ಗರ್ಭಧಾರಣೆ ಸಂದಸರ್ಭದಲ್ಲಿ ಪುರುಷ ಮತ್ತು ಮಹಿಳೆ ಇಬ್ಬರೂ ಸಮಸ್ಯೆಗಳನ್ನು ಎದರಿಸುತ್ತಾರೆ. ಆ ಪೈಕಿ ಗರ್ಭಧಾರಣೆ ವೇಳೆ ಮುಖ್ಯವಾಗಿ ಕಾಡುವ ಸಮಸ್ಯೆಯೇ ಥೈರಾಯ್ಡ್. ಈ ಸಮಸ್ಯೆಯನ್ನು ಅಷ್ಟಾಗಿ ಪರಿಗಣಿಸದೇ ನಿರ್ಲಕ್ಷ್ಯ ಮಾಡುತ್ತಾರೆ. ಇದು ನೇರವಾಗಿ ಫಲವತ್ತತೆಯ ಮೇಲೆ ಪ್ರಭಾವ ಬೀರುತ್ತದೆ.
.ಯೋಗದಿಂದ ಥೈರಾಯ್ಡ್ ನಿಯಂತ್ರಿಸುವುದು ಹೇಗೆ? | Yoga Day.ಥೈರಾಯ್ಡ್ ಬಗ್ಗೆ ನಿಮಗಿರುವ ಅನುಮಾನಗಳಿಗೆ ವೈದ್ಯರ ಸಲಹೆ ಇಲ್ಲಿದೆ.
ಫಲವತ್ತತೆಯಲ್ಲಿ ಥೈರಾಯ್ಡ್ ಪಾತ್ರ

ಥೈರಾಯ್ಡ್ ಗ್ರಂಥಿ ಟಿ3 ಮತ್ತು ಟಿ4 ಹಾರ್ಮೋನ್ಗಳನ್ನು ಉತ್ಪಾದಿಸುತ್ತದೆ. (ಅಂದರೆ ಬೆಳವಣಿಗೆ, ದೇಹದ ಉಷ್ಣತೆ ಮತ್ತು ಹೃದಯ ಬಡಿತವನ್ನು ನಿಯಂತ್ರಿಸುವ ಗ್ರಂಥಿಗಳು) ಇವು ದೇಹದ ಚಯಾಪಚಯ ಹಾಗೂ ಸಂತಾನೋತ್ಪತ್ತಿಯ ಹಾರ್ಮೋನ್ಗಳನ್ನು ನಿಯಂತ್ರಿಸುತ್ತವೆ. ಮಿದುಳು ಮತ್ತು ಅಂಡಾಶಯಗಳೊಂದಿಗೆ ಸಮನ್ವಯತೆಯನ್ನು ಕಾಪಾಡುವ ಮೂಲಕ ಅಂಡೋತ್ಪತ್ತಿಗೆ ಸಹಕಾರಿಯಾಗಿದೆ. ಈ ಗ್ರಂಥಿಯ ಸಣ್ಣ ಮಟ್ಟದ ಬದಲಾವಣೆ ಗರ್ಭಧಾರಣೆಯ ಮೇಲೆ ಪರಿಣಾಮ ಬೀರುತ್ತದೆ.

ಥೈರಾಯ್ಡ್ನಲ್ಲಿದೆ ಎರಡು ವಿಧ

ಹೈಪೋಥೈರಾಯ್ಡಿಸಮ್ – ಕಡಿಮೆ ಹಾರ್ಮೋನುಗಳ ಸಕ್ರಿಯತೆ

ಹೈಪರ್ಥೈರಾಯ್ಡಿಸಮ್ – ಹೆಚ್ಚು ಹಾರ್ಮೋನುಗಳ ಸಕ್ರಿಯತೆ

ಇವು ವಿಭಿನ್ನ ರೀತಿಯಲ್ಲಿ ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದು.

ಹೈಪೋಥೈರಾಯ್ಡಿಸಮ್ ಮತ್ತು ಹೈಪರ್ಥೈರಾಯ್ಡಿಸಮ್ ಹೇಗೆ ಪ್ರಭಾವ ಬೀರಲಿದೆ?

ಅನಿಯಮಿತ ಅಥವಾ ಹೆಚ್ಚಿನ ರಕ್ತಸ್ರಾವದ ಮುಟ್ಟಿಗೆ ಕಾರಣವಾಗಬಹುದು. ಅಂಡಾಣು ಅಭಾವದಿಂದ ಬಂಜೆತನಕ್ಕೆ ಕಾರಣವಾಗಬಹುದು. ಗರ್ಭಪಾತದ ಅಪಾಯಕ್ಕೂ ಕಾರಣವಾಗಿದೆ. ದೇಹದಲ್ಲಿ ದಣಿವು, ತೂಕ ಹೆಚ್ಚಳ, ಒಣ ಚರ್ಮ, ಮನಸ್ಸಿನಲ್ಲಿ ಚಂಚಲತೆ ಇತ್ಯಾದಿ ತೊಂದರೆಗಳನ್ನು ಮಹಿಳೆಯರು ಅನುಭವಿಸುತ್ತಾರೆ. ವೈದ್ಯರ ಸಲಹೆಯಲ್ಲಿ ಇದನ್ನು ಸುಲಭವಾಗಿ ಪರಿಹಾರಿಸಬಹುದಾಗಿದೆ.

ಪುರುಷರಲ್ಲಿಯೂ ಸಮಸ್ಯೆ ಉಂಟು ಮಾಡಬಹುದು

ಥೈರಾಯ್ಡ್ ಸಮಸ್ಯೆಯಿಂದಾಗಿ ಪುರುಷರಲ್ಲಿಯೂ ವೀರ್ಯಾಣು ಸಂಖ್ಯೆ, ಅವುಗಳ ಚಲನೆ ಮತ್ತು ಲೈಂಗಿಕ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು. ಆದರೆ ಚಿಕಿತ್ಸೆ ಪಡೆದು ಪರಿಹರಿಸಿಕೊಳ್ಳಬಹುದು.

ಥೈರಾಯ್ಡ್ ಪರೀಕ್ಷೆ ಹೇಗೆ?

ಋತುಚಕ್ರ ಅನಿಯಮಿತವಾಗಿದ್ದಾಗ

ಅಸಾಮಾನ್ಯ ತೂಕ ಬದಲಾವಣೆ

ಕುಟುಂಬದಲ್ಲಿ ಥೈರಾಯ್ಡ್ ಇತಿಹಾಸ ಇದ್ದರೆ

ಪದೇಪದೇ ಗರ್ಭಪಾತ ಸಂಭವಿಸಿದ್ದರೆ

ಅತಿಯಾಗಿ ಕೂದಲು ಉದುರುವುದು

ನಿರಂತರ ಧಣಿವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.