ಬಹುತೇಕರ ಮನೆಗಳ ಅಡುಗೆ ಮನೆಯಲ್ಲಿ ಅಮ್ಮಂದಿರು ರುಚಿಕರವಾದ ಖಾರದ ತಿನಿಸನ್ನು ಮಾಡುತ್ತಿದ್ದರೆ ಗಮನಿಸಿ, ಅದರಲ್ಲಿ ಬೆಳ್ಳುಳ್ಳಿಯನ್ನು ಹಾಕಿಯೇ ಇರುತ್ತಾರೆ. ಬೆಳ್ಳುಳ್ಳಿ ಆಹಾರದ ರುಚಿ ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಇದನ್ನು ಒಂದು ಬಗೆಯ ಔಷಧಿ ಎಂದೂ ಕರೆಯಬಹುದು. ಸಂತಸದ ವಿಷಯವೆಂದರೆ ಈ ಔಷಧವನ್ನು ತೆಗೆದುಕೊಳ್ಳಲು ಯಾವ ವೈದ್ಯರ ಚೀಟಿಯೂ ಬೇಕಾಗಿಲ್ಲ.

`ಆಲಿಯಮ್ ಸಟೈನಮ್~ ಎಂಬ ಕುಟುಂಬಕ್ಕೆ ಸೇರುವ, ಗಾಢ ವಾಸನೆ ಮತ್ತು ರುಚಿ ಇರುವ ಬೆಳ್ಳುಳ್ಳಿಯನ್ನು ಪ್ರಪಂಚದಾದ್ಯಂತ ಬೆಳೆಯಲಾಗುತ್ತದೆ. ಇಂತಹ ಬೆಳ್ಳುಳ್ಳಿ ಒಂದು ಒಳ್ಳೆಯ ಮೂಲಿಕೆ ಔಷಧಿ ಹಾಗೂ ಸೇವಿಸಲು ಸುರಕ್ಷಿತವಾದುದು.

ಬೆಳ್ಳುಳ್ಳಿಯ ಔಷಧೀಯ ಗುಣವನ್ನು ಇಂದು, ನಿನ್ನೆ ಕಂಡುಹಿಡಿದದ್ದಲ್ಲ. ಪುರಾತನ ಕಾಲದಿಂದಲೂ ಇದನ್ನು ಹಲವು ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತಿತ್ತು. ದಿನಕ್ಕೆ ಒಂದು ಎಸಳು ಬೆಳ್ಳುಳ್ಳಿ ತಿಂದರೆ ಆರೋಗ್ಯ ಚೆನ್ನಾಗಿರುತ್ತದೆ ಎಂದು ಹಲವರು ಇಂದಿಗೂ ನಂಬಿದ್ದಾರೆ. ಕ್ರಿ.ಪೂ. 1500 ರಲ್ಲಿ ಈಜಿಪ್ಟಿಯನ್ನರು ಇದರ 22 ಉಪಯೋಗಗಳನ್ನು ಬರೆದಿಟ್ಟಿದ್ದರು.

1858ರಲ್ಲಿ ಲೂಯಿಸ್ ಪಾಸ್ಚರ್ `ಬೆಳ್ಳುಳ್ಳಿ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ~ ಎಂದು ತಿಳಿಸಿದ್ದರೆ, 1983ರಲ್ಲಿ ಜೀವ ರಸಾಯನ ವಿಜ್ಞಾನಿ ಸಿಡ್ನಿ ಬೆಲ್ಮನ್ ತಮ್ಮ ಪ್ರಯೋಗಾಲಯದಲ್ಲಿ ಇಲಿಗಳ ಚರ್ಮಕ್ಕೆ ಬೆಳ್ಳುಳ್ಳಿ ಎಣ್ಣೆ ಲೇಪಿಸಿ, ಅವುಗಳ ಮೇಲೆ ದುರ್ಮಾಂಸ ಬೆಳೆಯದಿದ್ದುದನ್ನು ಗಮನಿಸಿದ್ದರು. ಮಹಾಯುದ್ಧದ ಸಮಯದಲ್ಲಿ ಬೆಳ್ಳುಳ್ಳಿಯನ್ನು ಆ್ಯಂಟಿಸೆಪ್ಟಿಕ್ ಔಷಧದಂತೆಯೂ ಬಳಸಲಾಗುತ್ತಿತ್ತು. ಈಗ ಹಲವು ಕಂಪೆನಿಗಳು ಬೆಳ್ಳುಳ್ಳಿಯನ್ನು ಮಾತ್ರೆಯಾಗಿ ಮಾಡಿ ಮಾರಾಟ ಮಾಡುತ್ತಿವೆ.

ಬೆಳ್ಳುಳ್ಳಿ ಉಪಯೋಗ
* ಕೆಮ್ಮು ಹಾಗೂ ಶೀತ ನಿವಾರಣೆ
* ಎದೆ, ಹೊಟ್ಟೆ ಹಾಗೂ ಕಿವಿಯ ಸೋಂಕಿನ ವಿರುದ್ಧ
* ರಕ್ತದೊತ್ತಡ ಹಾಗೂ ಕೊಬ್ಬು ಕಡಿಮೆ ಮಾಡುತ್ತದೆ
* ಹಲವು ತರದ ಕ್ಯಾನ್ಸರ್ಗಳನ್ನು ತಡೆಗಟ್ಟಲು ಸಹಕಾರಿ
* ಮಧುಮೇಹ ಮುಂದೂಡಲು ನೆರವಾಗುತ್ತದೆ
* ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ
* ರೋಗ ನಿರೋಧಕ ಶಕ್ತಿ ವೃದ್ಧಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.