ಸೋಮವಾರ, ನವೆಂಬರ್ 30, 2020
27 °C

ಕೋವಿಡ್‌ ಎದುರಿಸಲು ಬೇಕು ಪೌಷ್ಟಿಕಾಂಶ ಝಿಂಕ್‌: ಡಾ.ಕೆ.ಎಸ್‌. ಮೀನಾಕ್ಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಭಾರತ ಸೇರಿದಂತೆ ಜಗತ್ತಿನಾದ್ಯಂತ ಹಲವು ದೇಶಗಳ ಜನರಲ್ಲಿ ಝಿಂಕ್‌ ಪೌಷ್ಟಿಕಾಂಶದ ಕೊರತೆಯಿರುತ್ತದೆ. ಮೈಕ್ರೊ ಪೌಷ್ಟಿಕಾಂಶವಾಗಿರುವ ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿದ್ದು, ಈ ಕೊರೊನಾ ಸೋಂಕಿನ ಸಂದರ್ಭದಲ್ಲಂತೂ ಈ ಪೌಷ್ಟಿಕಾಂಶದ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದೆ. ಝಿಂಕ್‌ ಉರಿಯೂತವನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ಜೀವಕೋಶಗಳಿಗೆ ತುಂಬುತ್ತದೆ. ಜೊತೆಗೆ ಝಿಂಕ್‌ ಸಪ್ಲಿಮೆಂಟ್‌ಗಳನ್ನು ಕೊಡುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ದೇಹಕ್ಕೆ ಬಲ ನೀಡಬಹುದು. ಹಾಗೆಯೇ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುವಾಗ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿದ್ದರೆ ಒಳ್ಳೆಯದು ಎಂಬುದು ಸಾಬೀತಾಗಿದೆ.

‘ಜೀವಕೋಶದ ಒಳಗೆ ವೈರಸ್‌ ಹೋಗುವುದನ್ನು ಝಿಂಕ್‌ (ಸತು) ತಡೆಯುತ್ತದೆ. ಜತೆಗೆ ವೈರಸ್‌ ದೇಹದೊಳಗೆ ಬೆಳೆಯುವುದನ್ನು ಕೂಡ ತಡೆಯುತ್ತದೆ. ಹಾಗಾಗಿ ಎಲ್ಲ ಕಾಲದಲ್ಲೂ ದೇಹದಲ್ಲಿ ಝಿಂಕ್‌ ಇರಬೇಕು. ಕೊರೊನಾ ಕಾಲದಲ್ಲಿ ಝಿಂಕ್‌ ಇಲ್ಲದೇ ಇದ್ದರೆ ಅದೇ ಅಪಾಯಕ್ಕೆ ಆಹ್ವಾನವಾಗುತ್ತದೆ’ ಎನ್ನುತ್ತಾರೆ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಕೆ.ಎಸ್‌. ಮೀನಾಕ್ಷಿ.

ರೋಗನಿರೋಧಕ ಶಕ್ತಿಯಲ್ಲಿ ಬಿಳಿ ರಕ್ತಕಣಗಳ ಪಾತ್ರ ಬಹುಮುಖ್ಯವಾಗಿರುತ್ತದೆ. ಮತ್ತು ಅವುಗಳಲ್ಲಿ ವಿಷಪೂರಿತ ಫ್ರೀ ರೇಡಿಕಲ್ಸ್‌ಗಳ ಉತ್ಪತ್ತಿಯನ್ನು ತಡೆಯುವ ಶಕ್ತಿ ಇರುತ್ತದೆ. ಜೀವಕೋಶಗಳ ನಾಶವನ್ನು ತಡೆಯುತ್ತದೆ. ಬಿಳಿರಕ್ತಕಣಗಳು ಪ್ರಬಲವಾಗಿರಬೇಕಿದ್ದರೆ ಝಿಂಕ್‌ ಅವಶ್ಯಕ.

ಕುಡಿಯುವ ನೀರಿನಲ್ಲಿ ಕೂಡ ಸತುವಿನ ಅಂಶ ಇರುತ್ತದೆ. ಅದರ ಪ್ರಮಾಣ ಲೀಟರ್‌ಗೆ 0.1 ಮಿಲಿಗ್ರಾಂನಷ್ಟು ಇರುತ್ತದೆ. ಆದರೆ ಕೊಳವೆಬಾವಿ ನೀರು, ಕೊಳಾಯಿ ನೀರಿನಲ್ಲಿ ಈ ಅಂಶ ಹೆಚ್ಚಿರುತ್ತದೆ. ಯಕೃತ್ತಿನ ಸಮಸ್ಯೆ, ರಕ್ತಹೀನತೆ ಸಂಬಂಧಿ ಕಾಯಿಲೆಗಳು, ಹೃದಯ ಸಂಬಂಧಿ ಕಾಯಿಲೆಗಳು ಬರಲು ಕೂಡ ಝಿಂಕ್ ಕೊರತೆಯೇ  ಕಾರಣವಾಗಿರುತ್ತದೆ. ದೇಹದಲ್ಲಿ ಶೇ 1.4ರಿಂದ 2.3 ಝಿಂಕ್‌ ಇರಬೇಕು. ಜಿಂಕ್‌ ಪ್ಲಾಸ್ಮ ಲೆವೆಲ್‌ ಆರೋಗ್ಯವಂತ ಮಕ್ಕಳ ದೇಹದಲ್ಲಿ 89 ಮಿಲಿಗ್ರಾಂ ಹಾಗೂ ದೊಡ್ಡವರ ದೇಹದಲ್ಲಿ 96.4 ಮಿಲಿಗ್ರಾಂ ಇರಬೇಕು. ಮಕ್ಕಳಿಗೆ 5ರಿಂದ 10 ಮಿಲಿಗ್ರಾಂ, ಮಹಿಳೆಯರಿಗೆ 12 ಮಿಲಿಗ್ರಾಂ, ಪುರುಷರಿಗೆ 15 ಮಿಲಿಗ್ರಾಂ ಝಿಂಕ್‌ ಅವಶ್ಯಕತೆ ಇರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು