ಪಾರ್ಕಿನ್ಸನ್ ಕಾಯಿಲೆಯು ನರಗಳ ದೌರ್ಬಲ್ಯದಿಂದ, ವಿಶೇಷವಾಗಿ ಡೋಪಮೈನ್ ಕೊರತೆಯಿಂದಾಗಿ ಮೆದುಳಿನಲ್ಲಿರುವ ನರಗಳ ಕ್ಷೀಣತೆಯಿಂದಾಗಿ ಉಂಟಾಗುವ ಸ್ಥಿತಿಯಾಗಿದೆ. ಡೋಪಮೈನ್ ಒಂದು ತರಹದ ರಾಸಾಯನಿಕವಾಗಿದ್ದು, ಇದು ದೈಹಿಕ ಚಟುವಟಿಕೆಗಳು, ಚಲನ-ವಲನ, ಮಾನಸಿಕ ಮತ್ತು ಅರಿವಿನ ಕಾರ್ಯಗಳನ್ನು ನಿಯಂತ್ರಿಸುತ್ತದೆ.

ಪಾರ್ಕಿನ್ಸನ್ ಕಾಯಿಲೆಯು ಸಾಮಾನ್ಯವಾಗಿ 60-70 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳಲ್ಲಿ ಕಂಡುಬರುತ್ತದೆ. ಅಪರೂಪವಾಗಿ ಇದು 20 ಮತ್ತು 40 ರ ಹರೆಯದ ಯುವ ವಯಸ್ಕರಲ್ಲಿಯೂ ಕಂಡುಬರುತ್ತದೆ. ಪಾರ್ಕಿನ್ಸನ್ ಕಾಯಿಲೆಯು ಆನುವಂಶಿಕ ಸ್ಥಿತಿಯಾಗಿದೆ ಎಂಬ ಬಲವಾದ ನಂಬಿಕೆ ಇದ್ದರೂ, ವರದಿಯಾದ ಪ್ರಕರಣಗಳಲ್ಲಿ ಕೇವಲ 10-15% ಮಾತ್ರ ಆನುವಂಶಿಕವಾಗಿವೆ.

ಪಾರ್ಕಿನ್ಸನ್ ಕಾಯಿಲೆಯು ಪಾರ್ಶ್ವವಾಯು, ಹೃದಯಾಘಾತಗಳಂತೆ ಜೀವಕ್ಕೆ ಹಾನಿ ತರುವ ಕಾಯಿಲೆಯಲ್ಲ. ಆದಾಗ್ಯೂ, ಇದು ದೈಹಿಕ ಚಲನೆ ಮತ್ತು ಅರಿವಿನ ಮೇಲೆ ಪರಿಣಾಮ ಬೀರುವುದರಿಂದ ಜೀವನದ ಗುಣಮಟ್ಟದ ಮೇಲೆ ಸಮಸ್ಯೆಯುಂಟು ಮಾಡಬಹುದು. ಆದರೆ, ಅತ್ಯಾಧುನಿಕ ಸುಧಾರಿತ ಚಿಕಿತ್ಸಾ ಕ್ರಮಗಳು ಮತ್ತು ನಿಯಮಿತ ವೈದ್ಯಕೀಯ ಮೇಲ್ವಿಚಾರಣೆಯ ಮೂಲಕ ರೋಗಲಕ್ಷಣಗಳಲ್ಲಿ ಸುಧಾರಣೆ ಅಥವಾ ರೋಗ ಉಲ್ಬಣಿಸುವುದನ್ನು ನಿಯಂತ್ರಿಸುವುದು ಸಾಧ್ಯ. ಹಾಗಾಗಿ ಪಾರ್ಕಿನ್ಸನ್ ಕಾಯಿಲೆ ಇರುವ ವ್ಯಕ್ತಿಗಳೂ ಸಹ ಇತರ ವ್ಯಕ್ತಿಗಳಂತೆ ಸಾಮಾನ್ಯ ಜೀವನವನ್ನು ನಡೆಸಬಹುದು.

ಪಾರ್ಕಿನ್ಸನ್ ಕಾಯಿಲೆಗೆ ಕಾರಣಗಳೇನು?

ಪಾರ್ಕಿನ್ಸನ್ ಕಾಯಿಲೆ ಸ್ಪೋರಾಡಿಕ್ ಅಂದರೆ ಒಂದೇ ಪೀಳಿಗೆಯ ಮೇಲೆ ಪರಿಣಾಮ ಬೀರಬಹುದು ಅಥವಾ ಅದು ಆನುವಂಶಿಕವೂ ಆಗಿರಬಹುದು.

ಸ್ಪೋರಾಡಿಕ್ ಪಾರ್ಕಿನ್ಸನ್ ಕಾಯಿಲೆಗೆ ಕಾರಣಗಳು:

ವೃದ್ಧಾಪ್ಯ

ಪುರುಷ ಲಿಂಗ (ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಪಾರ್ಕಿನ್ಸನ್ ಕಾಯಿಲೆ ಹೆಚ್ಚು)

ದೀರ್ಘಕಾಲದವರೆಗೆ ವಿಷಕಾರಿ ವಸ್ತುಗಳು, ಕೀಟನಾಶಕಗಳು, ಕಳೆನಾಶಕಗಳೊಂದಿಗೆ ಸಂಪರ್ಕ ಹೊಂದಬೇಕಾದಂತಹ ವಾತಾವರಣ

ಪದೇ ಪದೇ ತಲೆಗೆ ಪೆಟ್ಟು ಬೀಳುವುದು

ಮಾನಸಿಕ ಅಸ್ವಾಸ್ಥ್ಯಕ್ಕೆ ಚಿಕಿತ್ಸೆ ನೀಡಲು ಬಳಸುವ ಕೆಲವು ಔಷಧಗಳು

ನಾವು ಸೇವಿಸುವ ಆಹಾರ, ನೀರು ಅಥವಾ ಉಸಿರಾಡುವ ಗಾಳಿಯಲ್ಲಿ ಭಾರ ಲೋಹಗಳ (ಉದಾಹರಣೆಗೆ ಮ್ಯಾಂಗನೀಸ್) ಅಂಶ ಹೆಚ್ಚಳ.

ಆನುವಂಶಿಕ ಪಾರ್ಕಿನ್ಸನ್ ಕಾಯಿಲೆಗೆ ಕಾರಣಗಳು:

ಅನುವಂಶಿಕವಾಗಿ ಕಾಣಿಸಿಕೊಳ್ಳುವ ಪಾರ್ಕಿನ್ಸನ್ ಕಾಯಿಲೆಯು ವಂಶವಾಹಿ(ಜೀನ್ಸ್)ಗಳಲ್ಲಿ ಆಗುವ ಬದಲಾವಣೆಗಳಿಂದ ಸಂಭವಿಸುತ್ತದೆ, ಹಾಗೂ ಇದು ವಂಶವಾಹಿಗಳ ಪರೀಕ್ಷೆಗಳ ಮೂಲಕ ಬೆಳಕಿಗೆ ಬರುತ್ತದೆ.

ಪಾರ್ಕಿನ್ಸನ್ ಕಾಯಿಲೆಯ ರೋಗಲಕ್ಷಣಗಳು

ಚಲನವಲನಕ್ಕೆ ಸಂಬಂಧಿತ ಲಕ್ಷಣಗಳು:

ಕೈ ಮತ್ತು ಕಾಲುಗಳ ಅನೈಚ್ಛಿಕ ಚಲನೆಗಳು ಮತ್ತು ನಡುಕ

ತಲೆಯ ಅನೈಚ್ಛಿಕ ಚಲನೆಗಳು ಅಥವಾ ಮುಖದಲ್ಲಿ ಸೂಕ್ಷ್ಮವಾದ ಸೆಳೆತಗಳು

ನಿಧಾನ ಅಥವಾ ಮಂದಗತಿಯ ಚಲನೆಗಳು, ಸಾಮಾನ್ಯವಾದ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುವುದು

ಕೈಕಾಲುಗಳು ಅಥವಾ ಬೆನ್ನಿನಲ್ಲಿ ಬಿಗಿತ

ಕುಳಿತುಕೊಳ್ಳುವುದು, ನಡೆಯುವುದು, ತಿರುಗುವುದು, ಅಥವಾ ಮೆಟ್ಟಿಲುಗಳನ್ನು ಬಳಸುವಾಗ ಭಂಗಿಯಲ್ಲಿನ ಅಸಮತೋಲನ

• ಇತರೆ ರೋಗ ಲಕ್ಷಣಗಳು

ಮಲಬದ್ಧತೆ ಅಥವಾ ಮಲ ವಿಸರ್ಜನೆಯಲ್ಲಿ ತೊಂದರೆಗಳು

ಜೀರ್ಣಕ್ರಿಯೆಯಲ್ಲಿ ತೊಡಕು

ನಿದ್ರೆಯಲ್ಲಿ ಅಡಚಣೆ

ಸುಲಭವಾಗಿ ಆಯಾಸಗೊಳ್ಳುವುದು

• ತೀವ್ರತರದ ಪಾರ್ಕಿನ್ಸನ್ ಕಾಯಿಲೆಯ ರೋಗಲಕ್ಷಣಗಳು

ಅರಿವಿನಲ್ಲಿನ ವ್ಯತ್ಯಾಸಗಳು

ಜ್ಞಾಪಕ ಶಕ್ತಿಯಲ್ಲಿ ಸಮಸ್ಯೆಗಳು

ಮಾನಸಿಕ ಆರೋಗ್ಯ ಮತ್ತು ನಡವಳಿಕೆಯ ಸಮಸ್ಯೆಗಳು

• ಐದನೇ ಹಂತದ ಪಾರ್ಕಿನ್ಸನ್ ಕಾಯಿಲೆಯ ರೋಗಲಕ್ಷಣಗಳು

ಸ್ಮರಣಶಕ್ತಿ ನಷ್ಟ

ಕಾಡುವ ಭ್ರಮೆ

ಅಪ್ರಸ್ತುತ ಮಾತುಗಳು

ಪಾರ್ಕಿನ್ಸನ್ ಕಾಯಿಲೆಯಲ್ಲಿ ವಿಧಗಳನ್ನು ತಿಳಿದುಕೊಳ್ಳಿ

• ಹಿರಿಯ ವಯೋಮಾನದ ಪಾರ್ಕಿನ್ಸನ್ ಕಾಯಿಲೆ: 60 ವರ್ಷಗಳ ನಂತರ ಕಂಡುಬರುವ ಪಾರ್ಕಿನ್ಸನ್ ಕಾಯಿಲೆ

• ಯುವ ವಯೋಮಾನದ ಪಾರ್ಕಿನ್ಸನ್ ಕಾಯಿಲೆ: 25-50 ವರ್ಷ ವಯಸ್ಸಿನ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುವ ಪಾರ್ಕಿನ್ಸನ್

• ಕೌಟುಂಬಿಕ ಪಾರ್ಕಿನ್ಸನ್ ಕಾಯಿಲೆ: ಆನುವಂಶಿಕ ಅಥವಾ ಜೆನೆಟಿಕ್ ಪಾರ್ಕಿನ್ಸನ್ ಕಾಯಿಲೆ

• ಸೆಕೆಂಡರಿ ಪಾರ್ಕಿನ್ಸೋನಿಸಂ: ರಾಸಾಯನಿಕಗಳು, ಕೆಲವು ತರಹದ ಔಷಧಗಳ ಪ್ರತಿಕೂಲ ಪರಿಣಾಮಗಳು, ತಲೆಗೆ ಗಾಯಗಳು, ಮೆದುಳಿನ ಗೆಡ್ಡೆ ಹಾಗೂ ಅದರ ಶಸ್ತ್ರಚಿಕಿತ್ಸೆ ನಂತರ, ಪಾರ್ಶ್ವವಾಯುವಿನ ನಂತರ, ಯಕೃತ್ತಿನ ಅಪಸಾಮಾನ್ಯ ಕ್ರಿಯೆ ಅಥವಾ ಯಕೃತ್ತಿನ ಸಿರೋಸಿಸ್ ಮುಂತಾದ ಕಾರಣಗಳಿಂದಾಗಿ ಕಂಡುಬರುವ ಪಾರ್ಕಿನ್ಸನ್ ಕಾಯಿಲೆ

• ವಿಲಕ್ಷಣ (ಅಟಿಪಿಕಲ್) ಪಾರ್ಕಿನ್ಸೋನಿಸಂ: ಸಾಮಾನ್ಯ ಪಾರ್ಕಿನ್ಸನ್ ಕಾಯಿಲೆಗೆ ಹೋಲಿಸಿದರೆ ಅತಿವೇಗವಾದ ರೋಗದ ಪ್ರಗತಿ

ಪಾರ್ಕಿನ್ಸನ್ ಕಾಯಿಲೆಯ ಹಂತಗಳು ಯಾವುವು?

ಪಾರ್ಕಿನ್ಸನ್ ಕಾಯಿಲೆಯಲ್ಲಿ 5 ಹಂತಗಳಿವೆ.

ಹಂತ 1: ಸೌಮ್ಯ ಅಥವಾ ಆರಂಭಿಕ ಹಂತ - ಸ್ವಲ್ಪ ನಿಧಾನ ಚಲನೆಗಳು, ನಡೆಯುವಾಗ ಒಂದು ಬದಿಯಲ್ಲಿ ತೋಳಿನ ತೂಗಾಟ ಕಡಿಮೆಯಾಗುವುದು, ಅಪರೂಪದ ನಡುಕ ಮುಂತಾದ ಸೂಕ್ಷ್ಮ ಬದಲಾವಣೆಗಳು ಕಂಡುಬರುತ್ತದೆ.

ಹಂತ 2: ಮೊದಲ ಹಂತಕ್ಕಿಂತ ರೋಗಲಕ್ಷಣಗಳು ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತವೆ. ಸಮತೋಲನ ಮತ್ತು ಭಂಗಿಯಲ್ಲಿ ಗೋಚರವಾಗುವ ಬದಲಾವಣೆಗಳು, ನಡಿಗೆಯ ವೇಗ ಕಡಿಮೆಯಾಗುವುದು, ಮುಖದ ಅಭಿವ್ಯಕ್ತಿಗಳಲ್ಲಿ ಇಳಿಕೆ ಕಂಡುಬರುತ್ತದೆ.

ಹಂತ 3: ಹೆಚ್ಚು ಸ್ಪಷ್ಟವಾಗಿ ಗೋಚರವಾಗುವ ಸಮತೋಲನ ಸಮಸ್ಯೆಗಳು, ನಡೆಯಲು ತೊಂದರೆ - ಬಾಧಿತ ವ್ಯಕ್ತಿಗಳು ಸಾಮಾನ್ಯವಾಗಿ ವಾಕರ್ಗಳು ಅಥವಾ ವಾಕಿಂಗ್-ಸ್ಟಿಕ್ಗಳಂತಹ ನಡಿಗೆ ಸಹಾಯಕಗಳನ್ನು ಬಯಸುತ್ತಾರೆ. ಬೀಳುವ ಸಾಧ್ಯತೆ ಹೆಚ್ಚಾಗುತ್ತದೆ, ಚಲನೆಯ ಸಮಯದಲ್ಲಿ ಸ್ಥಿರತೆಗಾಗಿ ಇತರರಿಂದ ಸಹಾಯ ಬೇಕಾಗಬಹುದು.

ಹಂತ 4: ಮುಂದುವರಿದ ಹಂತವಿದು. ರೋಗಲಕ್ಷಣಗಳು ಹೆಚ್ಚಾಗಿ ದೈನಂದಿನ ಚಟುವಟಿಕೆಗಳಲ್ಲಿ ಅಡ್ಡಿ ಮಾಡುತ್ತವೆ ಮತ್ತು ಇತರರ ಮೇಲೆ ಹೆಚ್ಚಿನ ಅವಲಂಬನೆ ಇರುತ್ತದೆ.

ಹಂತ 5: ಬಹಳ ಮುಂದುವರಿದ ಅಥವಾ ಕೊನೆಯ ಹಂತವಿದು. ವೀಲ್ಚೇರ್ಗೆ ಸೀಮಿತ ಅಥವಾ ಹಾಸಿಗೆಗೆ ಸೀಮಿತ ಹಂತ ಎಂದೂ ಕರೆಯಲ್ಪಡುತ್ತದೆ. ಬಾಧಿತ ವ್ಯಕ್ತಿಗಳು ಹೆಚ್ಚಾಗಿ ಮನೆಗೆ ಸೀಮಿತವಾಗಿರುತ್ತಾರೆ ಮತ್ತು ಅವರ ವೈಯಕ್ತಿಕ ಅಗತ್ಯಗಳು ಮತ್ತು ಇತರ ದೈನಂದಿನ ಚಟುವಟಿಕೆಗಳಿಗಾಗಿ ಇತರರ ಮೇಲೆ ಪೂರ್ಣ ಅವಲಂಬಿತರಾಗಿರುತ್ತಾರೆ.

ಪಾರ್ಕಿನ್ಸನ್ ಕಾಯಿಲೆಗೆ ಚಿಕಿತ್ಸೆ:

ಪಾರ್ಕಿನ್ಸನ್ ಕಾಯಿಲೆಗೆ ಚಿಕಿತ್ಸೆ ಇಲ್ಲ ಎಂಬ ಸಾಮಾನ್ಯ ಗ್ರಹಿಕೆಯನ್ನು ಹೋಗಲಾಡಿಸುವುದು ಅವಶ್ಯಕ. ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗದಿದ್ದರೂ, ಸೂಕ್ತವಾದ ಚಿಕಿತ್ಸೆಯ ಮೂಲಕ ಇದನ್ನು ನಿರ್ವಹಿಸಬಹುದಾಗಿದೆ. ಪಾರ್ಕಿನ್ಸನ್ ಕಾಯಿಲೆಯು ಮಧುಮೇಹ, ರಕ್ತದೊತ್ತಡ, ಥೈರಾಯ್ಡ್ ಮತ್ತು ಇತರ ದೀರ್ಘಕಾಲೀನ ಕಾಯಿಲೆಗಳಂತೆ ಜೀವಮಾನದ ಸ್ಥಿತಿಯಾಗಿದ್ದು, ಅದೇ ಚಿಕಿತ್ಸಾ ವಿಧಾನವನ್ನು ಹೊಂದಿದೆ.

ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಲ್ಲಿ, ಚಿಕಿತ್ಸೆಯನ್ನು ನಿಲ್ಲಿಸಿದರೆ ಜೀವಕ್ಕೆ ಅಪಾಯವಿರುತ್ತದೆ. ಆದರೆ ಪಾರ್ಕಿನ್ಸನ್ ಕಾಯಿಲೆಯಲ್ಲಿ ಯಾವುದೇ ಜೀವ-ಭಯವಿಲ್ಲ. ಸರಿಯಾದ ಚಿಕಿತ್ಸೆ ಮತ್ತು ನಿಯಮಿತ ಅನುಸರಣೆಗಳೊಂದಿಗೆ ಪಾರ್ಕಿನ್ಸನ್ ಕಾಯಿಲೆ ಇರುವ ಜನರು ದೀರ್ಘ ಮತ್ತು ಗುಣಮಟ್ಟದ ಜೀವನವನ್ನು ನಡೆಸಬಹುದು.

ಔಷಧಿರಹಿತ (Non-Pharmacological) ನಿರ್ವಹಣೆ

ರೋಗದ ಆರಂಭಿಕ ಹಂತಗಳಲ್ಲಿ, ಭೌತಚಿಕಿತ್ಸೆ(ಫಿಸಿಯೋಥೆರಪಿ), ನಿಯಮಿತ ದೈಹಿಕ ವ್ಯಾಯಾಮ, ಯೋಗ, ಧ್ಯಾನವು ಬಹಳ ಪ್ರಯೋಜನಕಾರಿಯಾಗಬಲ್ಲದು. ಈ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದರೆ, ಔಷಧಿಗಳ ಅಗತ್ಯವನ್ನು ವಿಳಂಬಗೊಳಿಸಬಹುದು. ಪಾರ್ಕಿನ್ಸನ್ ಕಾಯಿಲೆಯ ಪರಿಣಾಮಕಾರಿ ನಿರ್ವಹಣೆಯಲ್ಲಿ ರೋಗವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದಕ್ಕೆ ಅನುಗುಣವಾಗಿ ಜೀವನಶೈಲಿಯ ಹೊಂದಾಣಿಕೆಗಳನ್ನು ಮಾಡುವುದು ಅನಿವಾರ್ಯವಾಗಿದೆ.

ಔಷಧೀಯ ನಿರ್ವಹಣೆ

ವೈದ್ಯಕೀಯ ಆರೈಕೆ ಲೆವೊಡೋಪಾ, ಕಾರ್ಬಿಡೋಪಾ ಮತ್ತು ಡೋಪಮಿನರ್ಜಿಕ್ ಔಷಧಿಗಳ ಚಿಕಿತ್ಸೆಯನ್ನು ಒಳಗೊಂಡಿರುತ್ತದೆ. ಇದು ನಡಿಗೆ, ನಡುಕ ಮತ್ತು ಚಲನೆಗಳಲ್ಲಿನ ನಿಧಾನಗತಿಯ ಲಕ್ಷಣಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಮುಂದುವರಿದ ಹಂತಗಳಲ್ಲಿ ಚಲನೆಯಲ್ಲಿ ನಿಯಂತ್ರಣ ತಪ್ಪಿದಾಗ ಡಿಬಿಎಸ್-ಡೀಪ್ ಮೆದುಳಿನ ಪ್ರಚೋದನೆ, ಲೀಸನ್ ಶಸ್ತ್ರಚಿಕಿತ್ಸೆಗಳು, ಕೇಂದ್ರೀಕೃತ (Focused) ಅಲ್ಟ್ರಾಸೌಂಡ್ ಚಿಕಿತ್ಸೆಯಂತಹ ಶಸ್ತ್ರಚಿಕಿತ್ಸಾ ಮತ್ತು ಮಧ್ಯಸ್ಥಿಕೆಯ ವಿಧಾನಗಳನ್ನು ಅನುಸರಿಸಲಾಗುತ್ತದೆ. ನುಂಗುವಿಕೆ ಮತ್ತು ಮಾತು ದುರ್ಬಲಗೊಂಡ ಅಂತಿಮ ಹಂತದಲ್ಲಿ, ಪಿಇಜಿ (PEG) ಅಥವಾ ಆಹಾರ ನೀಡುವ ಪರ್ಯಾಯ ಮಾರ್ಗಗಳನ್ನು ಅನುಸರಿಸಲಾಗುತ್ತದೆ.

ಆಸ್ಪತ್ರೆಗಳಲ್ಲಿ ಪಾರ್ಕಿನ್ಸನ್ ಕಾಯಿಲೆಯ ನಿರ್ವಹಣೆಗೆ ಬಹುಮುಖೀ ಚಿಕಿತ್ಸೆ ವಿಧಾನವನ್ನು ಅನುಸರಿಸಲಾಗುತ್ತದೆ. ಔಷಧೋಪಚಾರ, ನ್ಯೂರೋಫಿಸಿಯೋಥೆರಪಿ, ಡೀಪ್ ಬ್ರೇನ್ ಸ್ಟಿಮ್ಯುಲೇಷನ್ (DBS), ಪೋಷಣಾ ಸಲಹೆ, ಮನೋವೈಜ್ಞಾನಿಕ ಚಿಕಿತ್ಸೆ, ಮತ್ತು ರೋಗಿಯ ಸ್ಥಿತಿಗತಿಗಳ ಆಧಾರಿತವಾಗಿ, ವೈಯಕ್ತಿಕಗೊಳಿಸಿದ ಚಿಕಿತ್ಸಾ ಯೋಜನೆಯ ಮೂಲಕ ಬದುಕಿನ ಗುಣಮಟ್ಟವನ್ನು ಸುಧಾರಿಸಬಹುದಾಗಿದೆ.

ಲೇಖಕರು: ಕನ್ಸಲ್ಟೆಂಟ್ - ನ್ಯೂರೊಲಾಜಿ ಮತ್ತು ಮೂವ್ಮೆಂಟ್ ಡಿಸಾರ್ಡರ್, ಮಣಿಪಾಲ್ ಆಸ್ಪತ್ರೆ ಹಳೆ ವಿಮಾನ ನಿಲ್ದಾಣ ರಸ್ತೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.