೀವ್ರವಾಗಿ ಸುಟ್ಟುಹೋಗಿದ್ದವು. ಇನ್ನೇನು ಜೀವನವೇ ಮುಗಿಯಿತು ಎನ್ನುತ್ತಿದ್ದ ಯುವಕನಿಗೆ 6 ತಿಂಗಳ ಹಿಂದೆ ವೈದ್ಯರು ಅಪರೂಪದ ಮುಖ ಮತ್ತು ಕೈಗಳ ಕಸಿ ಶಸ್ತ್ರಚಿಕಿತ್ಸೆ ನಡೆಸಿದ್ದರು.

ಕಳೆದ ವರ್ಷ ಆಗಸ್ಟ್‌ನಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದು, ಇದೀಗ ಯುವಕ ಜೋ ಡಿಮಿಯೋ ಎಲ್ಲರಂತೆ ನಗುವುದು, ಕಣ್ಣು ಮಿಟುಕಿಸುವುದು ಸೇರಿದಂತೆ ಮುಖದ ಹಾವಭಾವವನ್ನು ತೋರುತ್ತಿದ್ದಾನೆ.

"ಇದು ಮಗುವಿನ ನಡಿಗೆ ಇದ್ದಂತೆ ಎನ್ನುವುದು ನನಗೆ ತಿಳಿದಿದೆ" ಎಂದು ಡಿಮಿಯೊ ಇತ್ತೀಚೆಗೆ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ. ಇಂತಹ ಸಂದರ್ಭದಲ್ಲಿ “ನಾವು ಸಾಕಷ್ಟು ಆಶಾಭಾವನೆ, ತಾಳ್ಮೆ ಹೊಂದಿರಬೇಕು. ಮನಸ್ಸನ್ನು ಗಟ್ಟಿಯಾಗಿರಿಸಿಕೊಳ್ಳಬೇಕು’ ಎಂದು ಹೇಳಿದ್ದಾರೆ.

ನ್ಯೂಯಾರ್ಕ್ ಯೂನಿವರ್ಸಿಟಿಯ ಲ್ಯಾಂಗೋನ್ ಹೆಲ್ತ್‌ನಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಆದರೆ, ಖಚಿತವಾಗಿ ಹೇಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ವಿಶ್ವದಾದ್ಯಂತ, ಇದುವರೆಗೆ ವೈದ್ಯರು ಕನಿಷ್ಟ 18 ಮುಖ ಕಸಿ ಮತ್ತು 35 ಕೈ ಕಸಿಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ಅಮೆರಿಕದ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ವ್ಯವಸ್ಥೆಯನ್ನು ನೋಡಿಕೊಳ್ಳುವ ಯುಎನ್ಒಎಸ್ ಹೇಳಿದೆ.

ಆದರೆ ಏಕಕಾಲದಲ್ಲಿ ಮುಖ ಮತ್ತು ಎರಡೂ ಕೈಗಳ ಕಸಿ ಅತ್ಯಂತ ವಿರಳ. ಈ ಮೊದಲು ಎರಡು ಬಾರಿ ಮಾತ್ರ ಪ್ರಯತ್ನಿಸಲಾಗಿದೆ. ಮೊದಲ ಪ್ರಯತ್ನ 2009 ರಲ್ಲಿ ಪ್ಯಾರಿಸ್‌ನಲ್ಲಿ ನಡೆದಿದೆ. ಶಸ್ತ್ರಚಿಕಿತ್ಸೆ ನಡೆದ ಒಂದು ತಿಂಗಳ ನಂತರ ರೋಗಿ ಶಸ್ತ್ರಚಿಕಿತ್ಸೆ ಅಡ್ಡ ಪರಿಣಾಮದಿಂದ ಸಾವಿಗೀಡಾದರು.

ಎರಡು ವರ್ಷಗಳ ನಂತರ, ಬೋಸ್ಟನ್ ವೈದ್ಯರು ಚಿಂಪಾಂಜಿಯಿಂದ ದಾಳಿಗೊಳಗಾಗಿದ್ದ ಮಹಿಳೆಯ ಮೇಲೆ ಅಂಗಂಗ ಕಸಿ ಶಸ್ತ್ರಚಿಕಿತ್ಸೆ ಪ್ರಯತ್ನಿಸಿದರು, ಆದರೆ, ಕಸಿ ಮಾಡಿದ ಕೈಗಳನ್ನು ಕೆಲ ದಿನಗಳ ಬಳಿಕ ತೆಗೆದುಹಾಕಬೇಕಾಯಿತು.

ಇದೀಗ, ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ನ್ಯೂ ಜೆರ್ಸಿಯ ಜೋ ಡಿಮಿಯೋ ಜೀವಮಾನಪೂರ್ತಿ ಔಷಧ ತೆಗೆದುಕೊಳ್ಳಬೇಕಿದೆ. ಇಲ್ಲವಾದರೆ ಕಸಿ ಮಾಡಲಾದ ಅಂಗಗಳು ದೇಹದಿಂದ ಬೇರ್ಪಡುವ ಸಾಧ್ಯತೆ ಇದೆ. ಜೊತೆಗೆ ಅವನ ಹೊಸ ಮುಖ ಮತ್ತು ಕೈಗಳಲ್ಲಿ ಸಂವೇದನೆ ಮತ್ತು ಬಳಕೆಗೆ ಸಾಧ್ಯವಾಗಿಸಲು ನಿರಂತರ ಚಿಕಿತ್ಸೆ ಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT