ಶುಕ್ರವಾರ, ಮೇ 20, 2022
26 °C
ಫೊರ್ಟಿಸ್ ಆಸ್ಪತ್ರೆಯ ಎಂಡೋಕ್ರೈನಾಲಜಿಸ್ಟ್ ಕನ್ಸಲ್ಟೆಂಟ್ ಡಾ. ಶ್ರೀನಿವಾಸ ಮುನಿಗೋಟಿ 

ಥೈರಾಯ್ಡ್ ಬಗ್ಗೆ ನಿಮಗಿರುವ ಅನುಮಾನಗಳಿಗೆ ವೈದ್ಯರ ಸಲಹೆ ಇಲ್ಲಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಥೈರಾಯ್ಡ್.. ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಅದರಲ್ಲೂ ಪುರಷರಿಗಿಂತ ಮಹಿಳೆಯರಲ್ಲೇ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಆದರೆ, ಕೆಲವೊಮ್ಮೆ ಥೈರಾಯ್ಡ್ ಬಗ್ಗೆ ಸೂಕ್ತ ಮಾಹಿತಿ ಇಲ್ಲದೇ ಎಲ್ಲಾ ಲಕ್ಷಣಗಳನ್ನೂ ಥೈರಾಯ್ಡ್ ಎಂಬ ಭಾವಿಸಿ, ಅದಕ್ಕೆ ಅನೌಚಾರಿಕೆ ಚಿಕಿತ್ಸೆ ಪಡೆಯುತ್ತಿರುವುದು ಇನ್ನಷ್ಟು ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎನ್ನುವುದು ಅಧ್ಯಯನಗಳಿಂದ ತಿಳಿದು ಬರುತ್ತಿದೆ. ಹೀಗಾಗಿ ಥೈರಾಯ್ಡ್ ಬಗ್ಗೆ ಸೂಕ್ತ ಅರಿವು ಮೂಡಿಸುವ ದೃಷ್ಟಿಯಿಂದ ಜನವರಿ ತಿಂಗಳನ್ನು “ಥೈರಾಯ್ಡ್ ಜಾಗೃತಿ” ಮಾಸವೆಂದು ಆಚರಿಸಲಾಗುತ್ತದೆ. ಥೈರಾಯ್ಡ್ ಬಗ್ಗೆ ನಿಮಗಿರುವ ಎಲ್ಲಾ ಅನುಮಾನಗಳಿಗೂ ವೈದ್ಯರು ಮಾಹಿತಿ ನೀಡಿದ್ದಾರೆ. 

ಥೈರಾಯ್ಡ್‌ನಿಂದ ತೂಕ ಹೆಚ್ಚಳವಾಗಲಿದೆಯೇ?: ಥೈರಾಯ್ಡ್ ಕುತ್ತಿಗೆ ಭಾಗದಲ್ಲಿ ಚಿಟ್ಟಿಯಾಕಾರ ಗ್ರಂಥಿಯಾಗಿದ್ದು, ಇದು ಟಿ-3 ಹಾಗೂ ಟಿ-4 ಹಾರ್ಮೋನ್‌ಗಳನ್ನು ಉತ್ಪತ್ತಿಸುತ್ತವೆ. ಇದು ಪಿಟ್ಯುಟರಿ ಗ್ರಂಥಿಯಿಂದ ಸ್ರವಿಸುವ ಥೈರಾಯ್ಡ್ ಆಗಿದ್ದು, ಟಿಎಸ್‌ಎಚ್ ಹಾರ್ಮೋನ್ ಉತ್ಪದಿಸಲಿದ್ದು, ದೇಹದ ಪಚನ ಕ್ರಿಯೆಯನ್ನು ನಿಯಂಥ್ರಿಸುತ್ತದೆ. ಥೈರಾಯ್ಡ್ನಲ್ಲಿ ಹೈಪೋ ಥೈರಾಯ್ಡ್ ಮಹಿಳೆಯರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ಅತ್ಯಂತ ಅಪಾಯಕಾರಿ ಕೂಡ ಹೌದು. ಹೈಪೋ ಥೈರಾಯ್ಡ್‌ನಿಂದ ಪಚನ ಕ್ರಿಯೆ ಸಂಪೂರ್ಣ ನಿಧಾನವಾಗುವುದರಿಂದ ದೇಹದಲ್ಲಿ ತೂಕ ಹೆಚ್ಚಳವಾಗುತ್ತದೆ. ಇದು ಕೂದಲು ಉದುರುವಿಕೆ, ರಕ್ತದೊತ್ತಡ ಹೆಚ್ಚಳ, ಸಕ್ಕರೆ ಕಾಯಿಲೆ ಇತ್ಯಾದಿ ರೋಗಕ್ಕೆ ಕಾರಣವಾಗಬಹುದು. ಹೀಗಾಗಿ ಥೈರಾಯ್ಡ್ನ ಲಕ್ಷಣ ಕಂಡು ಬಂದ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಬೇಕು

ಥೈರಾಯ್ಡ್‌ಗೆ ಶಾಶ್ವತ ಮದ್ದಿಲ್ಲವೇ: ಬಹುತೇಕರಿಗೆ ಈ ಬಗ್ಗೆ ಅನುಮಾನ ಇದ್ದೇ ಇದೆ. ಥೈರಾಯ್ಡ್ ಬಂದ ಬಳಿಕ ಸಾಯುವವರೆಗೂ ಚಿಕಿತ್ಸೆ ಪಡೆದುಕೊಳ್ಳುತ್ತಲೇ ಇರಬೇಕು ಎಂಬ ಅನುಮಾನ ಮೂಡುತ್ತದೆ.  ಆದರೆ ಇದು ತಪ್ಪು ಕಲ್ಪನೆ. ಥೈರಾಯ್ಡ್ ಪ್ರಾರಂಭದಲ್ಲಿಯೇ ಅದಕ್ಕೆ ಚಿಕಿತ್ಸೆ ಮೂಲಕ ಪರಿಹಾರ ಪಡೆದುಕೊಳ್ಳಬಹುದು. ಜೊತೆಗೆ ಕಡಿಮೆ ಕ್ಯಾಲೋರಿ ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮವನ್ನು ಅನುಸರಿಸುವುದರಿಂದ ಥೈರಾಯ್ಡ್ಗೆ ಶಾಶ್ವತ ಪರಿಹಾರ ಪಡೆಯಬಹುದು.

ಥೈರಾಯ್ಡ್ ಗರ್ಭಧಾರಣೆಗೆ ತೊಡಕಾಗುವುದೇ: ಹೌದು, ಥೈರಾಯ್ಡ್ನಿಂದ ಮಹಿಳೆಯರು ಗರ್ಭ ಧರಿಸುವುದಾಗಲಿ ಅಥವಾ ಗರ್ಭ ಧರಿಸಿದ್ದರೆ ಮಗುವಿನ ಜನನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಆದರೆ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದರೆ ಯಾವುದೇ ಪರಿಣಾಮಗಳಿಲ್ಲದೇ ಆರೋಗ್ಯಕರ ಮಗುವಿಗೆ ಜನ್ಮ ನೀಡಲು ಸಾಧ್ಯವಿದೆ.

ಥೈರಾಯ್ಡ್ ಔಷಧಿ ಅಡ್ಡ ಪರಿಣಾಮವಿದೆಯೇ?  ಥೈರಾಯ್ಡ್ ಸಮಸ್ಯೆ ಬಂತೆಂದರೆ ದೀರ್ಘಾವಧಿಯವರೆಗೇ ಔಷಧಿ ತೆಗೆದುಕೊಳ್ಳಬೇಕಾಗಬಹುದು. ಆದರೆ ಕೆಲವರು ಈ ಔಷಧಗಳನ್ನು ವೈದ್ಯರ ಸಲಹೆ ಮೀರಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಾರೆ. ಇದು ಕೂಡ ಅಡ್ಡಪರಿಣಾಮಕ್ಕೆ ಕಾರಣವಾಗಬಹುದು. ಹೀಗಾಗಿ ಥೈರಾಯ್ಡ್ಗೆ ವೈದ್ಯರ ನೀಡುವ ಪ್ರಮಾಣದಲ್ಲಿಯೇ ಔಷಧಿ ತೆಗೆದುಕೊಳ್ಳುವುದು ಉತ್ತಮ.

ಆಹಾರ ಕ್ರಮ ಉತ್ತಮವಾಗಿರಲಿ: ಥೈರಾಯ್ಡ್ ಹೊಂದಿರುವವರು ಆಹಾರ ಸೇವನೆಯಲ್ಲಿ ಹೆಚ್ಚು ಗಮನ ವಹಿಸಬೇಕು. ಕಡಿಮೆ ಕ್ಯಾಲೋರಿ ಇರುವ ಆಹಾರ ಸೇವನೆ ಮಾಡುತ್ತಾ, ಯೋಗ ಅಥವಾ ವ್ಯಾಯಾದಂಥ ದೈಹಿಕ ಚಟುವಟಿಕೆ ಕಡ್ಡಾಯವಾಗಿ ಜೀವನದ ಭಾಗವಾಗಿಸಿಕೊಳ್ಳಬೇಕು. ಇಲ್ಲವಾದಲ್ಲಿ ಥೈರಾಯ್ಡ್ ಜೀವನದ ಭಾಗವಾಗಿ ಶಾಶ್ವತವಾಗಿ ಉಳಿದುಕೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು