ವಯಸ್ಸು ಹೆಚ್ಚಾಗುತ್ತಿದ್ದಂತೆ ನಾವು ಹಲವು ಬದಲಾವಣೆಗಳನ್ನು ನಮ್ಮ ದೇಹದಲ್ಲಿ ಮತ್ತು ಮನಸ್ಸಿನಲ್ಲಿ ಕಾಣುತ್ತೇವೆ. ಚರ್ಮ ಸುಕ್ಕುಗಟ್ಟುತ್ತದೆ, ದೇಹದ ಬಲ ಕುಗ್ಗುತ್ತದೆ, ಕಣ್ಣಿನ ದೃಷ್ಟಿ ಹಾಗೂ ಕಿವಿಯ ಗ್ರಹಣಶಕ್ತಿ ಕಡಿಮೆಯಾಗುತ್ತವೆ. ಇದೇ ರೀತಿ ಬುದ್ಧಿಶಕ್ತಿ ಕೂಡ ನಿಧಾನವಾಗಿ ಕುಗ್ಗತೊಡಗುತ್ತದೆ. ಹೀಗೆಯೇ ‘ಮರೆಯುವುವಿಕೆ’ ಎಂಬುದು ಸಹಜ ನೈಸರ್ಗಿಕ ಕ್ರಿಯೆ.

ಮರೆವಿಕೆಯ ನಮ್ಮ ದೈನಂದಿನ ಕೆಲಸಗಳಲ್ಲಿ ಅದು ತೊಂದರೆ ತರಲಾರಂಭಿಸಿದರೆ? ಆಗ ಅದು ಒಂದು ಕಾಯಿಲೆಯ ರೂಪ ತಾಳಬಹುದು. 60 ಅಥವಾ 70ರ ನಂತರ, ‘ಅರಳು–ಮರಳು’ ಎನ್ನುತ್ತೇವೆ. ಮರೆವಿಗೆ ಸಂಬಂಧಿಸಿದ ಕಾಯಿಲೆಗಳು ತಕ್ಷಣವೇ ಬಂದು ಹೋಗುವ ಜ್ವರ ಅಥವಾ ಕೆಮ್ಮಿನಂತೆ ಅಲ್ಲ. ಇವು ದೀರ್ಘಕಾಲದಲ್ಲಿ ನಿಧಾನವಾಗಿ ಬೆಳೆಯುತ್ತವೆ ಹಾಗೂ ಮಾನಸಿಕ ಶಕ್ತಿಯನ್ನು ನಾಶಮಾಡಬಲ್ಲ ಗಂಭೀರ ಕಾಯಿಲೆಗಳಾಗಿರುತ್ತವೆ.

ಇಂತಹ ಕಾಯಿಲೆಗೆ ‘ಡಿಮೆಂಶಿಯಾ’ (Dementia) ಎಂದು ಹೆಸರು. ಉದಾಹರಣೆಗೆ, ಅಲ್ಝೈಮರ್ಸ್. ಡಿಮೆಂಶಿಯಾದಂತಹ ದೀರ್ಘ ಕಾಯಿಲೆಯ ಮೊದಲ ಹಂತ ’ಮೈಲ್ಡ್ ಕಾಗ್ನಿಟೀವ್ ಇಂಪೇರ್ಮೆಂಟ್’ (Mild Cognitive Impairment - MCI). ಇದು ವಯೋಸಹಜ ಮರೆವಿನ ಸಮಸ್ಯೆಯಿಂದ ಕಾಯಿಲೆಯ ಹಂತಕ್ಕೆ ಬದಲಾಗುವ ಮಧ್ಯದ ಹಂತ. ಸಾಮಾನ್ಯ ಮರೆವಿನಿಂದ ಡಿಮೆಂಶಿಯಾವರೆಗೆ ಸಾಗುವ ಮಾರ್ಗದ ಆರಂಭಿಕ ಸೂಚನೆ ಇದಾಗಿರಬಹುದು.

2024ರಲ್ಲಿ ನಡೆದ ಅಧ್ಯಯನದ ಪ್ರಕಾರ, 60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳಲ್ಲಿ ’ಎಂಸಿಐ’ (MCI) ವ್ಯಾಪ್ತಿ ಶೇ. 17.6ರಷ್ಟು. ಭಾರತದಲ್ಲಿ ವಯೋವೃದ್ಧಿಯ ಪ್ರಮಾಣ ಹೆಚ್ಚುತ್ತಿರುವುದರಿಂದ, ’ಎಂಸಿಐ’ ಮತ್ತು ಡಿಮೆಂಶಿಯಾ ರೋಗಿಗಳ ಸಂಖ್ಯೆ ಮುಂದಿನ ದಶಕಗಳಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ. ’ಎಂಸಿಐ’ ಇರುವವರು ಸಾಮಾನ್ಯವಾಗಿ ತಮ್ಮ ಸ್ಮರಣಶಕ್ತಿಯಲ್ಲಿ ಬದಲಾವಣೆಗಳನ್ನು ಗಮನಿಸುತ್ತಾರೆ; ಇನ್ನೂ ತಮ್ಮ ಸ್ವಂತ ಕೆಲಸಗಳನ್ನು ನಿರ್ವಹಿಸಬಲ್ಲ ಸ್ಥಿತಿಯಲ್ಲಿರುತ್ತಾರೆ. ಜೊತೆಗೆ ಸಂಬಂಧಿಕರು ಅಥವಾ ಮನೆಯವರು ಈ ಬದಲಾವಣೆಗಳನ್ನು ಗಮನಿಸಬಹುದಾಗಿದೆ. ಕೆಲವೊಮ್ಮೆ ದಿನಚರಿಯ ಕೆಲವೊಂದು ಕಠಿಣ ಕೆಲಸಗಳಲ್ಲಿ ತೊಂದರೆ ಉಂಟಾಗಬಹುದು. ’ಎಂಸಿಐ’ ಸಹಜ ಮರೆವಿಗಿಂತ ಹೆಚ್ಚು, ಆದರೆ ಡಿಮೆಂಶಿಯಾ ಅಥವಾ ಅಲ್ಝೈಮರ್ಸ್ಗಿಂತ ಕಡಿಮೆ ಪ್ರಭಾವ ಬೀರುತ್ತದೆ. ’ಎಂಸಿಐ’ ಪೀಡಿತರು ಶೇ. 15-20ರಷ್ಟು ಮುಂದಿನ ಹಂತದಲ್ಲಿ ಡಿಮೆಂಚಿಯಾ ಕಾಯಿಲೆಗೆ ಒಳಗಾಗುವ ಸಾಧ್ಯತೆ ಇದೆ. ಇದು ಎರಡು ಪ್ರಕಾರಗಳಾಗಿರಬಹುದು – ‘ಅಮ್ನೆಸ್ಟಿಕ್ ಎಂಸಿಐ’ (ಸ್ಮರಣಶಕ್ತಿ ಸಂಬಂಧಿತ), ‘ನಾನ್-ಅಮ್ನೆಸ್ಟಿಕ್ ಎಂಸಿಐ’ (ಇತರ ಬುದ್ಧಿಮತ್ತೆಯ ಕಾರ್ಯಗಳಿಗೆ ಸಂಬಂಧಿತ).

’ಎಂಸಿಐ’ಗೆ ನಿಖರವಾದ ಕಾರಣಗಳು ಇತ್ತೀಚಿನವರೆಗೆ ಸಂಶೋಧನೆಯಿಂದ ಸ್ಥಿರಗೊಂಡಿಲ್ಲ. ಕುಟುಂಬದಲ್ಲಿ ಮರೆವಿನ ತೊಂದರೆಗಳ ಇತಿಹಾಸವಿದ್ದರೆ ಇದು ಅಪಾಯಕಾರಿಯಾದ ಸೂಚನೆ ಆಗಬಹುದು. ದೀರ್ಘಕಾಲೀನ ದೇಹದ ತೊಂದರೆಗಳು (ಉದಾ: ರಕ್ತದೊತ್ತಡ ಸಮಸ್ಯೆ, ಹೃದಯಕಾಯಿಲೆ, ಕೊಲೆಸ್ಟ್ರಾಲ್, ಉಸಿರಾಟದ ತೊಂದರೆ, ಮಧುಮೇಹ), ಹಲವಾರು ಔಷಧಗಳ (ನಿದ್ರಾಜನಕ, ಅಲರ್ಜಿಯ, ಮಲಬದ್ಧತೆ ಔಷಧಗಳು) ಅತಿಯಾದ ಸೇವನೆ, ಮಾನಸಿಕ ತೊಂದರೆಗಳು , ಹಾರ್ಮೋನಲ್ ತೊಂದರೆಗಳು ಮತ್ತು ಪೋಷಕಾಂಶ ಕೊರತೆ (ವಿಟಮಿನ್12), ಪಾರ್ಕಿನ್ಸನ್ಸ್, ಮುಂತಾದವು ಪ್ರಭಾವವನ್ನು ಬೀರಬಹುದು. ಜೀವನಶೈಲಿ ಕೂಡ ಪ್ರಮುಖ ಕಾರಣವಾಗಬಹುದು. ಕೆಲವೊಮ್ಮೆ ವಿಟಮಿನ್ 12 ಕೊರತೆ, ನಿದ್ರೆಹೀನತೆ, ಖಿನ್ನತೆ, ತೀವ್ರ ಒತ್ತಡ ಮುಂತಾದವುಗಳೂ ’ಎಂಸಿಐ’ಗೆ ಹೋಲುವ ಲಕ್ಷಣಗಳನ್ನು ತೋರಿಸಬಹುದು. ಆದರೆ ಅವುಗಳು ಚಿಕಿತ್ಸೆಯ ಮೂಲಕ ಮಿದುಳಿನ ಕಾರ್ಯಕ್ಷಮತೆ ಪುನಃ ಸುಧಾರಿಸಬಹುದು.

’ಎಂಸಿಐ’ಯನ್ನು ಪತ್ತೆ ಮಾಡುವುದರಲ್ಲಿ ಯಾವುದೇ ನಿರ್ದಿಷ್ಟ ಲ್ಯಾಬ್ ಪರೀಕ್ಷೆ ಅಥವಾ ಸ್ಕ್ಯಾನಿಂಗ್ ಮೂಲಕ ಖಚಿತಪಡಿಸಲು ಸಾಧ್ಯವಿಲ್ಲ. ಇದು ಸಂಪೂರ್ಣವಾಗಿ ವೈದ್ಯಕೀಯ ಅಧ್ಯಯನದ ಮೇಲೆ ಆಧಾರಿತವಾಗಿರುತ್ತದೆ.

’ಎಂಸಿಐ’ಗೆ ಯಾವುದೇ ಸ್ಪಷ್ಟವಾದ ಔಷಧ ಇಲ್ಲದಿದ್ದರೂ, ಕೆಲವೊಂದು ಔಷಧಗಳು ಇತರ ಸಂಬಂಧಿತ ಲಕ್ಷಣಗಳನ್ನು ತಡೆಹಿಡಿಯಲು ಉಪಯುಕ್ತವಾಗಬಹುದು. ’ಎಂಸಿಐ’ಗೆ ಕಾರಣವಾಗುವ ಅಂಶಗಳನ್ನು ಗುರುತಿಸಿ ಚಿಕಿತ್ಸೆ ನೀಡುವುದು ಮುಖ್ಯ. ಉದಾ: ನಿದ್ರಾಸಮಸ್ಯೆ, ಖಿನ್ನತೆ, ಹಾರ್ಮೋನಲ್ ಅಸ್ವಮಾನತೆಗಳು, ವಿಟಮಿನ್ ಕೊರತೆ, ಔಷಧಿಗಳ ಅತಿಸೇವನೆ. ನಿಯಮಿತ ವ್ಯಾಯಾಮ, ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು, ಮಿದುಳಿನ ತರಬೇತಿ (ಮೆಮೊರಿ ಗೇಮ್ಗಳು), ಧ್ಯಾನ ಮತ್ತು ಯೋಗ ಇವೆಲ್ಲವು ದೀರ್ಘಾವಧಿಯಲ್ಲಿ ಮಿದುಳಿಗೆ ಬಲವನ್ನು ನೀಡುತ್ತವೆ.

ಆಯುರ್ವೇದದಲ್ಲಿ, ಎಂಟು ವಿಭಾಗಗಳಲ್ಲಿ ‘ಜರಾಚಿಕಿತ್ಸೆ’ (ರಸಾಯನ ಚಿಕಿತ್ಸೆ) ಒಂದು ಪ್ರಮುಖ ವಿಭಾಗ. ಇದು ವಯೋವೃದ್ಧಿಯನ್ನು ತಡೆಹಿಡಿಯಲು ಮತ್ತು ದೈಹಿಕ-ಮಾನಸಿಕ ಶಕ್ತಿಯನ್ನು ಪುನರುಜ್ಜೀವನಗೊಳಿಸಲು ಬಳಸುವ ಪ್ರಮುಖ ವಿಧಾನವಾಗಿದೆ. ರಸಾಯನಪ್ರಯೋಗವು ಒಂದು ವಿಶಿಷ್ಟ ಆಯುರ್ವೇದ ಔಷಧ ಚಿಕಿತ್ಸೆಯ ಭಾಗವಾಗಿದೆ. ಆಯುರ್ವೇದದ ಪ್ರಕಾರ ಶುದ್ಧ ಮನಸ್ಸು, ಇಂದ್ರಿಯ ನಿಯಂತ್ರಣ, ಸಾತ್ವಿಕ ಆಹಾರ ಇವು ಜ್ಞಾನ ಶಕ್ತಿ ಮತ್ತು ಸ್ಮರಣಶಕ್ತಿಗೆ ಮೂಲ. ಈ ರೀತಿಯ ಮಿದುಳಿನ ಕಾಯಿಲೆಗಳಿಗೆ ವಿಶೇಷವಾಗಿ ಮೇಧ್ಯ ರಸಾಯನಗಳು ಪರಿಣಾಮಕಾರಿ ಎಂದು ಕಂಡುಬಂದಿದೆ. ವಿಶೇಷವಾಗಿ ಮಂಡೂಕಪರ್ಣಿ, ಬ್ರಾಹ್ಮಿ, ಶಂಕಪುಷ್ಪಿ ಮುಂತಾದವು ಉಪಯೋಗವು ಮಿದುಳಿನ ಶಕ್ತಿಯ ಪುನರ್ ನಿರ್ಮಾಣಕ್ಕೆ ಸಹಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.