ನನಗೆ 29 ವರ್ಷ. ಮದುವೆಯಾಗಿ 12 ವರ್ಷ ಆಗಿದೆ. ಸರಿಯಾಗಿ ಮುಟ್ಟು ಆಗುತ್ತದೆ. ಆದರೆ ಮುಟ್ಟು ನಿಂತು ಎರಡು–ಮೂರು ದಿನಗಳಾದ ಮೇಲೆ ಮತ್ತೆ ಸ್ವಲ್ಪ ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ. ಮತ್ತೆ ನಿಲ್ಲುತ್ತದೆ. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿ, ಗರ್ಭಕೋಶ ಸ್ವಲ್ಪ ದಪ್ಪಗಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಏನಾದರೂ ತೊಂದರೆ ಇದೆಯೇ?.
ADVERTISEMENT
ಉ
ನೀವು ಒಮ್ಮೆ ತಜ್ಞ ವೈದ್ಯರಿಂದ ಸ್ಪೆಕ್ಯೂಲಂ ಪರೀಕ್ಷೆ ಮಾಡಿಸಿಕೊಳ್ಳಿ. ಕೆಲವೊಮ್ಮೆ ಗರ್ಭಕೋಶದ ಬಾಯಲ್ಲಿ ಪಾಲಿಪ್‍ನಂತಹ ತೊಂದರೆ ಇದ್ದರೆ ಹೀಗೆ ಆಗಬಹುದು. ಕೆಲವೊಮ್ಮೆ ಕಾಪರ್ ಟಿಯಂತಹ ಉಪಕರಣ ಗರ್ಭಕೋಶದಲ್ಲಿ ಇದ್ದಾಗ ಅಥವಾ ಹಾರ್ಮೋನುಗಳ ಏರುಪೇರಿನಿಂದಲೂ ಈ ರೀತಿಯಾಗುತ್ತದೆ. ಆದ್ದರಿಂದ ಇನ್ನೊಮ್ಮೆ ಪರೀಕ್ಷಿಸಿಕೊಳ್ಳಿ.