ಚಳಿಗಾಲ ಎಂದರೆ ಚರ್ಮ ಒಡೆಯುವ ಕಾಲ ಎಂಬುದು ಸರ್ವರಿಗೂ ತಿಳಿದಿರುವ ವಿಷಯ. ಆದರೆ ಋತುವಿನ ಅತಿಯೋಗವೆಂಬಂತೆ ಈ ವರ್ಷ ಕೊರೆಯುವ ಚಳಿ ಇದೆ. ಎಲ್ಲರ ಮನೆಯಲ್ಲಿ ಒಳಗೆ ಸೇರಿದ್ದ ಸ್ವೆಟರು, ಶಾಲು, ಕಾಲು ಚೀಲ, ಕೈ ಗವಸುಗಳು ಹೊರಗೆ ಬಂದಿದೆ. ಚಳಿಗಾಲದ ಅತಿ ಶೀತದಿಂದಾಗಿ ಚರ್ಮಕ್ಕೆ ರಕ್ತಪರಿಚಲನೆಯು ಕಡಿಮೆಯಾಗುತ್ತದೆ. ಚರ್ಮವು ಒಣಗುತ್ತದೆ. ಹಾಗೆಯೇ ಗಂಟುಗಳಲ್ಲಿರುವ ಜಿಡ್ಡಿನ ಅಂಶವೂ ಒಣಗುವುದರಿಂದ ಗಂಟುನೋವುಗಳೂ ಹೆಚ್ಚಾಗುತ್ತವೆ. ಆದ್ದರಿಂದ ಚಳಿಗಾಲದಲ್ಲಿ ಚರ್ಮದ ರಕ್ತಪರಿಚಲನೆಯನ್ನು ಹೆಚ್ಚಿಸುವ ಬಗ್ಗೆ ಹೆಚ್ಚು ಗಮನವನ್ನು ಹರಿಸಬೇಕು.

ಇತ್ತೀಚಿನ ದಿನಗಳಲ್ಲಿ ಚರ್ಮದ ರಕ್ಷಣೆಗಾಗಿ ಅನೇಕ ವಿಧದ ಸೌಂದರ್ಯ ಸಾಧನಗಳನ್ನು ಬಳಸುವುದು ಹೆಚ್ಚಾಗುತ್ತಿದೆ. ಇವುಗಳಲ್ಲಿ ಕೆಲವು ಚರ್ಮಕ್ಕೆ ಹಾನಿಕಾರಕವಾದ ವಸ್ತುಗಳೂ ಇರುತ್ತವೆ. ವಿವಿಧ ರೀತಿಯ ಸೌಂದರ್ಯಸಾಧನಗಳನ್ನು ನಿರಂತರವಾಗಿ ಬಳಸುವುದರಿಂದ ಆ ಸಮಯಕ್ಕೆ ಸೌಂದರ್ಯವನ್ನು ಹೆಚ್ಚಿಸಿದರೂ, ಮುಂದೆ ಅನೇಕ ರೀತಿಯ ಚರ್ಮರೋಗಗಳಿಗೂ ಕಾರಣವಾಗುತ್ತದೆ. ಆದ್ದರಿಂದ ಹೆಚ್ಚು ರಾಸಾಯನಿಕಗಳಿಂದ ಕೂಡಿರುವ ಸೌಂದರ್ಯಸಾಧನಗಳ ನಿರಂತರ ಬಳಕೆ ಒಳ್ಳೆಯದಲ್ಲ.
ಚರ್ಮದ ಸೌಂದರ್ಯವನ್ನು ಕಾಪಾಡಲು, ನಮ್ಮ ಆಹಾರ, ವಿಹಾರ ಅಥವಾ ನಮ್ಮ ದಿನಚರಿಗಳು ಮಹತ್ತರ ಪಾತ್ರವನ್ನು ವಹಿಸುತ್ತವೆ. ನಿತ್ಯ ವ್ಯಾಯಾಮ, ಅಭ್ಯಂಜನ, ಬಿಸಿನೀರಿನ ಸ್ನಾನ ಮುಂತಾದವು ಚರ್ಮದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ.

ಚಳಿಗಾಲದಲ್ಲಿ ಜಿಡ್ಡು ಹೆಚ್ಚಿರುವ ಪದಾರ್ಥಗಳಾದ ಎಳ್ಳು, ಎಳ್ಳಿನಿಂದ ತಯಾರಿಸಿದ ಪದಾರ್ಥಗಳು, ಎಣ್ಣೆಕಾಳುಗಳಾದ ಕಡಲೇಕಾಯಿ, ಬಾದಾಮಿ, ಮುಂತಾದವುಗಳು, ಅವುಗಳಿಂದ ತಯಾರಿಸಿದ ಪದಾರ್ಥಗಳು, ಡೀಡಾಡು, ಪ್ರೋಟೀನು, ಮತ್ತು ಶರ್ಕರ–ಪಿಷ್ಟಗಳನ್ನು ಹದವಾಗಿ ಬೆರೆಸಿ ತಯಾರಿಸಿದ ಹುಗ್ಗಿ ಅಥವಾ ಪೊಂಗಲ್ ಮತ್ತು ದೇಹದ ಉಷ್ಣತೆಯನ್ನು ಕಾಪಾಡಲು ಮೆಣಸಿನ ಖಾರವನ್ನು ಬೆರೆಸಿದ ಖಾರ ಹುಗ್ಗಿ ಅಥವಾ ಪೊಂಗಲ್, ಅಲ್ಲದೆ ಕ್ಷೀರ ಮುಂತಾದ ಸಿಹಿಪದಾರ್ಥಗಳ ಸೇವನೆ ದೇಹವನ್ನು ಬೆಚ್ಚಗಿಡುವುದರ ಜೊತೆಗೆ ಚರ್ಮದ ಕಾಂತಿಯನ್ನು ಕಾಪಾಡಲು ಸಹಾಯವಾಗುತ್ತದೆ. ಹಾಲು, ಹಾಲಿನಿಂದ ತಯಾರಿಸಿದ ಪದಾರ್ಥದ ಸಂವನೆಯೂ ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಾಯವಾಗುತ್ತದೆ. ಆದರೆ ಅತಿ ತಂಪಾದ ಪದಾರ್ಥ, ಐಸ್ ಕ್ರೀಂ, ಮಂಜುಗಡ್ಡೆ ಬೆರೆಸಿರುವ ಹಣ್ಣಿನ ರಸ, ತಂಪಾದ ಮೊಸರು, ಮಜ್ಜಿಗೆಗಳು ಮುಂತಾದ ತಂಪಾದ ಪದಾರ್ಥಗಳ ನೇವನೆ ದೇಹದಲ್ಲಿನ ರೂಕ್ಷತೆಯನ್ನು ಹೆಚ್ಚಿಸುತ್ತದೆ; ಚರ್ಮದ ಕಾಂತಿಯನ್ನು ಹಾಳುಮಾಡುತ್ತದೆ.

ಬಿಸಿ ಪದಾರ್ಥಗಳು, ಬಿಸಿನೀರಿನ ಸೇವನೆ ಚರ್ಮಕ್ಕೆ ನೀರಿನಂಶವನ್ನು ಪೂರೈಸಿ ಚರ್ಮದ ಸ್ನಿಗ್ಧತೆ ಮತ್ತು ಕಾಂತಿಯನ್ನು ಹೆಚ್ಚಿಸುತ್ತದೆ. ಶುಂಠಿ ಮತ್ತು ಏಲಕ್ಕಿ ಬೆರೆಸಿ ಕುದಿಸಿದ ನೀರು ಇನ್ನೂ ಶ್ರೇಯಸ್ಕರ. ವಿರುದ್ಧಾಹಾರಗಳಾದ ಹಾಲು ಮತ್ತು ಹಣ್ಣಿನ ಮಿಶ್ರಣ ಸೇವಿಸುವುದು (ಮಿಲ್ಕ್ ಶೇಕ್ ಗಳು, ಹಾಲು ಬೆರೆಸಿದ ಪ್ರೂಟ್ ಸಾಲಾಡ್ ಗಳು) ಹಾಲು ಉಪ್ಪು ಬೆರೆಸಿ ಸೇವಿಸುವುದು, ಹಾಲನ್ನಕ್ಕೆ ಸಾರು, ಪಲ್ಯಗಳನ್ನು ಬೆರೆಸಿ ಸೇವಿಸುವುದು, ಹಾಲನ್ನು ಬೆರೆಸಿ ಮಾಡಿದ ಪದಾರ್ಥಗಳು, ಮಾಂಸಾಹಾರಕ್ಕೆ ಹಾಲು ಅಥವಾ ಮೊಸರನ್ನು ಬೆರೆಸಿ ತಯಾರಿಸುವುದು – ಇವೆಲ್ಲವೂ ಸಾಮಾನ್ಯವಾಗಿ ಆರೋಗ್ಯಕ್ಕೆ ಹಾನಿಕಾರಕಗಳೇ. ಅದರಲ್ಲೂ ಮುಖ್ಯವಾಗಿ ಚರ್ಮದ ಕಾಂತಿಯನ್ನು ಹಾಳು ಮಾಡಿ, ಅನೇಕ ರೀತಿಯ ಚರ್ಮರೋಗಗಳನ್ನು ಉತ್ಪತ್ತಿ ಮಾಡುವುದರಲ್ಲಿ ಮೊದಲನೆಯ ಸ್ಥಾನದಲ್ಲಿ ನಿಲ್ಲುತ್ತದೆ. ಚಳಿಗಾಲದಲ್ಲಿ ಸಹಜವಾಗಿ ಹಸಿವೆ ಹೆಚ್ಚಾಗುತ್ತದೆ. ಆದ್ದರಿಂದಲೇ ನಿಧಾನವಾಗಿ ಜೀರ್ಣವಾಗುವ ಆಹಾರಪದಾರ್ಥಗಳ ಸೇವನೆ ಈ ಕಾಲದಲ್ಲಿ ಹಿತಕರ.

ಆಯುರ್ವೇದವು ಚಳಿಗಾಲದಲ್ಲಿ ತರಬತುದಾರರೊಂದಿಗೆ ಯುದ್ಧಕಲೆಗಳ ಅಭ್ಯಾಸ ಎಂದರೆ ಕರಾಟೆ, ಟೈಕ್ವೋಂಡೋ ಇತ್ಯಾದಿ ಕ್ರೀಡೆಗಳ ಅಭ್ಯಾಸ ಚರ್ಮ ಮತ್ತು ಮಾಂಸಖಂಡಗಳಿಗೆ ರಕ್ತಪರಿಚಲನೆಯನ್ನು ಹೆಚ್ಚಿಸುವ ಮೂಲಕ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಚಳಿಗಾಲದಲ್ಲಿ ಅತಿಯಾಗಿ ನಡೆದಾಡುವುದಕ್ಕಿಂತ ಮೈ ಬೆರುವಷ್ಟು ವ್ಯಾಯಾಮ ಮಾಡುವುದು ಆರೋಗ್ಯಕರ. ವ್ಯಾಯಮದಿಂದ ನಮ್ಮ ಚರ್ಮದ ರಕ್ಷಣೆಯೂ ಆಗುತ್ತದೆ. ಅತಿಯಾದ ವ್ಯಾಯಮವೂ ದೇಹದ ರೂಕ್ಷತೆಯನ್ನು ಹೆಚ್ಚಿಸಬಹುದು. ಆದ್ದರಿಂದ ಬಲಾತೈಲ, ಮಹಾನಾರಾಯಣ ತೈಲ ಮುಂತಾದ ವಾತಶಾಮಕ ತೈಲಗಳಿಂದ ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ಚರ್ಮದ ರೂಕ್ಷತೆಯೂ ಕಡಿಮೆಯಾಗಿ, ಕಾಂತಿ ಹೆಚ್ಚುತ್ತದೆ.

ಚರ್ಮದ ರೂಕ್ಷತೆಯನ್ನು ಕಡಿಮೆಮಾಡಿ, ಕಾಂತಿಯನ್ನು ಹೆಚ್ಚಿಸಲು ಅಮೃತಬಳ್ಳಿ ಆಡುಸೋಗೆ, ಕಕ್ಕೆ ಎಂಬಂತಹ ಹಣ್ಣುಗಳನ್ನು ಬೆರೆಸಿ ಕುದಿಸಿ ಕಷಾಯ ಮಾಡಿ ಕುಡಿಯುವುದರಿಂದಲೂ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೊಂಗೆ ಎಲೆಯನ್ನು ಹಾಕಿ ಕುದಿಸಿದ ನೀರಿನಿಂದ ಸ್ನಾನ ಮಾಡುವುದರಿಂದ ಚಳಿಗಾಲದಲ್ಲಿ ಮಾತ್ರವಲ್ಲದೆ ಇತರೇ ಕಾಲಗಳಲ್ಲೂ ಚರ್ಮಕ್ಕೆ ಸಂಬಂಧಿಸಿದ ರೋಗಗಳನ್ನು ತಡೆಗಟ್ಟಬಹುದು.

ಸ್ನಾನ ಮಾಡುವಾಗ ಸೋಪಿನ ಬದಲು, ಕಡಲೆ ಹಿಟ್ಟು, ಅಂಟುವಾಳದ ಕಾಯಿಯ ಪುಡಿಯನ್ನು ಬಳಸುವುದರಿಂದ ಚಳಿಗಾಲದಲ್ಲಿ ಮೈ ಒಡೆದು ತುರಿಕೆ ಬರುವುದರಿಂದ ದೂರವಿರಬಹುದು.

ಕಾಲಿನ ಹಿಂಬದಿ ಒಡೆದು ರಕ್ತಬರುವುದು ಚಳಿಗಾಲದಲ್ಲಿ ಸಾಮಾನ್ಯವಾಗಿದೆ. ಅದಕ್ಕೆ ಕೊಬ್ಬರಿ ಎಣ್ಣೆ ಮತ್ತು ಎಳ್ಳೆಣ್ಣೆ ಮಿಶ್ರಣಕ್ಕೆ ಸಮಪ್ರಮಾಣ ಜೇನುಮೇಣವನ್ನು ಸೇರಿಸಿ ಕಾಯಿಸಿ, ಮುಲಾಮನ್ನು ತಯಾರಿಸಿಕೊಂಡು ನಿತ್ಯವೂ ಹಚ್ಚುವುದು ಒಳ್ಳೆಯದು. ಕೇವಲ ಅಂಗಾಲು ಮತ್ತು ಹಿಮ್ಮಡಿಗೆ ಕೊಬ್ಬರಿ ಎಣ್ಣೆ ಮತ್ತು ಎಳ್ಳೆಣ್ಣೆಯ ಮಿಶ್ರಣವನ್ನು ಬೆರಿಸಿ ಬಿಸಿಮಾಡಿ ಹಚ್ಚಿ, ಹದವಾದ ಬಿಸಿನೀರಿನಲ್ಲಿ ಪಾದವನ್ನು ಮುಳುಗಿಸಿ ಹತ್ತು ನಿಮಿಷದ ನಂತರ ಮೃದುವಾದ ಬಟ್ಟೆಯಿಂದ ಕಾಲನ್ನು ಒರೆಸುವುದರಿಂದಲೂ ಕಾಲು ಒಢೆಯುವುದು ತಪ್ಪುತ್ತದೆ.

ಚರ್ಮದ ತುರಿಕೆಯು ಬೇವು ಮತ್ತು ಅರಿಶಿನವನ್ನು ಬೆರೆಸಿ,ಇಡೀ ದೇಹಕ್ಕೆ ಲೇಪಿಸಿ, ಹತ್ತು ನಿಮಿಷದ ನಂತರ ಸ್ನಾನ ಮಾಡುವುದರಿಂದ ಕಡಿಮೆಯಾಗುತ್ತದೆ. ಅಲ್ಲದೆ ಕಮಲದ ಹೂವನ್ನು ಅರೆದು ಮುಖಕ್ಕೆ ಲೇಪಿಸಿ, 48 ನಿಮಿಷಗಳ ನಂತರ ಮುಖ ತೊಳೆಯುವುದರಿಂದ ಮುಖದ ಕಾಂತಿಯು ಹೆಚ್ಚಾಗುತ್ತದೆ. ಹೊಂಗೆ ಎಣ್ಣೆಯನ್ನು ಮೈಗೆ ಹಚ್ಚಿ ಸ್ನಾನ ಮಾಡುವುದರಿಂದಲೂ ಚಳಿಗಾಲದಲ್ಲಿ ಮೈ ತುರಿಸುವುದು ಕಡಿಮೆಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.