ಮಂಗಳವಾರ, ಏಪ್ರಿಲ್ 20, 2021
26 °C

ಆರು ವಾರಕ್ಕಿಂತ, ಮೂರು ತಿಂಗಳ ಅವಧಿಯ ಲಸಿಕೆ ಡೋಸೇಜ್‌ಗಳು ಪರಿಣಾಮಕಾರಿ: ಅಧ್ಯಯನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಆರು ವಾರಗಳ ಅಂತರಕ್ಕಿಂತ, ಮೂರು ತಿಂಗಳ ಅಂತರದಲ್ಲಿ ಪಡೆಯುವ ಆಕ್ಸ್‌ಫರ್ಡ್‌ ಕೋವಿಡ್‌ 19 ಲಸಿಕೆಯ ಎರಡು ಡೋಸೇಜ್‌ಗಳು ತುಂಬಾ ಪರಿಣಾಮಕಾರಿಯಾಗಲಿವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಈ ಅಧ್ಯಯನದ ಪ್ರಕಾರ ಎರಡು ಡೋಸ್‌ಗಳಲ್ಲಿ ಮೊದಲ ಡೋಸ್ ಶೇ 76ರಷ್ಟು ಪರಿಣಾಮಕಾರಿಯಾಗಿ ರಕ್ಷಣೆ ನೀಡುತ್ತದೆ.

ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ 3 ನೇ ಹಂತದ ಯಾದೃಚ್ಛಿಕ ನಿಯಂತ್ರಿತ ಪ್ರಯೋಗದ ವಿಶ್ಲೇಷಣೆಯ ಫಲಿತಾಂಶಗಳು, ಮೊದಲ ಡೋಸ್ ಲಸಿಕೆ, ಮೂರು ತಿಂಗಳ ಅಂತರದಲ್ಲಿ ಲಸಿಕೆ ತೆಗೆದುಕೊಳ್ಳುವವರೆಗೂ, ರಕ್ಷಣೆಯನ್ನು ವಿಸ್ತರಿಸಬಹುದು ಎನ್ನುತ್ತದೆ.

ಬ್ರಿಟನ್‌ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳೂ ಸೇರಿದಂತೆ ಸಂಶೋಧಕರ ಪ್ರಕಾರ, ಲಸಿಕೆ ಸರಬರಾಜು ಆರಂಭದಲ್ಲಿ ಸೀಮಿತವಾಗಿದ್ದರೂ ಈ ಡೋಸೇಜ್‌ಗಳು ಪ್ರಯೋಜನಕಾರಿ ಆಗಿವೆ. ಜನರಿಗೆ ವೇಗವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದು ನೆರವಾಗುತ್ತದೆ ಎನ್ನುತ್ತಾರೆ.

ಲಸಿಕೆಯ ಪೂರೈಕೆ ಕಡಿಮೆ ಇರುವ ಈ ಅವಧಿಯಲ್ಲಿ ಹೆಚ್ಚಿನ ಸಾರ್ವಜನಿಕರಿಗೆ ಆರೋಗ್ಯದ ಅನುಕೂಲ ಕಲ್ಪಿಸುವುದರತ್ತ ನೀತಿ ನಿರ್ಮಾಪಕರು ಯೋಜಿಸಬೇಕಿದೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಧ್ಯಯನದ ಪ್ರಮುಖ ಲೇಖಕ ಪ್ರೊ. ಆಂಡ್ರ್ಯೂ ಪೊಲಾರ್ಡ್ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು