ಸ್ಮರಣ ಶಕ್ತಿ ಅಥವಾ ನೆನಪಿನ ಶಕ್ತಿ ಮಾನವನ ಜ್ಞಾನಾತ್ಮಕ ಪ್ರಕ್ರಿಯೆಯ ಪ್ರಮುಖ ಅಂಗವೆಂದು ಮನೋವಿಜ್ಞಾನ ಹೇಳುತ್ತದೆ. ಇದು ಕಲಿಕೆ, ಚಿಂತನೆ, ನಿರ್ಣಯ ತೆಗೆದುಕೊಳ್ಳವುದು ಹಾಗೂ ವ್ಯಕ್ತಿತ್ವ ವಿಕಾಸದ ಮೂಲವಾಗಿದೆ. ಮನೋವಿಜ್ಞಾನಿಗಳು ಸ್ಮರಣೆ ಶಕ್ತಿಯನ್ನು ಅರ್ಥಮಾಡಿಕೊಳ್ಳಲು ಹಲವು ಪ್ರಯೋಗಗಳನ್ನು ನಡೆಸಿದ್ದಾರೆ. ಪ್ರತಿಯೊಂದು ತತ್ವವೂ ಸ್ಮರಣೆಯ ಕುರಿತ ರಚನೆ, ಸಂಗ್ರಹಣೆ ಮತ್ತು ಮರುಸ್ಮರಣೆ ಕುರಿತಾಗಿ ವಿಶಿಷ್ಟ ದೃಷ್ಟಿಕೋನ ನೀಡುತ್ತವೆ ಎಂದು ಮನೋವಿಜ್ಞಾನ ಹೇಳುತ್ತದೆ.

ಸಂವಹನಾತ್ಮಕ ಅಥವಾ ಸಂಸ್ಕರಣಾ ತತ್ವದ ಪ್ರಕಾರ ಸ್ಮರಣೆಯು ಕಂಪ್ಯೂಟರ್ ಮಾದರಿಯಂತೆ ಮೂರು ಹಂತಗಳಲ್ಲಿ ನಡೆಯುತ್ತದೆ ಎಂದು ಮನೋವಿಜ್ಞಾನ ಹೇಳುತ್ತದೆ. ನೆನೆಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ತಂತ್ರಗಳು ಯಾವುವು ಎಂದು ತಿಳಿಯೋಣ .

ನೆನಪಿನ ಶಕ್ತಿಯ 3 ಹಂತಗಳು:

ಎನ್ಕೋಡಿಂಗ್: ಮಾಹಿತಿ ಗ್ರಹಿಕೆ ಮತ್ತು ಅರ್ಥಮಾಡಿಕೊಳ್ಳುವುದು.

ಸ್ಟೋರೇಜ್ : ಮಾಹಿತಿಯನ್ನು ಮನಸ್ಸಿನಲ್ಲಿ ಸಂಗ್ರಹಿಸುವುದು.

ರಿಟ್ರೀವಲ್ : ಅಗತ್ಯವಿದ್ದಾಗ ಅದನ್ನು ನೆನಪಿಗೆ ತರುವುದು.

ನೆನಪಿನ ಶಕ್ತಿಯನ್ನು ಹೆಚ್ಚಿಸುವ ತಂತ್ರಗಳು:

ಅರ್ಥಪೂರ್ಣ ಕಲಿಕೆಯ:

ಆಸೂಬೆಲ್ ಹೇಳುವಂತೆ, ಹೊಸ ಮಾಹಿತಿಯನ್ನು ಹಳೆಯ ಜ್ಞಾನಕ್ಕೆ ಸಂಯೋಜಿಸಿದಾಗ ಅದು ದೀರ್ಘಕಾಲದ ಸ್ಮೃತಿಕೋಶದಲ್ಲಿ ಉಳಿಯುತ್ತದೆ.

ತಂತ್ರ:

ಹೊಸ ಪಾಠವನ್ನು ಹಳೆಯ ಉದಾಹರಣೆ ಅಥವಾ ಅನುಭವದ ಆಧಾರದಲ್ಲಿ ಕಲಿಯಬೇಕು.

ಸಂಗ್ರಹಿತ ಜ್ಞಾನಕ್ಕೆ ಸಂಬಂಧಿಸಿದ ಚಾರ್ಟ್ಗಳು, ಮೈಂಡ್ ಮ್ಯಾಪ್ಗಳು ಉಪಯುಕ್ತ.

ಅನುಬಂಧನ ಕಲಿಕೆ:

ಈ ತತ್ವದ ಪ್ರಕಾರ ಕಲಿಕೆ ಮತ್ತು ಸ್ಮರಣೆಯು ಪ್ರೇರಣೆ ಮತ್ತು ಪ್ರತಿಕ್ರಿಯೆ ನಡುವಿನ ಮೇಲೆ ನಿರ್ಧಾರಿತವಾಗಿರುತ್ತದೆ.

ತಂತ್ರ:

ಪಾಠದ ನಂತರ ಪ್ರಶಂಸೆ ಅಥವಾ ಬಹುಮಾನ ನೀಡುವುದರಿಂದ ಸ್ಮರಣೆ ಬಲವಾಗುತ್ತದೆ.

ಪುನರಾವರ್ತನೆ ಮತ್ತು ಧನಾತ್ಮಕ ಬಲವರ್ಧನೆ ಸ್ಮರಣೆಗೆ ಸಹಕಾರಿ.

ರಚನಾತ್ಮಕವಾದ :

ವ್ಯಕ್ತಿ ತನ್ನ ಅನುಭವದ ಆಧಾರದ ಮೇಲೆ ಜ್ಞಾನವನ್ನು ರಚಿಸಿಕೊಳ್ಳುತ್ತಾನೆ. ಸ್ಮರಣೆ ಎಂದರೆ ಕೇವಲ ಸಂಗ್ರಹವಲ್ಲ, ಅದು ಪುನಃ ರಚನೆ ಪ್ರಕ್ರಿಯೆ.

ತಂತ್ರ:

ಕಲಿಕೆ ಸಕ್ರಿಯವಾಗಿರಬೇಕು.

ಚರ್ಚೆ, ಪ್ರಶ್ನೋತ್ತರ ಹಾಗೂ ಪ್ರಾಯೋಗಿಕ ಚಟುವಟಿಕೆಗಳು ಸ್ಮರಣೆಯನ್ನು ಬಲಪಡಿಸುತ್ತವೆ.

ಅರಿವಿನ ತತ್ವ :

ಮಾನಸಿಕ ಪ್ರಕ್ರಿಯೆಗಳು, ಅಂದರೆ ಚಿಂತನೆ, ಗ್ರಹಿಕೆ, ಅರ್ಥಮಾಡಿಕೊಳ್ಳುವಿಕೆ ಇವುಗಳ ಸಂಯೋಜನೆಯಿಂದ ಸ್ಮರಣೆ ರೂಪಗೊಳ್ಳುತ್ತದೆ.

ತಂತ್ರ:

ಕಲಿಕೆಯ ಸಮಯದಲ್ಲಿ ಚಿಂತನೆ ಮತ್ತು ವಿಶ್ಲೇಷಣೆ ಮಾಡಬೇಕು.

ಪಾಠವನ್ನು ಕೇವಲ ನೆನಪಿಸಿಕೊಳ್ಳುವುದಲ್ಲ, ಅದರ ತಾರ್ಕಿಕ ಅರ್ಥ ತಿಳಿಯಬೇಕು.

ಈ ಮೇಲಿನ ಹಂತಗಳನ್ನು ಕಲಿಕೆಯಲ್ಲಿ ಅಳವಡಿಸಿಕೊಂಡಾಗ ನೆನೆಪಿನ ಶಕ್ತಿ ಹೆಚ್ಚಾಗುತ್ತದೆ ಎಂದು ಮನೋವಿಜ್ಞಾನ ಹೇಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.