ಭಾನುವಾರ, 13 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ವ್ಯಾಪಾರ ವ್ಯವಹಾರಗಳಲ್ಲಿ ಚತುರ ನಡೆ ಇರಲಿ
Published 31 ಜುಲೈ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಷೇರು ಮಾರುಕಟ್ಟೆ ಹಾಗೂ ಕಮಿಷನ್ ವ್ಯಾಪಾರದವರಿಗೆ ಲಾಭಾಂಶ ವೃದ್ಧಿಯಾಗಿ ಬೆಳವಣಿಗೆ ಕಾಣಬಹುದು. ಆದಾಯ ವೆಚ್ಚಗಳನ್ನು ಸರಿದೂಗಿಸಿಕೊಳ್ಳುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಚತುರ ನಡೆ ಇರಲಿ.
ವೃಷಭ
ಸಾಮಾಜಿಕವಾಗಿ ವರ್ತನೆಯಲ್ಲಿ ಸ್ಥಿರತೆ ಹಾಗೂ ಸಮತೋಲನ ಕಾಯ್ದುಕೊಳ್ಳಿ. ಬಹಳಷ್ಟು ತಾಳ್ಮೆಯಿಂದ ಕೆಲಸ ನಿರ್ವಹಿಸಬೇಕಾಗುವುದು. ಅನವಶ್ಯಕವಾಗಿ ಪ್ರಯಾಣದ ಸಾಧ್ಯತೆ ಇದೆ. ಶಾರೀರಿಕ ಆರೋಗ್ಯ ಉತ್ತಮ.
ಮಿಥುನ
ಆಕಾಂಕ್ಷೆಗಳ ಸಿದ್ಧಿಯಾಗಿ, ಧಾರ್ಮಿಕ ಪ್ರವೃತ್ತಿಗಳಲ್ಲಿ ಆಸಕ್ತಿಯನ್ನು ಹೊಂದುವಿರಿ. ಕೆಲಸದ ಹೊರೆ ಹೆಚ್ಚಾಗಿ ಮಡದಿ ಮಕ್ಕಳಿಂದ ಸಹಕಾರ ಯಾಚಿಸ ಬೇಕಾಗುವುದು. ಉದ್ಯೋಗ ಬದಲಾಗುವ ಸಂಭವವಿದೆ.
ಕರ್ಕಾಟಕ
ಕಳೆಯಿತು ಎಂದುಕೊಂಡ ರೋಗವೊಂದು ಬೆಂಬಿಡದೆ ಕಾಡಿ ಸುತ್ತದೆ. ಬಂಧುಗಳಲ್ಲಿನ ಮಾತಿನ ಚಕಮಕಿ ಮನಸ್ಸಿಗೆ ಗೊಂದಲ ತಂದೀತು. ಸರ್ಕಾರ ಅಥವಾ ಸಂಸ್ಥೆಗಳ ನಿಯಮಗಳಿಗೆ ಬೆಲೆ ಕೊಡುವುದನ್ನು ಕಲಿಯಿರಿ.
ಸಿಂಹ
ಕೌಟುಂಬಿಕವಾಗಿ ಖರ್ಚುಗಳು ಅಧಿಕವೆನಿಸಿದರೂ ಆರ್ಥಿಕವಾಗಿ ಉತ್ತಮವಾಗಿರುವುದು. ಯಂತ್ರಗಳ ಬಿಡಿ ಭಾಗಗಳ ಮಾರಾಟಗಾರರಿಗೆ ಅವಕಾಶಗಳು ದೊರಕಲಿವೆ. ಆದಾಯದ ಮೂಲಗಳು ಗೋಚರಿಸಲಿವೆ.
ಕನ್ಯಾ
ಮನೋಬಲದ ಜತೆಯಲ್ಲಿ ಆರ್ಥಿಕ ಬಲ ದೃಢವಾಗಿಸಿಕೊಂಡರೆ ಮಾತ್ರ ಕಾರ್ಯ ಸಾಧಿಸಿಕೊಳ್ಳುವಲ್ಲಿ ಸಫಲರಾಗುವಿರಿ. ಹಣ್ಣು ತರಕಾರಿ ವ್ಯಾಪಾರಿಗಳಿಗೆ ಉತ್ತಮ ಆದಾಯದ ಅವಕಾಶವಿದೆ.
ತುಲಾ
ಹಣಕಾಸು ಸಂಸ್ಥೆಗೆ ಪಾಲುದಾರರಾಗಿ ಸೇರಿಕೊಳ್ಳುವ ಯೋಚನೆಯಲ್ಲಿರುವವರಿಗೆ ವ್ಯವಹಾರದ ಉದ್ದಗಲವು ತಿಳಿಯುವುದು. ಔಷಧ ಕಂಪನಿಗಳಿಗೆ ಮತ್ತು ಔಷಧ ಮಾರಾಟ ಪ್ರತಿನಿಧಿಗಳಿಗೆ ಮಾರಾಟದಲ್ಲಿ ಹೆಚ್ಚಳವಾಗುವುದು.
ವೃಶ್ಚಿಕ
ವಿದೇಶ ವ್ಯವಹಾರಗಳಿಂದ ಆದಾಯ ಕೈಗೂಡಲಿದೆ. ಆರ್ಥಿಕವಾಗಿ ಸಂತೃಪ್ತಿ ಇರುವುದು. ಜನರೊಂದಿಗೆ ಬೆರೆಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಅಂತಿಮ ಕ್ಷಣಗಳಲ್ಲಿ ಪಶ್ಚತ್ತಾಪ ಪಡುವ ಬದಲು ಮುಂಜಾಗ್ರತಾ ಕ್ರಮ ಕೈಗೊಳ್ಳಿ.
ಧನು
ಅಸೂಯೆಯಾಗದಂತೆ ಕಾರ್ಯಗಳನ್ನು ಸಾಧಿಸಿಕೊಳ್ಳುವ ಉತ್ತಮ ಗುಣವನ್ನು ಜೀವನದ ಶೈಲಿಯಲ್ಲಿ ವೃದ್ಧಿಸಿಕೊಳ್ಳಿರಿ. ಶ್ರಮ ಜೀವಿಗಳಿಗೆ ಶ್ರಮಕ್ಕೆ ಮೀರಿದ ಪ್ರತಿಫಲ ಅನುಭವಕ್ಕೆ ಬರಲಿದೆ.
ಮಕರ
ಆರ್ಥಿಕ ರಂಗದಲ್ಲಿ ನೂತನವಾಗಿ ಹೂಡಿಕೆ ಮಾಡುವುದು ಉತ್ತಮವಲ್ಲ. ದಂತ ವೈದ್ಯರಿಗೆ ಮತ್ತು ಶಸ್ತ್ರ ಚಿಕಿತ್ಸಕರಿಗೆ ವೃತ್ತಿಯಲ್ಲಿ ಅತೀವ ಗಮನವಿರಬೇಕಾಗುತ್ತದೆ. ವಿಶೇಷ ಪೂಜೆ ನಡೆಸಲು ತಯಾರಿ ಮಾಡುವಿರಿ.
ಕುಂಭ
ಸಹೋದ್ಯೋಗಿಯ ನೆರವಿನಿಂದ ಕೆಲಸ ಕಾರ್ಯಗಳು ಸಂಪನ್ನಗೊಳ್ಳಲಿವೆ. ಕೆಲವೊಂದು ಪ್ರತಿಕೂಲ ಫಲಗಳೇ ಕಾರ್ಯಕ್ಷೇತ್ರದಲ್ಲಿದ್ದರೂ ಚಿಂತಿಸುವ ಅವಶ್ಯಕತೆ ಇಲ್ಲ. ಕಷ್ಟಕಾರ್ಪಣ್ಯಗಳಿಗೆ ತಂದೆ ತಾಯಿ ನೆರವಾಗಲಿದ್ದಾರೆ.
ಮೀನ
ಆಪ್ತಸ್ನೇಹಿತರ ಸಹಾಯದಿಂದ ಗೃಹ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುವಿರಿ. ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿಕೊಳ್ಳಲು ಬೇಕಾದ ಧಾರ್ಮಿಕ ಪ್ರಯತ್ನ ಮಾಡಿ. ರಫ್ತು ಮಾರಾಟಗಳಿಂದ ಆದಾಯ ಹೆಚ್ಚಲಿದೆ.
ADVERTISEMENT
ADVERTISEMENT